- ನೀ ಶುದ್ದಿಯೊಳಗೋ…. ನಿನ್ನೊಳು ಶುದ್ದಿಯೋ… - April 17, 2020
- ಕನಸಿನ ಸೀರೆ ಕೈಸೇರಿತ್ತು - April 22, 2017
- ಎನ್ನ ಕನಸಿನ ಕೂಸು ಹುಟ್ಟಿತ್ತಿದಾ….. - May 12, 2013
ಮೊನ್ನೆ ಇವು ಕಾರ್ಯಕ್ರಮ ಮುಗಿಸಿ ಬಪ್ಪಗ….ಇವು ಹೇಳಿರೆ ಗೊಂತಾಯಿದಿಲ್ಲೆಯಾ? ಎನ್ನ ಯಜಮಾನ್ರು (ಗೆಂಡ ಬಾವ) . ಸಾಮಾನ್ಯವಾಗಿ ಎಲ್ಲ ಹೆಮ್ಮಕ್ಕಳೂ ಅವರವರ ಯಜಮಾನ್ರ ಸುದ್ದಿ ಹೇಳುಗ “ಇವು” ಹೇಳಿ ಹೇಳ್ತವೇ ಹೊರತು “ಅವು” ಹೇಳಿ ಹೇಳುದು ಕಮ್ಮಿ. ಅಜ್ಜಿ ,ಪಿಜ್ಜಿಯಕ್ಕಳ ಕಾಲಲ್ಲಿ ಗಂಡನ ಹತ್ತರೆ ನೇರವಾಗಿ ಮಾತಾಡ್ತ ಕ್ರಮ ಇತ್ತಿಲ್ಲೆಡ. ಮಕ್ಕಳ ಹತ್ತರೆ ನಿನ್ನ ಅಪ್ಪನ ದಿನಿಗೇಳು, ಪುಳ್ಳಿಯಕ್ಕಳ ಹತ್ತರೆ ನಿನ್ನ ಅಜ್ಜನ ದಿನಿಗೇಳು ಹೇಳಿ ಹೇಳುಗು. ಅದಂದ ಮಾತ್ತಾಣ ಹೆಮ್ಮಕ್ಕೊ ಯಜಮಾನ್ರ ದಿನಿಗೇಳುದು ” ಓಯ್”, “ಹೋಯ್”, “ಇದಾ…”, “ಕೇಳಿತ್ತಾ…” ಹೇಳಿ. ರಜ್ಜ ಹೊಸಬರು “ರೀ…” , “ಹಲೋ..” ಹೇಳಿ ದಿನಿಗೇಳ್ತವು. ಈಗೀಗ ಗೆಂಡನ ಹೆಸರು ಹೇಳಿಯೇ ದಿನಿಗೇಳುದು ರೂಢಿ ಆಯಿದು. ಆದರೂ ಬನ್ನಿ, ಹೋಗಿ ಹೇಳಿ ಬಹುವಚನ ಆದರೂ ಇರ್ತಿತ್ತು ,ಇತ್ತೀಚೆಗಿನ ಬೆಳವಣಿಗೆ ಹೇಳಿರೆ ಗೆಂಡನ ಹೆಸರು ಹಿಡುದು ದಿನಿಗೇಳುದು ಮಾತ್ರ ಅಲ್ಲ ಬಾ, ಹೋಗು ಹೇಳಿ ಏಕವಚನ…. ಹೊ ವಿಷಯ ಎಲ್ಲಿಂದ ಎಲ್ಲಿಗೋ ಎತ್ತಿತ್ತು.(ಈ ವಿಷಯ ವಿಮರ್ಶೆ ಮಾಡಿದರೆ ಆರಾದರು ಬಡಿಗೆ ಹಿಡ್ಕೊಂಡು ಬಂದರೆ ಕಷ್ಟ .) ಆನುಹೇಳ್ಲೆ ಹೆರಟ ವಿಷಯವೇ ಮರದು ಹೋತು……
