- ಮಸರು ಕಡದು ಬೆಣ್ಣೆ ಕೂಡ್ತದಕ್ಕೆ ಗೌಜಿ ಮಾಡುದೆಂತಕೆ? - May 29, 2019
- ಒಪ್ಪಣ್ಣ ಪ್ರತಿಷ್ಠಾನಂದ ಇಸಿಜಿ ಯಂತ್ರ ಕೊಡುಗೆ - January 8, 2019
- ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಪ್ರದಾನ – ವರದಿ - April 29, 2015
ಟಕ್ ಟಕ್…ಆರೋ ಬಾಗಿಲು ಬಡಿದಾಂಗೆ ಆತು. ಬಾಗಿಲು ತೆಗೆತ್ತೆ ಪೋಸ್ಟ್ ಮೇನು ’ಸರ್ ಪೋಸ್ಟ್..’ ಹೇಳಿ ಒಂದು ಕಾಗದ ಕೊಟ್ಟತ್ತು. ಚೆಲಾ.. ಮೊಬೈಲ್, ಮಿಂಚಂಚೆ ಇಪ್ಪಗ ಕಾಗದ ಬರದವು ಆರಪ್ಪಾ ಹೇಳಿ ಕಾಗದವ ತಿರುಗಿಸಿದರೆ ಫ್ರಮ್ ಎಡ್ರಸ್ಸೇ ಇಲ್ಲೆ! (ಈಗ ಇನ್ಸುರೆನ್ಸ್ ಕಟ್ಟೆಕ್ಕು ಹೇಳ್ತ ಕಾಗದ ಮಾತ್ರ ಬಪ್ಪದಿದಾ… ಉಳುದ್ದೆಲ್ಲಾ ಫೋನ್, ಇಲ್ಲದ್ರೆ ಕಂಪ್ಯೂಟಿರಿಲ್ಲೆ ಆವುತ್ತು)
ಆರು ಬರದ್ದಾಯಿಕ್ಕು ಹೇಳ್ತ ಕುತೂಹಲಲ್ಲೇ ಕಾಗದವ ಒಡದೆ.
ಹಾಯ್,
ಆರಪ್ಪಾ ಇದು ಈ ಮೇಲ್, ಮೊಬೈಲ್, ಆರ್ಕುಟ್, ಫೇಸ್‌ಬುಕ್ ಇಪ್ಪಗ ಕಾಗದ ಬರದ್ದು ಹೇಳಿ ಗ್ರೇಶುತ್ತಾ ಇದ್ದೆಯಾ? ನಿನಗೆ… ಓ ಸಾರಿ… ಆನು ನಿನ್ನ ಏಕವಚನಲ್ಲೇ ದಿನೆಗೊಳುತ್ತೆ, ಬಹುವಚನಲ್ಲಿ ಅಷ್ಟೊಂದು ಕ್ಲೋಸ್‌ನೆಸ್ ಇರ‍್ತಿಲ್ಲೆ ಹೇಳ್ತದು ಎನ್ನ ಅಭಿಪ್ರಾಯ. ಸೋ ಪ್ಲೀಸ್… ಅಡ್ಜೆಸ್ಟ್ ಮಾಡು. ಹೇಳಿದಾಂಗೆ ನಿನಗೆ ಮೇಲ್ ಮಾಡ್ಳೆ ಅಥವಾ ಮೊಬೈಲಿಲ್ಲಿ ಮೆಸೇಜ್ ಮಾಡ್ಳೆ ಆವುತ್ತಿತು. ಎನಗೆ ಅದು ಇಷ್ಟ ಇಲ್ಲೆ. ಕಾಗದಲ್ಲಿ ಬರವಾಗ ಬಪ್ಪ ಭಾವನೆಗೊ, ಕಂಪ್ಯೂಟರಿಲ್ಲಿ ಟೈಪ್ ಮಾಡುವಾಗ ಬತ್ತಿಲ್ಲೆ, ಇನ್ನು ಮೊಬೈಲಿಲ್ಲಿ ಸಾಧ್ಯವೇ ಇಲ್ಲೆ. ನಿನ್ನ ತಲೆಗೆ ಈಗ ಹುಳು ಹೊಕ್ಕಿಕ್ಕು ಅಲ್ಲದಾ? ತಾಳ್ಮೆ ಇರಲಿ…ತಾಳಿದವನು ಬಾಳಿಯಾನು ಅಲ್ಲದಾ!
ಖಂಡಿತವಾಗಿಯೂ ಆನು ಆರು ಹೇಳಿ ಹೇಳ್ತಿಲ್ಲೆ. ನಿನ್ನ ಎನಗೆ ಗೊಂತಿದ್ದು, ನೀನೂ ಎನ್ನ ನೋಡಿಪ್ಪೆ, ಆದರೆ ನಾವಿಬ್ರು ಪರಸ್ಪರ ಮಾತಾಡಿದ್ದಿಲ್ಲೆ. ಸೋ ಆನು ನಿನಗೆ ಅನಾಮಿಕ ಆತ್ಮೀಯಳು!
ಎನಗೆ ಇನ್ನು ನೆಂಪಿದ್ದು ನಮ್ಮ ಕಾಲೇಜು ಡೇಸ್‌ಗಳ. ನೀನು ರಾಮನಜ್ಜನ(ಒಪ್ಪಣ್ಣನ) ಕಾಲೇಜಿಂಗೆ ಹೋಗಿಯೊಂಡಿದ್ದರೆ ಎನ್ನದುಪುರ್ಬಜ್ಜನ ಕಾಲೇಜು! ನಿನ್ನ ಸಬ್ಜೆಕ್ಟ್ ಸೈನ್ಸ್ ಹೇಳಿ ಎನಗೆ ಗೊಂತಿತ್ತು. ಎನಗೆ ಅದು ವ್ಯರ್ಜ್ಯ. ಸೋ ಆನು ಅಪ್ಪಿಕೊಂಡದು ಆರ್ಟ್ಸ್‌ನ.
ಆನು ಮೊದಲು ನಿನ್ನ ಕಂಡದು ಉಪ್ಪಿನಂಗಡಿ ಬಸ್‌ಸ್ಟೇಂಡಿಲ್ಲಿ. ಚಿಗುರು ಮೀಸೆ, ಗೆಡ್ಡವ ಕೆರಕ್ಕೊಂಡು ಗುರ್ತದವರೊಟ್ಟಿಂಗೆ ಲೊಟ್ಟೆ ಪಟ್ಟಾಂಗ ಹೊಡಕ್ಕೊಂಡಿಪ್ಪ ಸೀನಿಲ್ಲಿ. ಎಂತ ಗೊಂತಿಲ್ಲೆ ನಿನ್ನ ಕಂಡಪ್ಪಗ ತುಂಬಾ ಕೊಶಿ ಆತು. ಶಾರ್ಪ್ ಕಣ್ಣು, ನಿನ್ನ ನೆಗೆ ಎನ್ನ ತುಂಬಾ ಆಕರ್ಷಿಸಿತ್ತು. ಏನೋ ಗೊಂತಿಲ್ಲೆ ಮೊದಲ ಸರ್ತಿ ಮನಸ್ಸಿಲ್ಲಿ ಏನೋ ಒಂಥರಾ,,,ಭಾವನೆ ಬೆಳವಲೆ ಶುರು ಆತು… ತಪ್ಪು ತಿಳ್ಕೊಳೆಡ… ಅದು ಆತ್ಮೀಯ ಸ್ನೇಹ ಭಾವನೆ… ನೀನು ಎನ್ನ ಬೆಸ್ಟ್ ಫ್ರೆಂಡ್ ಹೇಳಿ ಅಂಬಗಳೆ ಆನು ನಿರ್ಧರಿಸಿದೆ.
ಆ ದಿನಂದ ನಿನ್ನ ಕಾಂಬಗ ಮನಸ್ಸಿಲ್ಲಿ ಕೊಶಿ ಕೊಶಿ. ನಿನ್ನ ಕಂಡ ದಿನ ಪೂರ್ತಿ ಆನು ಫುಲ್ ಫ್ರೆಷ್ ಆಗಿಯೊಂಡಿತ್ತೆ. ಕ್ಲಾಸಿಲ್ಲಿ ಲೆಕ್ಚರರ್‌ಗ ಬೈದರೂ ಫ್ರೆಂಡ್ಸುಗ ಕಿರಿಕಿರಿ ಮಾಡಿದರೂ ಎನ್ನ ಮೂಡು ಹಾಳಾಗಿಯೊಂಡು ಇತ್ತಿದಿಲ್ಲೆ. ಕಾರಣ ನೀನು. ಒಂದು ದಿನ ಕಾಣದ್ದರೆ ಆ ದಿನ ಆನು ಸ್ವಿಚ್ ಆಫ್! ಎನ್ನ ಕ್ಲೋಸ್ ಫ್ರೆಂಡ್ಸುಗಕ್ಕೆ ಅದು ಗೊಂತಕ್ಕು. ಆದರೆ ಕಾರಣ ಎಂತರ ಹೇಳಿ ಗೊಂತಾಗ.
ನಿನ್ನ, ಎನ್ನ ಕಾಲೇಜು ಬೇರೆ ಬೇರೆ ಆಗಿದ್ದರೂ, ಉಪ್ಪಿನಂಗಡಿಂದ ಪುತ್ತೂರಿನವರೆಗೆ ಹೋಯೆಕ್ಕಿದಾ. ದಿನಾಗಳು ನಿನ್ನ ನೋಡದ್ರೆ ಮನಸ್ಸಿಂಗೆ ಸಮಾಧಾನ ಆಗಿಯೊಂಡಿತ್ತಿಲ್ಲೆ. ಉದಿಯಪ್ಪಗ ಆನು ಉಪ್ಪಿನಂಗಡಿಗೆ ಬೇಗ ಬಂದು ನಿನ್ನ ಆಗಮನವ ಕಾದು, ನಂತರ ನೀನು ಹತ್ತಿದ ಬಸ್ಸಿಲ್ಲಿ ಆನುದೆ ಹತ್ತಿಗೊಂಡು ಇತ್ತಿದೆ. ಆ ಬಸ್ಸುದೆ ಹಾಂಗೆ ರಷ್ಷೂ ಹೇಳಿದರೆ ರಷ್. ಒಪ್ಪಣ್ಣನ ಮನೆಯ ಹೊಡೆಂಗೆ ಹೋವ್ತ ಕಾರಿನಾಂಗೆ! ಎಲ್ಲರೂ ಹತ್ತಲೆ ಅರ್ಜೆಂಟು ಮಾಡುಗು. ನೀನುದೆ. ನೀನು ಓಡಿ ಹೋಗಿ ಹಿಂದೆ ಇಪ್ಪ ಸೀಟಿಲ್ಲಿ ಕಿಟಿಕಿ ಹತ್ತರೆ ಕೂಬೆ. ಬಸ್ಸಿಂಗೆ ಎಲ್ಲರೂ ಹತ್ತಿದ ನಂತರ ಆನು ಹತ್ತುವೆ. ಸೀಟಿಲ್ಲಿ ಕೂಬಲೆ ಆಸೆ ಇಲ್ಲದ್ದೇ ಅಲ್ಲ. ನಿನ್ನ ನೋಡ್ಳೆ! ಬಸ್ಸಿಲ್ಲಿ ದಿನಾಗಳು ಒರಗುವ ನಿನ್ನ ನೋಡಿ ಮನಸ್ಸಿಲ್ಲೆ ನೆಗೆಮಾಡಿಗೊಂಡು ಇತ್ತಿದೆ. ಆ ಅರ್ಧ/ಮುಕ್ಕಾಲು ಗಂಟೆ ಹೇಂಗೆ ಕಳಕ್ಕೊಂಡಿತ್ತು ಹೇಳುದೇ ಗೊಂತಾಗಿಯೊಂಡು ಇತ್ತಿಲ್ಲೆ.
ನಿನ್ನ ಕಾಲೇಜು ನಗರಲ್ಲಿ ಇಪ್ಪದರಿಂದ ನೀನು ಬೊಳುವಾರಿಲ್ಲಿ ಇಳಿಯೆಕ್ಕಿತ್ತು. ಎನ್ನ ಕಾಲೇಜು ದರ್ಬೆ ಹತ್ತರೆ ಇದ್ದ ಕಾರಣ ಪುತ್ತೂರು ಬಸ್‌ಸ್ಟೇಂಡ್‌ಗೆ ಹೋಗದ್ದೆ ಉಪಾಯ ಇಲ್ಲೆ. ನಿಂಗೊಗೆ ಸ್ಪೆಷಲ್ ಕ್ಯಾಸುಗ, ಲ್ಯಾಬ್‌ಗೊ ಹೇಳಿ ಉದಿಯಿಂದ ಹೊತ್ತೊಪ್ಪಗವರೆಗೆ ಕ್ಲಾಸುಗ. ಎಂಗೊಗೆ ಮಧ್ಯಾಹ್ನಕ್ಕೆ ಮುಗಿತ್ತು. ಜಾಸ್ತಿ ಹೇಳಿದರೆ ಮಧ್ಯಾಂತರಿಗೆ ಒಂದು ಪಿರೇಡ್ ಇಕ್ಕು. ಕಸ್ತಲಪ್ಪಗ ನೀನು ಎಷ್ಟೊಂತ್ತಿಗೆ ಕಾಲೇಜಿಂದ ಹೆರಡುತ್ತೆ ಹೇಳುದೇ ಎನಗೆ ಗೊಂತಾಗ. ಮಧ್ಯಾಹ್ನ ಕ್ಲಾಸು ಮುಗಿಸಿ ಕಸ್ತಲೆವರೆಗೆ ಆನು ಕಾಲೇಜಿಲಿ ಕೂಬಲೇ ಸಾಧ್ಯವಿತ್ತಿಲ್ಲೆ. ಹಾಂಗಾಗಿ ಆನು ಪ್ರತಿದಿನ ಉದಿಯಪ್ಪಗಳೇ ನಿನ್ನ ಕಾಣೆಕ್ಕಿತ್ತು.
