Oppanna.com

ಒಂದು ಪ್ರಕರಣದ ಸುತ್ತ (ಅಕೇರಿಯಣ ಕಂತು)- ೧೮ : ರಮ್ಯ ನೆಕ್ಕರೆಕಾಡು

ಬರದೋರು :   ಶರ್ಮಪ್ಪಚ್ಚಿ    on   17/09/2020    1 ಒಪ್ಪಂಗೊ

ಒಂದು ಪ್ರಕರಣದ ಸುತ್ತ (ಅಕೇರಿಯಣ ಕಂತು)- ೧೮ : ರಮ್ಯ ನೆಕ್ಕರೆಕಾಡು

ಎಲ್ಲದಕ್ಕೂ ಕೇಶವನೇ ಕಾರಣ ಹೇಳಿ ಮದನ ಕೇಶವಂಗೆ ಬೆರಳು ಮಾಡಿ ತೋರ್ಸಿಯಪ್ಪಗ ಎಲ್ಲರಿಂಗೂ ಆಶ್ಚರ್ಯ ಆತು. ಶರತ್ಚಂದ್ರ ಕೂಡ್ಲೇ, “ಭಾವಾ..???” ಹೇಳಿ ಪ್ರಶ್ನಾರ್ಥಕವಾಗಿ ಕೇಶವನ ಮೋರೆ ನೋಡಿದ. ಅಂಜಲಿ, ವೀಣಾ ಇಬ್ರುದೇ ಸೆಡ್ಲು ಬಡ್ದವರ ಹಾಂಗೆ ನಿಂದು ಬಾಕಿ ಆಗಿತ್ತಿದವು. ಕೇಶವ ಕೂಡ್ಲೇ, “ಮದನ.. ಎಂತ ಬಾಯಿಗೆ ಬಂದಾಂಗೆ ಹೇಳುದು.. ನೀನು ತಪ್ಸಿಗೊಂಬಲೆ ಎನ್ನ ದೂರು ಹಾಕೆಡ ನೀನು ನಿನ್ನ ಅಪ್ಪನ ಕೊಂದೆ ಹೇಳಿ ಆನು ಎನ್ನ ಮಗಳ ಕಿಡ್ನಾಪ್ ಮಾಡುವಷ್ಟು ಕೆಟ್ಟ ಅಪ್ಪ ಅಲ್ಲ.. ಮರ್ಯಾದೆಲಿ ಸತ್ಯ ಬಾಯಿ ಬಿಡು..” ಹೇಳಿಯಪ್ಪಗ ಮದನ, “ಆನೆಲ್ಲಿ ನೀನು ಕಿಡ್ನಾಪ್ ಮಾಡಿದ್ದು ಹೇಳಿದ್ದೆ..?? ಆನು ಹೇಳಿದ್ದು ಅಂಜಲಿಯ ಕಿಡ್ನಾಪ್ ಮಾಡ್ಲೆ ನೀನು ಕಾರಣ, ಹೇಳ್ರೆ ನಿನ್ನ ಮೇಲೆ ಇತ್ತ ದ್ವೇಷ..!!” ಮದನ ಕೇಶವನ ಯಾವಗ್ಳೂ ‘ನಿಂಗ’ ಹೇಳಿ ಮಾತಾಡ್ಸುವ ಜನ ಇಂದು ಒಂದರಿಯಂಗೆ ‘ನೀನು’ ಹೇಳಿ ಮಾತಾಡ್ಸಿದ್ದು ಕೇಶವಂಗೆ ಆಶ್ಚರ್ಯ ಕಂಡರುದೇ ಮದನ ಹೇಳುವ ವಿಷಯದ ಕಾತುರತೆಲಿ ಇದೊಂದು ದೊಡ್ಡ ವಿಷಯವೇ ಆಯ್ದಿಲ್ಲೆ. ” ಎನ್ನ ಮೇಲೆ ನಿನಗೆಂತ ಅಷ್ಟು ದೊಡ್ಡ ದ್ವೇಷ ಇತ್ತು..?? ಆನೆಂತ ಮಾಡಿದ್ದೆ ನಿನಗೆ..????” ಹೇಳಿ ಕೇಶವ ಹುಬ್ಬು ಗಂಟಿಕ್ಕಿ ಗೊಂದಲಲ್ಲಿ ಕೇಳಿದ. ಮದನ, “ಮಾಡುದೆಲ್ಲ ಮಾಡಿಕ್ಕಿ ಈಗ ಎಂತದೂ ಗೊಂತಿಲ್ಲದ್ದಾಂಗೆ ನಿಂದ ಸುಬಗ.. ಹ್ಞ್ಂ ನಿನಗೆ ಅದು ದೊಡ್ಡ ವಿಷಯವೇ  ಆಗಿತ್ತಿಲ್ಲೆ.. ಮನೋಹರ ಮೂರ್ತಿ..!!! ಹೆಸರು ಕೇಳಿ ನೆಂಪಿದ್ದಾ..??” ಹೇಳಿಯಪ್ಪದ್ದೇ ಕೇಶವ ,”ಅಯ್ಯೋ.. ಮದನ ನೀನು ಇನ್ನುದೇ ಆ ಘಟನೆ ಮರೆತ್ತಿದಿಲ್ಲೆಯಾ..??” ಹೇಳಿಯಪ್ಪಗ ಮದನ, “ಎನ್ನ ಲೈಫ್ ಇನ್ನು ಸೆಟ್ಲ್ ಆತು ಹೇಳಿ ಇಪ್ಪಗಳೇ ನೀನು ಬಂದು ಪೂರಾ ಹಾಳು ಮಾಡಿದೆ.. ನೀನು ಅದರ ಮರೆತಿಪ್ಪೆ.. ಎನಗೆ ಈಗಳೂ ನೀನು ಮಾಡಿದ ದ್ರೋಹ ಗ್ರೇಶಿ ಹೇಂಗೆ ಉರಿತ್ತು ಗೊಂತಿದ್ದ…” ಹೇಳಿ ಮೋರೆ ಕೆಂಪು ಮಾಡಿಗೊಂಡು ಕೇಶವನ ನೋಡಿದ. “ಹೀಂಗೆಲ್ಲ ಮಾತಾಡುವ ನೀನು ಭಾರೀ ಒಳ್ಳೆ ಕೆಲಸ ಮಾಡಿದ್ದೆ ಹೇಳಿ ಗ್ರೇಶೆಕ್ಕು.. ಆನು ಈಗಳೂ ಎದೆ ಮುಟ್ಟಿ ಹೇಳ್ತೆ ಆನು ಮಾಡಿದ್ದು ಸರಿಯಾದ ಕೆಲಸ.. ಎನಗೆ ಈಗಳೂ ಅದರ ಬಗ್ಗೆ ಹೆಮ್ಮೆ ಇದ್ದು..” ಹೇಳಿ ಕೇಶವ ಹೇಳಿಯಪ್ಪಗ ಎಲ್ಲರಿಂಗೂ ವಿಷಯ ಎಂತ ಗೊಂತಿಲ್ಲದ್ರೂ ಕೇಶವಂದು ಎಂತ ತಪ್ಪಿರ ಹೇಳಿ ಆತು. ಅಂಜಲಿ, “ಅಪ್ಪ ನಿಂಗ ಇಬ್ರು ಯಾವ ವಿಷಯ ಮಾತಾಡ್ತಾ ಇದ್ದಿ.. ಎಂಗೊಗೂ ಹೇಳಿ.. ಮೂರ್ತಿ ಮಾವನ ಸುದ್ದಿ ಎಂತಕೆ ಬಂತು?? ಎಂಗೊಗೆಲ್ಲ ಗೊಂತಿಲ್ಲದ್ದೇ ಎಂತದೋ ಆಯ್ದು ಹೇಳಿ ಅಪ್ಪಾ..” ಹೇಳಿತ್ತು. ಶರತ್ಚಂದ್ರ ” ಮದನ, ಭಾವ ಮಾತಾಡುದು ನೋಡ್ರೆ ಇದರಲ್ಲಿಯೂ ನಿನ್ನದೇ ತಪ್ಪಿದ್ದು ಹೇಳಿ ಆವ್ತು.. ಆ ಘಟನೆ ಎಂತ??” ಹೇಳಿ ಕುತೂಹಲಲ್ಲಿ ಕೇಳಿದ. ಮದನ ಮತ್ತೆ ಕೇಶವನ ನೆನಪು ಕೆಲವು ವರ್ಷದ ಹಿಂದಂಗೆ ಓಡಿತ್ತು.
           