ಯಾವಾಗಲೂ ಇವು ಕಾರ್ಯಕ್ರಮ ಮುಗಿಸಿ ಬಪ್ಪಗ, ಕಾರಿನ ಶಬ್ದ ಕೇಳಿದ ಕೂಡ್ಳೆ ಎನ್ನ ಎಲ್ಲಾ ಕೆಲಸ ಅಲ್ಲಿಗೇ ಬಿಟ್ಟು (ಸ್ವಾಗತಕ್ಕೆ)ಬಪ್ಪದು ಎನ್ನ ಅಭ್ಯಾಸ. ಬಯಿಂದಿಲ್ಲೆ ಹೇಳಿ ಆದರೆ ಆನು ಮನೆಲಿ ಇಲ್ಲೆ (ಡೇನ್ಸ್ ಕ್ಲಾಸ್ ಮಾಡ್ಲೆ ಹೋಯಿದೆ)ಅಥವಾ ಎನಗೆ ಎಂತಾದರೂ (ಹೋದಲ್ಲಿಂದ ಫೋನ್ ಮಾಡದ್ದರೆ)ಕೋಪ ಇದ್ದು ಹೇಳಿ ಅರ್ಥ. ಒಂದು ದಿನ ಇವು ಬಪ್ಪಗ ಎನಗೆ ಗೊಂತೇ ಆಯಿದಿಲ್ಲೆ. ಎನ್ನ ಕಾಣದ್ದೆ ಅಪ್ಪಗ ಇದು ಕ್ಲಾಸ್ಸಿಂಗೆ ಹೋಯಿದಿಲ್ಲೆ, ಎಂತ ಕೋಪವೂ ಇಲ್ಲೆ ಎಂತ ಸಂಗತಿ ಹೇಳಿ ಇವಕ್ಕೆ ಆಶ್ಚರ್ಯ ಆತಡ. ಒಳ ಬಂದು ಎನ್ನ ಹುಡುಕುಗ ಆನು ಬೈಲಿಂಗೆ (oppanna.com)ಬಂದಿತ್ತೆ.
ಆನು ಆ ದಿನ ಮೈಸೂರು, ಶ್ರೀರಂಗಪಟ್ಟಣದ ಬಗ್ಗೆ ” ಎಂತಕೆ ಹೀಂಗೆ” ಬರತ್ತಾ ಇತ್ತಿದ್ದೆ. ಅವಕ್ಕೆ ನೆಗೆ ಬಂದು ತಡೆಯ. ಬೈಲಿಂಗೆ ಹೋದರೆ ನಿನಗೆ ಬಾಂಬ್ ಬಿದ್ದರೂ ಗೊಂತಾಗ ಹೇಳಿದವು. ಅದಕ್ಕೆ ಬೇಕಾಗಿ ಆನು ಒಂದರಿಯಾಣ ಕೆಲಸ ಎಲ್ಲ ಮುಗಿಸಿಕ್ಕಿಯೇ ಬೈಲಿಂಗೆ ಬಪ್ಪದು. ಒಲೆಲಿ ಅಶನಕ್ಕೆ ಮಡುಗಿ ಬೈಲಿಂಗೆ ಬಂದರೆ “ಒಲೆಲಿ ಕಿಚ್ಚು ಆರಿ ಒಲೆಗೆ ಒಳ್ಲೆ ಹೊಕ್ಕರೂ ಗೊಂತಾಗ “ ಹೇಳಿ ಅತ್ತೆ ನೆಗೆ ಮಾಡ್ಲೆ ಇದ್ದು.
