Oppanna.com

ಹಸುರು ದಿನಿಗಿತ್ತೆನ್ನ ಮತ್ತೊಂದರಿ

ಬರದೋರು :   ಶ್ಯಾಮಣ್ಣ    on   13/07/2015    10 ಒಪ್ಪಂಗೊ

ಶ್ಯಾಮಣ್ಣ

ಹಸುರು ದಿನಿಗಿತ್ತೆನ್ನ ಮತ್ತೊಂದರಿhasuru

ಗೋಳಿ,ಮಾವಿನ ಮರದ ಮೇಲೆ ತೋರಣ ಕಟ್ಟಿ
ಹಲಸು, ಅತ್ತಿಯ ಗೆಲ್ಲು, ಹುಲ್ಲು ಹಾಸಿಗೆ ಮೆಟ್ಟಿ,
ಗರಿಕೆ ಹುಲ್ಲಿನ ಮೇಲೆ ನೀರ ಹನಿ ಕೆನೆ ಕಟ್ಟಿ,
ಎಲೆ ಎಲೆಯ ಸಾಲು, ಎಳೆ ಹಸುರು, ಗಿಣಿಹಸುರು,
ಪಿಸುರಿಲ್ಲದ್ದೆ ಬೆಳದ ನಸು ಹಸುರು,
ದಿನಿಗಿತ್ತೆನ್ನ ಮತ್ತೊಂದರಿ |

ತಲೆ ಮೇಲೆ ಉರಿ ಬೆಶಿಲು ಹೊತ್ತಿ ನೆತ್ತಿಯ ಸುಟ್ಟು
ಚರ್ಮ ಬೆಗರಿಲಿಚೆಂಡಿ, ಕರ್ಮ ಕರ್ಮ…
ನೀರೆಲ್ಲಿ? ತಂಪೆಲ್ಲಿ ? ಹುಡ್ಕಿದರು ಎಲ್ಲೆಲ್ಲಿ
ಇಲ್ಲೆ ಹಸುರಿನ ತಂಪು, ಹೂಗು ಹರಡುವ ಕಂಪು
ಕೋಗಿಲೆಯ ಇಂಪು ಹಾಡಿನ ನೆಂಪು
ಮತ್ತೆ ಮನಸಿಲಿ ಹಸುರು
ದಿನಿಗಿತ್ತೆನ್ನ ಮತ್ತೊಂದರಿ |

ಮಳೆ ಬಿದ್ದು ಮತ್ತೆ ಮಣ್ಣು ನೀರಿಲಿ ಮಿಂದೆದ್ದು
ಬಿದ್ದ ಬಿತ್ತಿಲಿ ಚಿಗುರು ಕೊಡಿ ಮೇಲೆದ್ದು
ಮೃದು ಕಾಂಡ ಕೊನರಿದ್ದು, ತೂಗಿದ್ದು ಗಾಳಿಲಿಯೇ
ಹಸುರು ಹಾವಿನ ಹಾಂಗೆ ಕಂಡದಪ್ಪು
ಅತ್ತಿತ್ತೆ ಹರಡಿದ್ದು ಎಲೆ ಚಿಗುರು ಮೂಡಿದ್ದು
ನೋಡಿದಾ ದಟ್ಟ ಹಸುರು
ದಿನಿಗಿತ್ತೆನ್ನ ಮತ್ತೊಂದರಿ |

ಬೆಶಿಲಿಂಗೆ ಸುಡುವ ಕಾಂಕ್ರೀಟು, ಸಿಮೆಂಟು
ಇಟ್ಟಿಗೆಯ ಗೋಡೆಯೊಳ ಏಸಿ ತಂಪಿಲಿ ಕೂದು
ಎದೆಗೂಡು ಅಸ್ತಮದ ತಿದಿ ಒತ್ತಿ ಎಳದೆಳದು
ಉಸುಲು ನರಳಿದ್ದಯ್ಯ ಸಾಕು ಸಾಕು
ಬಿಲ್ವಪತ್ರೆಯ ಕರೆಲಿ ತೊಳಶಿ ಸಂಪಗೆ ಹೂಗು
ಬೇಕಯ್ಯ ನೆಗೆಮೋರೆ ಹಸುರು
ದಿನಿಗಿತ್ತೆನ್ನ ಮತ್ತೊಂದರಿ |