ಮನೋಹರ ಮೂರ್ತಿ..!! ಒಬ್ಬ ಕೋಟ್ಯಾಧೀಶ.. ಹಾಂಗೇಳಿಗೊಂಡು ಒಂದು ಚೂರೂ ದೊಡ್ಡಸ್ತಿಕೆ ಇತ್ತಿಲ್ಲೆ. ಉಷಾ ಅವನ ಕೊಂಡಾಟದ ಮಗಳು. ಒಂದೇ ಕೂಸು. ಯಾವುದಕ್ಕೂ ತೊಂದರೆ ಇತ್ತಿಲ್ಲೆ. ಕಾಲೇಜಿಲಿ ಮದನ ಉಷಾನ ಸೀನಿಯರ್. ಉಷಾ ಕಾಂಬಲೂ ಗುಣಲ್ಲಿಯೂ ಭಾರೀ ಚಂದದ ಕೂಸು. ಎಲ್ಲರಿಂಗೂ ಕೂಸುಗಳ ಗುಣ, ರೂಪ ಇಷ್ಟ ಆದರೆ ಮದನಂಗೆ ಮಾತ್ರ ಇಷ್ಟ ಆದ್ದು ಉಷಾನ ಶ್ರೀಮಂತಿಕೆ. ದಿನಾಗ್ಳೂ ಕಾಲೇಜು ಗ್ರೌಂಡಿಂಗೊರೆಗೆ ವಾಹನಲ್ಲಿ ಬಕ್ಕು.. ಇದೆಲ್ಲ ಕಂಡು ಮದನ ಎಂತಾರು ಮಾಡಿ ಉಷಾನ ಮದುವೆ ಆಯೆಕ್ಕು. ಮತ್ತೆ ಅವರ ಆಸ್ತಿ ಎನ್ನದೇ ಹೇಳಿ ಕನಸು ಕಾಂಬಲೆ ಸುರು ಮಾಡಿದ. ಅದೆಂತ ಮೋಡಿ ಮಾಡಿದನೋ ಮದನ ಉಷಾಂಗೆ ಗೊಂತಿಲ್ಲೆ ಮೊದ ಮೊದಲು ನೆಗೆಲಿ ಸುರಾದ್ದು, ಮತ್ತೆ ಒಬ್ಬಕ್ಕೊಬ್ಬನ ನೋಡದ್ದೇ ಒಂದು ದಿನ ಇಪ್ಪಲೆಡಿಯ ಹೇಳ್ತಷ್ಟಕ್ಕೆ ಇವರ ಸ್ನೇಹ ಬೆಳದತ್ತು. ಮದನ ಆನೊಬ್ಬ ಕೋಟ್ಯಾಧಿಪತಿ. ಅಬ್ಬೆ ಅಪ್ಪ ಎನಗೆ ಬೇಕಾದಷ್ಟು   ಆಸ್ತಿ ಮಾಡಿ ಮಡುಗಿದ್ದವು. ಈಗ ಎನ್ನ ಅಣ್ಣನೊಟ್ಟಿಂಗೆ ಫಾರಿನಿಲಿ ಇಪ್ಪದು. ಎರಡು ಮೂರು ದಿಕ್ಕೆ ಕೋಟ್ಯಾಂತರ ಆಸ್ತಿ ಇದ್ದು,ಮನೆಂದ ಕಾಲೇಜು ದೂರ ಆವ್ತು ಹೇಳಿ ಆನು ಈಗ ಪಿಜಿ ಲಿ ಇಪ್ಪದು ‌ಹೇಳಿ ಉಷಾನ ನಂಬ್ಸಿದ. ಮದನನ ಮಾತಿಂಗೆ ಸೋತು ಉಷಾ ಎಲ್ಲಾ ವಿಷಯ ಮನೆಲಿ ಹೇಳಿತ್ತು. ಮನೋಹರ ಮೂರ್ತಿ ಎಂತಕೂ ಮದನನ ಅಬ್ಬೆ ಅಪ್ಪನತ್ರೆ ಮಾತಾಡೆಕ್ಕು ಹೇಳಿಯಪ್ಪಗ ಮದನ ಅದಕ್ಕುದೇ ಒಂದು ಪ್ಲಾನ್ ಮಾಡಿ ಅವನ ಫ್ರೆಂಡಿನತ್ರೆ ಅಪ್ಪನ ಹಾಂಗೆ ಫೋನಿಲಿ ಮಾತಾಡೆಕ್ಕು.. ಎಂಗಳ ಮಗಂಗೆ ಅವಂಗೆ ಬೇಕಾದಾಂಗೆ ಇಪ್ಪ ಸ್ವಾತಂತ್ರ್ಯ ಕೊಟ್ಟಿದೆಯ.. ಎಂಗ ಫಾರಿನಿಲಿ ಇಪ್ಪ ಕಾರಣ ಗ್ರೇಶಿದಾಂಗೆ ಬದ್ಧಕ್ಕೆ ಬಪ್ಪಲೆಡಿಗಾಗ.. ಎಂಗಳ ಅನುಪಸ್ಥಿತಿಲಿ ಬದ್ಧ ಮುಂದುವರ್ಸಿ.. ಮದುವೆಗಾಪ್ಪಗ ಮುಖತ: ಭೇಟಿ ಅಪ್ಪ.. ಹೇಳಿ ಹೇಳುಲೆ ಮದನ ಫ್ರೆಂಡಿನ ಸಹಾಯ ತೆಕ್ಕೊಂಡ. ಮಾಣಿಯ ಅಂತಸ್ತು ಎಂಗಳ ಅಂತಸ್ತಿಂಗೆ ಸರಿ ಹೋತು