Oppanna.com

ಒಂದು ಪ್ರಕರಣದ ಸುತ್ತ – ೧೪ : ರಮ್ಯ ನೆಕ್ಕರೆಕಾಡು

ಬರದೋರು :   ಶರ್ಮಪ್ಪಚ್ಚಿ    on   20/08/2020    2 ಒಪ್ಪಂಗೊ

ಒಂದು ಪ್ರಕರಣದ ಸುತ್ತ – ೧೪

-ರಮ್ಯ ನೆಕ್ಕರೆಕಾಡು

ರಾಘು ಕರ್ಕೊಂಡು ಬಂದ ಮನೆ ಎದುರೆ ನಿಂದು ಶರತ್ಚಂದ್ರ, “ಅಲ್ಲ ಭಾವ.. ಆ ಜನ ರಾಘುವಿಂಗೆ ಗೋಪಾಲಣ್ಣನ ಮನೆ ಅಡ್ರೆಸ್ ಎಂತಕಪ್ಪಾ ಕೊಟ್ಟತ್ತು..??” ಹೇಳಿದ. ರಾಘು ಕರ್ಕೊಂಡು ಬಂದ ಮನೆ ಗೋಪಾಲಣ್ಣಂದಾಗಿತ್ತು. ಎಲ್ಲಾ ಗೊಂದಲಮಯ ಆಗಿತ್ತು. ಎಂತಕೂ ಒಳ ಹೋಪ ಹೇಳಿ ಎಲ್ಲರೂ ಬೀಗ ತೆಗದು ಒಳ ಹೋದವು‌. ರಾಘುದೇ ಅವರ ಬೆನ್ನಾರೆ ಹೋತು. ಗೋಪಾಲಣ್ಣನ ಕೋಣೆ ಉರುಡಪಾತ ಆಗಿತ್ತು. ಕವಾಟಿನ ಬಾಗಿಲು ತೆಗೆದು ಮಡಿಕ್ಕೊಂಡಿತ್ತು. ಕೆಲವು ಡಾಕ್ಯುಮೆಂಟ್ಸ್ ಎಲ್ಲ ಅಲ್ಲಲ್ಲಿ ಬಿದ್ದುಗೊಂಡಿತ್ತು. ನಾಗರಾಜ, “ಅಲ್ಲ ಸರ್ ಈ ಮನೆಯ ಕೀ ಎಲ್ಲಿತ್ತು ಹೇಳಿ ನಮ್ಮ ಬಿಟ್ಟರೆ ಮತ್ತೆ ಆರಿಂಗೂ ಗೊಂತಿಲ್ಲೆ.. ಇಲ್ಲಿ ನೋಡೆರೆ ಸಲೀಸಾಗಿ ಬೀಗ ತೆಗದು ಒಳ ಬಂದಾಂಗಿದ್ದು.. ಎಂತಾಳಿಯೇ ತಲೆಗೆ ಹೋತಿಲ್ಲನ್ನೇ..” ಹೇಳಿತ್ತು. “ಸರ್.. ಅಲ್ಲಿ ನೋಡಿ ಅದೇ ಜನ… ಅಪ್ಪು ಅದರ ಕೈಂದಲೇ ಆನು ಪೇಪರ್ ತೆಕ್ಕೊಂಡದು..” ಹೇಳಿ ರಾಘು ಗೋಪಾಲಣ್ಣನ ಕೋಣೆಲಿ ನೇತುಹಾಕಿತ್ತ  ಫಟವ ತೋರ್ಸಿ ಹೇಳಿತ್ತು. “ಅವ ಗೋಪಾಲಣ್ಣನ ಮಗ ಮದನ.. ಅವ ಅಮೇರಿಕಾಲ್ಲಿ ಇಪ್ಪದು.. ಈ ಹುಡುಗಂಗೆ ಎಂತದೋ ಗೊಂದಲ ಆದಿಕ್ಕು..” ಹೇಳಿ ಕೇಶವ ಆ ಫಟವ ನೋಡಿದ ಕೂಡ್ಲೇ ಹೇಳಿದ‌. ಶರತ್ಚಂದ್ರ, “ಏಯ್.. ಈ ಹುಡುಗಂಗೆ ಗೊಂದಲ ಅಪ್ಪಲೆ ಸಾಧ್ಯ ಇಲ್ಲೆ.. ಆ ಜನ ಈ ಮನೆದೇ ಅಡ್ರೆಸ್ ಕೊಟ್ಟದು.. ಇಲ್ಲಿ ಮದನನ ಫಟವ ತೋರ್ಸಿ ಅದೇ ಜನ ಹೇಳಿ ರಾಘು ಹೇಳ್ತ ಇದ್ದು.. ಒಂದಕ್ಕೊಂದು ಇಂಟರ್ ಕನೆಕ್ಟೆಡ್..!! ಆದರೆ ಭಾವ ನಿಂಗ ಹೇಳುವ ಪ್ರಕಾರ ಅವ ಅಮೇರಿಕಾಲ್ಲಿ  ಇದ್ದ..!! ಎನಗೆ ಲೆಟರ್ ಕಳ್ಸಿದ್ದು ಮದನನೆಯೋ ಅಲ್ಲ ಅವನ ಮೇಲೆ ಅನುಮಾನ ಬಪ್ಪಾಂಗೆ ಬೇರಾರು ಆದಿಕ್ಕಾ..?? ಆದರೆ ಮದನನ ನೋಡಿದ್ದೆ ಹೇಳಿ ರಾಘುವೇ ಹೇಳ್ತಾ ಇದ್ದನ್ನೇ..!!” ಹೇಳಿ ಶರತ್ಚಂದ್ರ ಗೊಂದಲಲ್ಲಿಯೇ ಎಲ್ಲವನ್ನೂ ತಾಳೆ ಹಾಕಿದ. ” ಭಾವ ಎನಗೆಂತಕೋ ಈ ಹುಡುಗ ಎಂತದೋ ಸುಳ್ಳು ಹೇಳ್ತ ಇದ್ದು ಹೇಳಿ ಆವ್ತು.. ಇಲ್ಲದ್ರೆ ಅಮೆರಿಕಾಲ್ಲಿ ಕೆಲಸಲ್ಲಿಪ್ಪವ ಈ ಚಿಲ್ಲರೆ ಪೈಸೆಗೆ ಕೈಯೊಡ್ಡುದು ಹೇಳ್ರೆ ನಂಬುವ ಮಾತಾ..??” ಹೇಳಿ ಕೇಶವ ರಾಘುವಿನ ಮೇಲೆ ಅನುಮಾನ ಪಟ್ಟ.  ರಾಘು ಶರತ್ಚಂದ್ರನ ನೋಡಿ ಎನ್ನದೆಂತ ತಪ್ಪಿಲ್ಲೆ ಹೇಳುವಾಂಗೆ ತಲೆ ಆಡ್ಸಿತ್ತು. ಶರತ್ಚಂದ್ರಂಗೂ ರಾಘುವಿನ ಮೇಲೆ ಸಂಪೂರ್ಣ ನಂಬಿಕೆ ಇತ್ತು. “ಭಾವ ನಿಂಗ ತಪ್ಪು ತಿಳ್ಕೊಂಡಿದಿ.. ಈ ಹುಡುಗ ಹೇಳ್ತ ಇಪ್ಪ ಸಾಕ್ಷಿ ವಾಸ್ತವಕ್ಕೆ ಪೂರಕ ಆಗಿಲ್ಲೆ.. ಒಪ್ಪಿಗೊಳ್ತೆ.. ಆದರೆ ನಿಂಗ ಇಲ್ಲಿ ಒಂದು ವಿಷಯ ಗಮನ್ಸಿದ್ದಿರ..?? ನಿಂಗ ಮದನ ಫಾರಿನಿಲಿ ಕೆಲಸಲ್ಲಿದ್ದ ಹೇಳ್ತ ವಿಷಯವ ಕೇಳಿದ್ದು ಮಾತ್ರ .. ಆದರೆ ಈ ಹುಡುಗ ಮದನನ್ನೇ ನೇರವಾಗಿ ನೋಡಿದ್ದು.. ಹಾಂಗಾದ ಕಾರಣ ಈ ಹುಡುಗ ಹೇಳ್ತ ಇಪ್ಪ ಸಾಕ್ಷಿ ಹೆಚ್ಚು ತೂಕದ್ದು ಹೇಳಿ ಎನಗೆ ಅನ್ಸುತ್ತಾ ಇದ್ದು..” ಹೇಳಿ ಶರತ್ಚಂದ್ರ ಎಲ್ಲಾ ಹೊಡೆಂದಲೂ ಆಲೋಚನೆ ಮಾಡಿ ಕೇಶವಂಗೆ ತಿಳಿಹೇಳಿದ.
