Oppanna.com

ಒಂದು ಪ್ರಕರಣದ ಸುತ್ತ -೧೧ : ರಮ್ಯ ನೆಕ್ಕರೆಕಾಡು

ಬರದೋರು :   ಶರ್ಮಪ್ಪಚ್ಚಿ    on   30/07/2020    1 ಒಪ್ಪಂಗೊ

ಒಂದು ಪ್ರಕರಣದ ಸುತ್ತ -೧೧ 

-ರಮ್ಯ ನೆಕ್ಕರೆಕಾಡು

ನಾಗರಾಜ ದಿನಿಗೇಳಿಯಪ್ಪದ್ದೇ, ಶರತ್ಚಂದ್ರ ಅಲ್ಲಿಗೆ ಓಡಿಗೊಂಡು ಹೋದ. ” ಎಂತಾತು ನಾಗರಾಜ..? ಎಂತಾರೂ ಕ್ಲೂ ಸಿಕ್ಕಿತ್ತಾ..?? ” ಹೇಳಿ ಶರತ್ಚಂದ್ರ ಸುತ್ತಮುತ್ತ ನೋಡೆಕ್ಕಾರೆ, ” ಸರ್.. ಇಲ್ಲಿ ನೋಡಿ.. ಇಲ್ಲಿ ಎಲ್ಲಾ ದಿಕ್ಕೆ ಹುಲ್ಲು ಬೆಳಕ್ಕೊಂಡು ಇದ್ದು. ಆದರೆ ನಾವು ನಿಂದ ಜಾಗೆಲಿ ಮಾತ್ರ ಹುಲ್ಲು ಇಲ್ಲೆ. ಮಣ್ಣುದೆ ರಜ ಹಸಿ ಮಣ್ಣಿನಾಂಗೆ ಇದ್ದು.. ಎಂತದರನ್ನೋ ಹೂತಾಕಿದಾಂಗೆ ಇದ್ದು.. ” ಹೇಳಿ ನಾಗರಾಜ ಹೇಳಿದ್ದು ಶರತ್ಚಂದ್ರಂಗುದೇ ಅಪ್ಪು ಹೇಳಿ ಕಂಡತ್ತು. ಕೂಡ್ಲೇ ಕೇಶವನತ್ರೆ, ” ಭಾವ..‌ ಇದೆಂತಾಳಿ ನಿಂಗೊಗೆ ಗೊಂತಿದ್ದಾ..?? ” ಹೇಳಿ ಕೇಳಿದ. ಕೇಶವ ಇಲ್ಲೆ ಹೇಳಿ ತಲೆ ಆಡ್ಸಿದ. ” ಇದರ ಹಿಂದೆ ಎಂತದೋ ದೊಡ್ಡ ಸುಳಿವು ಇದ್ದು. ಈಗಳೇ ಈ ಜಾಗೆಯ ಒಕ್ಕುಸುವ ವ್ಯವಸ್ಥೆ ಮಾಡುವ. ” ಹೇಳಿ ಶರತ್ಚಂದ್ರ ಒಂದೆರಡು ಆಳುಗಳ ದಿನಿಗೇಳುಲೆ ನಾಗರಾಜನತ್ರೆ ಹೇಳಿದ. ಎಲ್ಲಾ ಗೊಂದಲಮಯ ಆಗಿತ್ತು. ಎಲ್ಲರ ಎದೆಬಡಿತ ಮಾತ್ರ ಅವರವರ ಕೆಮಿಗೆ ಕೇಳುವಷ್ಟು ದೊಡ್ಡಕ್ಕೆ ಬಡುಕ್ಕೊಂಡಿತ್ತು.