ಹೇಳಿ ಮನೋಹರ ಮೂರ್ತಿ ಮದನಂಗೆ ಮಗಳ ಕೊಡೆಕ್ಕು ಹೇಳ್ತ ನಿರ್ಧಾರಕ್ಕೆ ಬಂದ. ಇನ್ನೊಂದು ತಿಂಗಳು ಕಳ್ದರೆ ಉಷಾಂಗೆ ಗುರುಬಲ ಇಲ್ಲೆ ಹೇಳಿ ಬೇಗ ಮದುವೆ ಮಾಡ್ಸೆಕ್ಕು ಹೇಳಿ  ಇನ್ನೊಂದು ನಾಕು ದಿನಲ್ಲಿ ಬದ್ಧ ಮಾಡುವ ಅಂದಾಜಿ ಮಾಡಿದವು. ಶುಭಗಳಿಗೆಲಿಯೇ ಎಲ್ಲ ಮಾಡಿ ಮುಗಿಶುವ ಹೇಳಿ ಬದ್ಧದ ದಿನ ಆಸ್ತಿಯ ಮಗಳ ಹೆಸರಿಂಗುದೇ ಅಳಿಯನ ಹೆಸರಿಂಗೂ ಬರೆಶುವ ಹೇಳಿ ಮನೋಹರ ಮೂರ್ತಿ ನಿರ್ಧಾರ ತೆಕ್ಕೊಂಡ. ಈ ವಿಷಯವ ಮದನ ಮನೆಲಿ ಹೇಳಿದ್ದನೇಲ್ಲೆ.. ಆಸ್ತಿ ಒಂದು ಕೈ ಸೇರಿರೆ ಎಲ್ಲರ ಬೇಕಾದಾಂಗೆ ಕೊಣಿಶುಲಕ್ಕು ಹೇಳ್ತದು ಮದನನ ಪ್ಲಾನ್ ಆಗಿತ್ತು. ಹೇಂಗೂ ಇನ್ನೊಂದು ತಿಂಗಳಿಲಿ ಮದುವೆ.. ಇಬ್ರುದೇ ಬೇಕಾದಲ್ಲಿ ತಿರುಗುಲಕ್ಕು ಹೇಳಿ ಮನೋಹರ ಮೂರ್ತಿ ಮದನಂಗೆ ಒಂದು ಬೈಕ್ ಗಿಫ್ಟ್ ಕೊಟ್ಟ. ಎನ್ನತ್ರೆ ಬೈಕ್ ಇದ್ದು.. ಪಿಜಿಲಿ ಇಪ್ಪ ಕಾರಣ ಬೈಕ್ ಬೇಡ ಹೇಳಿ ಮನೆಯಲ್ಲಿಯೇ ಮಡುಗಿದ್ದೆ ಹೇಳಿ ಭಾರೀ ಸುಲಭಲ್ಲಿ ಲೊಟ್ಟೆ ಹೇಳಿದ. ಆದರೂ ಅಳಿಯಂಗೆ ಎನ್ನ ಕಡೆಂದ ಗಿಫ್ಟ್ ಹೇಳಿ ಮನೋಹರ ಮೂರ್ತಿ ಬೈಕ್ ಕೊಡ್ಸಿದ್ದು ಮದನನ ಸಂತೋಷಕ್ಕೆ ಪಾರವೇ ಇಲ್ಲದ್ದಾಂಗೆ ಮಾಡಿತ್ತು. ಒಂದು ದಿನ ಇವ್ವಿಬ್ರು ಬೈಕಿಲಿ ಸುತ್ತುದರ ಕೇಶವ ನೋಡಿದ. ಒಂದು ಕಾಲಲ್ಲಿ ದಿಕ್ಕಿಲ್ಲದ್ದ ಕೇಶವಂಗೆ ಈ ಊರಿಲಿ ಮನೆ ಎಲ್ಲ ಕೊಡ್ಸಿ ಒಳ್ಳೆ ಉಪಕಾರ ಮಾಡಿದ ಜನ ಮನೋಹರ ಮೂರ್ತಿ. ಉಷಾನನ್ನುದೇ ಒಳ್ಳೆ ಗುರ್ತ ಇತ್ತ ಕೇಶವ ಅದು ಮದನನೊಟ್ಟಿಂಗೆ ತಿರುಗುದು ಕಂಡು ಆಶ್ಚರ್ಯ ಆತು. ಇದು ಹೀಂಗೆ ಮುಂದುವರೆದರೆ ಮನೋಹರಣ್ಣನ ಮರ್ಯಾದಿ ಎಂತಕಾಕ್ಕು.. ಈ ವಿಷಯ ಎನಗೆ ಗೊಂತಾಗಿಯೂ ಆನು ಅವರತ್ರೆ ಹೇಳದ್ರೆ ಆನು ಅವು ಮಾಡಿದ ಉಪಕಾರಕ್ಕೆ ದ್ರೋಹ ಮಾಡಿದಾಂಗೆ ಆವ್ತು ಹೇಳಿ ಕೇಶವ ಸೀದಾ ಮನೋಹರ ಮೂರ್ತಿಯ ಮನೆಗೆ ಹೋತ. ಉಷಾ ಹೀಂಗೆಲ್ಲಾ ಒಬ್ಬನೊಟ್ಟಿಂಗೆ ತಿರುಗುತ್ತು. ಆನು ನಿಂಗಳ ವೈಯಕ್ತಿಕ ವಿಷಯಲ್ಲಿ ತಲೆ ಹಾಕುಲಾಗ ಆದರೂ ಎನಗೆ ಹೇಳದ್ದೆ ತಡದ್ದಿಲ್ಲೆ ಹೇಳಿ ನೇರವಾಗಿ ಇಪ್ಪ ವಿಷಯ ಕೇಳಿಯಪ್ಪಗ ಮನೋಹರ ಮೂರ್ತಿ, “ಓಹ್.. ಅದುವಾ.. ತಿರುಗಲಿ ಬಿಡು ಇನ್ನೊಂದು ತಿಂಗಳಿಲಿ ಇಬ್ರಿಂಗೂ ಮದುವೆ ಮಾಡ್ಸವ ಅಂದಾಜಿ… ನಾಳ್ದು ಬದ್ಧ.. ಮಾಣಿದೇ ಒಳ್ಳೇ ಕುಳ ಮತ್ತೆಂತಕೆ ತಡವು ಮಾಡುದು ಅಲ್ದ.. ಎಂಗಳ ಕೈಕಾಲು ಬಿದ್ದು ಹೋಯ್ದು ಇನ್ನೆಂತ ಇದ್ದರೂ ಮಕ್ಕಳ ಕಾಲ.. ಹಾಂಗಾಗಿ ನಾಳ್ತು ಬದ್ಧದ ದಿನ ಆಸ್ತಿ ಅವರ ಹೆಸರಿಂಗೆ ಬರೆಶುದು ಹೇಳಿ ನಿಘಂಟು ಮಾಡಿದ್ದು.. ” ಹೇಳಿಯಪ್ಪಗ ಮದನ ಇವಕ್ಕೆ ಮೋಸ ಮಾಡ್ತಾ ಇದ್ದ ಹೇಳಿ ಕೇಶವಂಗೆ ಗೊಂತಾತು. ಎನ್ನ ಬದುಕು ಕಟ್ಟಿ ಕೊಟ್ಟವಕ್ಕೆ ಮೋಸ ಅಪ್ಪಲೆ ಬಿಡ್ಲಾಗ ಹೇಳಿ ಮದನನ ಸಂಗತಿ ಪೂರಾ ಕೇಶವ ಮನೋಹರ ಮೂರ್ತಿಯ ಹತ್ರೆ ಹೇಳಿದ. ಸತ್ಯ ಸಂಗತಿ ಗೊಂತಾಗಿ ಮನೋಹರ ಮೂರ್ತಿ, ಉಷಾ ಮದನನ ಕೈಂದ ಬಚಾವಾದವು. ಮದನನ ಒಂದು ದಿನ ಮನೆಗೆ ದಿನಿಗೇಳಿ ಸರೀ ಮಂಗಳಾರತಿ ಮಾಡಿ ಮರ್ಯಾದೆ ತೆಗೆದವು. ಇದಾದ ಮತ್ತೆ ಮದನಂಗೆ ಕೇಶವನ ಕಂಡ್ರೆ ಆಗ.. ಕೇಶವ ಸಂತೋಷಲ್ಲಿ ಇಪ್ಪಲಾಗ ಎಂತಾರು ಮಾಡಿ ದ್ವೇಷ ತೀರ್ಸೆಕ್ಕೇ ಹೇಳಿ ಅಂದು ಮದನ ನಿರ್ಧಾರ ಮಾಡ್ತ. ಕೇಶವ ಈ ವಿಷಯವ ಗೋಪಾಲಣ್ಣನತ್ರೆ, ಮನೆಯವರತ್ರೆ ಹೇಳ್ತನೇಲ್ಲೆ ಮದನಂಗೆ ಬದುಕುಲೆ ಇನ್ನೊಂದು ಅವಕಾಶ ಕೊಡುವ ಹೇಳಿ ಸುಮ್ಮನೆ ಆವ್ತ.. ಈ ವಿಷಯ ಮತ್ತೆ ಅಲ್ಲಿಗೇ ತಣ್ದತ್ತು ಹೇಳಿ ಕೇಶವ ಗ್ರೇಶಿತ್ತಿದ. ಆದರೆ ಮದನನ ದ್ವೇಷದ ಜ್ವಾಲೆ ತಣ್ಣಂಗಾಯ್ದೇಲ್ಲೆ..
