ಬೊಳುಂಬುಮಾವನ ಗುರ್ತ ಇದ್ದನ್ನೆ!ಅದಾ, ಕೊಡೆಯಾಲಲ್ಲಿ ಬೇಂಕಿಲಿರ್ತವು!! ಕುಶಾಲಿಲಿ ಎಲ್ಲೊರನ್ನುದೇ ನೆಗೆನೆಗೆಲಿ ಮಾತಾಡುಸಿಗೊಂಡು ಇಪ್ಪದು, ಒಪ್ಪಣ್ಣಂಗೆ ಅವರತ್ರೆ ಮಾತಾಡ್ಳೆ ಕೊಶೀ ಅಪ್ಪದು.ಇವು ಪೈಸೆ ಕೊಡ್ತಲ್ಲಿ ಕೂದಿದ್ದರೆ ‘ನಗದು’ ಹೇಳ್ತ ಬೋರ್ಡಿನ ತಿರುಗುಸಿ ‘ನಗುವುದು’ ಹೇಳಿ ಮಾಡ್ತವಡ. ಮೂಲ ಬೊಳುಂಬು ಆದರೂ, ಅವು ಕಾರ್ಯನಿಮಿತ್ತ ಅಂದೇ ಊರು ಬಿಟ್ಟಿದವು..!ಊರು ಬಿಟ್ರುದೇ ಊರ ನೆಂಪು ಬಿಟ್ಟಿದವಿಲ್ಲೆ, ಹಳ್ಳಿಕ್ರಮಂಗಳ ಬಿಟ್ಟಿದವಿಲ್ಲೆ! ಕೊಡೆಯಾಲದ ಪೇಟೆನೆಡುಕೆ ಇದ್ದರುದೇ, ಪ್ರತಿಒರಿಶ ಸೋಣೆತಿಂಗಳಿಲಿ ಬೇಳೆಹೋಳಿಗೆ ಇದ್ದೇ ಇಕ್ಕು.ಆ ದಿನ ಒಪ್ಪಣ್ಣನ ದಿನಿಗೆಳಿಯೇ ದಿನಿಗೆಳುಗು! ;-)ಬೇಂಕಿಲಿ ಪೈಸೆ ಎಣುಶುದರ ಒಟ್ಟೊಟ್ಟಿಂಗೇ ಅವಕ್ಕೆ ಕೆಲವೆಲ್ಲ ಒಯಿವಾಟುಗೊ ಇದ್ದು!ಪಟತೆಗವದೋ, ಪದ್ಯಕಟ್ಟುದೋ, ಪದ್ಯ ಹಾಡುದೋ, ಕತೆಬರವದೋ, ಶುದ್ದಿ ಓದುದೋ, ಆಟ ನೋಡುದೋ, ಪಾಟಮಾಡುದೋ - ಇನ್ನೂ ಏನೇನೋ!ಇವರ ಪಟತೆಗೆತ್ತ ಮರುಳು ಇದ್ದಲ್ದ, ಅದರ ಒಂದು ಮೆಚ್ಚೆಕ್ಕಾದ್ದೇ, ತುಂಬ ಚೆಂದಕೆ ತೆಗೆತ್ತವಡ - ಅಜ್ಜಕಾನ ಬಾವ ಹೇಳಿತ್ತಿದ್ದ!ಎಲ್ಲಿಗೇ ಹೋಗಲಿ, ಪಟ ತೆಗದು, ಚೆಂದಲ್ಲಿ ಮಡಿಕ್ಕೊಂಗು. ಅವರ ಮನೆ ಗೋಡೆಲಿಡೀ ಅವು ತೆಗದ ಪಟಂಗಳೇ ಅಡ.ಅತ್ತೆಗೆ ವಾರವಾರ ಉಡುಗುವಗ ಬಂಙ ಅಪ್ಪದಿದಾ!ಮೊನ್ನೆ ಬೆಡಿರಿಪೆರಿಗೆ ಹೇಳಿಗೊಂಡು ಕೊಡೆಯಾಲಕ್ಕೆ ಹೋಗಿತ್ತಿದ್ದೆ.ಬೊಳುಂಬುಮಾವ ಸಿಕ್ಕಿದವು, ಪಣಂಬೂರಿಂಗೆ ಹೆರಟವು.ಕೆಮರದ ಬೇಗು ಕಂಡಪ್ಪಗ ಪಕ್ಕನೆ ಕೇಳಿದೆ, ಈ ಪಟಂಗ ನಮ್ಮ ನೆರೆಕರೆಗುದೇ ಕಾಣಲಿಯೋ?ಹೇಳಿಗೊಂಡು! ‘ಅಕ್ಕಪ್ಪಾ, ಧಾರಾಳ!’ ಹೇಳಿದವು. ಅವು ತೆಗದ ಚೆಂದದ ಪಟಂಗಳ ಒಪ್ಪಣ್ಣನ ಬೈಲಿ ತೋರುಸುಲೆ ಕೊಶೀಲಿ ಒಪ್ಪಿದವು.ನೋಡುವ ಕೆಲಸ ನಮ್ಮದು! ಅದರೊಟ್ಟಿಂಗೆ ಪುರುಸೊತ್ತಪ್ಪಗ ಶುದ್ದಿಗಳನ್ನೂ ಹೇಳ್ತವು. ಓದಿ, ಒಪ್ಪ ಕೊಡುವೊ.
ಹೂಂ. ಕಾಸರಗೋಡಿಲ್ಲಿ ಕನ್ನಡಿಗರಿಂಗೆ ನಿತ್ಯವೂ ಸಮರಾಭ್ಯಾಸವೇ….
