- ಮಸರು ಕಡದು ಬೆಣ್ಣೆ ಕೂಡ್ತದಕ್ಕೆ ಗೌಜಿ ಮಾಡುದೆಂತಕೆ? - May 29, 2019
- ಒಪ್ಪಣ್ಣ ಪ್ರತಿಷ್ಠಾನಂದ ಇಸಿಜಿ ಯಂತ್ರ ಕೊಡುಗೆ - January 8, 2019
- ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಪ್ರದಾನ – ವರದಿ - April 29, 2015
ನಮ್ಮ ಬೈಲಿಲ್ಲಿ ಈಗ ಪದ್ಯಂಗಳ ಸುಗ್ಗಿ ಇದಾ. ನೀರ್ಕಜೆ ಅಪ್ಪಚ್ಚಿ, ಚಿಕ್ಕಮ್ಮ, ನೆಗೆಗಾರ, ಅಜ್ಜಕಾನ ಬಾವ, ಯಬೋ!! ಎಂಥ ಗೌಜಿ, ಆ ಒಪ್ಪಂಗಳೋ.. ಒಂದಕ್ಕಿಂತ ಒಂದು ಮೀರ‍್ಸುತ್ತು… ಬೈಲಿಲ್ಲಿ ಎಲ್ಲರೂ ಕವಿಗ ಆಯಿದವನ್ನೇ ಹೇಳಿ ಅನುಸಿ ಹೋತು ಕೆಪ್ಪಣ್ಣಂಗೆ!
ಆನೆಂತಕೆ ಟ್ರೈ ಮಾಡ್ಲಾಗ ಹೇಳಿ ಆತು.. ಆಲೋಚನೆ ಮಾಡುವಾಗ ಮನಸ್ಸಿಲಿ ಬಂದದು ಈ ಸಾಲುಗ.. ಸುಮ್ಮನೆ ಬೈಲಿಲ್ಲಿ ಗೀಚಿದ್ದೆ… ಹಾಂಗೆ ಒಂದರಿ ಕಣ್ಣು ಓಡಿಸಿ ಈ ಸಾಲಿಗಳ ಮೇಲೆ.
ಜೀವನ
ನಮ್ಮ ಜೀವನಲ್ಲಿ ಎಂತ ಇದ್ದು?
ಕಷ್ಟ-ಸುಖ
ಸೋಲು-ಗೆಲುವು
ನಗು-ಅಳು
ನೋವು-ನಲಿವು
ಪ್ರೇಮ-ಕಾಮಂಗಳ
ಬಿಟ್ಟರೆ!
ಗೂಡು
ಮತ್ತೆ ಮರಳಿ ಗೂಡಿಂಗೆ
ಪ್ರೀತಿ ತುಂಬಿಪ್ಪ ಬೀಡಿಂಗೆ
ದ್ವೇಷವಿಲ್ಲದ್ದ ನಾಡಿಂಗೆ
ವಾತ್ಸಲ್ಯಮಯಿ ಹೆತ್ತಬ್ಬೆಯ ಮಡಿಲಿಂಗೆ
ಕಾಮೆಂಟು (comment)
ದೇವರು ಕಾಮೆಂಟ್ ಮಾಡಿದ ಹೇಳಿ
ಎನ್ನ ದೋಸ್ತಿ ಆಯಿದ ಕಮಿಟ್ (commit)
ಓ ದೇವರೆ ಎನಗೂ ಕಾಮೆಂಟ್ ಮಾಡು
ಏಕೆಂದರೆ ಆನಿನ್ನೂ ಆಯಿದಿಲ್ಲೆ ಕಮಿಟ್! (non-committed)
(ಹೀಂಗೆ ಎಲ್ಲೊ ಓದಿದ ಪದ್ಯ.. ಜೆಂಬ್ರಲ್ಲಿ ಉಂಡುಗೊಂಡಿಪ್ಪಗ ಒಬ್ಬ ಮಾವ ಮತ್ತೊಬ್ಬ ಮಾವನತ್ರೆ cheap raybans sunglasses ಹೀಂಗೆ ಮಾತಾಡಿಗೊಂಡು ಇತ್ತವಡ. (ರಾಗಲ್ಲಿ!))
ಫಸಲು
ಹೇಂಗಿದ್ದು ಬಾವ ಈ ವರ್ಷ ಫಸಲು?
ಆನೆಂತ ಹೇಳಲಿ ಬಾರನ್ನೆ ಅಸಲು
ಬಿದ್ದು ಹೋದ ಅಡಕ್ಕೆಯ ಮಾರಿ ಆತು
ನೀರು ಹೊತ್ತು ಹೊತ್ತು ಎನ್ನ ತಲೆ ಬೋಳಾತು!
ಒಗ್ಗರಣೆ
ಅಡಿಗೆ ಮಾಡ್ಲೆ ಎನ್ನ ಅಕ್ಕ ಬಾರಿ ಜಾಣೆ..
