Oppanna.com

ಒಂದು ಪ್ರಕರಣದ ಸುತ್ತ -೧೩ – ರಮ್ಯ ನೆಕ್ಕರೆಕಾಡು

ಬರದೋರು :   ಶರ್ಮಪ್ಪಚ್ಚಿ    on   13/08/2020    2 ಒಪ್ಪಂಗೊ

ಒಂದು ಪ್ರಕರಣದ ಸುತ್ತ -೧೩

– ರಮ್ಯ ನೆಕ್ಕರೆಕಾಡು

ಬನ್ಸಿನ ತಿಂದ ಪೇಪರಿಲಿ ಅಂಜಲಿಯ ಕೊಲೆಯ ಕೇಸಿನ ಬಗ್ಗೆ ಶರತ್ಚಂದ್ರಂಗೆ ಒಂದು ದೊಡ್ಡ ಸುಳಿವೇ ಸಿಕ್ಕಿತ್ತು. ಆ ಸಣ್ಣ ತುಂಡು ಪೇಪರಿಲಿ ಒಂದೆರಡು ಅಕ್ಷರಂಗಳ ಚೌಕಾಕಾರಕ್ಕೆ ಕತ್ತರ್ಸಿ ತೆಗೆಕ್ಕೊಂಡಿತ್ತು. ಇದರ ನೋಡಿಯಪ್ಪದ್ದೇ ಶರತ್ಚಂದ್ರಂಗೆ ಆ ಬೊಕ್ಕೆಯೊಟ್ಟಿಂಗೆ ಬಂದ ಲೆಟರಿನ ನೆಂಪಾತು. ಆ ಲೆಟರಿಲಿದೇ ಹೀಂಗೇ ಪೇಪರಿಂದ ಚೌಕಕ್ಕೆ ಕತ್ತರ್ಸಿ ಅಂಟಿಸಿದ ಚಿತ್ರಣ ಕಣ್ಣೆದುರಂಗೆ ಬಂತು. ” ಯೆಸ್… ಯೆಸ್… ಅದುವೇ‌.. ನಾಗಾರಾಜ ನೋಡಿಲ್ಲಿ, ಆ ಲೆಟರಿಲಿ ಹೀಂಗೆ ಅಕ್ಷರವ ಕತ್ತರ್ಸಿ ಅಂಟ್ಸಿದ್ದಲ್ದ??” ಹೇಳಿ ನಾಗರಾಜಂಗೆ ಆ ಪೇಪರ್ ತುಂಡಿನ ತೋರ್ಸಿದ. ನಾಗರಾಜ ಹುಬ್ಬಿನ ಗಂಟಿಕ್ಕಿ ಪೇಪರಿನ ತುಂಡನ್ನೇ ನೋಡಿಕೊಂಡು, “ಅಪ್ಪು.. ಇದೇ ಪೇಪರಿಂದ ತೆಗದು ಅಂಟ್ಸಿದ ಅಕ್ಷರ ಅದು.. ಡೌಟೇ ಇಲ್ಲೆ..” ಹೇಳಿದ್ದೇ ತಡ ಶರತ್ಚಂದ್ರ ಟೀ ತರ್ಸಿದ ಹೋಟ್ಲಿಂಗೆ ಹೋದ.