ಆ ಮೂರು ವರ್ಷಗಳ ಅವಧಿಯಲ್ಲಿ ನಿನ್ನ ಕಾಣದ್ದೆ ಇದ್ದ ದಿನ ಬಹಳ ಕಮ್ಮಿ. ನಿನ್ನ ಹತ್ತರೆ ಹೋಪಗ ನಿನ್ನ ಆನು ನೋಡಿಯೊಂಡು ಇತ್ತೆಯಾದರೂ ನೀನು ಎನ್ನ ಗಮನಿಸಿಕೊಂಡು ಇತ್ತಿಲ್ಲೆ. (ಆನು ತುಂಬಾ ಚೆಂದ ಇಲ್ಲೆ ಹೇಳ್ತದು ಅದಕ್ಕೆ ಕಾರಣ ಆದಿಕ್ಕು) ನಿನ್ನತ್ರೆ ಮಾತಾಡೆಕ್ಕು ಹೇಳಿ ಹಲವು ಸರ್ತಿ ಗ್ರೇಶಿದರೂ ಏಕೋ ಏನೋ ಎಂತ ಮಾಡಿದರು ಮನಸ್ಸು ಮಾತ್ರ ಬೇಡ ಹೇಳಿಗೊಂಡು ಇತ್ತು. ಂಗೆ ದಿನ ಕಳಕ್ಕೊಂಡೆ ಇತ್ತು… ಒಟ್ಟಿಂಗೆ ನಮ್ಮ ಪರೀಕ್ಷೆಗಳು, ಕಾಲೇಜು ಜೀವನವೂ ಮುಗಿಕ್ಕೊಂಡು ಬಂತು. ಅಕೇರಿಗಪ್ಪಗ ಎನ್ನ ಫ್ರೆಂಡ್ಸುಗವಕ್ಕೆ ಈ ವಿಷಯ ಗೊಂತಾತು. ಅವು ಎನ್ನ ನೆಗೆ ಮಾಡ್ಳೆ ಸುರುಮಾಡಿದವು. ನೀನು ಅವನ ಲವ್ ಮಾಡುತ್ತಾ ಇದ್ದೆ ಹೇಳಿ. ಆದರೆ ಅಂತ ಭಾವನೆ ಎನಗೆ ಇತ್ತಿಲ್ಲೆ. ಎನ್ನ ಈ ವಿಚಿತ್ರ ಸ್ನೇಹ ಭಾವನೆಗಳ ತೊಳಲಾಟ ಕಾಂಬಗ ಅವಕ್ಕೆ ಹಾಂಗನಿಸಿದ್ದರಲ್ಲಿ ತಪ್ಪೇನಿಲ್ಲೆ.
ಅಷ್ಟೊಂತಿಗಾಗಲೇ ನಮ್ಮ ಪದವಿ ಕಾಲೇಜಿನ ಜೀವನ ಮುಗಿದತ್ತು. ನಿನ್ನ ಮಿಸ್ ಮಾಡಿಕೊಳ್ಳತ್ತಾ ಇದ್ದನ್ನೆ ಹೇಳ್ತ ಬೇಜಾರು ಆತಾದರೂ, ಜೀವನದ ಹಲವು ಸತ್ಯಂಗಳ ನಾವು ಒಪ್ಪಿಕೊಳ್ಳಲೇ ಬೇಕಲ್ಲದಾ…ಹಾಂಗಾಗಿ ಬೇಜಾರವ ಸಹಿಸಿಕೊಂಡೆ, ಆನು ಎನ್ನ ಮುಂದಿನ ಜೀವನದ (ಉನ್ನತ ಶಿಕ್ಷಣ, ವೈವಾಹಿಕ) ಬಗ್ಗೆ ಆಲೋಚನೆ ಮಾಡ್ಳೆ ಶುರುಮಾಡಿದೆ. ಮನೆಲಿ ಕೂಡ ಅಪ್ಪ ಅಮ್ಮ ಕೂಡ ಅದೇ ವಿಚಾರಂಗಳ ಎನ್ನಂದ ಜಾಸ್ತಿ ಆಲೋಚನೆ ಮಾಡ್ತಾ ಇತ್ತಿತವು. ನೀನು ಕೋಣಾಜೆ ವಿಶ್ವವಿದ್ಯಾಲಯ ಸೇರಿದೆ ಹೇಳಿ ಎನಗೆ ಗೊಂತಾತು… ಒಬ್ಬ ಕ್ಲೋಸ್ ಫ್ರೆಂಡ್ ದೂರಲ್ಲಿ ಇದ್ದುಕೊಂಡು ಎಂತ ಮಾಡ್ಳೆ ಎಡಿಗೋ.. ಅದನ್ನೇ ಆನೂ ಮಾಡಿದೆ. ನಿನ್ನ ಉತ್ತಮ ಭವಿಷ್ಯದ, ವೃತ್ತಿ ಜೀವನನದ ಬಗ್ಗೆ ದೇವರಲ್ಲಿ ಮನಸಾರೆ ಪ್ರಾರ್ಥಿಸಿದೆ.
