Latest posts by ಪುಣಚ ಡಾಕ್ಟ್ರು (see all)
- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಅಪೂರ್ವಃ ಕೋsಪಿ ಕೋಶೋsಯಂ ವಿದ್ಯತೇ ತವ ಭಾರತಿ।
ವ್ಯಯತೋ ವೃದ್ಧಿಮಾಯಾತಿ ಕ್ಷಯಮಾಯಾತಿ ಸಂಚಯಾತ್।।
ಅನ್ವಯ:
(ಹೇ) ಭಾರತಿ! ತವ ಅಯಂ ಕಃ ಅಪಿ ಅಪೂರ್ವಃ ಕೋಶಃ ವಿದ್ಯತೇ।
(ಅಯಂ ಕೋಶಃ) ವ್ಯಯತಃ ವೃದ್ಧಿಂ ಆಯಾತಿ, ಸಂಚಯಾತ್ ವ್ಯಯಂ ಆಯಾತಿ।
ಭಾವಾರ್ಥಃ
ಸರಸ್ವತಿ ದೇವಿಯ ಒಂದು ಅಪೂರ್ವವಾದ ಕೋಶ ವಿದ್ಯೆ. ಈ ಕೋಶವ ಉಪಯೋಗಿಸಿಗೊಂಡು ಇದ್ದರೆ ಅದು ಬೆಳೆತ್ತಾ ಹೋವುತ್ತು. ಉಪಯೋಗುಸದ್ದೆ ಕಟ್ಟಿಮಡುಗಿದರೆ ನಿಧಾನಕ್ಕೆ ನಾಶವೇ ಆವ್ತು.
ನವಗೆ ಗೊಂತಿಪ್ಪದರ ನಾವು ಬೇರೆವಕ್ಕೆ ಹಂಚೆಕ್ಕು
ಇಲ್ಲದ್ರೆ ಕೆಲವು ಸಮಯ ಅಪ್ಪಗ ನವಗೇ ಮರತ್ತು ಹೋಕು.
ಆರಾದರೂ ಅದರ ಪಡಕ್ಕೊಂಡರೇ ಅವಕ್ಕೆ ಪ್ರಯೋಜನ ಅಕ್ಕು. ಆರೂ ತೆಕ್ಕೊಳ್ಳದ್ದರೂ ನಮ್ಮ ಜ್ಞಾನಕೋಶ ಬೆಳದ್ದದು ಸತ್ಯವೇ ಅಲ್ಲದೋ?
ಅಪ್ಪು. ಒಪ್ಪ
ಸರಿಯಾದ ಮಾತು.