10 thoughts on “ಹಸುರು ದಿನಿಗಿತ್ತೆನ್ನ ಮತ್ತೊಂದರಿ

  1. ಪ್ರಕೃತಿಯ ವೀಕ್ಷಣೆ ,ಸಾಹಚರ್ಯದ ತುಡಿತ ಚೊಕ್ಕಕ್ಕೆ ಬೈಂದು. ಚಿತ್ರ ಒಳ್ಳೇದೋ ,ಪದ್ಯ ಒಳ್ಳೇದೋ ಹೇಳಿ ಗೊಂತಾಗ. ಯಾವುದು ಮೊದಲು ಹೇಳಿಯೂ ಗೊಂತಾಗ. ಒಳ್ಳೆ ಚಿತ್ರ ಕವನ ,ಕುಶಿ ಆತು.

  2. ಒಳ್ಳೆಯ ಕವನ ಶ್ಯಾಮಣ್ಣ…

  3. ಹಸುರು ಚಿಗುರಿ ಕವಿತೆ ಸೊಂಪಾಗಿ ಮೂಡಿಬಯಿಂದು.

  4. ಆಹಾ..ಕೃತಕತೆ೦ದ ಸಹಜತೆಯ ಹೊಡೇ೦ಗೆ ಒ೦ದು ನೋಟ..ತು೦ಬಾ ಸತ್ವ ಇಪ್ಪ ಕವನ.ಕೊಶಿಯಾತು ಶ್ಯಾಮಣ್ಣ.
    ನೋಡಿದ ಕಾರಣ ಎರಡರ ನಡುಗಾಣ ತುಲನೆ ಸಾಧ್ಯ ಆತು ಹೇಳ್ತದೂ ಸತ್ಯ..ಇನ್ನೂ ಬರಳಿ ಹೀ೦ಗಿರ್ತ ಶುದ್ದಿಗೊ.

  5. ಫಟವ ನೋಡಿ ಪದ್ಯ ಬರದ್ದದೋ.. ಅಲ್ಲ ಪದ್ಯ ಬರದಿಕ್ಕಿ ಫಟ ಹುಡ್ಕಿದ್ದೊ…?

    1. ಇದು ಕೋಳಿ ಮೊದಲೋ? ಮೊಟ್ಟೆ ಮೊದಲೋ? ಕೇಳಿದಾಂಗಾತು ಭಾವ…

      1. ನಾವು ಬ್ರಾಹ್ಮರು. ಕೋಳಿ ಮೊಟ್ಟೆ ಎಲ್ಲ ನವಗಾಗ 😛

        1. ಸಾರು ಮೊದಲೋ ಮೇಲಾರ ಮೊದಲೋ ಕೇಳಿರೆ ಅಕ್ಕಾಯ್ಕು… ಅಲ್ಲದೋ…. 😀

  6. ಪಿಸುರಿಲ್ಲದ್ದೆ ಬೆಳದ ನಸು ಹಸುರು…
    ಉಸುಲು ನರಳಿದ್ದಯ್ಯ ಸಾಕು ಸಾಕು….
    ಬೇಕಯ್ಯ ನೆಗೆಮೋರೆ ಹಸುರು
    ದಿನಿಗಿತ್ತೆನ್ನ ಮತ್ತೊಂದರಿ |

    ಒಟ್ಟಾರೆ ರೈಸಿತ್ತು ಭಾವ. ಒಳ್ಳೆ ಚೆಂದದ ಪದ್ಯ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×