- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಕಷ್ಟನೆಲ್ಲಾ ನುಂಕಂಡು
ಬಾಯ್ತುಂಬಾ ನಕ್ಕೊಂಡು
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||
ವಿದ್ಯೆನೆಲ್ಲಾ ಕಲ್ತಕಂಡು
ನೌಕ್ರಿ ಚಾಕ್ರಿ ಹಿಡ್ಕಂಡು
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||
ಮದ್ವೆಯೆಲ್ಲಾ ಮಾಡ್ಕಂಡು
ಗೃಹಿಣಿಯಾಗಿ ಇದ್ಕಂಡು
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||
ಮಕ್ಳನೆಲ್ಲಾ ಹಡ್ಕಂಡು
ಪ್ರೀತಿಂದಾ ಬೆಳ್ಸಕಂಡು
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||
ಗೃಹಿಣಿಯಾಗಿ ಮನೆವಳ್ಗೆ
ಅಧಿಕಾರಿಣಿ ಕಛೇರಿವಳ್ಗೆ
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||
ಗಂಡ್ನಾಸೆ ಪೂರಾ ಮಾಡೊ
ಅತ್ತೆ ಮಾವ್ನಾ ಸೇವೆ ಮಾಡೊ
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||
ಹೆಣ್ಣು ಅಂದ್ರೆ ಭೂಮಿ ತೂಕಾ
ಸಹನೆ ತಾಳ್ಮೆ ಲಕ್ಷ್ಮಿ ರೂಪಾ
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||
ಗಂಡಸ್ರಿಂದಾ ಸಹಾಯಾ ತಕೊ
ಸಂಸಾರ್ದೆಲ್ಲಾ ಭಾರಾ ತಕೊ
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||
ಗಂಡು ಹೆಣ್ಣು ಸಂಸಾರ್ದ ಕಣ್ಣು
ಪ್ರಪಂಚಾ ಬೆಳ್ಸೊ ಚಂದಣಿ ಹಣ್ಣು
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||
ಹೆಣ್ಣೇ ಮನೆಯಾಒಡತಿ
ದಿನಾಕಳ್ದಾಂಗ್ ಬಡ್ತಿ
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||
ಭಾರತದಂಥ ಕಂಟ್ರೀಲಿ
ಪಿತೃಪ್ರಧಾನ ಫ್ಯಾಮಿಲೀಲಿ
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||
ನಂಗೊ ಹ್ಯಾಪಿಯಿಂದಾಯಿದ್ರೆ
ಪರರೂ ಹ್ಯಾಪಿಯಿಂದಾ ಇರ್ತೊ
ಹ್ಯಾಪಿಯಾಗಿರೊ ನಂಗೊ ಹ್ಯಾಪಿಯಾಗಿರೊ||
ಕಲ್ಪನಕ್ಕ ಬರದ
ಪದ್ಯಂಗಳ ಓದಿ
ಹ್ಯಾಪ್ಪಿಯಾದಿಯೊ ನಾವು ಹ್ಯಾಪ್ಪಿಯಾದೆಯೊ.
ಕಲ್ಪನಾ, ಹರೇ ರಾಮ; ನಿನ್ನ್ ಕಲ್ಪನೆ ಘನಾದಿದ್ದು! ನಿನ್ನ್ ಪದ್ಯ ಓದ್ಕ೦ಡ್ ಬಾರೀ ಕುಶಿಯಾತು ಸದ್ಯವಾದರೆ ಇನ್ ಮು೦ದೆ ನಮ್ ಭಾಷೆಲಿ ಬರ್ವಲೆ ಪ್ರಯತ್ನ ಮಾಡು ತಿಳತ್ತೊ.ಅಭಿನ೦ದನಗೊ.
ಒಳ್ಳೆ ಆಶಯದ ಪದ್ಯ. ಕೊಶೀ ಆತು.
ಹರೇರಾಮ, ಕಲ್ಪನಾ, ಒಳ್ಳೆ ಸಂದೇಶ ಸಾರುವ ಪದ್ಯ ಬರದ್ದೆ. ಮದುವೆ ಬೇಡ ಹೇಳುವವಕ್ಕೆ, ಮಕ್ಕೊ ಬೇಡ ಹೇಳುವವಕ್ಕೆ, ಗೃಹಿಣಿಯಾಗಿರೋ ಹೇಳಿ. ಹೀಂಗಿದ್ದೆಲ್ಲ ಇದ್ದು. ಇದೀಗ ಇಂಗ್ಲಿಷ್ ಶಬ್ಧ ಸೇರ್ಸೀರೆ, ಇನ್ನು ದ. ಕ ಹವಿಗನ್ನಡಲ್ಲಿ ಬರವಲೆ ಪ್ರಯತ್ನ ಮಾಡು ಕೂಸೇ. ಶುಭವಾಗಲಿ.
ಸಂದೇಶ ತುಂಬಾ ಲಾಯಕಿದ್ದು. ಯೋಗರಾಜ ಭಟ್ಟರ ಲೈಫ್ ಇಷ್ಟೇನೆ ಪದ್ಯ ನೆಂಪಾತು.
laayka aauidu padya
ಲಾಯಕ ಆಯ್ದು ಪದ್ಯ ಮತ್ತೆ ಆಶಯ