- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಹವೀಕ್ರ ಸುಧಾರಣೆಯಾಗೋ ಹೇಳಿ ಬರೆತಾ ಇರ್ತೆ
ಆದ್ರೆ ಇಲ್ಲಿ ನೋಡ್ತೆ ಇದ್ರೆ ದಿನಾನೂ ಬದ್ಲಾವಣೆ ನಡೆತಾ ಇರ್ತೆ
ಪರ್ಜಾತಿ ಮದ್ವೆ ಲೋಕಾರೂಢಿಯಾಯ್ದೆ||
ಹೀರೀರು ಮೆಚ್ಕಂಡ್ ಅದ್ರ್ನೆ ಮಜಾ ಮಾಡ್ತ್ವೆ
ಅಪ್ಪ ಅಮ್ಮಂಗ್ ಮಕ್ಕೊ ಮುದ್ದು
ಅಕ್ಳ ಕಳ್ಕಂಡ್ ಇಪ್ಲೆ ಯೆಲ್ಲಿ ಹಕ್ಕು?||
ಕದ್ದು ಮುಚ್ಚಿ ಅಪ್ಪ ಅಮ್ನ ವಿರುದ್ಧ ನಡೇತು
ಜೀವ್ನದ್ ಜಿದ್ದು
ಕಡೆಗ್ ವಂದಿನಾ ಹೊರ್ಗ ಬತ್ತು
ಮಾತ್ಕತೆ ಸಂಗಾಡಿ ಪರ ಎದ್ ನಿಂತು||
ಜನರಾಶಿ ಮರ್ಳ ಆಯ್ದೊ
ಜಾತಿ ಮತ ಮರ್ತ ಹೋಯ್ದೊ
ಸರ್ಕಾರ ಜಾತಿ ಮಾಡ್ಕತ್ತಿದ್ರೂ ನಂಗ್ಳವಳ್ಗೆ ಬಿಟ್ಕತ್ ಬಂದೊ||
ಹವೀಕ್ರ ಸಂಸ್ಕೃತಿ ಮರ್ತಕಿದೊ
ಪರ ಸಂಸ್ಕೃತಿ ಬಿತ್ತಿಕಿದೊ
ಅಯ್ಯೋ ರಾಮ ನೀನೇ ಹೇಳು ಹವೀಕ್ರ ಮಕ್ಕೊಗೆ ಬುದ್ಧಿ ಕೊಡು||
ಹವೀಕ ಹವೀಕ್ರಲೇ ಮಾಣಿ ಕೂಸು
ಮೆಚ್ಂಬತಾ ಕಾಲಾನೇ ಮುಂದೆ ಬರ್ಲಿ
ಹೇಳಿ ಹರ್ಸು ಹೇ ತಂದೆ ಸೀತಾರಾಮಚಂದ್ರ ನೀನು||
ಸಮಯೋಚಿತ ಕವನ ಕಲ್ಪನಾ