ಅಲ್ಲಿಂದ ಸುದೀರ್ಘ ಐದು ವರ್ಷಗಳ ಅವಧಿಯಲ್ಲಿ ನಿನ್ನ ಬಗ್ಗೆ ಪ್ರತಿದಿನ ಆಲೋಚನೆ ಮಾಡ್ಳೆ ಸಮಯ ಸಿಕ್ಕಿದ್ದಿಲ್ಲೆ. ಅದಕ್ಕೆ ಕಾರಣಂಗಳೂ ಇಲ್ಲದ್ದಿಲ್ಲೆ. ಒಂದೊಂದರಿ ನೆಂಪು ಬಪ್ಪಗ ಎನ್ನ (ನಿನ್ನ) ಕಾಲೇಜು ಜೀವನ, ಉಪ್ಪಿನಂಗಡಿ ಬಸ್ ಸ್ಟೇಂಡ್, ಪುತ್ತೂರು ಬಸ್.. ಹೀಂಗೆ ಎಲ್ಲವನ್ನು ಗ್ರೇಶುವಾಗ ಮನಸಿಂಗೆ ಹಿತ ಅನ್ನಿಸಿಕೊಂಡಿತ್ತು.
ಹೋಗಲಿ.. ಬಹು ವರ್ಷದ ನಂತರ ಕಳೆದ ತಿಂಗಳು ನಮ್ಮ ಮಾಷ್ಟ್ರುಮಾವನ ಮಗನ ಮದುವೆಯಿಲಿ ಕಂಡೆ. ಆಶ್ಚರ್ಯ ಆತು ಅದೆಷ್ಟು ಬದಲಾವಣೆ ಆಯ್ದೆ ಮಾರಾಯ ನೀನು. ಆ ಮಾಣಿ ನೀನೆಯಾ ಹೇಳಿ ಆತು ಅನಿಸಿಹೋತು. ದೈಹಿಕವಾಗಿ ಮತ್ತೂ ತೋರ ಆದರೂ, ನೀನು ಮಾತಾಡುವ ಶೈಲಿ, ನಿನ್ನ ನೆಗೆ ಒಂದೂ ಬದಲಾಯಿದಿಲ್ಲೆ. ಆದರೂ ಆನು ಬದಲಾದಷ್ಟು ನೀನು ಬದಲಾಗಿತ್ತಿಲ್ಲೆ. (ಇಲ್ಲಿ ವಿವರಣೆ ಅಗತ್ಯ ಇಲ್ಲೆ ಹೇಳಿ ಎನಗೆ ಕಾಣ್ತು) ನಿಂಗ ಬೈಲಿನವೆಲ್ಲಾ ಒಟ್ಟಿಂಗೆ ನಿಂದು ಹರಟೆ ಹೊಡಕ್ಕೊಂಡು ಇಪ್ಪದರ, ಯೇನಂಕೂಡ್ಳಣ್ಣ, ಹಳೆಮನೆ ಅಣ್ಣ ನಿಂಗಳ ಪಟತೆಗದವರ ನೋಡಿಗೊಂಡು ಕೂದೆ. ಮಧ್ಯಾಹ್ನ ಆದ್ದೇ ಗೊಂತಾಯಿದಿಲ್ಲ. ಆನೆಂತ ಪೆದ್ದು ಹೇಳಿ ನೋಡು… ಅಂದೂ ಕೂಡ ನಿನ್ನ ಮಾತಾಡ್ಸಲೆ ಎನಗೆ ಮನಸ್ಸು ಬೈಂಯಿದಿಲ್ಲೆ. ಮಧ್ಯಾಹ್ನ ನೀನು, ಗಣೇಶಮಾವ, ಅಜ್ಜಕಾನ ಭಾವ ಎಲ್ಲ ಒಟ್ಟಿಂಗ ಹಂತಿಲಿ ಕೂಬಲೆ ರೆಡಿಯಾದಪ್ಪಾಗದರೂ ನಿಂಗಳ ಹತ್ತರೆ ನಿಂದುಕೊಂಡಿದ್ದ ಎನಗೆ ಮಾತಾಡ್ಳೆ ಅವಕಾಶ ಇತ್ತು. ಅಂಬಗಳೂ ಮಾತಾಡ್ಳೆ ಆತಿಲ್ಲೆ (ಎನಗೆ ಬೇಡಾಳಿ ಕಂಡತ್ತು). ನಿಂಗ ಕೂದ ಎದುರಾಣ ಹಂತಿಲಿ ಆನಿತ್ತೆ…. ಅದೇ ಹಂತಿಲಿ ಮದುಮಕ್ಕಳುದೇ ಇತ್ತಿತವು! ಎನ್ನ ಹತ್ತರೆ ಕೂದ್ದದು ನಮ್ಮ ಮಂಗ್ಳೂರಕ್ಕ.