ಆಳುಗ ಬಂದು ಆ ಜಾಗೆಯ ಒಕ್ಕುಲೆ ಸುರು ಮಾಡಿದವು. ಕುತೂಹಲಲ್ಲಿ ಹತ್ರಣ ಮನೆಯವ್ವೆಲ್ಲಾ ಬಂದು ಸೇರಿತ್ತಿದವು. ಒಕ್ಕಿ ಒಕ್ಕಿ ರಜ ಅಡಿಯಂಗೆ ಎತ್ತುವಗ, ಎಲ್ಲರಿಂಗೆ ಕೊಳೆತ ಹಾಂಗೆ ನಾರುಲೆ ಸುರಾತು. ಕೇಶವ, ಶಾಂತ ವೀಣಾ ಎಲ್ಲಾ ಕುಸು ಕುಸುನೆ ಕೂಗುಲೆ ಸುರು ಮಾಡಿದವು. ವಾಸನೆ ಜೋರು ಜೋರು ಬಂದಾಂಗೆ ಹತ್ತರೆ ನಿಂದುಗೊಂಡಿಪ್ಪವೆಲ್ಲಾ ದೂರ ದೂರ ಹೋಗಿ ನಿಂದವು. ಆಳುಗೋಕ್ಕುದೇ ನಾತಕ್ಕೆಒಕ್ಕುಲೆ ಭಾರೀ ಬಂಙ ಆತು. ಒಕ್ಕಿಯಪ್ಪದ್ದೆ ಮಣ್ಣಿನೆಡಕ್ಕಿಲಿ ಒಂದು ಹರ್ಕು ಕಂಡತ್ತು. ಆಳುಗ ಮಣ್ಣಿನ ಪೂರಾ ಪಕ್ಕ ಪಕ್ಕ ಕರೆಂಗೆ ಹೊಂದುಸಿಯಪ್ಪಗ ಕಂಡದು, ಹೃದಯವೇ ಬಾಯಿಗೆ ಬಪ್ಪಾಂಗಿಪ್ಪ ದೃಶ್ಯ!! ಕೊಳೆತು ಮಣ್ಣು ಸೇರಿದ ಅಂಜಲಿಯ ಹೆಣ..!! ಕೇಶವ, “ಅಂಜಲೀ…” ಹೇಳಿ ನಿಂದಲ್ಲಿಂದಲೇ ಕುಸುದು ಬಿದ್ದು ಬೊಬ್ಬೆ ಹಾಕಿ ಕೂಗುಲೆ ಸುರು ಮಾಡಿದ. ಶರತ್ಚಂದ್ರನ ಕೆಪ್ಪಟೆ ಕಣ್ಣನೀರಿನ ಸಲೀಸಾಗಿ ಭೂಮಿಗೆ ಸ್ಪರ್ಶ ಅಪ್ಪಾಂಗೆ ಮಾಡಿತ್ತು. ವೀಣಾ ಸೆರಗಿನ ಬಾಯಿಗೊತ್ತಿಂಡತ್ತು. ಶಾಂತನ ಕಣ್ಣೆರಡು ಮೇಲೆ ಮೇಲೆ ಹೋತು. ಅಲ್ಲಿಯೇ ಬಡಕ್ಕ ಬಿದ್ದತ್ತು. ಶರತ್ಚಂದ್ರ ಕೂಡ್ಲೇ ಶಾಂತನ ಕರಕ್ಕೊಂಡು ಹೋಪಲೆ, ಮತ್ತೆ ಅಂಜಲಿಯ ಹೆಣವ ತೆಕ್ಕೊಂಡೋಪಲೆ ಆಂಬುಲೆನ್ಸ್ ಬಪ್ಪಲೆ ಹೇಳಿದ. ಕ್ಷಣಾರ್ಧಲ್ಲಿ ಎರಡೆರಡು ಆಂಬುಲೆನ್ಸ್ ಮನೆ ಜಾಲಿಲಿ ಬಂದು ನಿಂದತ್ತು. ಒಂದು ಆಂಬುಲೆನ್ಸ್ ಅಂಜಲಿಯ ಹೆಣವ ತೆಕ್ಕೊಂಡು ಪೋಸ್ಟ್ ಮಾಟರ್ಮ್ ಮಾಡ್ಲೆ ಕರಕ್ಕೊಂಡು ಹೋತು. ಗಂಭೀರ ಸ್ಥಿತಿಲಿತ್ತ ಶಾಂತನ ಇನ್ನೊಂದು ಆಂಬುಲೆನ್ಸ್ ಆಸ್ಪತ್ರೆಗೆ ಕರಕ್ಕೊಂಡು ಹೋತು. ವೀಣಾಂದೆ ಶಾಂತನೊಟ್ಟಿಂಗೆ ಹೋತು. ರಜವು ತಡವಾಗದ್ದೇ ಎಲ್ಲಾ ಬೇಗ ಬೇಗ ಆಗಿ ಹೋತು. ಕೇಶವ, ಶರತ್ಚಂದ್ರ ಶಾಂತನ ನೋಡ್ಲೆ ಜೀಪಿಲಿ ಆಂಬುಲೆನ್ಸ್ ನ ಬೆನ್ನಾರೆ ಹೋದವು.