ಶರತ್ಚಂದ್ರನ ಕಂಡಪ್ಪದ್ದೇ ಅಂಗಡಿಯ ಯಜಮಾನ ಎದ್ದು ನಿಂದಿಕ್ಕಿ, ” ಅಯ್ಯೋ ಸಾರ್ ನಿಂಗ ಎಂತಕೆ ಬಂದದು.. ಎಂತಾರು ಬೇಕಾರೆ ರಾಘುವಿನ ಹತ್ರೆ ಹೇಳಿ ಕಳ್ಸುಲಾವ್ತಿತ್ತನ್ನೆ..” ಹೇಳಿಯಪ್ಪಗ ಶರತ್ಚಂದ್ರ, ” ಆನು ಇಲ್ಲಿಗೆ ಬಂದ ಉದ್ದೇಶವೇ ಬೇರೆ.. ನಿಂಗಳ ಹೋಟ್ಲಿಂಗೆ ಈ ಪೇಪರ್ ಎಲ್ಲಾ ಎಲ್ಲಿಂದ ಸಪ್ಲೈ ಅಪ್ಪದು??” ಹೇಳಿಯಪ್ಪಗ ಅಂಗಡಿ ಜನ, ” ಪೇಪರಾ..??” ಹೇಳಿ ಪ್ರಶ್ನಾರ್ಥಕವಾಗಿ ಶರತ್ಚಂದ್ರನ ಮೋರೆ ನೋಡಿತ್ತು. ಶರತ್ಚಂದ್ರ, ” ಅಪ್ಪು… ತಿಂಡಿ ಪಾರ್ಸೆಲ್ ಮಾಡ್ಲೆ ಎಲ್ಲಾ ಕಟ್ಟಿಕೊಡುವ ಪೇಪರ್ ಎಲ್ಲಿಂದ ತರ್ಸುದು..??” ಹೇಳಿಯಪ್ಪಗ ಅಂಗಡಿ ಜನ, “ಅದು ಗುಜುರಿ  ಬ್ಯಾರಿ ಒಂದೊಂದರಿ ತಂದು ಕೊಡ್ತು.. ಈಗ ಅದು ಈಚೊಡೆಂಗೆ ಬಾರದ್ದೆ ಸುಮಾರು ಸಮಯ ಆತು. ಹಾಂಗಾಗಿ ಇಲ್ಲಿಯೇ ಆಸುಪಾಸಿನವರತ್ರಂದ ತೆಕ್ಕೊಂಬದು” ಹೇಳಿತ್ತು. “ಹೋ.. ಎನಗೊಂದು ಸಹಾಯ ಆಯೆಕ್ಕಿತ್ತು.. ಯಾವ ಯಾವ ಮನೆಂದ ಪೇಪರ್ ತರ್ಸಿದ್ದು ಹೇಳುಲೆಡಿಗಾ..??” ಹೇಳಿ ಶರತ್ಚಂದ್ರ ಹೋಟೆಲಿನ ಯಜಮಾನನ ಹತ್ರೆ ಕೇಳಿದ. ಆ ಜನ, “ರಾಘೂ.. ಇದಾ ನೀನು ಯಾವ ಯಾವ ಮನೆಂದ ಪೇಪರ್ ತೈಂದೆ ಹೇಳಿ ಸರ್ ಹತ್ರೆ ಹೇಳು..” ಹೇಳಿಕ್ಕಿ ಹೋಟೆಲಿಲಿ ಕೆಲಸ ಮಾಡುವ ರಾಘುವತ್ರೆ ಹೇಳಿತ್ತು. ರಾಘು, “ಸರ್… ಆನು ಇಂತದ್ದೇ ದಿಕ್ಕೆಂದ ಪೇಪರ್ ತಪ್ಪದಲ್ಲ.. ಒಂದೊಂದರಿ ಒಂದೊಂದು ಮನೆಂದ..” ಹೇಳಿಯಪ್ಪಗ ಶರತ್ಚಂದ್ರ, ” ಎನಗೆ ನೀನಿಂದು ಬನ್ಸ್ ತಂದುಕೊಟ್ಟ ಪೇಪರಿಲಿ ಆನು ಹ್ಯಾಂಡಲ್ ಮಾಡ್ತಾ ಇಪ್ಪ ಕೇಸಿನ ಬಗ್ಗೆ ಒಳ್ಳೆ ಕ್ಲೂ ಸಿಕ್ಕಿದ್ದು.. ಹಾಂಗಾಗಿ ಆ ಪೇಪರ್ ನೀನು ಯಾವ ಮನೆಂದ ತಂದದು ಹೇಳಿ ಬೇಕಾತು.. ಎನಗೆ ಗೊಂತಿದ್ದು, ನೀನು ಸುಮಾರು ಮನೆಂದ ಪೇಪರ್ ತಪ್ಪ ಕಾರಣ ಇಂತದ್ದೇ ಮನೆಂದ ಆ ಪೇಪರ್ ತಂದದು ಹೇಳಿ ಹೇಳುಲೆಡಿಯ.. ಆದರೆ ಈ ಕೇಸು ಎನ್ನ ವೈಯಕ್ತಿಕ ಜೀವನಕ್ಕುದೇ ಸಂಬಂಧ ಪಟ್ಟ ಕಾರಣ ಎಷ್ಟು ಕಷ್ಟ ಆದರೂ ತೊಂದರಿಲ್ಲೆ ಈ ಕೇಸಿಂಗೆ ಒಂದು ಅಂತ್ಯ ಕೊಡಲೇ ಬೇಕು.. ಸೋ..” ಹೇಳಿ ಬಾಯಿ ಮುಚ್ಚೆಕ್ಕಾರೆ, ರಾಘು “ಓ… ಸರ್ ನಿಂಗೊಗೆ ಬನ್ಸ್ ಕೊಟ್ಟ ಪೇಪರ್ ನ ವಿಷಯವನ್ನ ನಿಂಗ ಕೇಳ್ತ ಇಪ್ಪದು? ಎಂಗಳ ಮನೆ ಹತ್ರಣ ಮನೆಂದ ಆನೊಂದು ಕಟ್ಟ ಪೇಪರ್ ತಂದಿತ್ತಿದೆ. ನಿಂಗೊಗೆ ಬನ್ಸ್ ಕೊಡ್ಲೆ ಆ ಕಟ್ಟ ವನ್ನೇ ಬಿಡ್ಸಿದ್ದು..” ಹೇಳಿಯಪ್ಪಗ ಶರತ್ಚಂದ್ರ, “ಓಹ್ ಥ್ಯಾಂಕ್ ಗಾಡ್… ಅಂಬಗ ಎನಗೆ ಇನ್ನುದೇ ಸುಲಭ ಆತು.. ಆ ಮನೆಗೆ ಈಗಳೇ ಎನ್ನ ಕರ್ಕೊಂಡು ಹೋಗು..” ಹೇಳಿ ಕಾತುರಲ್ಲಿ.ಶರತ್ಚಂದ್ರ ಹೇಳಿದ. ರಾಘು ತಲೆ ತೊರ್ಸಿಗೊಂಡು, “ಸಾ..ರ್ ಆ ಮನೆಗೆ ಆನು ಬತ್ತಿಲ್ಲೆ.. ಎನ್ನ ಮನೆಲಿ ಅಲ್ಲಿಗೆ ಹೋಗೆಡ ಆ ಜನ ಸರಿ ಇಲ್ಲೆ ಹೇಳಿದ್ದವು.. ಆನು ಅಲ್ಲಿ ಹೋಗಿ ಪೇಪರ್ ತಪ್ಪನ್ನಾರ ಎನಗೆ ಎಂತ ಗೊಂತಿತ್ತಿಲ್ಲೆ.. ಅದರ ಮನೆಲಿ ಈ ಕುಡಿವದರ ಕುಪ್ಪಿ, ಸಿಗರೇಟ್ ತುಂಡು ಎಲ್ಲ ಅಲ್ಲಲ್ಲಿ ಬಿದ್ದುಗೊಂಡಿತ್ತು. ಈ ಸಿನೆಮಾಲ್ಲಿ ಬಪ್ಪ ರೌಡಿಗಳಾಂಗೆ ಇದ್ದು ಅದು ನೋಡ್ಲೆ.. ಮನೆ ಆಚೆ ಈಚೆ ಇಪ್ಪವೆಲ್ಲಾ ಅದೊಂದು ಸೈಕೋ ಹೇಳಿ ಹೇಳಿದವು.. ಆನು ಈಗ ಪುನಾ ಅಲ್ಲಿಗೆ ಬಂದರೆ ಅಮ್ಮ ಎನ್ನ ಮಡುಗ.. ಆನು ಬತ್ತಿಲ್ಲೆ” ಹೇಳಿತ್ತು. ಶರತ್ಚಂದ್ರ, “ನಿನ್ನ ಮನೆಲಿ ನೀನು ಒಬ್ಬನೇ ಅಲ್ಲಿಗೆ ಹೋಪದು ಬೇಡ ಹೇಳಿದ್ದು.‌.. ಈಗ ಧೈರ್ಯಕ್ಕೆ ನಿನ್ನೊಟ್ಟಿಂಗೆ ಆನಿದ್ದೆನ್ನೆ.. ಅಷ್ಟಕ್ಕೂ ನಿನಗೆ ಆ ಮನೆಗೆ ಬಪ್ಪಲೆ ಇಷ್ಟ ಇಲ್ಲದ್ರೆ ನೀನು ಜೀಪಿಲಿಯೇ ಕೂದರಾತು.. ಆನುದೆ ನಾಗರಾಜಂದೇ ಮನೆಯೊಳಂಗೆ ಹೋಗಿ ಮಾತಾಡಿ ಬತ್ತೆಯ..” ಹೇಳಿ ಶರತ್ಚಂದ್ರ ಆ ಮನೆಗೆ ಬಪ್ಪಲೆ ಒಪ್ಪದ್ದ ರಾಘುವತ್ರೆ ಹೇಳಿದ. ರಾಘು, “ಅಕ್ಕಂಬಗ ಹಾಂಗೆ ಮಾಡುವ..” ಹೇಳಿ ಶರತ್ಚಂದ್ರನೊಟ್ಟಿಂಗೆ ಹೋಪಲೆ ಒಪ್ಪಿಗೊಂಡತ್ತು.
ಜೀಪು ಆ ವ್ಯಕ್ತಿಯ ಮನೆಗೆ ಹೆರಟತ್ತು. ನಾಗರಾಜನೊಟ್ಟಿಂಗೆ ಮತ್ತೆರಡು ಪೇದೆಗಳನ್ನೂ ಶರತ್ಚಂದ್ರ ಕರಕ್ಕೊಂಡ. ರಾಘು ಹೇಳಿದ ದಾರಿಲಿಯೇ ಹೋಗಿ ಜೀಪು ಆ ವ್ಯಕ್ತಿಯ ಮನೆಯೆದುರು ನಿಂದತ್ತು. ಕೋಳಿ ಗೂಡಿನ ಹಾಂಗಿಪ್ಪ ಓಡಿನ ಮನೆ. ರಾಘುವ ಜೀಪಿಲಿಯೇ ಕೂರ್ಸಿಕ್ಕಿ ಶರತ್ಚಂದ್ರ ಪೇದೆಗಳೊಟ್ಟಿಂಗೆ ಆ ಮನೆಗೆ ಹೋದ‌. ಆದರೆ ಮನೆಗೆ ಬೀಗ ಹಾಕಿಗೊಂಡಿತ್ತು. ಮತ್ತೆ ಮನೆಯ ಹಿಂದಣ ಹೊಡೆಂಗೆ ಹೋದವು. ಹಿಂದಣ ಹೊಡೆಂಗೆ ಬಾಗಿಲಿತ್ತಿಲ್ಲೆ.