ನೀನು ಯೂನಿವರ್ಸಿಟಿಲಿ ಎಂತರ ಕಲ್ತದು, ಈಗ ಎಂತ ಮಾಡಿಗೊಂಡು ಇದ್ದೆ ಹೇಳ್ತದು ಎನಗೆ ಗೊಂತಿತ್ತಿಲ್ಲೆ. ಅಕ್ಕನತ್ರೆ ಹೀಂಗೆ ನಿಂಗಳ ಬೈಲಿನ, ನೆರೆಕರೆಯವರ ವಿಚಾರಂಗಳ ಎಲ್ಲಾ ಕೆದಕಿದೆ. ಅದರೊಟ್ಟಿಂಗೆ ನಿನ್ನ ವಿಚಾರವೂ ಬಂತನ್ನೆ. ನೀನೀಗ ಒಳ್ಳೆ ಕೆಲಸಲ್ಲಿದ್ದೆ ಹೇಳಿ ಅಕ್ಕ ಹೇಳಿತ್ತು ಒಟ್ಟಿಂಗೆ ನಿನ್ನ ಎಡ್ರಸ್ಸು ಕೊಟ್ಟತ್ತು. ಎನಗೆ ಎಷ್ಟು ಕೊಶಿಯಾತು ಹೇಳಿ ಗೊಂತಿದ್ದಾ… ಆನು ದೇವರತ್ರೆ ಮಾಡಿದ ಪ್ರಾರ್ಥನೆ ಸಾರ್ಥಕ ಆತು ಹೇಳಿ ಮನಸ್ಸಿಲ್ಲೇ ಗ್ರೇಶಿದೆ. ನಿನ್ನ ಅನಿರೀಕ್ಷೀತ ಭೇಟಿ ತುಂಬಾ ಕೊಶಿ ಕೊಟ್ಟತ್ತು. ಮಾಷ್ಟ್ರುಮಾವನ ಮಗಂಗೆ ಮನಸ್ಸಿಲ್ಲೆ ಒಂದು ಕೃತಜ್ಞತೆ ಹೇಳಿದೆ. ಅವ ಮದುವೆ ಆದ್ದಕ್ಕೆ ನಿನ್ನ ಮತ್ತೆ ಕಾಂಬಲೆ ಸಿಕ್ಕಿತ್ತಿದಾ!
ಕಾಗದ ತುಂಬಾ ದೊಡ್ಡ ಆತಲ್ಲದಾ.. ಪೆಂಗಣ್ಣನಷ್ಟು ಸಣ್ಣಕೆ ಕಾಗದ/ಸುದ್ದಿಯ ಬರವಲೆ ಎನಗೆ ಅರಡಿತ್ತಿಲ್ಲೆ!!! ಕ್ಷಮಿಸು.. ಇನ್ನು ತುಂಬ ಬರತ್ತಿಲ್ಲೆ ಒಂದೇ ಒಂದೇ ಗೆರೆ…
ನಿನ್ನ ಭವಿಷ್ಯ ಉತ್ತಮ ಆಗಿರಲಿ ಹೇಳ್ತದೆ ಎನ್ನ ಹಾರೈಕೆ.
