Oppanna.com

ನಾಡನೆಚ್ಚರಿಸಯ್ಯ

ಬರದೋರು :   ಬಾಲಣ್ಣ    on   10/12/2012    10 ಒಪ್ಪಂಗೊ

ಬಾಲಣ್ಣ
Latest posts by ಬಾಲಣ್ಣ (see all)

ನಾಡನೆಚ್ಚರಿಸಯ್ಯ
ರಚನೆ:ಬಾಲ ಮಧುರಕಾನನ (ರವೀಂದ್ರನಾಥ ಠಾಗೋರರು ಬರದ  “ಗೀತಾಂಜಲಿ” ಕವನ ಸಂಗ್ರಹದ ಭಾವಾನುವಾದ, “ಮಧುರ ಗೀತಾಂಜಲಿ” ಪುಸ್ತಕಂದ )

ಮನಕೆ ನಿರ್ಭಯವೆಲ್ಲಿ ಶಿರವೆಲ್ಲಿ ಬಾಗಿರದೊ
ತಿಳುವಳಿಕೆ ಮುಕ್ತವಾಗಿರುವುದೆಲ್ಲಿ
ಮನೆಭಿತ್ತಿ ಬೆಸೆದಿರಲದೆಲ್ಲಿ ಬಿರುಕೊಡೆದಿಲ್ಲ
ಒಡೆದು ಚೂರಾಗದಾ ನಾಡದೆಲ್ಲಿ

ಸತ್ಯಮೂಲದಿನೆಲ್ಲಿ ನಲ್ವಾತು ಹೊಮ್ಮುವುದೊ
ಸದ್ವಿಚಾರಗಳೆಲ್ಲ ಹರಿವುದೆಲ್ಲಿ
ಎಲ್ಲಿ ದಣಿವಿರದ ಗೈಮೆಯು ಕೈಯ್ಯ ನೀಡಿಹುದೊ
ಪರಿಪೂರ್ಣ ಸಫಲತೆಯ ಕಡೆಗದೆಲ್ಲಿ.

 ಕೆಡುಕು ಆಚಾರಗಳ ಮರಳಲ್ಲಿ ಇಂಗದಿಹ
ಸದ್ವಿಚಾರವೆ ಹರಿವ ತೊರೆಯದೆಲ್ಲಿ
ಎಮ್ಮ ಮನವನು ಮುಂದಕೊಯ್ಯುತಿಹೆ ಬಿತ್ತರಕೆ
ಚಿಂತನಕೆ ತೊಡಗಿಸುತ ನೀನದೆಲ್ಲಿ.

ಅಲ್ಲಿ ಆ ಸ್ವಾತಂತ್ರ್ಯದಾ ಸೊಗದ ಸಗ್ಗದಲಿ
ನಾಡನೆಚ್ಚರಿಸಯ್ಯ ಓ! ಎನ್ನ ತಂದೆ.
~~**~~

ಶ್ರೀಶಣ್ಣನ ಧ್ವನಿಲಿ ಇಲ್ಲಿ ಕೇಳಿ

10 thoughts on “ನಾಡನೆಚ್ಚರಿಸಯ್ಯ

  1. ಎನ್ನ ಪದ್ಯವ ಓದಿದ, ಕೇಳಿದ, ಅಭಿಮಾನಂದ ಮೆಚ್ಚುಗೆ ತೋರುಸುತ್ತ ಇಪ್ಪ ಎಲ್ಲೋರಿಂಗುದೇ ಧನ್ಯವಾದಂಗೊ.

  2. ಅನುವಾದ ತುಂಬ ಲಾಯಿಕಿದ್ದು. ನಿಂಗಳ “ಮಧುರ ಗೀತಾಂಜಲಿ” ಪುಸ್ತಕಂದ ಕೆಲವು ಪದ್ಯಂಗಳ ಓದಿದ್ದೆ.

  3. ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಎಲ್ಲರಿಂಗೂ ಧನ್ಯವಾದಂಗೊ.
    ಸ್ವರ ಕೊಡುವ ಪ್ರಯತ್ನ ಮುಂದುವರಿಸುತ್ತೆ.
    ಹಾಡಿದ್ದರ ಬಗ್ಗೆ ವಿಮರ್ಷೆಗೆ ಸ್ವಾಗತ.