ಬಹುಶಃ ಕನ್ನಡಿಗರಿಂಗೆ ; ಘೋಷ ವಾಕ್ಯಕ್ಕೆ ಅಭ್ಯಾಸ, ಸಮರ ಮಾಡೆಕ್ಕಾದ ಸನ್ನಿವೇಶ ಇತ್ತೀಚೆಗೆ ಸೃಷ್ಟಿ ಅಪ್ಪದು.
ಹೂಂ. ಅಪ್ಪು ವಿಜಯಕ್ಕ . ಮಲೆಯಾಳಂ ಘೋಷ ವಾಕ್ಯಂಗಳ ಹೇಳಿಯೊಂಡು ನಮ್ಮ ಮಠದ ಭಕ್ತರು ಮೆರವಣಿಗೆ ಹೋದ್ದರ ವಿಡಿಯೋವೊಂದು ವಾಟ್ಸಾಪಿಲ್ಲಿ ಕಂಡಪ್ಪಗ ಇದರ ನೆಂಪಾತು.
ನಿನ್ನೆ ಹೊಸನಗರಲ್ಲಿಯೂ ಮಲಯಾಳ ಘೋಷ ವಾಕ್ಯ ಹೇಳಿದ್ದವಡ. ಅಂತೂ ಶೀಲಾ , ಮಲಯಾಳ ಭಾಷೇಲಿ ನೀನು ಬೆರಸಿಗೊಂಡಿರ್ತ ನೆಗತ್ತೆ ಒಳ್ಳೆತಾಗಿ ಕಾಣುತ್ತು ಮಿನಿಯ !. ಒಳ್ಳೇದು ಬೇಕಾವುತ್ತು.. ಭಾಷೆ ಮೇಗೆ ದ್ವೇಷವು ಇಲ್ಲೇ.
ಸಕಾಲಲ್ಲಿ ಭಾವಚಿತ್ರಂಗಳ ಪ್ರಕಟಿಸಿ ಮಹದುಪಕಾರವನ್ನೇ ಮಾಡಿದಿರಿ. ಧನ್ಯವಾದಂಗೋ . ನಮ್ಮೂರಿನ ಮಲಯಾಳಂ ಭಾಷೇಲಿ ಒಂದು ಘೋಷ ವಾಕ್ಯ ಹಿಂಗಿದ್ದು….`ಮುನ್ನೋಟು….ಮುನ್ನೋಟು ನೇತಾವೇ….ಲಕ್ಷಮ್ ಲಕ್ಷಮ್ ಪಿನ್ನಾಲೇ…’ ಹೇಳಿರೆ ಮುನ್ನುಗ್ಗು …ಮುನ್ನುಗ್ಗು ನಾಯಕನೇ … ನಾವಿದ್ದೇವೆ…ನಾವಿದ್ದೇವೆ….ಲಕ್ಷ ಲಕ್ಷ ನಿನ್ನ ಜೊತೆ …ಹೇಳ್ತ ಅರ್ಥ . ಇಲ್ಲಿ `ನೇತಾವೇ…’ ಹೇಳ್ತ ಜಾಗೆಲಿ `ಸ್ವಾಮೀಜಿ…’ ಹೇಳಿ ಮಾಡಿರೆ ಬಹಳ ಅರ್ಥವತ್ತಕ್ಕು. ಅಲ್ದೊ?
ಘೋಷ ವಾಕ್ಯವ ಬರವಲೆ ಮಳೆಯಾಳಿಗೊ ಬಲ. ನಮ್ಮವಕ್ಕೆ ಬೇಕೇ ಬೇಕು ನ್ಯಾಯ ಬೇಕು ಹೇಳುತ್ಸು ಬಿಟ್ಟರೆ ಬೇರೆಂತೂ ಸೃಷ್ಟಿ ಮಾಡ್ಲೆ ಗೊಂತಿಲ್ಲೆ.ವೆಂಕಟರಾಜ ಪುಣಿಚಿತ್ತಾಯ ಹೇಳಿ ಎಡನ್ನೀರಿಲ್ಲಿ ಒಬ್ಬ ಕನ್ನಡ ಪಂಡಿತರು ಇತ್ತಿದ್ದವು. ಅವುದೇ ಕನ್ನಡ ಘೋಷ ವಾಕ್ಯವ ಬರವಲೆ ಬಲ. ಉದಾ: 62ra ಕಲಾವಿದಲ್ಲಾ ಎಚ್ಚರವಿರಲಿ chowenlay
ಶಿವರಾಮಣ್ಣ , ಅದೂ ಅಪ್ಪು. ಆದರೆ ಮೊನ್ನೆ ಶ್ರೀ ಮಠದ ಭಕ್ತರು(ಅಪ್ಪಟ ಕನ್ನಡಿಗರೇ) ಹೇಳಿದ ಮಲಯಾಳಂ ಘೋಷ ವಾಕ್ಯ ಕೆಮಿಗೆ ಹಿತವಾಗಿ ಕೇಳಿತ್ತಪ್ಪ.
ವಾಹ್ ಕಣ್ಮನಕ್ಕೆ ಸಾರ್ಥಕ್ಯ ಭಾವ. ಗುರುಗೊ ಹೇಳಿದಾಂಗೆ ನಮ್ಮ ರಾಮಚಂದ್ರಾಪುರ ಮಠಕ್ಕೆ ಸರಕಾರ ಮೂಗು ತೂರ್ಸುದು ಬೇಡ.ಅದು ಪ್ರಾಕ್ ಪದ್ಧತಿ ಹಾಂಗೇ ಒಳುದು ಬೆಳಗಲಿ.