ಆನು ಶ್ರೀರಂಗಟ್ಟಣದ ಬಗ್ಗೆ ಬರವದು ನೋಡಿ ಇವು “ನಿನ್ನದು ಮುಗಿಯದ್ದ ಕಥೆಯಾ..? ಮೈಸುರು ಕಥೆ ಸುರುವಾಗಿ ಸಮಯ ಎಷ್ಟು ಆತು. ಇನ್ನು ಮುಗುದ್ದಿಲ್ಲೆಯಾ? ನಿನಗೆ ಬರವಲೆ ಬೊಡಿಯದ್ದರೂ ಬೈಲಿಲಿ ಇಪ್ಪವಕ್ಕೆ ಓದುಲೆ ಬೊಡಿಗು. ಅರ್ಗೆಂಟು ಮಾಣಿ ರಬ್ಬರ್ ( ಚುಯಿಂಗ್ ಗಮ್) ಜಗಿತ್ತ ಹಾಂಗೆ ಆತಪ್ಪ ನಿನ್ನ ಕಥೆ “ ಹೇಳಿ ಹೇಳಿದವು.
ಅದಕ್ಕೆ ಆನು “ಈ ಕಥೆ ಅರ್ಗೆಂಟು ಮಾಣಿ ರಬ್ಬರ್ ಜಗಿತ್ತ ಹಾಂಗೆ ಅಲ್ಲ ಬಂಡಾಡಿ ಅಜ್ಜಿ ಎಲೆ ಜಗಿಪ್ಪಿದ ಹಾಂಗೆ.ತಾಂಬೂಲ ಸೇವನೆ ಮನಸ್ಸಿಂಗೆ ಹಿತಕರ,ವಿಚಾರ ಪ್ರಚೋದಕ, ಅಲ್ಲದ್ದೆ ಬಾಯಿಯ ದುರ್ವಾಸನೆ ಹೋಗುಸುತ್ತು.ಬಾಯಿ ರುಚಿ ಇಲ್ಲದ್ದರೆ ಸರಿ ಮಾಡ್ತಡ,ಶೀತ ,ಸೆಮ್ಮ ಗುಣ ಆವುತ್ತಡ,ಊಟ ಆದ ಮೇಲೆ ಎಲೆ ತಿಂದರೆ ಕಫ ಹೆಚ್ಚಾಗದ್ದ ಹಾಂಗೆ ಮಾಡ್ತಡ,ಎಲೆದೆ ಅಡಕ್ಕೆದೆ ತಿಂದರೆ ಹಲ್ಲುದೆ,ವಸಡುದೆ ಗಟ್ಟಿ ಆವುತ್ತಡ.ಹೊಗೆಸೊಪ್ಪು ಆರೋಗ್ಯಕ್ಕೆ ಒಳ್ಲೆದಲ್ಲ . ತಾಂಬೂಲ ಸೇವನೆ ನಿಯಂತ್ರಣಲ್ಲಿ ಇರೆಕ್ಕು. ಹೆಚ್ಚಾದರೆ ದೇಹದ ಉಷ್ಣತೆಲಿ ಏರುಪೇರು ಆವುತ್ತು,ಹಲ್ಲು ಹಾಳಾವುತ್ತು, ಕಿವುಡುತನ ಬತ್ತು. ಆನು ಮೊನ್ನೆ ಒಂದು ಪತ್ರಿಕೆಲಿ ಈ ಸುದ್ದಿ ಓದಿದ್ದೆ. ಎಲೆ ತಿಂದರೆ ಒಳ್ಲೆದು ಹೇಳಿ ನಿಂಗ ನಾಳೆಂದ ಸುರು ಮಾಡೆಡಿ ದಮ್ಮಯ್ಯ!” ಹೇಳಿದೆ.
