- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ನಂಗ್ಳಪ್ಪಯ್ಯ ಶಂಕರ ಮಾಸ್ತರು
ರಾಶಿ ಸರಳಾ ಮ್ರದು ಮನಸ್ನವ್ರು
ಕಷ್ಟಾ ಸಹಿಸಿ ಮಕ್ಕಳೇಳ್ಗೆಗೆ ದುಡಿದವ್ರು
ಹೆಂಡ್ತಿ ಮಕ್ಕಳಾ ಚೆಂದಾಗಿಡುಲೇ ಯತ್ನಿಸ್ದವ್ರು
ನಂಗ್ಳಪ್ಪಯ್ಯ ದೊಡ್ಡ ಕನ್ಸು ಇಲ್ದವ್ರು
ನಂಗೊ ಇರೊದು ಕೋಳಿ ಗೂಡು ದೇವಲೋಕ್ದಾ ಸ್ವಪ್ನಾ
ಹೇಳ್ಕ್ಂಡು ಪಾಲಿಗೆ ಬಂದದ್ದಾ ಸ್ವೀಕರಿದವ್ರು
ಬಡವ್ರಿಗೆ ಅನ್ನಾ ನೀರಾ ಕೊಡುಲೇ ಹೋದವ್ರು
ಅಸ್ತಮಾ, ಬೇರೆಬೇರೆ ಶೀಕಿಂದಾ ಬೆಂಡಾದವ್ರು
ತಮ್ಮಿಂದಾದ ಉಪಕಾರಾ ಪರರಿಗಿತ್ತವ್ರು
ಪರರ ಸಹಾಯಾ ಪಡೆದವ್ರು
ಯೇಳು ಬೀಳಲ್ಲಿ ವ್ರತ್ತಿ ಮುಗಿಸಿದವ್ರುಈಗೇನೂ ಕಡ್ಮೆ ಇಲ್ಲದವ್ರು
ಮಕ್ಕ್ಳ ಪ್ರೀತಿಲಿ ನಗುತಾ ಇರ್ಬೇಕಾದವ್ರು
ಮೊಮ್ಮಕ್ಕಳಾಪ್ರೀತಿಂದಾ ಸಲಹಬೇಕಾದವ್ರು
ಅದ್ರೆ ಯೆಂತದು? ಶೀಕಿಂದಾ ಜರ್ಜರಿತವಾದವ್ರು
ಸಮಾಧಾನಾ ಇಲ್ದೆ ಬೇಜಾರು ಅಂದವ್ರು
ನಂಗ್ಳಪ್ಪಯ್ಯ ಅದರ್ಶ ಬದ್ಕಲ್ಲಿರಿಸಿಕೊಂಡವ್ರು
ಹಾಸಿಗೆ ಇದ್ದಷ್ಟು ಕಾಲು ಚಾಚು ಯೆಂದು ಹೇಳಿಕೊಟ್ಟೊವ್ರು
ಮಕ್ಳ ಸುಖಾ ಬಯಸ್ದೋವ್ರು
ನಂಗ್ಗ್ಳಪ್ಪಯ್ಯ ನಂಗೋಕೆ ನೂರ್ಕಾಲ ಬಾಳ್ವೆ ನಡೆಸ್ಬೆಕಾದವ್ರು
ನಂಗ್ಳ ಬದ್ಕಿಗೆ ಮಾರ್ಗದರ್ಶನ ಬೆಳ್ಕ ಕೊಡಬೇಕಾದವ್ರು
ನಂಗ್ಳಪ್ಪಯ್ಯ ನಂಗೋಕೆಲ್ಲಾ ಅತಿ ಪ್ರೀತಿ ಮುದ್ದು ಮುಖದವ್ರು
ಶಂಕರರು ಕಿಂಕರರಾಗಿ ಕಂಕಣವ ಕಟ್ಟಿ ಸಂಕ್ರಮಣದ ಅಂಕಣಕೆ
ಮುನ್ನುಡಿಯಾ ಕೊಡುವಂಥವ್ರು
ಅವರಿಪ್ಪಲ್ಲಿ ಮನೆತನದಾ ದಾರಿ ಕಲ್ಲು ಮುೞೀಂದಾ ದೂರ ಇಪ್ಪಂಥಾದ್ದು!!
ಹರೆ ರಾಮ.
ನಿಂಗ್ಳದ್ದೇ ಧಾಟಿಲಿ ನಿಂಗ ಬರವ ಉತ್ಸಾಹಕ್ಕೆ ಹರೇ ರಾಮ. ಲಾಯಕ ಆಯ್ದು ಮನದೊಳಾಣ ಆಶಯವ ಪದ್ಯರೂಪಲ್ಲಿ ಹೊರಸೂಸುವದು.