ಬದಲಿಂಗೆ ಒಂದು ಪಡಿ ಎರಗ್ಸಿ ಮಡಿಕ್ಕೊಂಡಿತ್ತು. ಆ ಪಡಿಯ ಕರೆಲಿ ಮಡುಗಿ ಶರತ್ಚಂದ್ರ ಪೇದೆಗಳೊಟ್ಟಿಂಗೆ ಮನೆ ಒಳಂಗೆ ಹೊಕ್ಕಿದ. ಆ ಮನೆಯ ಅವಸ್ಥೆ ನೋಡೆರೆ ಅದೊಂದು ಬ್ಯಾಚುಲರ್ ನ ಮನೆ ಆದಿಕ್ಕು ಹೇಳಿ ಊಹೆ ಮಾಡುವಾಂಗೆ ಇತ್ತು. ಬ್ರ್ಯಾಂಡೆಡ್ ಕುಡಿವ ಕುಪ್ಪಿಗ, ಸಿಗರೇಟಿನ ತುಂಡು ಎಲ್ಲ ರಾಘು ಹೇಳಿದಾಂಗೆ ಅಲ್ಲಲ್ಲೇ ಬಿದ್ದುಗೊಂಡಿತ್ತು. ಅದರ ಎಲ್ಲ ದಾಂಟಿಕ್ಕಿ ಚಾವಡಿಗೆ ಹೋದವು. ಅಲ್ಲಿತ್ತ ಒಂದು ಮೇಜಿಲಿ ಕೆಲವು ಕ್ರೈಂ ಕಾದಂಬರಿಗ ಹರಗಿ ಮಡಿಕ್ಕೊಂಡಿತ್ತು. ಇದರ ಎಲ್ಲ ಬಿಟ್ಟು ಶರತ್ಚಂದ್ರಂಗೆ ಕಂಡದು ಆ ಮೇಜಿಲಿ ಅಡ್ಡ ಬಿದ್ದುಗೊಂಡಿತ್ತ ಸೆಂಟಿನ ಕುಪ್ಪಿ!! ಕೂಡ್ಲೇ ಅದರ ಪರಿಮಳವ ಮೂಸಿದ. ” ಓಹ್ ಮೈ ಗುಡ್ ನೆಸ್.. ನಾಗರಾಜ ಫೈನಲೀ ಎಂತದೋ ಒಳ್ಳೆದಾವ್ತಾ ಇದ್ದು.. ಯೆಸ್ ಇದೇ ಪರಿಮಳ ಅಂಜಲಿಯ ರೂಮಿನ ಹಿಂದೆದೆ, ಲೆಟರ್ ಬಂದಪ್ಪಗ ಬಂದ ಪರಿಮಳವುದೇ ಇದುವೇ… ಅಂಬಗ ಆರಾದಿಕ್ಕು ಈ ವ್ಯಕ್ತಿ?? ಅಂಜಲಿಯ ಕೊಲೆಗೂ ಈ ಜನಕ್ಕೂ ಎಂತದೋ ಸಂಬಧ ಇದ್ದು.. ಛೇ.. ಎಂತಕೂ ಆ ಜನ ಇಲ್ಲಿಲ್ಲನ್ನೆ… ಇಲ್ಲಿ ಹತ್ರಣವರತ್ರೆ ವಿಚಾರ್ಸುವ ಬನ್ನಿ..” ಹೇಳಿ ಶರತ್ಚಂದ್ರ ಪೇದೆಗಳೊಟ್ಟಿಂಗೆ ಹೆರ ಬಂದ. ಅಂಬಗ ಒಂದು ಹೆಂಗಸು ಹುಲ್ಲು ಹೊತ್ತುಗೊಂಡು ಅದೇ ದಾರಿಲ್ಯಾಗಿ ಬಂತು. ಶರತ್ಚಂದ್ರ ಕೂಡ್ಲೇ, ” ನೋಡಿ ಈ ಮನೆಲಿಪ್ಪ ಜನ ಎಲ್ಲಿ ಹೋಯ್ದೋಳಿ ಗೊಂತಿದ್ದ?? ” ಹೇಳಿ ಅದರತ್ರೆ ಕೇಳಿದ.. ಆ ಹೆಂಗಸು, ” ಅದರ ಬಗ್ಗೆ ಮಾತಾಡಿ ಪ್ರಯೋಜನ ಇಲ್ಲೆ.. ಯಾವಗ ಎಷ್ಟೊತ್ತಿಂಗೆ ಬತ್ತೋಳಿ ಅದಕ್ಕೇ ಗೊಂತಿಲ್ಲೆ.. ಒಂದೊಂದರಿ ಮದ್ಯಾಹ್ನ, ಒಂದೊಂದರಿ ಇರುಳು ಎಂತಾಳಿ ಇಲ್ಲೆ.. ಎಲ್ಲಿಗೆ ಹೋತು ಎಂತ ಮಾಡ್ತು ದೇವರಿಂಗೇ ಗೊಂತು..” ಹೇಳಿಕ್ಕಿ ಸೀದಾ ಹೋತು. ಶರತ್ಚಂದ್ರ ಅವನೊಟ್ಟಿಂಗೆ ಬಂದ ಎರಡು ಪೇದೆಗಳತ್ರೆ, ” ನಿಂಗ ಇಬ್ರು ಇಲ್ಲಿಯೇ ಇರಿ.. ನಿಂಗ ಕಾಯ್ತಾ ಇಪ್ಪ ವಿಷಯ ಆ ವ್ಯಕ್ತಿಗೆ ಗೊಂತಾಪ್ಪದು ಬೇಡ.. ಓ ಅಲ್ಲಿ ಒಂದು ಗೂಡಂಗಡಿ ಇದ್ದಾಂಗೆ ಇದ್ದು ಅಲ್ಲಿಯೇ ಇರಿ.. ಈ ವ್ಯಕ್ತಿ ಬಂದ ಕೂಡ್ಲೇ ಎನಗೆ ಇನ್ಫಾರ್ಮ್ ಮಾಡಿ..” ಹೇಳಿಕ್ಕಿ ನಾಗರಾಜನೊಟ್ಟಿಂಗೆ ಜೀಪಿನತ್ರಂಗೆ ಹೋದ. “ರಾಘು ಆ ಜನ ಅಲ್ಲಿತ್ತಿಲ್ಲೆ.. ಎಲ್ಲಿಗೆ ಹೋದಿಕ್ಕು ಹೇಳಿ ಎಂತಾರು ಐಡಿಯಾ ಇದ್ದ ನಿನಗೆ??” ಹೇಳಿಯಪ್ಪಗ ರಾಘು, ” ಎನಗೆ ಗೊಂತಿಲ್ಲೆ.. ಆದರೆ ಆನು ಪೇಪರಿಂಗೆ ಪೈಸೆ ಕೊಟ್ಟಪ್ಪಗ ಪೈಸೆ ನೋಡಿ ಭಾರೀ ಖುಷಿ ಆತು.. ಮತ್ತೆ ಒಂದು ಮನೆಯ ಅಡ್ರೆಸ್ ಹೇಳಿ ಅದೆನ್ನ ಇನ್ನೊಂದು ಮನೆ ಅಲ್ಲಿ ಇನ್ನುದೇ ಪೇಪರಿದ್ದು.. ಆನು ಹೆರ ತೆಗದು ಮಡಿಗಿರ್ತೆ ನೀನು ಬೇಕಾಪ್ಪಗ ತೆಕ್ಕೊಂಡು ಪೈಸೆ ಕೊಟ್ಟರಾತು.. ಹೇಳಿತ್ತು.. ಆನು ಆ ಜನರ ಸಹವಾಸವೇ ಬೇಡಾಳಿ ಸುಮ್ಮನೆ ಕೂದ್ದು.. ಅಂಬಗ ಆ ಜನ ಅಲ್ಲಿಪ್ಪಲೂ ಸಾಕು.. ಅಲ್ಲಿಗೇ ಹೋಪ..” ಹೇಳಿ ರಾಘು ಒಂದು ಹೊಸ ಸುಳಿವೇ ಕೊಟ್ಟತ್ತು.. ಹಾಂಗೆ ಅಲ್ಲಿಗೆ ಹೋಪಲೆ ಹೆರಟಪ್ಪಗ ಶರತ್ಚಂದ್ರಂಗೆ ಕೇಶವನ ಫೋನ್ ಬಂತು, “ಹಲೋ ಭಾವ.. ಮನೆಲಿ ಕೂದರೆ ಅಂಜಲಿಯ ಶಾಂತನ ಪೂರಾ ನೆಂಪಾವ್ತು.. ಹಾಂಗೆ ಸ್ಟೇಷನಿಂಗೆ ಬಂದದು.. ವೀಣಾ ಮನೆಲಿಯೇ ಇದ್ದು ನೀನೆಲ್ಲಿದ್ದೆ..” ಹೇಳಿ ಕೇಳಿದ. ಶರತ್ಚಂದ್ರ ಈಗ ಬಂದೆ ಹೇಳಿ, ಸ್ಟೇಷನಿಂಗೆ ಹೋಗಿ ಕೇಶವನತ್ರೆ ನಡೆದ ವಿಷಯ ತಿಳುಶಿದ.  “ಇಷ್ಟೆಲ್ಲಾ ಆತ ಭಾವ.. ಆರದಿಕ್ಕು ಆ ಜನ… ಪಾಪಿ ಎನ್ನ ಸಂಸಾರವನ್ನೇ ಹಾಳು ಮಾಡಿ ಹಾಕಿತ್ತು.. ಈಗಳೇ ಆ ಅಡ್ರೆಸಿಂಗೆ ಹೋಪ ಹೇಳಿ..” ಕೇಶವ ಶರತ್ಚಂದ್ರನತ್ರೆ ಹೇಳಿದ. ಮತ್ತೆ ಎಲ್ಲರುದೇ ಅಲ್ಲಿಗೆ ಹೋದವು.
ರಾಘು ಹೇಳಿದ ಅಡ್ರೆಸ್ ಬಂತು. ಇದೇ ಮನೆ ಅಡ ಹೇಳಿ ರಾಘು ಒಂದು ಮನೆಯ ತೋರ್ಸಿತ್ತು. ಜೀಪಿಂದ ಇಳಿವ ಮೊದಲೇ ಶರತ್ಚಂದ್ರಂದೇ ಕೇಶವಂದೇ ಮೋರೆ ಮೋರೆ ನೋಡಿಗೊಂಡವು. ರಾಘುವತ್ರೆ, ” ಈ ಮನೆಯ.. ಗ್ಯಾರಂಟಿ ಇದೇ ಅಡ್ರೆಸ್ ಅಲ್ದಾ.. ??” ಹೇಳಿ ಆ ಮನೆಯ ನೋಡಿ ಆಶ್ಚರ್ಯ ಆದ ಶರತ್ಚಂದ್ರ ಕೇಳಿದ. ರಾಘು ಅಪ್ಪು ಹೇಳಿ ತಲೆ ಆಡ್ಸಿತ್ತು. ಕೇಶವ , ನಾಗರಾಜ, ಶರತ್ಚಂದ್ರ ಮೂರು ಜನವುದೇ ಜೀಪಿಂದ ಇಳ್ದವು. “ಅಲ್ಲ ಭಾವ ಆ ಜನ ಈ ಮನೆ ಅಡ್ರೆಸ್ ಎಂತಕೆ ಕೊಟ್ಟತ್ತು..” ಹೇಳಿ ಕೇಶವ ಶರತ್ಚಂದ್ರನ ಮೋರೆ ನೋಡಿದ.

       -ಮುಂದುವರೆತ್ತು…

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “ಒಂದು ಪ್ರಕರಣದ ಸುತ್ತ -೧೩ – ರಮ್ಯ ನೆಕ್ಕರೆಕಾಡು

  1. ತುಂಬಾ ಕುತೂಹಲಕಾರಿಯಾಗಿದ್ದು.ಆರ ಮನೆ ಆದಿಕ್ಕಪ್ಪಾ ಅದು?ಇನ್ನೂ ಒಂದು ವಾರ ಕಾಯಕ್ಕನ್ನೇ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×