- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ದೇವ್ರೆ ದೇವ್ರೆ ಕಣ್ ಬಿಡೊ
ಕಲಿಯುಗ್ದ ಜನ್ರಾ ನೀ ಇಲ್ ನೋಡೋ||
ಯೆಲ್ಲೆಂದ್ರಲ್ಲಿ ಕಿತ್ತಾಟ ಜಗಳಾಟ
ಯೋಚ್ನೆ ಮಾಡ್ದ್ರೆ ಎದೆವೊಡೆತು
ಜನಜಂಗುಳಿ ಬಳಲಾಟ||
ನೆಮ್ಮದಿಯಿಲ್ಲೆ ವಿಶ್ರಾಂತಿಯಿಲ್ಲೆ
ದುಡ್ತ ಮಾಡದ್ರೂ ಸಾಲಾ ಕೈ ಬಿಡ್ತಿಲ್ಲೆ
ನೌಕರಿ ಅಂದ್ರೂ ತಿಂಗ್ಳ ತುದೀಲಿ ದುಡ್ಡಿರ್ತಿಲ್ಲೆ
ಸಾಲ ಕಟ್ಟು ಕಂತು ಯಾವತ್ತೂ ಮುಗೀತಿಲ್ಲೆ||
ಸಾಕಾಯ್ದೊ ದೇವಾ ಈ ಜೀವ್ನಾ
ತೇಕಿ ತೇಕಿ ಯೆಗ್ರ ಬಿದ್ರೂ ನೀ
ಕಣ್ ಬಿಡ್ತಿಲ್ಯಲೊ ತಂದೆ
ನೆಮ್ಮದಿ ಶಾಂತಿ ಜಗತ್ತಲ್ಲಿ ಇರ್ಲಿ ಮಾರಾಯಾ||
ನನ್ನ ಮನೆವರೆಗೂ ಅದೇ ಕಾಣ್ಲಿ ಶಿವುರಾಯ
ಗಂಗೆ ಹರಿಸು ನೀರ್ ಕುಡಿಸು
ಮಳೆ ಬೆಳೆ ಛಲೋ ಅಫಾಂಗ್ ವರಾ ಕರುಣಿಸು
ತಂದೆ ನಿನ್ನ ವಾತ್ಸಲ್ಯ ಪ್ರಪಂಚಕ್ಕಿರ್ಲೋ||
ವಂದೆ ತೋಟ್ದ ಹೂವಾಂಗೆ ನಗು ತಾರೋ
ವಟ್ಟಿಗ್ ಬಾಳ್ವೆ ನಡೆಸ್ವಾಂಗೆ ಸ್ನೇಹಾ ಬೆಳ್ಸೊ
ಜನಾ ಜನಾ ನಂಬ್ಕಿಂದಾ ಬದ್ಕವಾಂಗ್ ಮಾಡೊ
ಕಪಟಾ ಮೋಸಾ ವಂಚನೆ ಯಾವ್ದು ಬೇಡಾ||
ದೇವ್ರ ರಾಜ್ಯ ಸಾಧು ಸಾಮ್ರಾಜ್ಯ ಸುಭೀಕ್ಷ ಈ ಪ್ರಪಂಚಾ
ಕಣ್ ಬಿಟ್ರೆ ಖುಶಿ ದೃಶ್ಯಾ ಪ್ರೀತಿಯಿಂದಾ ದೇವ್ರ ಸ್ಪರ್ಶಾ
ಅಧ್ಯಾತ್ಮದಲ್ಲಿ ನಂಬ್ಕೆಯಿಟ್ಟು ವಿಜ್ಞಾನದಲ್ಲಿ ಪ್ರಗತಿಕೊಟ್ಟು
ಜೀವ್ನಾದಲ್ಲಿ ಸಂತಸಾಪಟ್ಟು ಆಧುನಿಕತೆ ಹಳೇಕತೆ ಮಿಶ್ರಣದಲ್ಲಿ
ಮನುಷ್ಯನ ತೇಲ್ಸು ತಂದೆ||
ಕಲ್ಪನಾ ಅರುಣನ ಮೊರೆ ಚೆನ್ನಾಗಿ ಬಿಂಬಿತವಾಯಿದು .ಉತ್ತರ ಕನ್ನಡದ ಭಾಷೆ ಕುಶಿ ತಂತು.