Latest posts by ಕಲ್ಪನಾ ಅರುಣ್ (see all)
- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಹೇಳೇ ನೀ ವೇಣಿಯಕ್ಕ
ಜೀವ್ನ ಹೇಂಗೇ ಮಾಡೂದೇ?
ಬೆಲೆಯೆರ್ಕೆ ಕಾಲ್ದಲ್ಲಿ ಅಡ್ಗೆ ಹೇಂಗೇ ಮಾಡೂದೇ?
ಕಾಯಿಪಲ್ಲೆ ಬೇಳೆಕಾಳು ಮುಗ್ಲ ಮುಟ್ಟಿದ್ದು
ಅಕ್ಕಿ ಗೋಧಿ ಹಿಟ್ಟು ರವೆ ದರಾಯೇರಿದ್ದು
ಊಟಾತಿಂಡಿ ಖರ್ಚೆಲ್ಲಾ ಭಾರೀ ಯೇರಿದ್ದು
ಬಾಯರುಚಿ ಇನ್ನೊಂದಚೂರು ಮುಂದಕ್ಕೆ ಇದ್ದು||
ಬಾಡ್ಗೆ ಮನೆ ಕರೆಂಟ್ ಬಿಲ್ಲು ಯಾರಿಗ್ ಹೇಳವೇ?
ಪೆಟ್ರೋಲ ಖರ್ಚು ಮೊಬೈಲವೆಚ್ಚಾಯೆಲ್ಲಿ ಇಡವೇ?
ದಿನಾಪೂರ ದುಡ್ಕಂಡ್ ಬಂದ್ರೂ ಸಾಕಾಗ್ತೇ ಇಲ್ಲೆ
ಸಾಲಗೀಲಾ ಮಾಡಗಿದ್ರೆ ಜೀವ್ನವೇಯೆಲ್ಲೇ?
ಸಂಸಾರ್ದಲ್ಲಿ ಇರೆಕಾದ ಸುಖವೇ ಇಲ್ಲೆ||
ಹೇಳೇ ನೀ ವೇಣಿಯಕ್ಕ ಸಂಸಾರ್ದ ಸಾರವಾ
ಬರಗಾಲದಲ್ಲೂ ಉಂಬವಂತಾ ರುಚಿ ಅಡ್ಗೆನಾ
ಬಡತನದಲ್ಲೂ ಮಾಡುವಂತಾ ಸಾದಾ ಊಟಾನಾ
ಮನೆ ಅಡ್ಗೆ ರುಚೀಲಿ ಬರ್ಲೇ ಹೊಸತನಾ||
ದಿನಾ ಎದ್ದುವ ,ಬೆಲೆ ಏರಿಕೆ ಸಮಯಲಿ ಈ ಕವಿಯೋಲೆ ಒಪ್ಪಾ ಆಯಿದು.
ಡಬಲ್ ಬೀನ್ಸ್ ಸಾ೦ಬಾರಿ೦ದ ಸಿ೦ಗಲ್ ಬೀನ್ಸ್೦ಗೆ ಇಳಿದು ,ಈಗ ನೋಬೀನ್ಸ್ ಕೊದಿಲು ಮಾಡೆಕಟ್ಟೇ ಹೇಳಿ ಸತ್ಯಣ್ಣ ಹೇಳುವುದು ಎಲ್ಲೋ ಕೇಟತ್ತು. ಇನ್ನು ಏನಿದ್ದರು ಒನ್ ಟೋಮೇಟೋ ಸಾರ್, ಟೂ ಬದನೆ ಬೋಳುಕೊದಿಲ್ ,
ವೇಣಿಯಕ್ಕಂಗೆ ಕರೆ ಕೊಟ್ಟದು ಒಳ್ಳೇದಾಯಿದು.