ಆ ಡಾಕ್ಯುಮೆಂಟ್ಸ್ ಗಳ ಎಡೆಲಿ ಒಂದು ಡೈರಿದೇ ಇತ್ತದು ಶರತ್ಚಂದ್ರನ ಕಣ್ಣಿಂಗೆ ಬಿದ್ದತ್ತು. ಕೂಡ್ಲೇ ಅದರ ಕೈಗೆತ್ತಿಗೊಂಡ. ಅದು ಗೋಪಾಲಣ್ಣನ ದಿನಚರಿ ಬರೆವ ಡೈರಿ ಆಗಿತ್ತು. “ಓಹ್… ಅಂಬಗ ಗೋಪಾಲಣ್ಣಂಗೆ ಡೈರಿ ಬರೆವ ಅಭ್ಯಾಸ ಇತ್ತ ಭಾವ..??” ಹೇಳಿ ಶರತ್ಚಂದ್ರ ಕೇಶವನತ್ರೆ ಕೇಳಿದ. “ಉಮ್ಮ… ಎನಗೆ ಇದರ ಬಗ್ಗೆ ಗೊಂತಿತ್ತಿಲ್ಲೆ..” ಹೇಳಿದ. ಈ ಕೇಸಿನ ಬಗ್ಗೆ ಡೈರಿಲಿ ಸುಳಿವು ಸಿಕ್ಕುವ ಲಕ್ಷಣ ಕಂಡು ಶರತ್ಚಂದ್ರ ಆ ಡೈರಿಯ ಓದುಲೆ ಕೂದ. ಆ ಡೈರಿಲಿ ಹೀಂಗಿತ್ತು..
ಗೋಪಾಲಣ್ಣನ ಒಬ್ಬನೇ ಮಗ ಮದನ. ಕೊಂಡಾಟಲ್ಲಿ ಬೆಳೆದ ಮಗ. ಮಾಸ್ಟರ್ಸ್ ಡಿಗ್ರಿ ಮಾಡಿ ಎರಡು ವರ್ಷ ಊರಿಲಿಯೇ ಇದ್ದು ಕೆಲಸ ಹುಡ್ಕುಲೆ ಫಾರಿನಿಂಗೆ ಹೋತ. ಮೊದಲಿಂದಲುದೇ ಐಶಾರಾಮಿ ಜೀವನವ ಇಷ್ಟ ಪಡುವ ಮದನಂಗೆ ಫಾರಿನಿನ ವಾತಾವರಣಕ್ಕೆ ಹೊಂದಿಗೊಂಬದು ಕಷ್ಟ ಆಯ್ದಿಲ್ಲೆ. ತುಂಬಾ ದೊಡ್ಡ ಮಟ್ಟಿಂಗಲ್ಲದ್ರೂ ಒಂದು ಪ್ರತಿಷ್ಠಿತ ಕಂಪೆನಿಲಿ ಕೆಲಸ ಸಿಕ್ಕಿತ್ತು. ಮಗ ಇಂದು ಪೈಸೆ ಕಳ್ಸುತ್ತ ನಾಳೆ ಕಳ್ಸುತ್ತ ಹೇಳಿ ಅಬ್ಬೆ – ಅಪ್ಪ ಕಾದುಗೊಂಡಿತ್ತಿದವು. ಆದರೆ ಅಲ್ಲಿ ನಡೆಕ್ಕೊಂಡಿತ್ತದೇ ಬೇರೆ..!! ಪಬ್- ಬಾರ್ ಹೇಳಿಗೊಂಡು ಬಂದ ಸಂಬಳ ಪೂರಾ ಅಲ್ಲಿಗೆ ಕಾಣಿಕೆ ಹಾಕಿಗೊಂಡಿತ್ತಿದ. ಇದೇ ಸಮಯಲ್ಲಿ ಗೋಪಾಲಣ್ಣನ ಹೆಂಡತಿಗೂ ಉಷಾರಿಲ್ಲದ್ದೆ ಆತು. ಈ ವಿಷಯ ಮದನಂಗೆ ಗೊಂತಾದರುದೇ ಅವ ಇತ್ಲಗಿ ತಲೆ ಹಾಕಿದ್ದನೇಲ್ಲೆ. ಇನ್ನು ಮಗನ ಕಾದರಾಗ ಹೇಳಿ ಹೆಂಡತಿಯ ಮದ್ದಿನ ಪೈಸೆ ಹೊಂದುಸುಲೆ ಗೋಪಾಲಣ್ಣ ಬಂದ ಬಂಙ ಅಷ್ಟಿಷ್ಟಲ್ಲ..!! ವಿಧಿಯ ಲೀಲೆಗೆ ತಲೆ ತಗ್ಸೆಕ್ಕೆ.. ಗೋಪಾಲಣ್ಣನ ಹೆಂಡತಿ ಕೊನೆಯುಸಿರೆಳೆದತ್ತು. ಇಪ್ಪ ಪೈಸೆಯ ಪೂರಾ ಜೂಜು ಅದು ಇದು ಹೇಳಿ ಮುಗಿಶಿ ಅಬ್ಬೆಯ ಹೆಣ ನೋಡ್ಲೆ ಸಾನು ಮದನಂಗೆ ಇತ್ಲಗಿ ಬಪ್ಪಲೆಡಿಗಾಯ್ದಿಲ್ಲೆ. ಇದೆಲ್ಲದರಂದಾಗಿ ಮದನಂಗೆ ಡಿಪ್ರೆಷನ್ ಸುರಾವ್ತು. ಸರಿಯಾಗಿ ಕೆಲಸಕ್ಕೂ ಹೋಗದ್ದೆ ಕೆಲಸಂದಲೂ ತೆಗದು ಹಾಕುತ್ತವು. ಮದನ ಅಲ್ಲಿ ಉಂಬಲೆ ತಿಂಬಲೆ ಗೆತಿ ಇಲ್ಲದ್ದಷ್ಟಕ್ಕೆ ಬಂದ. ಕಡೆಂಗೆ ಅಲ್ಲಿ ಪಿಕ್ ಪಾಕೆಟ್ ಮಾಡಿ ಊರಿಂಗೆ ಬಂದು ಸೇರಿಗೊಂಡ.
ಇದು ಗೋಪಾಲಣ್ಣಂಗೆ ದೊಡ್ಡ ಮಂಡೆಬೆಶಿಯ ವಿಷಯ ಆತು. ಊರವರತ್ರೆಲ್ಲಾ ಹಗೆ ಕಟ್ಟಿಗೊಂಡಿತ್ತ ಗೋಪಾಲಣ್ಣನ ನೋಡಿ ಎಲ್ಲರುದೇ ,”ಮಗ ಫಾರಿನಿಲಿ ಕೆಲಸಲ್ಲಿದ್ದ ಹೇಳಿ ದೊಡ್ಡಸ್ತಿಕೆ” ಹಾಂಗೆ ಹೀಂಗೆ ಹೇಳಿ ಮಾತಾಡಿಗೊಂಡಿತ್ತಿದವು. ಇನ್ನು ಮಗನ ಈ ಅವಸ್ಥೆ ಗೊಂತಾದರೆ ಸಮಾಜಲ್ಲಿ ನಾಕು ಜನರ ನಡುಕೆ ಬದುಕುದು ಹೇಂಗಪ್ಪಾ..?? ಹೇಳಿ ಗೋಪಾಲಣ್ಣಂಗೆ ತಲೆಲಿ ಕೊರವಲೆ ಸುರಾತು. ಕಡೆಂಗೆ ಮಗನ ಬೇರೆ ಮನೆ ಮಾಡಿ ಕೂರ್ಸುವ ಹೇಳ್ತ ನಿರ್ಧಾರಕ್ಕೆ ಬಂದು, ಹತ್ರಣ ಹಳ್ಳಿಲಿ ಒಂದು ಸಣ್ಣ ಮನೆ ತೆಕ್ಕೊಂಡು ಮಗನ ಅಲ್ಲಿಯೇ ಕೂರ್ಸಿದ. ಅಲ್ಲಿ ಆದರೆ ಆರನ್ನೂ ಗುರ್ತ ಇಲ್ಲದ್ದ ಕಾರಣ ಎಂತ ಸಮಸ್ಯೆ ಆಗ ಹೇಳಿ ಗೋಪಾಲಣ್ಣ ಈ ತೀರ್ಮಾನ ತೆಕ್ಕೊಂಡ. ಈ ವಿಷಯವ ಗೋಪಾಲಣ್ಣ ಆರತ್ರೂ ಹೇಳಿದ್ದನೇಲ್ಲೆ.