ಅಲ್ಲಿ ಸೇರಿತ್ತಿದ್ದ ನೆರೆಕರೆಯವಕ್ಕೆ ಇದೆಲ್ಲಾ ಒಂದು ಸಿನೆಮಾ ದೃಶ್ಯದ ಹಾಂಗೆ ಕಂಡತ್ತು. ಶಾಂತನ ಕರಕ್ಕೊಂಡು ಊರಿನ ಆಸ್ಪತ್ರೆಗೆ ಹೋದಪ್ಪಗ ಇಲ್ಲಿ ಆವ್ತಿಲ್ಲೆ ಹೇಳಿದವು. ಮತ್ತೆ ನಗರಲ್ಲಿಪ್ಪ ಆಸ್ಪತ್ರೆಗೆ ಕರಕ್ಕೊಂಡು ಹೋದವು. ಅಲ್ಲಿಗೆತ್ತಿಯಪ್ಪಗ ಡಾಕ್ಟ್ರ, ” ಓಹ್..ಐ ಆಮ್ ಸಾರಿ.. ಶಿ ಇಸ್ ನೋ ಮೋರ್.. ಅರ್ಧ ದಾರಿಲಿಯೇ ಜೀವ  ಹೋಯ್ದು..” ‌ಹೇಳಿಯಪ್ಪಗ ಎಲ್ಲರಿಂಗೊಂದರಿ ಹೃದಯವೇ ಜಾರಿದ ಹಾಂಗಾತು. ಕರಕ್ಕೊಂಡೋದ ಆಂಬುಲೆನ್ಸ್ ಲಿಯೇ ಶಾಂತನ ಹೆಣವ ಪುನಃ ಮನೆಗೆ ತಂದವು. ಅಮ್ಮನ ರೂಪವ ಅಕ್ಕನತ್ರೆ ನೋಡಿಗೊಂಡಿತ್ತ ಶರತ್ಚಂದ್ರ ಶಾಂತನ ಶವದ ಮುಂದೆ ಸಣ್ಣ ಮಗುವಾಗಿ ಹೋದ. ಅಕ್ಕನ ಹಾಂಗೆ ಇತ್ತಿದ ಅತ್ತಿಗೆಯ ಕಳಕ್ಕೊಂಡ ವೀಣಾ ದೊಂಡೆ ಹರಿವಾಂಗೆ ಕೂಗುಲೆ ಸುರು ಮಾಡಿತ್ತು. ಎರಡೆರಡು ಆಘಾತ ತಡಕ್ಕೊಂಬಲೆಡಿಯದ್ದೆ ಕೇಶವ ಮೌನಿಯಾಗಿ ಶಾಂತನ ಹೆಣದ ಎದುರೆ ಕೂದಿತ್ತಿದ. ಈ ಕುಟುಂಬದ ಅವಸ್ಥೆ ಕಂಡು ಊರಿನವು ಪೂರಾ ವ್ಯಥೆ ಪಟ್ಟವು. ಹೀಂಗೆಪ್ಪ ಅವಸ್ಥೆ ನಮ್ಮ ವೈರಿಗೋಕ್ಕು ಬಪ್ಪದು ಬೇಡಪ್ಪಾ ಹೇಳಿ ಮಾತಾಡಿಗೊಂಡವು.
