Oppanna.com

ಮನಸ್ಸಿಲ್ಲಿ ಮಾಸದ್ದೆ ಒಳಿವ ವಸಂತಮಾವ (ಅಕ್ಷರಾಂಜಲಿ)

ಬರದೋರು :   ವಿಜಯತ್ತೆ    on   26/08/2017    4 ಒಪ್ಪಂಗೊ

 

ಮನಸ್ಸಿಲ್ಲಿ ಮಾಸದ್ದೆ ಒಳಿವ ವಸಂತ ಮಾವ– (ಕೊಡಗಿನಗೌರಮ್ಮನ ಸುಪುತ್ರ)

ಕೆಲವು ಜೆನ ಈ ಲೋಕಂದ ಹೋಗಿಯಪ್ಪಗ ಅವರ ಹೆಸರೂ ಮಾಸುತ್ತು.ಇನ್ನು ಕೆಲವು ಜೆನ ರಜ ಸಮಯ ನೆಂಪಿಲ್ಲಿ ಒಳಿತ್ತವು.ಇನ್ನು ಕೆಲವು ಜೆನರ ದೇಹ ಹೋದರೂ ಜನಮಾನಸಲ್ಲಿ ಸದಾ ಬದುಕ್ಕಿರುತ್ತೊವು. ಈ ಮೂರನೆ ಸಾಲಿಂಗೆ ಸೇರಿದವರಲ್ಲಿ ಒಬ್ಬᵒ, ಕೊಡಗಿನಗೌರಮ್ಮನ ಮಗ; ಬಿ.ಜಿ.ವಸಂತಮಾವ.ನಮ್ಮ ಕೊಡಗಿನಗೌರಮ್ಮ ಕಥಾಸ್ಪರ್ಧಗೆ ಸದಾ ಒರತ್ತೆ ಹಾಂಗಿತ್ತಿದ್ದ ವಸಂತಮಾವ ೮-೭-೨೦೧೭ರಲ್ಲಿ ತನ್ನ ಅಮ್ಮನ ಪಾದ ಸೇರಿದೊವು ಹೇಳ್ವ ಸುದ್ದಿ ಹಳತ್ತಾವುತ್ತೇ ಇಲ್ಲೆ.ಅವರ ಅಬ್ಬೆ, ಇಹಲೋಕ ಬಿಡುವಗ ಅವಕ್ಕೆ ಕೇವಲ ಐದು ವರ್ಷ.ಅಬ್ಬೆಯ ಒಡನಾಟ ಸರಿಯಾಗಿ ನೆಂಪು ಬಾರದ್ದ ಬಾಲ್ಯ. ವಸಂತಮಾವ 83 ವಸಂತ ಕಂಡು ತನ್ನ ಅಬ್ಬೆಯ ಹೆಸರಿಂಗೂ,ಅಬ್ಬೆಯ ಸಾಹಿತ್ಯ ವೇದಿಕೆಲಿಯೂ ಮಡಿಕೇರಿ ಲೋಕಲ್ಲಿಯೂ ವಸಂತ ಹಂಚಿ, ಅದರ ಒಳುಶಿಕ್ಕಿ,ಬಿಟ್ಟುಹೋದೊವು.

ಒಂದಾರಿ ಅವಕ್ಕೆ ಶ್ರದ್ಧಾಂಜಲಿಯ ಈ ಬಯಲಿಲ್ಲಿ ಆನು ಅಕ್ಷರ ರೂಪಕ್ಕೆ ತಯಿಂದೆ. ವಾಪಾಸು ನಿಂಗಳ ಮುಂದೆ ಎಂತಕೆ ತತ್ತೆ ಕೇಳಿರೆ; ನಾಡ್ದು ೪-೯-೨೦೧೭ಕ್ಕೆ ಗಿರಿನಗರ ಶ್ರೀಮಠಲ್ಲಿ ಇವರಿಯಾಣ (೨೦೧೭)ಕತಾಸ್ಪರ್ಧೆಯ ವಿಜೇತರಿಂಗೆ ಬಹುಮಾನ ಶ್ರೀಗುರುಗಳ ಅಮೃತ ಹಸ್ತಂಗಳಿಂದ ವಿತರಣೆ ಆವುತ್ತು.ಈ ಸಂದರ್ಭಲ್ಲಿ ದತ್ತಿನಿಧಿ ಪ್ರಾಯೋಜಕರ ನೆಂಪು ಮಾಡಿಗೊಂಬದು ನಮ್ಮ ಆದ್ಯ ಕರ್ತವ್ಯ.