ಇವು ನೆಗೆ ಮಾಡ್ಯೊಂಡು. “ನೀನು ಸುಮ್ಮನೆ ಮೈಸೂರು ಕಥೆಯ t.v. ಲಿ ಬಪ್ಪ ಧಾರಾವಾಹಿಯ ಹಾಂಗೆ ಉದ್ದ ಎಳೆಯಡ.ಧಾರಾವಾಹಿಗ ವರ್ಷಗಟ್ಟಲೆ ಮುಂದುವರೆದರೂ ಮುಗಿವಲೆ ಹೇಳಿ ಇಲ್ಲೆ. ಸುರು ಅಪ್ಪಗ ಇದ್ದ ನಾಯಕ ನಾಯಕಿಯರಿಂಗೆ ಮಕ್ಕ ,ಪುಳ್ಲಿಯಕ್ಕ, ಮರಿಮಕ್ಕೊ ಹುಟ್ಟಿದರೂ ಅವು ಇನ್ನೂ ಹಾಂಗೆ ಇರ್ತವು. ಚಿರಯೌವ್ವನ ಅವಕ್ಕೆ!!!!!!! ನಮ್ಮ ಊರಿನ ಮಾಣಿಯಂಗೊಕ್ಕೆ ಕೂಸು ಸಿಕ್ಕದ್ದ ಕಾಲ. ಧಾರಾವಾಹಿಲಿ ಇಪ್ಪವಕ್ಕೆ ಎರಡೋ, ಮೂರೋ (ಇನ್ನೂ ಹೆಚ್ಚು ಅಪ್ಪದೂ ಇದ್ದು) ಮದುವೆ ! ಅಲ್ಲದ್ದೆ ಲೌವ್ವರ್ ಗ ಇರ್ತವು. ಇನ್ನೂ ಎಂತೆಂತದೋ ಕಥೆಗ. ಸುರು ಅಪ್ಪಗ ಇದ್ದ ಕಥೆಯೇ ಬೇರೆ….ಈಗಾಣ ಕಥೆ ಎಲ್ಲಿಗೋ ಎತ್ತಿರ್ತು.ಅದರ ಕಣ್ಣು ಬಾಯಿ ಬಿಟ್ಟೊಂಡು ನೋಡ್ತವನ್ನೇ! ನಿನ್ನ ಕಥೆಯೂ ಹಾಂಗೆ ಎಲ್ಲೆಲ್ಲಿಗೋ ಎತ್ತುತ್ತಾ ಇದ್ದೋ ಹೇಳಿ ಸಂಶಯ ” ಹೇಳಿದವು.
ಅದಕ್ಕೆ ಆನು ” ಎನ್ನ ಕಥೆ ದನ ಮೆಲುಕು ಹಾಕಿದ ಹಾಂಗೆ. ದನ ಹುಲ್ಲು ಸಿಕ್ಕುಗ ಒಂದರಿಯೇ ತುಂಬಿಸಿಗೊಂಬದು. ಮತ್ತೆ ಪುರುಸೊತ್ತಿಲಿ ಅದರ ಎಳೆ ಎಳೆಯಾಗಿ ಹೆರ ತಂದು ಜಗಿವದು ಗೊಂತಿಲ್ಲೆಯಾ…? ಮೈಸೂರಿಂಗೆ ,ಶ್ರೀರಂಗಪಟ್ಟಣಕ್ಕೆ ಹೋಗಿಪ್ಪಗ ಎಲ್ಲ ನೋಡಿ ಆಯಿದು ಆ ಕಥೆಯ ಬೈಲಿನವಕ್ಕೆ ಎಳೆ ಎಳೆಯಾಗಿ ಹೇಳದ್ದರೆ ಎನಗೆ ಉಂಡದು ಜೀರ್ಣ ಆಗ. ಆನು ಬರದ್ದು ಆರಿಂಗೂ ಬೋರ್ ಹೋಡೆಸಿದ್ದಿಲ್ಲೆ ಹೇಳಿ ಗ್ರೇಶಿದ್ದೆ. ಉದಾಸಿನ ಆದರೆ ಬೈಲಿಂದ ಹೆರಂಗೆ ಲಾಗ ಹಾಕುಗು ಅಷ್ಟೆ” ಹೇಳಿದೆ.
” ನಾವು ಮೈಸೂರಿಂಗೆ ಹೋಗಿ ಬಂದು ತಿಂಗಳು ಆರು ಕಳುದತ್ತು ಇನ್ನೂ ನಿನ್ನ ಕಥೆ ಮುಗಿತ್ತ ಅಂದಾಜಿಲ್ಲೆ . ಅಂಬಗ ಯಾವಾಗ ಮುಗಿಗು….?” ಹೇಳಿ ಇವು ಕೇಳಿಯಪ್ಪಗ, ಆನು ಅದನ್ನೇ ಕಾದುಗೊಂಡಿತ್ತಿದ್ದೆ ” ಇನ್ನಾಣ ರಜೆಲಿ ಬೇರೆ ಎಲ್ಲಿಗಾದರು ಕರಕ್ಕೊಂಡು ಹೋಗಿ ಅಷ್ಟಪ್ಪಗ ಈ ಕಥೆ ಮುಗಿಸಿ ಆ ಕಥೆ ಸುರು ಮಾಡ್ತೆ !!! “ ಹೇಳಿದೆ.
“ತಾಂಬೂಲ ಸೇವನೆ ಮನಸ್ಸಿಂಗೆ ಹಿತಕರ,ವಿಚಾರ ಪ್ರಚೋದಕ, ಅಲ್ಲದ್ದೆ ಬಾಯಿಯ ದುರ್ವಾಸನೆ ಹೋಗುಸುತ್ತು.ಬಾಯಿ ರುಚಿ ಇಲ್ಲದ್ದರೆ ಸರಿ ಮಾಡ್ತಡ,ಶೀತ ,ಸೆಮ್ಮ ಗುಣ ಆವುತ್ತಡ,ಊಟ ಆದ ಮೇಲೆ ಎಲೆ ತಿಂದರೆ ಕಫ ಹೆಚ್ಚಾಗದ್ದ ಹಾಂಗೆ ಮಾಡ್ತಡ,ಎಲೆದೆ ಅಡಕ್ಕೆದೆ ತಿಂದರೆ ಹಲ್ಲುದೆ,ವಸಡುದೆ ಗಟ್ಟಿ ಆವುತ್ತಡ.ಹೊಗೆಸೊಪ್ಪು ಆರೋಗ್ಯಕ್ಕೆ ಒಳ್ಲೆದಲ್ಲ . ತಾಂಬೂಲ ಸೇವನೆ ನಿಯಂತ್ರಣಲ್ಲಿ ಇರೆಕ್ಕು. ಹೆಚ್ಚಾದರೆ ದೇಹದ ಉಷ್ಣತೆಲಿ ಏರುಪೇರು ಆವುತ್ತು,ಹಲ್ಲು ಹಾಳಾವುತ್ತು, ಕಿವುಡುತನ ಬತ್ತು”…
ಹೇಳುವ ವಿಷಯ ಗೊಂತಾತು… ಇನ್ನು ಮೇಲೆ ಇವು ಅಪರೂಪಲ್ಲಿ… ಅದುದೆ ಹೊಗೆಸೊಪ್ಪು ಎಲ್ಲ ಸೇರುಸದ್ದೆ ತಾಂಬೂಲ ಸೇವಿಸಿರೆ “ಅದೆಂತರ ಬಾಯಿ ಎಲ್ಲ ಕೆಂಪು ಮಾಡಿಗೊಂಡು…ಕೊಳಕ್ಕು…” ಹೇಳಿ ವಿರೋಧಿಸುವ ಹಾಂಗಿಲ್ಲೆ ಅಂಬಗ!!!!!
ಏ ಅತ್ತಿಗೆ,
ಲಾಯಕಾಯಿದು ಬರದ್ದು..
ಇನ್ನೂ ಬರೆತ್ತಾ ಇರು ಆತಾ??
ವಿಷಯವೇ ಇಲ್ಲದ್ದ ವಿಷಯ…!
ನಿಂಗಳ ಎಲ್ಲರ ಸಹಕಾರ ನೋಡುಗ ಬರೆಯೆಕ್ಕು ಹೇಳಿ ಆವುತ್ತು. ಸಮಯ ಮಾಡ್ಯೊಂಡು ಬೈಲಿಂಗೆ ಬತ್ತೆ.
ವಿಷಯವೇ ಇಲ್ಲದ್ದ ವಿಷಯ…! – ಅಲ್ಲೇ ಇಪ್ಪದು ವಿಷಯ…!!
