Latest posts by ಕಲ್ಪನಾ ಅರುಣ್ (see all)
- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಹವಿಗನ್ನಡ ಹವಿಗನ್ನಡ
ಹವಿಗನ್ನಡ ನುಡ್ಯೇ
ನೀ ನಾಲ್ಗೆ ಮೇಲೇ
ನಲ್ಕಂಡು ಕುಣ್ಯೇ!!
ಹವ್ಯಕ್ರ ಮನೇಲಿ
ಮಕ್ಳು ಮರಿ ಬಾಯ್ಲಿ
ಹೋಪಲ್ಲಿ ಬಪ್ಪಲ್ಲಿ
ಹವ್ಯಕ್ರು ಕಾಣ್ವಲ್ಲಿ
ನುಡ್ಯೇ ನೀ ನುಡ್ಯೇ
ತನುಮನದಿ ಬಾವ್ದಲ್ಲಿ!!
ಯೋಚ್ಸೆ ನೀ ಹವಿಗನ್ನಡತಿ
ಹವ್ಯಕ್ರ ವಡ್ತಿ
ಅಂದ ಚಂದ ಗರತಿ
ಆಡೇ ನೀ ಸರಸ್ವತಿ
ಕನ್ಸ ಕಟ್ಟೂಲೂ ಮನ್ಸಲ್ಲೇ ಮಾತಾಡು ಅರಸಿ!!
ಹವಿಗನ್ನಡ ನುಡೀಲಿ
ಸ್ವಾರಸ್ಯ ರಸ್ವಲೇಸುಹಾಸಕ್ಕೆ
ಅರ್ಸ್ಕಂಡು ಬರವಲೇ
ಬಾಯ್ತುಂಬಾ ಆಡಿ ಕುಣ್ಕಂಡು ಓಡಿ
ಹವಿಗನ್ನಡ ಹವಿಗನ್ನಡ ಹವಿಗನ್ನಡ
ಸಿರಿಯಾ ಬೆಳಗಿ ಶ್ರಿಮಂತವಾಗೇ!!
ನಮ್ಮ ಭಾಷಾ ವೈವಿಧ್ಯ ಉಳಿಸಿ ಬೆಳೆಸೆಕ್ಕು
ಹವ್ಯಕ ಭಾಷೆಲಿಯೇ ಮಾತಾಡುವೊ. ಉತ್ತಮ ಕವಿತೆ.
ನಮ್ಮ ಅಬ್ಬೆ ಭಾಷೆಯ ನಾವೇ ಬೆಳೆಶೆಕ್ಕು. ಅದಕ್ಕೆ ಅಬ್ಬೆ ಭಾಶೆಲಿಯೇ ಮಾತಾಡಿ ಗೊಂಡಿರೆಕ್ಕು.
ಒಪ್ಪ ಕವಿತೆ
ಹವೀಕರು ಹವಿಗನ್ನಡಲ್ಲಿ ಮಾತಾಡುವ ಅಗತ್ಯ ಇಂದು ತುಂಬಾ ಇದ್ದು. ಪೇಟೆ ಜೀವನಕ್ಕೆ ಒಗ್ಗಿ ಹೋದವು ಮನೆಲಿಯೂ ಕನ್ನಡ/ಇಂಗ್ಲಿಶ್ ಭಾಷೆಲಿ ಮಾತಾಡುವದು ಸಾಮಾನ್ಯ ಆಯಿದು.
ಒಳ್ಳೆ ಕವನ