ಇದೀಗ ರಾಷ್ಟ್ರೀಯ ಮಟ್ಟಲ್ಲಿ ನೆಡದು ಬಪ್ಪ; ನಮ್ಮ ಕೊಡಗಿನಗೌರಮ್ಮ ಕಥಾಸ್ಪರ್ಧಗೆ ಇಪ್ಪತ್ತೆರಡನೇ ವರ್ಷ. ೧೯೯೬ ರಲ್ಲಿ,ಏತಡ್ಕ ಮನೆತನದ ಕೇಶವಭಟ್ಟರ ನೇತೃತ್ವಲ್ಲಿ; ಡಾ|ಕೃಷ್ಣಮೂರ್ತಿ,ಚಂದ್ರಶೇಖರ ಏತಡ್ಕ,ಮೊದಲಾದವರ ಆತ್ಮೀಯ ಸಹಕಾರಂದ ಪ್ರಾರಂಬಗೊಂಡು, ಈ ಕಥಾವೇದಿಕೆ; ಉಸಿರು ಓಳಿಶಿಗೊಂಡು ಬಪ್ಪಲೆ ವಸಂತಮಾವನೇ ಒರತ್ತೆ. ಕಥಾಸ್ಪರ್ಧೆ ಸುರುವಾದ ಮತ್ತೆ…, ಅದಲ್ಲಿ ಪ್ರಶಸ್ತಿ ಪಡದ ಕತೆಯ ಹತ್ತು ವರ್ಷಪ್ಪಗ;ಹತ್ತೆಸಳು-೧,ಹಾಂಗೂ ಇಪ್ಪತ್ತು ವರ್ಷಕ್ಕೆ ಮತ್ತೆ ಹತ್ತು ಕತೆಗಳ ಹತ್ತೆಸಳು-೨ ಹೇಳಿ ಎರಡು ಕೃತಿಗಳ ಪ್ರಕಟಮಾಡಿದ್ದು.ಇದೆಲ್ಲದಕ್ಕೂ ಅವ್ರದ್ದೇ ಸಹಕಾರ ಆದರೂ ೨೦೧೨ ರಲ್ಲಿ ನೆಡದ ಕೊಡಗಿನಗೌರಮ್ಮ ಶತಮಾನೋತ್ಸವ ಸಂದರ್ಭಲ್ಲಿ ನೆಡದ ಸಣ್ಣಕತಾ ಕಮ್ಮಟ ಹಾಂಗೂ ಹತ್ತೆಸಳು-೨ ಕೃತಿಗೆ ಕೂಡಾ ನಮ್ಮ ಈ ಒಪ್ಪಣ್ಣ ಬಯಲಿಂದ ಸಹಾಯ ಹಸ್ತ ಸಿಕ್ಕಿದ್ದು ಹೇಳ್ವದರ ಇಲ್ಲಿ ನೆಂಪು ಮಾಡಿಗೊಳ್ತೆ.

ನಾಡ್ದು ಶ್ರೀಸಂಸ್ಥಾನದವರ ಸಮ್ಮುಖಲ್ಲಿ ನೆಡವ ಈ ಕಾರ್ಯಕ್ರಮಕ್ಕೆ ಬಯಲಿನೊವು,ಇಲ್ಲಿ ಗುರ್ತಾಗಿ ವ್ಯವಹರಿಸುವ ಎಲ್ಲಾ ಅಣ್ಣ-ತಮ್ಮಂದ್ರೂ ಅಕ್ಕ-ತಂಗೆಕ್ಕಳೂ ಬಂದು ಶುಭಹಾರೈಸೆಕ್ಕೂಳಿ ಕೇಳಿಗೊಳ್ತೆಯೊಂ.

