Oppanna.com

ಹೆಂಗಸ್ರು ಮಕ್ಕೊ…

ಬರದೋರು :   ಕಲ್ಪನಾ ಅರುಣ್    on   04/01/2014    6 ಒಪ್ಪಂಗೊ

ಅಮ್ಮಾ ಹೋಗ್ತು ಆಫೀಸಿಗೆ
ಅಪ್ಪಾ ಹೋಗ್ತು ಆಫೀಸಿಗೆ
ಮಕ್ಕೊ ಹೋಗ್ತು ಡೇಕೇರಿಗೆ
ಮನೆಗ್ ಬೀಗ ಬೀಜಿ ಈಗ ಯೆಂತಾ ಮಾಡೂದು? ||
 
ಬೆಳಿಗ್ಗೆ ಯದ್ರೆ ಗಡ್‌ಬಿಡಿ
ಅಡ್ಗೆ ಆಸ್ರಿ ವತ್ತಡಾ
ಡಬ್ಬಿ ತುಂಬ್ಸಿ ಮರೀನ ಕಳ್ಸದ್ರೆ ಹುಶ್‌ಹುಶ್ ಅಂಬ್ದೆಯಾ
ಆಫೀಸಿಗೆ ಹೋಪ್ಲೆ ಮತ್ ತಯಾರ ಅಪ್ದೆಯಾ||
 
ಹೊತ್ತೊತ್ತಿಗೆ ತಿಂಡಿಲ್ಲೆತಿಂಡಿಲ್ದೆ ಮಕ್ಕೊಯಿಲ್ಲೆ
ಬೆಳ್ಗೆ ಹೋಪಾಗ ಕಿಸೆಗ್ ದುಡ್ಡು ಮಕ್ಕೊ ಮರೀಗೆ
ಹಾಳುಮೂಳು ತಿಂಬ್ದ ಬೇರೆ, ಗೆಳೇರ್ ಸಂಗ್ತಿಗ್ ಮಜಾ ಬೇರೆ
ಮಕ್ಕೊಯೆಲ್ಲಾ ಹಾಳಾಗ್ತ ಸರಿಯಾಗಲ್ದಿದ್ದೆ||
 
ಆಚಾರ ವಿಚಾರ ಸಂಪ್ರದಾಯ
ಮಾಡುಲಾಗ್ದೆ ಸಮುದಾಯ
ಬೇಜಾರಾದ್ರೂ ಸಹಿಸ್ಕಂಡಿದ್ದೊ
ತಂ ತಂ ಸಮಾಚಾರ||
 
ಅಫೀಸಿಗೆ ಹೋಪೊರ್ದ ಪರಿಸ್ಥಿತಿ
ಸ್ಥಿತಿಸ್ಥಾಪಕತ್ವ ಸ್ಥಿತಿ
ಯೆಲ್ಲಾ ಬದಿಗೂ ಜವಾಬ್ದಾರಿ, ನೆಟ್‌ಗಿಟ್ಟೀಗೆ ಯೆಲ್ದಾರಿ?
ಯಾರಿಗೂ ಬೇಡ ಗಡಿಬಿಡಿ ಈ ಉಸಾಬರಿ||
 
ತುಟ್ಟಿ ಜೀವ್ನ ಈ ಕಾಲ್ದಲ್
ಒಬ್ನ ಸಂಬ್ಳ ಯೆಲ್ಲೀಗ್ ಸಾಕು
ಹೆಣ್ತಿ ದುಡ್ಯೊ ಸಂಬ್ಳ ತರೋ ಸುಖ್ದ ಜೀವ್ನಕ್ಕೆ
ಗಂಡ ಹೆಣ್ತಿ ದುಡ್ತಾನೇ ಸಂಸಾರ್ದ ನೊಗಕ್ಕೆ||
 
ಹೆಂಗ್ಸರೀಗ ಗಂಡಸ್ರೀಗ ಸಮಾ
ಓದ್ದವ್ರೆಲ್ಲಾ ಗಂಡಂಗ ಸಮಾ
ಹಳೇ ಕಾಲ್ದ ವಿಚಾರೆಲ್ಲಾ ಮೂಲೇಲೀಗ
ಹೊಸ ಬದ್ಕೀಗ್ ಹೊಸ ವಿಷ್ಯ ಕಲಿತೋ ಬೇಗ||
 
ಹೆಂಗ್ಸರಂದ್ರೆ ಮೂಗ್ ಮುರೀದೇ
ಸ್ಥಾನಮಾನಕ್ ಕಮ್ಮಿಯಿಲ್ದೆ
ಸಮಾಜನೇ ಬದ್ಲಾಗೋ ಮುಂದೋದಾಂಗೆ
ಹೆಂಗ್ಸರ ನೋಡೋ ಕಣ್‌ದೃಷ್ಠಿ ಸುಧಾರ್ಸಕಂಡಂಗೆ||
 
ಅತ್ಯಾಚಾರ ಅನಾಚಾರ ಹೆಂಗ್ಸರ ಮೇಲೆ ದೌರ್ಜನ್ಯ
ಯೆಲ್ಲಾನೂ ನಿಂತ್ ಹೋದ್ರೆ ಖುಷಿ ಅಪ್ದೆಯಾ
ಹೆಂಗ್ಸರು ಗಂಡಸ್ರು ಚಂದಾಗಿ, ಸಂಬಂಧಾನ ಶುದ್ಧಾಗಿ
ವಳಿಸ್ಕಂಡ್ರೆ ಅಷ್ಟೇ ಸಾಕು, ಮುಂದಕ್ಕಣ್ಣ ವಂಶವೃಕ್ಷಕ್ಕೆ||

6 thoughts on “ಹೆಂಗಸ್ರು ಮಕ್ಕೊ…

  1. ನೆಟ್ ಗಿ ಟ್ಟಿಗೆ ಬದ್ಲಾಗಿ ಸಿ
    ನೆಟ್ ಗಿ
    ನೆಟ್ ಗಿಟ್ಟಿಗೆ ಬದ್ಲಾಗಿ ಸಿ
    ನೆಟ್ ಗಿಟ್ಟಿಗೆಲ್ಲಿ ದಾರಿ ಬದ್ಲಾಗಿ ಸಿಟ್ಟ್ ಗಿಟ್ಟಿಗೆಯೆಲ್ದಾರಿ ಆಗಕಾಗಿತ್ತು. ತಪ್ಪ ತಿದ್ದಿ ಒದಿ ಆತಾ. ಯೆಲ್ಲಾ ಒಪ್ಪಕ್ಕೊ ಕ್ರತಜ್ನತೆಗಳು.

  2. ಕಲ್ಪನಕ್ಕ , ಪದ್ಯಲ್ಲಿ ನೈಜ ಚಿತ್ರಣ . ಕೊನೆಗೆ ಒಳ್ಳೆ ಆಶಯ

  3. ಏತಡ್ಕ ಮಾವ ಹೇದ್ದೇ ನವಗೂ ಅನಿಸಿದ್ದು. ಪದ್ಯ ಒಪ್ಪ ಆಯ್ದು.

  4. ಸಂಬಂಧಾನ ಶುದ್ಧಾಗಿ ವಳಿಸ್ಕಂಡ್ರೆ ಅಷ್ತೇ ಸಾಕು-ಚೆಲೋ ಆಜು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×