        ” ಷೇ… ಈ ಘಟನೆ ಆದ ಮತ್ತೆ ನೀನು ಬದಲಾಯ್ದೆ ಹೇಳಿಯೇ ನಂಬಿತ್ತಿದೆ ಆನು.. ಆದರೆ ನೀನು…!! ಯೌವ್ವನವೇ ಹಾಂಗೆ ಕಲ್ಲಿನ ತಿಂದರೂ ಕರಗ್ಸಿಗೊಂಬೆ ಹೇಳ್ತ ಛಲ.. ಮುಂದೆ ಅದರಂದಾಗಿ ಅಪ್ಪಾಂಗಿಪ್ಪ ಅನಾಹುತ ಎಂತರ ಹೇಳ್ತ ಕಲ್ಪನೆಯೂ ಇರ್ತಿಲ್ಲೆ.. ಎಂತದೋ ಕೆಟ್ಟ ಗಳಿಗೆ ಬೆಶಿನೆತ್ತರು ಎಲ್ಲವನ್ನೂ ಮಾಡ್ಸಿತ್ತು ಹೇಳಿ ಗ್ರೇಶಿ ನಿನಗೆ ಬದುಕುಲೆ ಮತ್ತೊಂದು ಅವಕಾಶ
ಕೊಡ್ಲೆ ಆಗಿತ್ತು.. ಅಂಬಗಳೇ ನಿನ್ನ ಕಂಬಿ ಎಣ್ಸುಲೆ ಕಳ್ಸೆಕ್ಕಿತ್ತು..” ಹೇಳಿ ಕೇಶವ ಹೇಳಿಯಪ್ಪಗ, ಶರತ್ಚಂದ್ರ, ” ಅದೆಲ್ಲಾ ಸರಿ.. ಅಂಜಲಿಯ ಕಿಡ್ನಾಪ್ ಮಾಡಿದ ವಿಷಯಲ್ಲಿ ಇನ್ನುದೇ ಕ್ಲಾರಿಟಿ ಸಿಕ್ಕಿದ್ದೇಲ್ಲೇ..??” ಹೇಳಿ ಮದನನ ಪ್ರಶ್ನಾರ್ಥಕವಾಗಿ ನೋಡಿದ. ಮದನ, ” ಕೇಶವನ ಮೇಲೆ ದ್ವೇಷ ಇತ್ತದು ಎಷ್ಟು ಸತ್ಯವೋ, ಅಂಜಲಿಯ ಕಿಡ್ನಾಪ್ ಮಾಡೆಕ್ಕು ಹೇಳ್ತ ಸಣ್ಣ ಕಲ್ಪನೆಯೂ ಮಾಡಿತ್ತಿದಿಲ್ಲೆ ಹೇಳ್ತದು ಅಷ್ಟೇ ಸತ್ಯ.. ಕೇಶವನ ಮರ್ಯಾದೆ ನಾಕು ಜನರ ಮುಂದೆ ತೆಗೆಯೆಕ್ಕು, ಅವ ಜೀವಮಾನ ಇಡೀ ತಲೆ ನೆಗ್ಗದ್ದಾಂಗೆ ಆಯೆಕ್ಕು ಹೇಳಿ ಗ್ರೇಶಿತ್ತೆ ಹೊರತು, ಅಂಜಲಿಗೆ ಉಪ್ಪದ್ರ ಕೊಡೆಕ್ಕು ಹೇಳ್ತ ಉದ್ದೇಶ ಎನಗಿತ್ತಿಲ್ಲೆ.. ಅಂದು ಅಪ್ಪನ ಕೊಂದ ದಿನ…” ಹೇಳಿ ಮದನ ಆ ದಿನದ ಘಟನೆಯ ಬಿಚ್ಚಿ ಮಡುಗಿದ.
            ಗೋಪಾಲಣ್ಣನ ಉಸುಲು ನಿಂದಿತ್ತು ಹೇಳಿ ಗೊಂತಾಗಿಯಪ್ಪದ್ದೇ ಮದನಂಗೆ ಪಕ್ಕಕ್ಕೆ ಎಂತ ಮಾಡುದು ಹೇಳಿ ಗೊಂತಾಯ್ದಿಲ್ಲೆ. ಮತ್ತೆ ಗೋಪಾಲಣ್ಣನ ಮಂಚಲ್ಲಿ ಮನುಗ್ಸಿದ. ಈ ಊರನ್ನೇ ಬಿಟ್ಟು ಓಡಿ ಹೋಪದೊಂದೆ ಅಕೇರಿಯಣ ದಾರಿ ‌ಹೇಳಿ ಗ್ರೇಶಿಗೊಂಡು ಚಾವಡಿಗೆ ಬಂದವಂಗೆ ಕಂಡದು ಎದುರೆ ನಿಂದುಗೊಂಡಿತ್ತ ಅಂಜಲಿ..!! ಅಂಜಲಿ ಯಾವಾಗ್ಳಣ ಹಾಂಗೆ ಇಲ್ಲೆ ಹೇಳಿ ಮದನಂಗೆ ಅದರ ಮೋರೆ ನೋಡಿದ ಕೂಡ್ಲೇ  ಗೊಂತಾತು. ಅಪ್ಪನ ಕೊಂದದರ ನೋಡಿಕ್ಕಾ ಹೇಳಿ ಹೆದರಿಕೆ ಆತು… ಅಂಜಲಿ ಕೈಚೀಲ ಕೊಟ್ಟಿಕ್ಕಿ ಹೆಚ್ಚಿಗೆ ಮಾತಾಡದ್ದೇ ಹೋದ್ದು ಮದನನ ಇನ್ನುದೇ ಗೊಂದಲಕ್ಕೀಡು ಮಾಡಿತ್ತು…. ಎಂತ ಮಾಡುದು ಹೇಳಿ ಅರಡಿಯದ್ದೆ ಮಂಡೆಬೆಶಿ ಮಾಡಿಗೊಂಡು ನಿಂದವಂಗೆ ಅವನ ಫ್ರೆಂಡ್ ನವೀನ್ ಫೋನ್ ಮಾಡ್ತು. ನವೀನಂದೆ ಮದನನ ಹಾಂಗೆ ಸಂಕಷ್ಟಲ್ಲಿ ಸಿಕ್ಕಿ ಹಾಕಿರ್ತು. ಸಣ್ಣಕ್ಕೆ‌ ಗಲಾಟೆ ಸುರು ಆಗಿ, ಜಗಳ ಕೋಪಕ್ಕೆ ತಿರುಗಿ ನವೀನ್ ಅದರ ಗರ್ಲ್ ಫ್ರೆಂಡಿನ ಕೊಲ್ಲುತ್ತು.  