- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಸುಳ್ಳು ಹೇಳದ್ದೇ ಪಾಪ ಮಾಡದ್ದೆ
ಹೇಳಿ ಹಿರೀರು ಹೇಳಿಕೊಟ್ಟಿದ್ದೊ
ಮಹಾಪುರುಶೃರೆಲ್ಲಾ ಬರ್ದ ಇಟ್ಟಿದ್ದೊ
ಸುಳ್ಳು ಹೇಳ್ದ್ರೆ ನಾಲ್ಗೆ ಕೂಯ್ಯ ಶಿಕ್ಶೆ ಕೊಡ್ತಿದ್ದೊ||
ಅದ್ರೆ ಯೆಂತದು ಈಗ್ನ ಕಾಲಾ ರಾಶಿ ಕೆಟ್ಟೊಯ್ದು
ಪ್ರಾಮಾಣಿಕತನಾ ಸತ್ಯ ಹೇಳ್ದ್ರೆ ಬಾಯ್ ಬಾಯ್ ಬಿಟ್ತಿದ್ದೊ
ಸುಳ್ಳೆ ಸುಳ್ಳು ಡಂಬಾಚಾರಕ್ ಬೆಲೆ ಕೊಟ್ಟಿದ್ದೊ
ಪಾಪದ್ ಕೆಲ್ಸ ಬೇಡಾ ಅಂದ್ರೂ ಹೆಚ್ಚೇ ಮಾಡ್ತಿದ್ದೊ||
ಸತ್ಯ ಹೇಳೊ ಹೇಳಿ ರಾಶಿ ಪ್ರಯತ್ನ ಪಡ್ತಿದ್ದೆ
ರಾಶಿ ಸಲಾ ಅದ್ರಿಂದ ಅವಮಾನ ಪಟ್ಟಿದ್ದೆ
ಸುಳ್ಳು ಹೇಳ್ದ್ರೆ ಖುಶಿ ಅಗ್ತನೋ ಹೇಳಿ ನೋಡ್ತಿದ್ದೆ
ಸುಳ್ಳಿನ ಕಂತೆ ಕಟ್ಟುಲ್ ಹೋಗಿ ನೋವ ಪಟ್ಬಬುಟ್ಟೆ||
ಸರ್ಕಾರಿ ಕೆಲ್ಸಾ ಅಂದ್ರೆ ದೇವ್ರ ಕೆಲ್ಸಾನೆ
ಶಾಲಾ ಕಾಲೇಜು ಅಂದ್ರೆ ದೇವಸ್ತಾನಾನೆ
ಇಲ್ಲೂ ನಡೇತು ಬ್ರಶ್ಟಾಚಾರಾ ಮೋಸಾ ವಂಚನೆ
ಸತ್ಯದಲ್ಲಿ ನೆಡ್ಕಂಡ್ ಬಂದೋರಿಗೆ ಬತ್ತಾ ಇರ್ತು ತಪ್ಪ್ ಕಲ್ಪನೆ||
ಟಿ.ವಿ. ರೆಡಿಯೊ ಹೆಳ್ತಾ ಇರ್ತು ಪ್ರಪಂಚ್ದ ಸ್ತಿತಿನಾ
ಅತ್ಯಾಚಾರಾ ಹೆಣ್ಮಕ್ಳ ಸ್ತಿತಿನಾ
ಯಾವಾಗೂ ಇರ್ಲಿ ಹೆಂಗ್ಸ್ರಿಗೆಲಾ ವಾಳ್ಳೆ ಸ್ತಾನಮಾನಾ
ಉದಾಹರಣೆಗಶ್ಟೆ ಬೇಡಾ ಕೆಲವು ಜನಾ||
ಸುಳ್ಳು ಪಾಪಾ ಸಮಾಜದಲ್ಲಿ ಹೆಚ್ಚಾದ ದಿನಾ
ಮಳೆ ಬೆಳೆ ಇಲ್ದೆ ಕಳ್ಯೊ ಹಸಿವಿಂದಾ ಜನಾ
ಕಿತ್ಕಂಡ್ ತಿಂತೊ ಮನುಶ್ಯರ್ನ ಹೀಂಗೆ ವಂದಿನಾ
ಸತ್ಯ ಉಳ್ಸಿ ಪುಣ್ಯ ಗಳ್ಸಿ ಪ್ರತಿಯೊಂದ್ ಜನಾ||
ಒಳ್ಳೆ ಆಶಯ ಕವನ. ಸುಳ್ಳು ಹೇಳ್ಳಾಗ ಅಪ್ಪು. ಒಂದು ಸುಳ್ಳು ಹೇಳಿರೆ ಮತ್ತದರಿಂದ ತಪ್ಪುಸಲೆ ಮತ್ತೆ ಹಲವು ಸುಳ್ಳು ಹೇಳ್ಳೇ ಬೇಕಾವ್ತು. ಅದೆಲ್ಲ ಚಿತ್ರಗುಪ್ತನ ಡೈರಿಲಿ ರೆಕಾರ್ಡ್ ಹೇಳ್ತದು ನೆಂಪೇ ಆವುತ್ತಿಲ್ಲೆ. !
ಕಾಲ ಕೆಟ್ಟು ಹೋಜು ಅ೦ತ ನಾವು ಅಂದುಕೊಂಡ್ರೂ ಸತ್ಯ ಹೇಳ್ತರೆ ಕೆಟ್ಟು ಹೋದ್ದು ನಮ್ಮ ಮನಸ್ಸು .. ಕಡೇ ಸಾಲು ಮನುಷ್ಯ ಜೀವಿಗೊಕ್ಕೆಲ್ಲಾ ವೇದವಾಕ್ಯ . ಒಳ್ಳೆ ಆಶಯದ ಕವನ ಅಕ್ಕ .