” ಆನಂದು ಕರೆಂಟು ಹಾಕದ್ದೇ ಅತ್ತಿಗೆ- ಅಣ್ಣ ಕೂದ್ದಕ್ಕೆ ಸೂತಕದ ಮನೆಯ ಹಾಂಗೆ ಹೇಳಿ ಯಾವ ಘಳಿಗೆಲಿ ಹೇಳಿದನಾ ಏನಾ… ಈಗ ಆದುವೇ ಸತ್ಯ ಆಗಿ ಹೋತನ್ನೇ..!! ” ಹೇಳಿ ವೀಣಾ ಹಣೆಗೆ ಕೈ ಮಡಿಕ್ಕೊಂಡು ಜೋರು ಕೂಗಿತ್ತು.
” ಷೇ… ಈ ಕೊಲೆ ಹೇಂಗಾತು ?? ಆರು ಮಾಡಿದ್ದಾದಿಕ್ಕು ?? ಗೋಪಾಲಣ್ಣನನ್ನುದೇ ಅಂಜಲಿಯನ್ನುದೇ ಒಂದೇ ಜನ ಕೊಂದದಾದಿಕ್ಕಾ ? ಸಧ್ಯದ ಪರಿಸ್ಥಿತಿ ನೋಡಿಯಪ್ಪಗ ಇದೆಲ್ಲಾ ಒಂದೇ ಜನರ ಕೆಲಸ ಆದಿಕ್ಕು… ಒಂದು ಕೊಲೆಗಾರಂದಾಗಿ ಮೂರು ಜೀವ ಹೋತು.. ಆ ಕೊಲೆಗಾರನ ಹಿಡಿವನ್ನಾರ ಎನಗೆ ತೃಪ್ತಿ ಇಲ್ಲೆ..” ಹೇಳಿ ಶರತ್ಚಂದ್ರ ಗಟ್ಟಿ ಮನಸ್ಸು ಮಾಡಿ ಕಣ್ಣ ನೀರು ಉದ್ದಿದ. ಸಾವಿಲಿ ಆದರೂ ಅಬ್ಬೆ ಮಗಳು ಒಂದಾಗಲಿ. ಅಂಜಲಿಯ ಹೆಣ ಸಿಕ್ಕಿಯಪ್ಪದ್ದೆ ಇಬ್ರ ಅಂತ್ಯಸಂಸ್ಕಾರ ಒಟ್ಟಿಂಗೆ ಮಾಡುವ ಹೇಳಿ ನಿರ್ಧಾರಕ್ಕೆ ಬಂದವು. ಅಂಜಲಿಯ ಹೆಣ ಬಂದ ಮತ್ತೆ ಮನೆಯ ಹಿಂದೆ ಇಬ್ರನ್ನುದೇ ಹತ್ತರತ್ತರೆ ಮಡುಗಿ ಹೊತ್ಸಿದವು. ಆ ದಿನ ಮನೆಯವರ ದುಃಖ ಮುಗಿಲು ಮುಟ್ಟಿತ್ತು.