ಹಾಂಗಾಗಿ ಮದನಂಗೆ ಫೋನು ಮಾಡಿ ಎಂತ ಮಾಡುದು ಹೇಳಿ ಕೇಳ್ತು. ಮದನಂಗೆ ಪಕ್ಕಕ್ಕೆ ಎಂತ ಮಾಡುದು ಹೇಳಿ ಗೊಂತಾವ್ತಿಲ್ಲೆ. ಚೂರು ಹೊತ್ತು ಆಲೋಚನೆ ಮಾಡಿಯಪ್ಪಗ ಮದನಂಗೆ ಹೊಸ ಐಡಿಯಾ ಹೊಳೆತ್ತು. ಹೇಂಗೂ ಮದನಂಗೆ ಕೇಶವನ ಮೇಲೆ ಮೊದಲೇ ದ್ವೇಷ ಇತ್ತು. ಈ ಹುಡುಗಿಯ ಹೆಣವ‌ ಕೇಶವನ ಮನೆಯ ಹಿಂದೆ ಹೂತಾಕಿ ಕೇಶವನೇ ಅದರ ಕೊಂದದು ಹೇಳಿ ಮಾಡ್ಲಕ್ಕು ಹೇಳಿ ಮದನ ಯೋಚನೆ ಮಾಡ್ತ. ಮೊದಲಿಂದಲೂ ಕ್ರೈಂ ಸ್ಟೋರಿಗಳ ಓದಿಗೊಂಡು ಬಂದ ಮದನಂಗೆ ಹೀಂಗೆಪ್ಪ ಪ್ಲಾನ್ ಮಾಡುದು ಕಷ್ಟ ಆಯ್ದಿಲ್ಲೆ.
              ಫ್ರೆಂಡಿನ ಕಾರಿಲಿ ಕೇಶವನ ಮನೆಗೆ ನಡಿರುಳು ಆ ಹೆಣವ ತೆಕ್ಕೊಂಡು ಇಬ್ರುದೇ ಹೋತವು. ಮೊದಲು ಮನೆಯವರ ಭೋದ ತಪ್ಸುಲೆ ಮಾಡು ತೆಗೆದು ಮನೆಯೊಳಂಗೆ ಹೋಗಿ ಕೇಶವಂಗೂ ಶಾಂತಗೂ ಕ್ಲೋರೋಫಾರ್ಮ್ ಸ್ಪ್ರೇ ಮಾಡಿ ಅಂಜಲಿಯ ಕೋಣೆಗೆ ಬಪ್ಪಗ ಇವರ ಪ್ಲಾನ್ ಉಲ್ಟಾ ಪಲ್ಟಾ ಅಪ್ಪಾಂಗೆ ಅಂಜಲಿ ಎಚ್ಚರಿಗೆಲಿ ಇತ್ತು. ಕೂಡ್ಲೇ ಭೋದ ತಪ್ಸೆರುದೇ ಮುಂದೆ ಅಂಜಲಿಂದಲೇ ಗಂಡಾಂತರ ಬಕ್ಕು ಹೇಳಿ ಅದರ ಕಿಡ್ನಾಪ್ ಮಾಡುವ ಯೋಚನೆ ಮಾಡಿದವು. ಆ ಹುಡುಗಿಯ ಹೆಣವ‌ ಮನೆಯ ಹಿಂದೆ ಹೂತಾಕಿ ಅಂಜಲಿಯ ಕರಕ್ಕೊಂಡು ಇವು ಯಾವಾಗ್ಳೂ ಜೂಜಾಡುವ ಪಾಳು ಬಿದ್ದ ಕಟ್ಟಡಕ್ಕೆ ಕರಕ್ಕೊಂಡು ಹೋಗಿ ಕಟ್ಟಿ ಹಾಕುತ್ತವು. ಅಂಜಲಿದು ಎಲ್ಲರಿಂಗೂ ಇಷ್ಟಾಪ್ಪಾಂಗಿಪ್ಪ ಗುಣ. ಹಾಂಗಾಗಿ ಅಪ್ಪ ಮಾಡಿದ ತಪ್ಪಿಂಗೆ ಮಗಳಿಂಗೆ ಚಿತ್ರಹಿಂಸೆ ಕೊಡ್ಲೆ ಮದನಂಗೆ ಮನಸ್ಸು ಬೈಂದಿಲ್ಲೆ. ಅಂಜಲಿಗೆ ಯಾವುದೇ ತೊಂದರೆ ಮಾಡಿದ್ದನೇಲ್ಲೆ. ಈ ಕೊಲೆ ಕೇಸೆಲ್ಲ ತಣ್ಣಂಗಾದ ಮತ್ತೆ ಅಂಜಲಿಯ ಬಿಡುದು, ಮತ್ತೆ ಇವ್ವಿಬ್ರು ಆರ ಕಣ್ಣಿಂಗೂ ಕಾಣದ್ದಾಂಗೆ ಪರಾರಿ ಅಪ್ಪದು ಹೇಳಿ ಪ್ಲ್ಯಾನ್ ಮಾಡಿದ್ದು.