ಅಡಿಗೆ ಮಾಡ್ಲೆ ಎನ್ನ ಅಕ್ಕ ಬಾರಿ ಜಾಣೆ
ಪಾಯಿಸಕ್ಕು ಹಾಕಿದ್ದು ಬೇನ್ಸೊಪ್ಪಿನ ಒಗ್ಗರಣೆ!
-ಪ್ರೀತಿಲಿ ಕೆಪ್ಪಣ್ಣ
ಕೆಪ್ಪಣ್ಣನ ಒಗ್ಗರಣೆ ಲಾಯ್ಕ ಆಯಿದು…
ಹರೀಶಣ್ಣ ಧನ್ಯವಾದಂಗೊ…
ಲಾಯಿಕ ಬರದ್ದಿ ಕೆಪ್ಪಣ್ಣ
ಬರವದು ಬಿಡೆಡಿ ಕಣಣ್ಣೋ
ಪ್ರೋತ್ಸಾಹಿಸಲೊಬ್ಬ ಒಪ್ಪಣ್ಣ
ಓದಲೆ ಬೇಕು ಕೇಳಣ್ಣೋ
ಶ್ರೀಶಣ್ಣೋ ಲಾಯ್ಕಾ ಬರದ್ದೆ ಪದ್ಯ
{ ಹಾಕಿದ್ದು ಬೇನ್ಸೊಪ್ಪಿನ ಒಗ್ಗರಣೆ }
ನೀರ್ಕಜೆ ಚಿಕ್ಕಮ್ಮ ನಿಂಗೊಗೆ ಅಕ್ಕ° ಆವುತ್ತವೋ ಅಂಬಗ? 😉 🙂
ಬಾವಯ್ಯ° ಅಕ್ಕ ಹೇಳಿ ಹೇಳ್ಳಕ್ಕು . ಆದರೆ ಚಿಕ್ಕಮ್ಮ ಹೇಳಿಯೇ ಆನು ದಿನೆಗೊಳ್ಳೆ ಎನಗೆ ಲಾಯ್ಕಾ ಅಪ್ಪದು..
ಒಳ್ಳೇ ಕವನಂಗೊ… ಅಂತು ಒಪ್ಪಣ್ಣನ ಬೈಲಿಲಿ ಕವನಂಗಳ ಸುರಿಮಳೆ ಹೇಳಿ ಆತು.. ಒಳ್ಳೆದು.. ಬರೆತ್ತಾ ಇರಿ.. 🙂
ಒಪ್ಪಣ್ಣನ ಬೈಲಿಲೀಗ ಪದ್ಯಂಗಳ ಸುರಿಮಳೆ
ಕೆಪ್ಪಣ್ಣಂದೆ ಶುರು ಮಾಡಿದ್ದ ಈಗ ಬರವಲೆ!
🙂
ಅಪ್ಪಚ್ಚಿ.. ನಿಂಗ ಒಪ್ಪ ಕೊಡ್ಲೆ ಹೆರಟದೇ ಪದ್ಯಲ್ಲಿ..
ಮುಗುಸಿದ್ದುದೆ ಅದರಲ್ಲಿಯೇ…
ಬರೇರಿ, ಒಪ್ಪ ಕೊಡಿ ಹೀಂಗೆ ನಮ್ಮ ಬೈಲಿಲ್ಲಿ..
ಯೇ ಕೆಪ್ಪಣ್ಣೋ…
ಪದ್ಯಂಗೊ ಪಷ್ಟಾಯಿದು!
{ ಓ ದೇವರೆ ಎನಗೂ ಕಾಮೆಂಟ್ ಮಾಡು }
ಕೆಪ್ಪಣ್ಣೋ, ದೇವರಿಂಗೆ ರಜ ಸಕಾಯಮಾಡು – ಹುಡ್ಕಲೆ. ಅಷ್ಟಪ್ಪಗ ಕಮೆಂಟು ಮಾಡುಗು ಆತೋ!!! 😉
ಹೇಳಿದಾಂಗೆ, ಅ ಮಾವಂದ್ರು ಯೇವ ರಾಗಲ್ಲಿ ಹೇಳಿದ್ದು? ಚೆ, ಅದೊಂದು ಬೇಕಾತು..
