Oppanna.com

ಹಳ್ಳಿ ಗಂಡು ಹೆಣ್ಣ್ನಅವಾಂತ್ರ

ಬರದೋರು :   ಕಲ್ಪನಾ ಅರುಣ್    on   10/02/2014    2 ಒಪ್ಪಂಗೊ

ಹಳ್ಳಿ ಗಂಡು ಅಂದ್ರೆ ಯೆಂತಕ್ ಹಾಗನೊ?

ಹಳ್ಳಿ ಹೆಣ್ಮಕ್ಕಗೂ ಯೆಂತಕ್ ಬೇಡ್ದನೊ?
ಮದ್ವೆಯಾಗೆ ಅಂದ್ರೆ| ಯೆಂತಕ್ ಕನಸೋ ಪೇಟೆ ಗಂಡಿದು!
 
ಕೊಟ್ಗೆ ತೋಟ ನೋಡೋದೆಲ್ಲ ಯಾರಿಗ್ ಬೇಕು?
ಮನೆತನದ ಉಸಾಬರಿ ಯೆಂತಕ್ ಬೇಕು?
ಪೇಟೆ ಮೇಲೆ ಆರಾಮಾಗಿ ಇದ್ರೆ ಆತು|
ಜುಂ ಹೇಳಿ ಶೋಕಿ ಮಾಡಿದ್ರೆ ಬೇಕಷ್ಟ ಆತು||
 
ಹಳ್ಳೀಲ್ ಅತ್ತೆ ಮಾವ್ನಸೇವೆಯೆಂತಕ್ಕೆ?
ವೃದ್ದಾಶ್ರಮ ಇರಕಾರೆ ನಂಗೊ ಯೆಂತಕ್ಕೆ?
ಅತ್ತೆ ಮಾವ ಅಂದ್ರೆ ಹಳೇ ಸೂಟಕೇಸು
ಓಪನ್ ಮಾಡೂಲಾಗ್ದೆ ಮೂಲೆಗಿಟ್ಟ್ ಪೆಟ್ರಾಸು||
 
ಗುರುಗ್ಳು ಹೇಳ್ತ್ರು ಇರ್ಲಿ ಗಂಡಹೆಂಡ್ತಿಗ್ ಎರಡ ಸಂತಾನ
ಕುಟುಂಬ ಬೆಳೇಲಿ ಮುಂದೆ ತಂದಾನತಾನ
ಈಗ್ನಕೊಗೆಲ್ಲ ಬೇಡಾ ಬಸ್ರಿ ಬಾಣಂತನಾ
ಒಂದೇ ಮಕ್ಕೊ ಸಾಕು ನಮ್ಗೆ ಅಷ್ಟೇ ಅಧ್ವಾನಾ||
 
ನೌಕ್ರಿ ಮಾಡೊ ಹೇಳಾಸೆ ಪೇಟೆ ಸ್ಟೈಲಲ್ಲಿ
ಹಳ್ಳೀಲ್ ಇದ್ದೊವ್ರು ಬೇಕಾರ ಇರ್ಲಿ ಹಳೇ ಸ್ಟೈಲಲ್ಲಿ
ಮನೇಲಿ ಬೇಡಾ ಹಳೇ ಕಟ್ಲಕಂದಾಚಾರ
ಹೊಟೇಲ್‌ಲ್ಲಿರ್ಲಿ ಮಾಡರ್ನ ಉಟೋಪಚಾರ||
 
ಹಳ್ಳಿ ಗಂಡ್ಮಕ್ಕೊ ಈಗ ಬದ್ಲ ಆಗೋಯ್ದ
ಜಾತಿ ಹೆಣ್ಣೀಲ್ದೆ ಬೇರೆ ಕಡೆ ಮೊರೆ ಹೋಗ್ತಿದ್ದೊ
ಜಾತಿ ಸಂಕ್ರ ಎಲ್ಲಾ ಕಡೆಗೂ ಬೆಳೀತಾ ಇದ್ದು
ಹವೀಕ್ರ ಸಂಸ್ಕಾರಯೆಲ್ಲಾ ಅಳೀತಾ ಇದ್ದು||
 
ಬೇರೆ ಜಾತಿಯವ್ರೆಲ್ಲ ಬಂದೋರು ಹವ್ಯಕತನವ ಕಲಿಯೋ
ಗಂಡ್ನ ಮನೆ ಆಚಾರ ವಿಚಾರಯೆಲ್ಲಾ ಪಾಲ್ಸೊ
ಅಂದ್ರೆ ಮಾತ್ರೆ ಹಳ್ಳಿ ಮನೆತನಾ ವಳೀತು
ಹವೀಕ್ರ ಜೀವ್ನ ಸಂಕ್ರ ಆದ್ರೂ ಬಗೇಲಿ ಚಿಗ್ರತು||

2 thoughts on “ಹಳ್ಳಿ ಗಂಡು ಹೆಣ್ಣ್ನಅವಾಂತ್ರ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×