ಅಂಜಲಿಯ ಪೋಸ್ಟ್ ಮಾಟರ್ಮ್ ರಿಪೋರ್ಟ್ ಸಿಕ್ಕಿತ್ತು. ಅಂಜಲಿಯ ಉಸುಲು ಕಟ್ಟಿಸಿ ಕೊಂದದು ಹೇಳಿ ಗೊಂತಾತು. ಅಂಜಲಿಯ  ಹೆಣ ಸಿಕ್ಕದ ಮತ್ತೆ ಶರತ್ಚಂದ್ರ ಕೊಲೆಗಾರನ ಹಿಡಿಯದ್ದೆ ಬಿಡೆ ಹೇಳಿ ಶಪಥ ಮಾಡಿದ ಕಾರಣ, ತನಿಖೆ ಚೂರು ಗಂಭೀರಲ್ಲಿಯೇ ಸುರು ಮಾಡಿದ. ಶರತ್ಚಂದ್ರ ಕೇಶವನತ್ರೆ,” ಅಲ್ಲ ಭಾವ.. ಎನಗೊಂದು ಸಂಶಯ ಇದ್ದು. ಈ ಅಂಜಲಿಯ ಕೊಂದು ಮನೆಯ ಹಿಂದೆ ಹುಗಿವಗಳುದೆ ನಿಂಗೊಗೆ ಎಚ್ಚರಿಗೆ ಆಯ್ದಿಲ್ಲೆಯಾ..??” ಹೇಳಿ ಕೇಳಿದ. ಕೇಶವ,” ಇಲ್ಲೆ ಭಾವ.. ಅಂದು ಎಂಗೊಗೆ ಬಡ್ದು ಹಾಕಿದಾಂಗೆ ಒರಕ್ಕು.. ಅಂಜಲಿಯ ಮದುವೆ ವಿಷಯವನ್ನೇ  ಮಾತಾಡಿ ಒರಕ್ಕು ಕಣ್ಣಿಂಗೆ ಹತ್ತುವಗ ಚೂರು ತಡವಾಗಿತ್ತು. ಹಾಂಗೆ ಉದಿಯಪ್ಪಗ ಏಳುವಾಗಳುದೇ ರಜ ಲೇಟಾಯ್ದು. ಮತ್ತೆ ಫ್ಯಾನಿನ ಹರಟೆಗೆ ಎಂತದೂ ಕೇಳಿದ್ದಿಲ್ಲೆ.. ಪಾಪ ಎನ್ನ ಮಗಳು ಎಷ್ಟು ಹಿಂಸೆ ಅನುಭವಿಸಿಕ್ಕು.. ಅದು ಸಾವಗ ಎಂಗಳ ದಿನಿಗೇಳಿರದಾ.. ” ಹೇಳಿ ಅಂಜಲಿಯ ಹೆಣ ನೋಡಿದ ಮತ್ತೆ ಕೂಗದ್ದ ಕೇಶವ ಈಗ ಇಪ್ಪ ದು:ಖವ ಎಲ್ಲ ಹೆರ ಹಾಕಿ ಜೋರು ಕೂಗಿದ.                    ಶರತ್ಚಂದ್ರ ಅಂಜಲಿಯ ಕೋಣೆಯ ಮೂಲೆ ಮೂಲೆಲಿದೇ ಎಂತಾರು ಕ್ಲೂ ಇದ್ದಾ ಹೇಳಿ ನೋಡಿದ. ಹಾಂಗೆ ನೋಡಿದವಂಗೆ ಒಂದು ಮೂಲೆಲಿ ಕಂಡದು, ಕ್ಲೋರೋಫಾರ್ಮ್ ಸ್ಪ್ರೇ ಬಾಟ್ಲಿ..! ಅದರ ನೋಡಿದ ಕೂಡ್ಲೇ ಶರತ್ಚಂದ್ರ ಕೇಶವನತ್ರೆ,” ಭಾವ.. ಅಂಜಲಿ ಸಾವಗ ನಿಂಗೊಗೆ ಎಂತ ಗೊಂತಾಗದ್ದೆ ಇದ್ದದಕ್ಕೆ ಕಾರಣ ಈ ಕ್ಲೋರೋಫಾರ್ಮ್ ಇದಾ.. ಆ ಕೊಲೆಗಾರ ಭಾರೀ ಚಾಲಾಕಿ ಇದ್ದು.. ” ಹೇಳಿಕ್ಕಿ ಮನೆಯ ಹಿಂದಣ ಹೊಡೆಂಗೆ ಆ ಗೋಡೆಯ ಮೇಲೆ ಇದ್ದ ಕಲೆ ಎಂತಾದಿಕ್ಕು ಹೇಳಿ ನೋಡ್ಲೆ ಹೋದ.  