ಅಖಿಲ ಭಾರತ ಮಟ್ಟದ  ಕೊಡಗಿನಗೌರಮ್ಮ ಕಥಾಸ್ಪರ್ಧೆ.

ಅಧ್ಯಕ್ಷೆ                                                                                                                                   ಸಂಚಾಲಕಿ

ಶ್ರೀಮತಿ ಈಶ್ವರಿ ಶ್ಯಾಮಭಟ್,ಬೇರ್ಕಡವು.                                                                                             ವಿಜಯಾಸುಬ್ರಹ್ಮಣ್ಯ,ಕುಂಬಳೆ.

———೦———

 

4 thoughts on “ಮನಸ್ಸಿಲ್ಲಿ ಮಾಸದ್ದೆ ಒಳಿವ ವಸಂತಮಾವ (ಅಕ್ಷರಾಂಜಲಿ)

  1. ಶ್ರೀ ದೇವಿ ನೀನು ಹೇಳಿದ್ದು ಅಕ್ಷರಶಃ ಸತ್ಯ. ನೀನು ಹೇಳಿದ ಕೊನೆ ವಾಕ್ಯವೇ ಎನ್ನ ಮನಸ್ಸೂ ಹೇಳುದು.

  2. ವಿಜಯತ್ತೇ,
    ವಸಂತ ಮಾವ ಎಲ್ಲಾ ಕಾಲಕ್ಕೂ ಎಲ್ಲಾ ಮಕ್ಕೊಗೂ ಆದರ್ಶ.
    ಸಾಹಿತ್ಯಲೋಕಕ್ಕೆ ಬಹುಮುಖ್ಯ ಕಾಣಿಕೆ ಸಲ್ಲುಸಿದ ಕೊಡಗಿನ ಗೌರಮ್ಮ ನಮ್ಮ ಸಮಾಜದ ಆಸ್ತಿ. ಆ ಮಹಾತಾಯಿ ಇನ್ನೂ ಸಾಧನೆ ಮಾಡುವ ಹೊಸ್ತಿಲಿಲಿ ಇಪ್ಪಗಳೇ ಲೋಕಂದ ಮರೆಯಾಗಿ ಹೋದ್ದದು ನವಗೆಲ್ಲೊರಿಂಗೂ ತುಂಬುಸುಲಾಗದ್ದ ನಷ್ಟ. ಅಬ್ಬೆಯ ನೆಂಪು ಕನಸಿಲಿ ಕಂಡ ಹಾಂಗೆ ಇಪ್ಪ ಪ್ರಾಯಲ್ಲಿ ಅಬ್ಬೆಯ ಕಳಕ್ಕೊಂಡ ವಸಂತಮಾವನ ಮನಸ್ಸಿನ ಬೇನೆ ನಮ್ಮ ಕಲ್ಪನೆಂದಲೂ ಮೀರಿದ್ದದು. ಅಬ್ಬೆಯ ನೆಂಪಿನ ಶಾಶ್ವತ ಮಾಡ್ಲೆ ಹೆರಟು ಗೌರಮ್ಮನ ಹೆಸರಿನ ಮನೆ-ಮನಕ್ಕೆ ತಲುಪಿಸಿದ ಸಾರ್ಥಕ ಬದುಕು ವಸಂತಮಾವಂದು. ಅಬ್ಬೆಯ ಋಣದ ಒಟ್ಟಿಂಗೆ ನೆಲದ-ಕನ್ನಡದ ಋಣವೂ ತೀರ್ಸಿಹೋದವು ವಸಂತಮಾವ.
    ಅವರ ಮನೆಯ ಇನ್ನಾಣ ಕುಡಿಗಳೂ ವಸಂತಮಾವನ ದಾರಿಲಿಯೇ ನೆಡದು ಸಮಾಜಕ್ಕೆ ಮಾದರಿ ಆಗಲಿ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×