Latest posts by ಕಲ್ಪನಾ ಅರುಣ್ (see all)
- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಹವ್ಯಕ್ರ ಜೀವ್ನ ಕತ್ಲಾದ್ರೆ
ಸಂಸ್ಕೃತಿ ಸಂಸ್ಕಾರಾ ಅಳ್ದಹೋದ್ರೆ
ನಂಗೋ ಅನ್ನೋ ಬಿಗುಮಾನ ವಳೀತೇ ಇಲ್ಯೆ||
ನಂಗ್ಳ ಜನಾ ನಂಗೊಕ್ ಸಿಗ್ದೆ ಖುಶಿ ಆಗ್ತಿಲ್ಯೇ
ಮಾತುಕತೆ ಭಾಷೆ ಬೇಳೇದೇ ಕಷ್ಟಾ ಆಗ್ತಲೆ
ನಂಗ್ಳತನಾ ಕಾಣ್ದಗಿದ್ರೆ ಬೇಜಾರ ಅಲ್ದನೇ||
ಈಗ್ನ ಕಾಲ್ದ ಮಾಣಿಕೂಸು ಬೇರೆ ಜನ್ರ ಹುಡಿಕಂಡು
ಮಿಕ್ಸ್ಚರ ಹಾಂಗೆ ಸಂಬಂಧಾನ ಕಲ್ಸಿಕಿದ್ವಲೇ
ನಂಗೋಯೆಲ್ಲಾ ಯಾರೂ ಹೇಳೂದಾ ಮರ್ತಿಕಿದ್ವಲೇ||
ನಂಗೊಯೆಲ್ಲಾ ಹವೀಕ್ರು ಹೇಳೂವಂತಾ ಮಾತಂತೂ ದೂರ ಮಾಡ್ದ್ವಲ್ಲೆ
ಆದ್ರೂ ಈಗಾ ಇದ್ದೊರೆಲ್ಲಾ ವಂದಾಗ್ ಕೂಡಿ ಬಾಳೂದನ್ನಾ ಕಲ್ಯೊ ಮನ್ಸಾರೆ
ವಕ್ಕಟ್ ಮಾಡಿ ಕೂಡ್ಸೀರೇ ವಳೀತೇ ಮತ್ತೆ ನಂಗ್ಳ ನಂಗ್ಳ ಹವೀಕ್ರ ಪದ್ಧತಿ||
ಕತ್ಲಾಗ್ದೇ ಬೆಳ್ಕಲ್ಲಿರೋ ಭವಿಷ್ಯದ್ ಗತಿ
ಅಲ್ಲಿ ಇಲ್ಲಿ ಉಳ್ದೊರೆಲ್ಲಾ ಒಬ್ರನ್ನೊಬ್ರ ಸ್ನೇಹಾ ಮಾಡೋ
ಹಠದಿಂದಾ ಕೂಡ್ಕಕಂಡಿ ದೀಪದಿಂದ ದೀಪಾ ಹಚ್ಚಿ ಮೂಡ್ಸೊ ಜಾಗೃತಿ||