ನೆಲಕ್ಕಂದ ಒಂದೂವರೆ ಅಡಿಯಷ್ಟು ಮೇಲೆ ಒಂದು ಚಪ್ಪಲಿಯ ಅಚ್ಚು! ಶರತ್ಚಂದ್ರ ಕೇಶವನತ್ರೆ, ” ಎನ್ನ ಅಂದಾಜಿಯ ಪ್ರಕಾರ ಆ ಕೊಲೆಗಾರ ನಡುಇರುಳು ಹೇಂಗೋ ಸಾಹಸ ಮಾಡಿ ಮನೆ ಒಳ ‌ಬಂದದು. ಮೊದಲು ನಿಂಗಳ ಕೋಣೆಗೆ ಹೊಕ್ಕಿ ಒರಗಿದಲ್ಯಂಗೆ ಎಚ್ಚರಿಗೆ ಆಗದ್ದಾಂಗೆ ಕ್ಲೋರೋಫಾರ್ಮ್ ಸ್ಪ್ರೇ ಮಾಡಿದ್ದು. ಮತ್ತೆ ಅಂಜಲಿಯ ಕೊಂದಿಕ್ಕಿ ಹೆಣವ ತೆಕ್ಕೊಂಡೋಪಗ ಈ ಕುಪ್ಪಿ ಬಿದ್ದದು ಗೊಂತಾಗಿರ. ಇಲ್ಲಿ ಅಂಜಲಿಯ ಹೂತಾಕಿ ಬಚ್ಚಿದ ಕಾರಣ ಗೋಡೆಗೆ ಕಾಲು ಕೊಟ್ಟು ನಿಂದದಾದಿಕ್ಕು. ಆ ಸೆಂಟಿನ ಘಾಟು ಎನಗೆ ಈ ಗೋಡೆಂದಲೇ ಬಡುದ್ದಾದಿಕ್ಕು. ಈ ಕಾಲಿನ ಅಚ್ಚು ಎಲ್ಲ ನೋಡೆರೆ ಈ ಜನ ಒಂದಾರಡಿ ಎತ್ತರ ಇಕ್ಕಾಳಿ..” ‌ಹೇಳಿ ಒಂದು ಅಂದಾಜಿ ಹೇಳಿದ. ಅಲ್ಲಿಯೇ ನಿಂದುಗೊಂಡಿತ್ತ ವೀಣಾ,” ಅಲ್ಲ ಆರೇ ಆಗಲಿ ಅಂಜಲಿಯ ಕೊಂದದೆಂತಕಾದಿಕ್ಕು?? ಅಷ್ಟು ಒಳ್ಳೆ ಕೂಸಿನ ಮೇಲೆ ಆರಿಂಗೆ ದ್ವೇಷ ಇದ್ದತ್ತು..?? ಗೋಪಾಲಣ್ಣನನ್ನುದೇ ಅಂಜಲಿಯನ್ನುದೆ ಗುರ್ತ ಇಪ್ಪವು ಆರಿದ್ದವು ಬೇರೆ..?” ಹೇಳಿ ವೀಣಾ ಹೇಳಿದ್ದೇ ತಡ ಶರತ್ಚಂದ್ರನ ಬಾಯಿಲಿ ಬಂದ ಹೆಸರು, ” ಅರವಿಂದ..”

ಮುಂದುವರಿತ್ತು >>>>>>>

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

One thought on “ಒಂದು ಪ್ರಕರಣದ ಸುತ್ತ -೧೧ : ರಮ್ಯ ನೆಕ್ಕರೆಕಾಡು

  1. ಛೇ ಎಂತಾಗಿ ಹೋತು.?ಅಂಜಲಿ ಸಿಕ್ಕುಗು ಹೇಳುವ ಆಶೆಲಿ ಇಪ್ಪಗ ಸಿಕ್ಕಿದ್ದು ಅದರ ಹೆಣ.ಪಾಪ ಅಬ್ಬೆಯ ಜೀವವೂ ಹೋತನ್ನೇ.ಓದಿ ತುಂಬಾ ಬೇಜಾರಾತು.ಮುಂದಾಣ ಕಂತಿಂಗೆ ಕುತೂಹಲಲ್ಲಿ ಕಾಯ್ತಾ ಇರ್ತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×