- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಹವೀಕ್ರೆಲ್ಲಾ ಬುದ್ಧಿವಂತ್ರು
ಕಲ್ಯುಲಕ್ಕೆ ಭಾಳಾ ಚುರ್ಕು
ಜೀವ್ನದಲ್ಲಿ ಬಪ್ಪದೆಲ್ಲಾ ಎದ್ರುಸುದೇಂಗೆ ಗುತ್ತು||
ಈಗೆಲ್ಲಾ ಹಂಚೋಯ್ದ ಅಲ್ಲಲ್ಲೆಲ್ಲಾ ಬೆಳ್ಕಾಯ್ದೊ
ಊರ ಬಿಟ್ಟ ಜನಾಯೆಲ್ಲಾ ವಿದೇಶ್ದವರೆಗೂ ನೆಲೆಯಾಯ್ದೊ
ಬಿದ್ದ ಸಸಿ ನಿತ್ಕಂಡಾಂಗೆ ಹೋದಲೆಲ್ಲಾ ಹಸಿ ಆಯ್ದೊ||
ಬುದ್ಧಿವಂತ್ಕೆಯಿದ್ರೂವಾ ಚುರ್ಕಬುದ್ಧಿಯವರಾದ್ರೂವಾ
ಕೆಲ್ಸಕಾರ್ಯ ಹೇಳ್ಕಂಡ್ ವತ್ತಡದಲ್ ಬಿದ್ದ ಹೋಯ್ದೊ
ಸ್ನೇಹ ಪ್ರೀತಿ ಗಳಿಸ್ಕಂಡಿ ಹೊಂದ್ಕ ಹೋಪ್ಲೆ ನೋಡ್ತಿದ್ದೊ||
ಜನಸಂಖ್ಯೆ ರಾಶಿ ಕಡ್ಮೆ
ಸಹಾಯ ಸಹಕಾರ್ವೇ ವಡವೆ
ಒಬ್ರಿಗೊಬ್ರು ಇಪ್ಲಕ್ಕಾಗಿ ನಡೀತಾ ಇದ್ದು ಸಮಾಜ ನಡ್ವೆ||
ಕೆಲವ್ರಿಗಂತೂ ಬಡತನಾ
ಶ್ರೀಮಂತಿಕೆ ದೊಡ್ಡಸ್ತನಾ
ಸೌಕರ್ಯಾನೇ ಇಲ್ದವ್ಕೆ ಮಾಡ್ತಾ ಇರ್ತೊ ಸಹಾಯನಾ||
ಜೀವಾ ಇಪ್ಪುವರೆಗೂ ಇರೋ ಹವೀಕ್ರ ದಕ್ಷತೆ
ಮಾನ ಮರ್ಯಾದೆಯಿಂದಾ ಬಾಳುವಂಥಾ ಸ್ಥಿರತೆ
ದೊಡ್ಡ ಮನ್ಸಾ ಕೊಡು ದೇವ್ರೆ ಇಲ್ದಿದ್ದಾಂಗೆ ಕೊರ್ತೆ||
ಅಕ್ಕನ ಹವ್ಯಕ್ರ ಮೇಲಿಪ್ಪ ಅಭಿಮಾನಕ್ಕೆ ಮೆಚ್ಚಲೇ ಬೇಕು. ಬರಕ್ಕೊಂಡಿರಿ.