ಅನೂ, ಬರದ್ದು ಲಾಯಿಕಾಯಿದು ಆತಾ?
ಇದು, ಮೊದಲು ಬರದ್ದು ಯಾವುದೂ ಬೊಡುದ್ದಿಲ್ಲೆ ಅತಾ? ನಿನ್ನ ‘ಇವಕ್ಕೆ’ (ಯಜಮಾನ್ರಿಂಗೆ) ಆನು ಹೀಂಗೆ ಬರದ್ದೆ ಹೇಳಿ ಹೇಳು.
ಬರೆತ್ತಾ ಇರು ಅತಾ?
~ಸುಮನಕ್ಕ.
ಧನ್ಯವಾದಗಳು ಸುಮನಕ್ಕ .ಬರವಲೆ ಪ್ರಯತ್ನ ಪಡ್ತೆ. ಕ್ಲಾಸ್, ಪ್ರೊಗ್ರಾಮ್ ಗಳ ಎಡೆಲಿ ಸಮಯ ಸಿಕ್ಕುತ್ತಿಲ್ಲೆ…..
ಅಪರೂಪಕ್ಕೆ ಮನಗೆ ಬಪ್ಪ ಅಕ್ಕ ಶುದ್ದಿ ಹೇಳಿದ್ದರ ಕೇಳಿದ ಹಾ೦ಗಾತು.
ಅ೦ಬಗ೦ಬಗ ಬರೆತ್ತಾ ಇರಿ
ಬರವಲೆ ಆಸೆ ಇದ್ದು.ಬೈಲಿಂಗೆ ಬಪ್ಪಲೆ ಪುರುಸೊತ್ತೇ ಆವುತ್ತಿಲ್ಲೆ.
ಅಕ್ಕೋ, ಬರದ್ದದು ಕನ್ನದಡ ಸಿನೇಮಾದ ಹಾಂಗೆ ಪಷ್ಟಾಯಿದು , ಕತೆ ಎಂತ ಮಣ್ಣೂ ಇಲ್ಲದ್ದರುದೇ ಮೂರು ಗಂಟೆ ರೀಲು ತಿರುಗುಸುತ್ತವಿದಾ ಹಾಂಗೆ ನಮ್ಮದೂ ೪೨ ಗೀಟು ತಿರುಗಿತ್ತಿದಾ ಹೇಳೀರೆ ಬೇಜಾರು ಆಗಾನ್ನೇ…?
ಹೇಳಿರೆ ಬೇಜಾರಿಲ್ಲೆ…. ಆದರೆ ಓದುಲೆ ಬೇಜಾರಾತೋ ಹೇಂಗೆ……?
[ಆನು ಬರದ್ದು ಆರಿಂಗೂ ಬೋರ್ ಹೋಡೆಸಿದ್ದಿಲ್ಲೆ ಹೇಳಿ ಗ್ರೇಶಿದ್ದೆ.] – ಇದು ಅಂತು ಸತ್ಯ.
[” ಇನ್ನಾಣ ರಜೆಲಿ ಬೇರೆ ಎಲ್ಲಿಗಾದರು ಕರಕ್ಕೊಂಡು ಹೋಗಿ ಅಷ್ಟಪ್ಪಗ ಈ ಕಥೆ ಮುಗಿಸಿ ಆ ಕಥೆ ಸುರು ಮಾಡ್ತೆ”] – ಇದಿದ ಹೆಮ್ಮಕ್ಕಳ ಗುಡ್ ಪಾಯಿಂಟು. ಶುದ್ದಿ ಅಂತು ಒಪ್ಪ.
ಧನ್ಯವಾದಂಗೊ…..
ನಿಂಗಳಲ್ಲಿಯೂ ಹೆಮ್ಮಕ್ಕಳ ಗುಡ್ ಪಾಯಿಂಟು ರಜೆ ಸಿಕ್ಕುಲಪ್ಪಗ ಇರ್ತಾ…?