  4. ಮಧುರವಾದ ಗೀತೆ, ಲಾಯಕಿದ್ದು. ಶ್ರೀಶಣ್ಣನ ಸ್ವರದೊಟ್ಟಿಂಗೆ ಅರ್ಥವತ್ತಾದ ಪದ್ಯ ಸೊಗಸಾಯಿದು.

  5. ಅನುವಾದ ಮತ್ತೆ ಗಾಯನ ಭಾರೀ ಲಾಯ್ಕ ಆಯಿದು.ಟಾಗೋರರ ಬೇರೆ ಪದ್ಯಂಗಳೂ ಬರಲಿ.

  6. ಬಾಲಣ್ಣನ ‘ಮಧುರ ಗೀತಾಂಜಲಿ’ ಯ ಅನುವಾದಗಳಲ್ಲಿ ಎನಗೆ ತುಂಬ ಕುಶಿ ಕೊಟ್ಟ ಪದ್ಯ.

  7. ಮುಳಿಯದಣ್ನ, ಒಪ್ಪಕ್ಕೆ ಧನ್ಯವಾದಂಗೊ.’ ವಂದೇ ಮಾತರಂ ‘ ಪದ್ಯವ ಅಂದು ನಮ್ಮ ‘ ಲೋಕ ಸಭೆ’ ಸುರು ಅಪ್ಪಗ ಹಾಡಿಂಡಿತ್ತಿದ್ದವು ,ಈಗ (ಅದರ ಹಾಡಿದರೆ ಕೆಲವರ ಧರ್ಮಕ್ಕೆ ವಿರೋಧ ಆವುತ್ತು ಹೇಳಿ )ಅದರ ಹಾಡಲೆ ಇಲ್ಲೆ. ಹಾಂಗೆ ಬಂಕಿಮ್ ಚಂದ್ರ ರಿಂಗೆ ಅವಮಾನ ಮಾಡಿದವು. ಕುವೆಂಪು ವ ನಾಡ ಗೀತೆಯ ಹೆಳೆಲಿ ಪುನರೂರ ರ ವಸ್ತ್ರ ಬಲುಗಿ ತೆಗದವು.ಕಾವೇರಿ ನೀರಿನ ಗಲಾಟೆ ನಿತ್ಯವೂ ಇದ್ದನ್ನೆ…

    ಹಾಂಗೆ ಒಡದ ಮನ ,ಒಡದ ಮನೆಲಿ….ವಾಸ

  8. ಲಾಯಕ ಆಯ್ದು ಬಾಲಣ್ಣ – ಶ್ರೀಶಣ್ಣ. ಬತ್ತಾ ಇರಳಿ

  9. ಶ್ರೀಶಣ್ಣಾ, ಹಾಡಿದ್ದು ಲಾಯಕಾಯಿದು.ಧನ್ಯವಾದಂಗೊ.

  10. ಬಾಲ ಮಾವನ ಪುಸ್ತಕಲ್ಲಿ ಇಷ್ಟವಾದ ಹಲವು ಕವಿತೆಗಳಲ್ಲಿ ಇದೂ ಒ೦ದು.ಬ್ರಿಟಿಷರ ದಾಸ್ಯದ ಆ ಕಾಲಲ್ಲಿ ಈ ಗೀತೆ ಎಷ್ಟು ಉತ್ಸಾಹ ತ೦ದಿಕ್ಕು ಹೇಳಿ ಗ್ರೇಶೊಗಳೇ ಆನ೦ದ ಆವುತ್ತು.
    ಆದರೆ ಈಗಾಣ ರಾಜಕೀಯ ಪರಿಸ್ಥಿತಿ,

    ಮನೆಭಿತ್ತಿ ಬೆಸೆದಿರಲದೆಲ್ಲಿ ಬಿರುಕೊಡೆದಿಲ್ಲ
    ಒಡೆದು ಚೂರಾಗದಾ ನಾಡದೆಲ್ಲಿ ??

    ಹೇಳಿ ಪ್ರಶ್ನೆ ಕೇಳುವ ಹಾ೦ಗೆ ಮಾಡಿತ್ತು ಹೇಳ್ತದು ವಿಪರ್ಯಾಸ.
    ಬಾಲ ಮಾವ೦ಗೂ ಶ್ರೀಶಣ್ಣ೦ಗೂ ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×