ಇತಿ ನಿನ್ನ ಅನಾಮಿಕ ಆತ್ಮೀಯಳು…
ಮತ್ತೆ ಪುನಃ ಟಕ್ ಟಕ್… ಹೇಳಿ ಬಾಗಿಲು ಬಡಿದ ಶಬ್ದ ಆತು. ಕಣ್ಣು ಬಿಟ್ಟು ನೋಡ್ತೆ ಆನು ಹಾಸಿಗೆಲಿ! ಉದಿಯಪ್ಪಗ ಆರು ಗಂಟೆ. ’ಸಾರ್ ಪೇಪರ್’ ಹೇಳಿ ಪೇಪರ್ ಮಾರುವ ಹುಡುಗ ಹೇಳಿದ. ಯಾವಗಳು ಆನು ೫.೩೦ಗೆ ಏಳುವವ. ಆದಿನ ಆದಿತ್ಯವಾರ. ಹಾಂಗಾಗಿ ರಜ್ಜ ಲೇಟು. ಅಂತು ಒಳ್ಳೆ ಕನಸಿನ ಕಾಗದ ಓದಿದ ಖುಷಿಲಿ ಪೇಪರು ಓದಲೆ ಸುರು ಮಾಡಿದೆ. ಸುದ್ದಿಗಳ ಓದಿ ಸಾಪ್ತಾಹಿಕ ಪುರವಣಿ ಓದುವ ಕ್ರಮ ಎನ್ನದು. ಅದರಲ್ಲೂ ಆದಿತ್ಯವಾರ ವಾರಭವಿಷ್ಯ ಇರ‍್ತಿದಾ… ಹಾಂಗೆ ಆದಿನವೂ ಎನ್ನ ರಾಶಿಯ ಮೇಲೆ ಕಣ್ಣಾಡಿಸಿದೆ.
ಅದರಲ್ಲಿ ಹೀಂಗೆ ಬರದಿತ್ತು…
ಆತ್ಮೀಯರೊಬ್ಬರ ಪತ್ರ ಈ ವಾರ ನಿಮ್ಮ ಕೈ ಸೇರಲಿದೆ!!!!
ಕೊನೆ ಮಾತು: ಉದೆಗಾಲಕ್ಕೆ ಕಂಡ ಕನಸು ನಿಜ ಆವುತ್ತಡಾ…ಬಟ್ಟಮಾವ° ಹೇಳುಗು. ಉಮ್ಮಪ್ಪ ಎನಗರಡಿಯ…
ಕೆಪ್ಪಣ್ಣನ ಕನಸು ಬೇಗನೆ ನೆನಸಾಗಲಿ ಹೇಳಿ ಹಾರೈಸುವ ಅಲ್ಲದೋ…………
Nijavagaloo Olle kathe. Thumbaa laikiddu. Odisigondu hothu.
Che.. Bare kanasanne heli…..
ಉದಿಯಪ್ಪಗಾಣ ಕನಸು ನಿಜ ಅಕ್ಕು..ಕಾಡು ನೋಡಿ..ಶುದ್ಧಿ ಲಾಯಿಕ ಆಯಿದು…ಮನಸ್ಸಿನ ಒಂದರಿ ಮಾಷ್ಟ್ರುಮಾವನ ಮಗನ ಮದುವೆ ಹೊಡೆನ್ಗೆ ಎಳಕ್ಕೊಂಡು ಹೋದೆ… ಈ ಅನಾಮಿಕ ವ್ಯಕ್ತಿ ಆರು ಹೇಳಿ ಗೊಂತಾವುತ್ತಿಲ್ಲೇ.ಇನ್ನು ನಿಂಗೋಗೆ ಗೊಂತು.
ಕೆಪ್ಪಣ್ಣ, ಭಾರಿ ಲಾಯಕೆ ಆಯಿದು ಬರದ್ದು… ಕಡೇ೦ಗೆ ಕಥೆ ಬದಲಿತ್ತು..! 😉
ಕೆಪ್ಪಣ್ಣ ಬರದ ಕಥೆ ಲಾಯ್ಕಾಯಿದು. ಅಂಬಗ ಈ ‘ಅನಾಮಿಕಾ’ ಮಾಷ್ಟ್ರುಮಾವ°ನ ಮಗನ ಮದುವೆಗೆ ಬಂದದು ಅಪ್ಪೋ ಹೇಳಿ ಎನಗೂ ಸಂಶಯ ಬತ್ತು… ನಿಂಗಳ ಪ್ರಜಾವಾಣಿಲಿ ಹೀಂಗಿಪ್ಪ ಕಥೆ ಬರೆತ್ತಾ ಇರಿ, ಆತೋ?
kathe laykiddu….. adre kanaso heli……….! enage samshaya battha iddanne….
keppanno ?
ಕತೆ ಒಪ್ಪ ಇದ್ದು.
{ಉದೆಗಾಲಕ್ಕೆ ಕಂಡ ಕನಸು ನಿಜ ಆವುತ್ತಡಾ….}
ಆದರೆ ಬಚಾವು…!!! 😉
ಕೂಸಿನ ಭಾವನೆಗಳ ಚೆಂದಕೆ ಅರ್ಥ ಮಾಡಿ, ಕುತೂಹಲ ಆವುತ್ತ ಹಾಂಗೆ ಬರದ್ದೆ. ಲಾಯಿಕ ಆಯಿದು.