ಮದನ ಫಾರಿನಿನ ಬಿಟ್ಟರುದೇ ಅಲ್ಯಣಾಂಗೆಪ್ಪ ಆಡಂಬರ ಜೀವನವ ಅವಂಗೆ ಬಿಡ್ಲೆ ಎಡಿಗಾಯ್ದಿಲ್ಲೆ. ವಾರಕ್ಕೊಂದರಿ ಬಂದು, “ಪೈಸೆ ಕೊಡದ್ರೆ ಆನು ಸಾಯ್ತೆ..” ಹೇಳಿ ಬ್ಲಾಕ್ಮೇಲ್ ಮಾಡಿ ಗೋಪಾಲಣ್ಣನ ಕೈಂದ ಪೈಸೆ ಪೀಂಕ್ಸಿಗೊಂಡಿತ್ತಿದ. ಎಷ್ಟೇ ಆದರೂ ಗೋಪಾಲಣ್ಣಂಗೆ ಕೊಂಡಾಟದ ಮಗನ ಮೇಲೆ ವ್ಯಾಮೋಹ..!! ಪೈಸೆ ಕೊಡದ್ದೆ ಇಪ್ಪಲೆ ಎಡಿಗಾತಿಲ್ಲೆ. ಮಗನ ಕಳಕ್ಕೊಂಡರೆ ಹೇಳ್ತ ಹೆದರಿಕೆ ಬೇರೆ!! ಮೊದ ಮೊದಲು ಪೈಸೆಗೆ ಕೈ ಚಾಚಿಗೊಂಡಿತ್ತ ಮಗ ದಿನ ಹೋದಾಂಗೆ ಅವನೇ ಕವಾಟಿಂಗೆ ಕೈ ಹಾಕಿ ಇಪ್ಪ ಪೈಸೆಯ ಪೂರಾ ಚಟ್ಟು ಮಾಡ್ಲೆ ಸುರು ಮಾಡಿದ. ಅಪ್ಪನ ಬೈವದು, ಹೀಯಾಳ್ಸುದು, ಎಲ್ಲ ಮಾಡ್ಲೆ ಸುರು ಮಾಡಿದ. ಇದೆಲ್ಲ ಗೋಪಾಲಣ್ಣಂಗೆ ಸರ್ವೇಸಾಮಾನ್ಯ ಆತು. “ಇನ್ನು ಈ ಜೀವ ಎಷ್ಟೆಲ್ಲಾ ಹಿಂಸೆ ಅನುಭವಿಸೆಕ್ಕಾ ಏನಾ… ಎಂತದೇ ಆಗಲಿ ಎನ್ನ ಉಸುಲು ನಿಂಬನ್ನಾರ ಮದನಂಗೆ ಎಂತ ಕಷ್ಟ  ಆಗದ್ದಾಂಗೆ ನೋಡಿಗೊಳ್ಳೆಕ್ಕು..” ಹೇಳ್ತದು ಆ ಡೈರಿಯ ಮತ್ತೆ ಗೋಪಾಲಣ್ಣನ ಅಕೇರಿಯಣ ವಾಕ್ಯ ಆಗಿತ್ತು.