ನೆಗೆಗಾರಣ್ಣಂಗೆ ದೇವರಿಂಗೆ ಸಕಾಯ ಮಾಡಿ (ಹುಡ್ಕುಲೆ) ಅಭ್ಯಾಸ ಇದ್ದಾಯ್ಕು…. 😉
ಒಪ್ಪಕ್ಕೋ ಖಂಡಿತ ಇಕ್ಕನ್ನೆ ಇಲ್ಲದ್ರೆ ಅವ° ಹಾಂಗೆ ಹೇಳ್ತನಾ? 🙂
ಅಪ್ಪಪ್ಪು…. ಖಂಡಿತ ಇಕ್ಕು….. 😉
ಬೈಲಿಲಿ ಎಲ್ಲೋರ ಗೆದ್ದೆಲಿ ಪದ್ಯಂಗಳ ಸುಗ್ಗಿ ಹೇಳಿ ಕೆಪ್ಪಣ್ಣ ಅವನ ಗೆದ್ದೆಲಿದೆ ಪದ್ಯ ಸುಗ್ಗಿ ಮಾಡಿದಾ°.. ಎಲ್ಲವೂ ಲಾಯಕ ಆಯಿದಾತಾ.. ಕಾಮೆಂಟು ಹೇಳುವ ಪದ್ಯವ ಸಂಗ್ರಹ ಹೇಳಿ ಹಾಕುಲಾವುತ್ತಿತ್ತೋ ಅಂಬಗ ಅದು ಬೇರೆ ಮಾವ° ಹೇಳಿದ್ದದಾಗಿದ್ದರೆ !!! ಇನ್ನುದೆ ಬರಲಿ ಪದ್ಯಂಗ..
ಬಟ್ಯಂಗೆ ತಲೆಬೆಶಿ ಆಯಿದು ಅಕ್ಕಾ. ಇನ್ನು ಅದರ ಪದ ಕೇಳುಲೆ ಆರು ಬಾರವು ಹೇಳಿ ಅಡ..
ವಿದ್ಯಕ್ಕಾ° ಕಾಮೆಂಟು ಸಂಗ್ರಹ ಅಲ್ಲ. ಎನ್ನದೇ ಬೇಕಾರೆ ಒಪ್ಪಣ್ಣನ ಕೇಳಿ! ’ಫಸಲು’ ಸಂಗ್ರಹ
{ಒಗ್ಗರಣೆ} ನೀರ್ಕಜೆ ಚಿಕ್ಕಮ್ಮ ಹಾಕಿದ್ದೋ ಹೇಂಗೆ!!!
ಪದ್ಯಂಗೊ ಮಾಂತ್ರ ಭಾರಿ ಲಾಯಿಕ ಅಯಿದು! ಎರಡು ಮಾತಿದ್ದ ಅಜಕ್ಕಾನ ಭಾವ ? ಆರು ಒಗ್ಗರಣೆ ಹಾಕಿರೂ ಹಾಕದ್ರೂ….:)
ಸತ್ಯ ಹೇಳೆಕ್ಕ ಬಾವ ಎನಗೆ ಗೊಂತಿಲ್ಲೆ..!!
{ಜೆಂಬ್ರಲ್ಲಿ ಉಂಡುಗೊಂಡಿಪ್ಪಗ ಒಬ್ಬ ಮಾವ ಮತ್ತೊಬ್ಬ ಮಾವನತ್ರೆ ಹೀಂಗೆ ಮಾತಾಡಿಗೊಂಡು ಇತ್ತವಡ} ಅದಾ ಕೆಪ್ಪಣ್ಣ ಭಾವ ದೂರು ಹಾಕಿದ ಹೆಸರಿಲ್ಲದ್ದ ಮಾವಂಗೆ!
ದೇವರು ಬೇಗ ಕಾಮೆಂಟು ಮಾಡಲಿ ಹೇಳಿ ಆಶಿಸುತ್ತೆ! ಶುಭವಾಗಲಿ!
ಚಿಕ್ಕಮ್ಮಾ.. ನೀನು ಹೇಳುದೂ ಒಂದು ರೀತಿಲಿ ಸರಿ ಹೇಳಿ ಕಾಣ್ತು.. ಎನಗೆ.. ಜೆಂಬ್ರದ ಪದ್ಯ ’ಫಸಲು’ ಚಿಕ್ಕಮ್ಮ ಕಾಮೆಂಟು ಅಲ್ಲ ಅತೋ.. ಅದು ಎನ್ನದೇ ಸೃಷ್ಟಿ..
ತೊಂದರೆ ಇಲ್ಲೆಪ್ಪಾ…. ಬೇರೆ ಬೇರೆ ಓದಿಗೊ ಕೆಪ್ಪಣ್ಣೊ, {ಅದು ಎನ್ನದೇ ಸೃಷ್ಟಿ.}ಅಂತೂ ದೇವರು ಕಾಮೆಂಟು ಮಾಡ್ತವಡವೋ ಬೇಗ ನಿನ್ನ ಸ್ವಂತ ಪದ್ಯ ಓದಿಕ್ಕಿ…?
{ನಮ್ಮ ಜೀವನಲ್ಲಿ ಎಂತ ಇದ್ದು?
ಕಷ್ಟ-ಸುಖ
ಸೋಲು-ಗೆಲುವು
ನಗು-ಅಳು
ನೋವು-ನಲಿವು
ಪ್ರೇಮ-ಕಾಮಂಗಳ
ಬಿಟ್ಟರೆ!} ಅದುವೇ ಜೀವನ!