- ಉಪ್ಪುಸೊಳೆಯ ಸುತ್ತ - May 1, 2020
- ಮಂಗಳೂರು ಹವ್ಯಕ ಸಭೆಲಿ “ವಿಷು ಸಂಭ್ರಮದ ಸಂಗೀತ ಸೌರಭ” - May 1, 2017
- ಶಪಥಪರ್ವ – ಕ್ಯಾಮರಲ್ಲಿ - October 9, 2016
ಮಾನವರಿಂಗೆ ಉಪಯುಕ್ತವಾಗಿಪ್ಪ, ಮದ್ದಿನ ಗುಣ ಇಪ್ಪಂತಹ ಹಲವಾರು ಗಿಡಂಗೊ ವಿನಾಶದ ಹಂತಕ್ಕೆ ತಲಪುತ್ತಾ ಇಪ್ಪದು ಬೇಜಾರಿನ ವಿಷಯ. ಹಾಂಗಿಪ್ಪ ಗಿಡಂಗಳ ಪರಿಚಯವುದೆ ಈಗಾಣ ಜೆನಂಗವಕ್ಕೆ ಇಲ್ಲೆ. ನಿಂಗಳ ಮನೆಯ ಹಿತ್ತಿಲಿಲ್ಲೇ ಹೀಂಗಿಪ್ಪ ಉಪಯುಕ್ತ ಗಿಡಂಗಳ ಬೆಳಶಿ, ಬಳಸಿ ಆರೋಗ್ಯವ ಹೆಚ್ಚಿಸಿಕೊಳ್ಳಿ. ಆರೋಗ್ಯ ನಿಂಗಳ ಹತ್ರೇ ಇಪ್ಪ ಹಾಂಗೆ ನೋಡಿಕೊಳ್ಳಿ ಹೇಳಿ ಡಾ.ಪ್ರಕಾಶ ಕೃಷ್ಣ ತೊಂಡಮೂಲೆ ಹೇಳಿದವು. ಅವು ನಂತೂರು ಭಾರತೀ ಕಾಲೇಜಿನ ಶಂಕರಶ್ರೀ ಸಭಾಂಗಣಲ್ಲಿ ಜುಲೈ ೧೯ರಂದು ಸಂಜೆ ಮಂಗಳೂರು ಹವ್ಯಕ ಸಭೆ ಏರ್ಪಡಿಸಿದ ಕಾರ್ಯಕ್ರಮಲ್ಲಿ“ಹಿತ್ತಲ ಗಿಡ ಬೆಳೆಸಿ-ಆರೋಗ್ಯ ಸಂರಕ್ಷಿಸಿ” ಹೇಳ್ತ ವಿಷಯಲ್ಲಿ ಉಪನ್ಯಾಸ ಕೊಟ್ಟವು. ಬೈಕಂಪಾಡಿಯ “ಶಾಸ್ತ್ರೀಸ್ ರೆಮಿಡೀಸ್” ನ ಶ್ರೀಯುತ ಸತೀಶ್, ಹಲವಾರು ಮದ್ದಿನಗಿಡಂಗಳ ತಂದು ಸಭೆಲಿ ಪ್ರದರ್ಶನದ ಏರ್ಪಾಟು ಮಾಡಿತ್ತಿದ್ದವು. ಅನೇಕ ಗೊಂತಿಲ್ಲದ್ದ ಮದ್ದಿನ ಗಿಡಂಗಳ ಎಡೆಲಿ ನವಗೆ ಗೊಂತಿಪ್ಪ ಕೆಲವು ಮದ್ದಿನ ಸೆಸಿಗಳ/ಸೊಪ್ಪುಗಳ ಕಂಡು ಕೊಶಿಯಾತು. ಈ ಪ್ರಾತ್ಯಕ್ಷಿಕೆಯ ಒಟ್ಟಿಂಗೆ ಡಾಕ್ಟ್ರು ಮದ್ದುಗಳ ಪರಿಚಯ ಮಾಡಿದ್ದದು ವಿಶೇಷ ಆತು.
ಸಭೆಯ ಮದಲು ಭಾರತೀ ