- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಅಪ್ಪಯ್ಯ ನಾಈಗ ಕಲ್ತಕಂಡ್ ಕೂಸೆಯೋ
ನನ್ನ ಜೀವ್ನ ಮಾಡ್ಕಂಬಷ್ಟು ತಾಕತ್ ಇದ್ದವ್ಳೊ
ನನ್ನ ಗಂಡ್ನ ಅರ್ಸಕಂಬ್ಳಕ್ಕೆ ನಂಗೆ ಶಕ್ತಿ ಇದ್ದೊ
ನನ್ನಿಷ್ಠ ಬಾಳೂಲೆ ನಂಗೆ ಹಕ್ಕಿದ್ದೊ||
ನಿಂಗ್ಳ ಕಾಲ್ದಾಂಗ್ ತಲೆಬಗ್ಸೂಲೇ ನಂಗ್ ಆಗ್ತಿಲ್ಯೋ
ಮಾಣಿ ಸಂತಿಗ್ ವಡನಾಡ್ದೆ ಮದ್ವೆ ಆಗ್ತಿಲ್ಯೋ
ಒಬ್ರಿಗೊಬ್ರು ಅರ್ಥ ಮಾಡ್ಕಂಡ್ ಮದ್ವೆ ಆಗವೊ
ಹಾಂಗಾಗಿ ಮೊದ್ಲೆ ನಂಗೆ ಮಾಣಿ ಗೊತ್ತಿರವೊ||
ಹಳ್ಳಿ ಮನೆ ಕೊಟ್ಗೆ ಕೆಲ್ಸಾ ನನ್ನ ಕೈಲಿ ಆಗ್ತಿಲ್ಲೆ
ತೋಟ್ದಲ್ ನಿಂತ್ಕಂಡ್ ನೀರೂ ಗೊಬ್ರ ಉಣ್ಸೂಲೇ ಬತ್ತಿಲ್ಲೆ
ಪೇಟೇಲ್ ನಾನು ಒದ್ಕಂಡಿ ನೌಕರಿ ಮಾಡ್ದವ್ಳು
ಹಳ್ಳಿ ಮಾಣಿ ಮೆಚ್ಚಕಂಬ್ಲೆ ಹೇಂಗೆ ಸಾಧ್ಯಾ ಹೇಳು||
ಪೇಟೇಲಿ ಅವ್ನ ಹತ್ರ ಮನೆ ಮಂದಿರವೊ
ಕಾರು ಬೈಕು ಓಡಾಡುಲಕ್ಕೆ ಮನೇಲಿರವೊ
ಆಫೀಸಿಗೆ ಹೋಪಂತಾ ತಾಕತ್ತಿರವೊ
ನಂಗಿಂತಾ ಹೆಚ್ಗೆ ಸಂಬ್ಳ ತಕಂಬರವೊ||
ಅಪ್ಪಯ್ಯ ನಿನಕೇಲಿ ಆಗ್ತಿಲ್ಲೆ ನಂಗೆ ಮಾಣಿ ಹುಡ್ಕೂಲೇ
ನಾ ಈಗಾ ಒಬ್ಬವ್ನ ಒಪ್ಪಕಂಡ್ ಇದ್ದೆ
ನಾ ಹೇಳ್ದವಂಗೆ ನೀ ಮದ್ವೆ ಮಾಡ್ಕೊಡೊ
ಸುಖಸಂಸಾರ ನಡೇಲಿ ಹೇಳಿ ಆಶೀರ್ವದಿಸವೊ||
ಹವೀಕ್ರೆ ಆಗೊ ಹೇಳಿ ಹಠ ಹಿಡ್ಯಡ್ದೊ
ಪ್ರೀತಿ ಮುಂದೆ ಅದ್ಕೆಲ್ಲಾ ಬೇಲೇನೇ ಇಲ್ಯೊ
ಅಪ್ಪಯ್ಯ ಮುಂದೆ ನಾನು ಛಲೋ ಆಗಿ ಇರವೊ
ಅಂದ್ರೆ ನೀ ಅಳ್ಯಂಗ್ ಮಗ್ಳ ಧಾರೆ ಎರ್ಯವೊ||