ಇದರ ಓದಿ ಮುಗಿಶಿಯಪ್ಪಗ ಶರತ್ಚಂದ್ರಂಗೆ ಅವಂಗೇ ಗೊಂತಾಗದ್ದಾಂಗೆ ಕಣ್ಣಂಚಿಲಿ ನೀರೆರ್ಕಿತ್ತು.. “ಛೇ… ಮಕ್ಕಳ ಜೀವನಕ್ಕೆ ಹೆತ್ತವು ಎಷ್ಟೆಲ್ಲಾ ಸ್ಯಾಕ್ರಿಫೈಸ್ ಮಾಡ್ತವು.. ಅದೆಲ್ಲಾ ಏಕೆ ಈ ಮದನನ ಹಾಂಗಿದ್ದ ಮಕ್ಕೊಗೆ ಅರ್ಥ ಆವ್ತಿಲ್ಲೆ..?? ಗೋಪಾಲಣ್ಣ ಒಳ ಒಳದಿಕ್ಕೆ ಎಷ್ಟು ಕುಗ್ಗಿ ಹೋದಿಕ್ಕು.. ಕಡೆ ಗಾಲಲ್ಲಿದೆ ಹೀಂಗೆಪ್ಪ ಕಣ್ಣಿಲಿ ನೆತ್ತರಿಲ್ಲದ್ದ ಮಗನ ಒಳಿತನ್ನೇ ಗ್ರೇಶಿಗೊಂಡಿತ್ತಿದವು.. ಒಂದು ವೇಳೆ ಗೋಪಾಲಣ್ಣನ ಸಾವಿನ ಹಿಂದೆ ಮದನನ ಕೈ ಇದ್ದು ಹೇಳಿ ಆದರೆ ಅವಂಗೆ ಸಾವಿಲಿದೇ ತೃಪ್ತಿ ಸಿಕ್ಕ.. ” ಹೇಳಿ ಕೋಪದ ಜ್ವಾಲೆ ಶರತ್ಚಂದ್ರನ ಮಾತಿಲಿ ಹೊತ್ತಿ ಉರ್ಕೊಂಡಿತ್ತು.
ಅಷ್ಟೊತ್ತಿಂಗೆ ಶರತ್ಚಂದ್ರಂಗೆ ಆ ಜನಕ್ಕೆ ಕಾದುಗೊಂಡಿತ್ತ ಪೇದೆಗಳ ಫೋನು ಬಂತು. ” ಹಲೋ ಸರ್.. ಆದಷ್ಟು ಬೇಗ ಬನ್ನಿ ಆ ಜನ ಬಂತು. ಬೀಗ ತೆಗದು ಮನೆ ಒಳಗೆ ಹೋತು..” ಹೇಳಿದ ಕೂಡ್ಲೇ ಶರತ್ಚಂದ್ರ ಅಮಸರಲ್ಲಿ, ” ನಾಗರಾಜ ಬಾ ಬಾ.. ಅದು ಬಂತಡ.. ಬೇಗ ಹೋಪ. ರಾಘೂ ಭಾವ ಬನ್ನಿ ನಿಂಗಳ ಸ್ಟೇಷನ್ ಹತ್ರೆ ಬಿಡ್ತೆಯ..” ಹೇಳಿ ಪ್ರಕರಣಕ್ಕೆ ಸಿಕ್ಕಿದ ದೊಡ್ಡ ಸುಳಿವಿನ ಬೆನ್ನತ್ತಿ ಹೆರಟವು.

   – ಮುಂದುವರೆತ್ತು…….

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “ಒಂದು ಪ್ರಕರಣದ ಸುತ್ತ – ೧೪ : ರಮ್ಯ ನೆಕ್ಕರೆಕಾಡು

  1. ಕುತೂಹಲಕರಿಯಾಗಿ ಭಾರೀ ಲಾಇಕಿದ್ದು ಕಥೆ..

  2. ಕಥೆ ಒಂದು ಹಂತ ಮುಟ್ಟಿತ್ತು. ಇನ್ನು ಎಂತ ಟ್ವಿಸ್ಟ್ ಇದ್ದು ಹೇಳಿ ಎದುರು ನೋಡ್ತಾ ಇದ್ದೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×