[ಉದೆಗಾಲಕ್ಕೆ ಕಂಡ ಕನಸು ನಿಜ ಆವುತ್ತಡಾ…ಬಟ್ಟಮಾವ° ಹೇಳುಗು]
ಆಗಲಿ ಹೇಳಿ ಹಾರೈಸುತ್ತೆ.
ಕತೆಯ ತಲೆಬರಹ ನೋಡಿ ಅಪ್ಪಗಳೇ ಓದುಗನ ಕುತೂಹಲವ ಎಳಗುಸುತ್ತು. ಬರದ ಶೈಲಿ ಚೆಂದ ಆಯಿದು. ಇದು ಕತೆ ಅಲ್ಲ, ನಿಜವೋ ಹೇಳ್ತ ಭಾವನೆ ಎನಗೆ ಬಂತು. ಹೇಂಗೆ ಮಾಸ್ಟ್ರ ಮಾವನ ಮಗನ ಮದುವೆ ವಿಡಿಯೋ ತರುಸುವನೊ ? ಕನಸು ನಿಜ ಆಯೆಕಾದರೆ ಮನುಷ್ಯ ಪ್ರಯತ್ನವೂ ಬೇಕಾಡ !
ವಾರ ಭವಿಷ್ಯ ಸರಿ ಆವುತ್ತಿದ ಈ ಬಯಲಿನೋರ ಎಷ್ಟು ಒಪ್ಪ೦ಗೊ ಬತ್ತು ನೋಡು.ಬರೆತ್ತದರ ಬಿಡೇಡ ಒಳ್ಳೆ ಭವಿಷ್ಯ ಇದ್ದು.ಕತೆ ಓದುಸಿಯೊ೦ಡು ಹೋಯೇಕು ಆ ಕೆಲಸ ಆಯಿದು ಹಾ೦ಗಾಗಿಯೇ ಹೇಳಿದ್ದು ಬರೆತ್ತದರ ಬಿಡೇಡ.ಒಪ್ಪ೦ಗಳೊಟ್ಟಿ೦ಗೆ
ಕತೆ ಬರದ ಶೈಲಿ ಲಾಯಿಕಿದ್ದು; ಸೀದ ಓದಿಸಿಯೊಂಡು ಹೋವುತ್ತು. ಈಗಾಣ ಕನ್ನಡಲ್ಲಿ(!?)
ಫ್ಯಾಂಟಸಿ(Fantasy) ಹೇಳಿದರೆ ಈ ರೀತಿಯ ಕಲ್ಪನೆಗಳೇ ಅಲ್ಲದೋ? ಇನ್ನೂ ಬರಲಿ ಕತಗೊ!
(ಸುಪ್ತ) ಮನಸ್ಸಿಲ್ಲಿಪ್ಪದೇ ಕನಸ್ಸಿಲ್ಲಿ ಕಾಂಬದು ಹೇಳಿ ಹೇಳ್ತವನ್ನೆ! ಉಮ್ಮಪ್ಪ, ನವಗರಡಿಯ!
ನಡು ಇರುಳಿಲಿ ಬರದ್ದು ನೋಡಿರೆ ಕೆಪ್ಪಣ್ಣನೂ ಒಪ್ಪಣ್ಣನ ದಾರಿ ಹಿಡುದನೋ? ಹೇಳಿ ಅನಿಸಿತ್ತು.
ಆಹಾ,ಸುಂದರ ಕನಸು ಕೆಪ್ಪಣ್ಣ. ನಿನಗೆ ಹೀಂಗೆ ಒಳ್ಳೆ ಒಳ್ಳೆ ಕನಸು ಬೀಳಲಿ,ಬೈಲಿಂಗೆ ಬಾಣದ ಹಾಂಗೆ ಬರಳಿ,ಎಲ್ಲೋರಿಂಗೆ ಮುದ ನೀಡಲಿ.ನಿನ್ನ ಕನಸು ಬೇಗ ನನಸಾಗಲಿ.
ಒಳ್ಳೆ ಕಥೆ. ಹೀಂಗೆ ಪತ್ರಿಕೆಗೊಕ್ಕೆ ಬರೆದರೆ ಒಳ್ಳೆ ಕಥೆಗಾರ ಹೇಳುವ ಹೆಸರು ಖಂಡಿತ ಬಕ್ಕು.ಬರೆತ್ತಾ ಇರಿ. ಅಭಿನಂದನೆಗೋ.