              ಚಟಾರನೆ ಮದನನ ಕೆಪ್ಪಟೆಗೆ ಶರತ್ಚಂದ್ರ ಕೋಪಲ್ಲಿ ಪೆಟ್ಟು ಕೊಟ್ಟಪ್ಪಗ ಮದನ ವಾಸ್ತವಕ್ಕೆ ಬಂದ. ” ಅನ್ಯಾಯವಾಗಿ ಎನ್ನ ಅಕ್ಕನ ಜೀವ ಹೋತು.. ಛೀ.. ನಿಂಗಳಾಗಿಪ್ಪವಕ್ಕೆಲ್ಲ  ಹೇಂಗೆಪ್ಪ ಶಿಕ್ಷೆ ಕೊಟ್ಟರೂ ಸಣ್ಣದೇ.. ಆ ಇನ್ನೊಂದು ಸ್ಕೌಂಡ್ರಲ್ ಎಲ್ಲಿದ್ದು..??” ಹೇಳಿ ಶರತ್ಚಂದ್ರ ಮದನನ ಕಾಲರ್ ಹಿಡ್ದು ಕೇಳಿದ. ಮದನ ನವೀನನ ಅಡ್ರೆಸ್ ಹೇಳಿದ.
          ಮದನನ್ನೇ ಹಿಡ್ದ ಪೋಲೀಸ್ ಇಲಾಖೆಗೆ ನವೀನನ ಹಿಡಿವದು ಕಷ್ಟ ಆಯ್ದಿಲ್ಲೆ. ಅವರ ತಪ್ಪಿಂಗೆ ತಕ್ಕ ಶಾಸ್ತಿ ಹೇಳುವಾಂಗೆ ಇಬ್ರಿಂಗೂ ಕಠಿಣ ಶಿಕ್ಷೆ ಕಾನೂನು ಕೊಟ್ಟತ್ತು. ಅಂತೂ‌ ಅಂಜಲಿಯ ನಾಪತ್ತೆ ಪ್ರಕರಣದ ಹಿಂದೆ ಇತ್ತ ಇಷ್ಟೆಲ್ಲಾ ಸವಾಲಿನ ಶರತ್ಚಂದ್ರ ಮತ್ತೆ ಅವನ ತಂಡ ಕಷ್ಟಪಟ್ಟು ಬಗೆಹರಿಸಿ ಈ ಒಂದು ಪ್ರಕರಣಕ್ಕೆ ನ್ಯಾಯಯುತವಾದ ಅಂತ್ಯ ಸಿಕ್ಕುವಾಂಗೆ ಮಾಡಿದವು.

                     -ಶುಭಂ-

ಆನು ಬರೆದ ಮೊದಲ ಪತ್ತೇದಾರಿ ಧಾರಾವಾಹಿ ಒಪ್ಪಣ್ಣ ಬೈಲಿಲಿ ಯಶಸ್ವಿಯಾಗಿ ಪ್ರಕಟಗೊಂಡು ಇಂದಿಂಗೆ ಮುಕ್ತಾಯ ಆಯ್ದು.
     ಈ ಸಂಧರ್ಭಲ್ಲಿ ಆನು ಏಳ್ಯಡ್ಕ ಮಹೇಶಣ್ಣಂಗುದೇ, ಪ್ರತೀ ವಾರ ಆನು ಕಳಿಸಿದ ಪ್ರತಿ ಕಂತನ್ನುದೇ ಸಮಯಕ್ಕೆ ಸರಿಯಾಗಿ ಪ್ರಕಟ ಮಾಡಿ, ಪ್ರೋತ್ಸಾಹಿಸಿದ ಶರ್ಮಪ್ಪಚ್ಚಿಗುದೇ ಹಾಂಗೆಯೇ ಪ್ರತೀ ಕಂತನ್ನುದೇ ತುಂಬಾ ಕುತೂಹಲಂದ ಕಾದು, ಓದಿ ನಿಂಗಳ ಒಪ್ಪಂಗಳ ತಿಳಿಶಿ ಪ್ರೋತ್ಸಾಹ ಕೊಟ್ಟ, ಪ್ರತಿಯೊಬ್ಬ ಓದುಗರಿಂಗೂ ಎನ್ನ ತುಂಬು ಹೃದಯದ ಧನ್ಯವಾದಂಗೊ.. ಮುಂದೆ ಹೀಂಗೆಯೇ ಬರೆವಲೆ ಪ್ರಯತ್ನ ಮಾಡ್ತೆ.. ಎಲ್ಲರ ಪ್ರೋತ್ಸಾಹ ಹೀಂಗೇ ಇರಲಿ.. ಧನ್ಯವಾದಂಗೊ..
       – ರಮ್ಯ ನೆಕ್ಕರೆಕಾಡು.

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

One thought on “ಒಂದು ಪ್ರಕರಣದ ಸುತ್ತ (ಅಕೇರಿಯಣ ಕಂತು)- ೧೮ : ರಮ್ಯ ನೆಕ್ಕರೆಕಾಡು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×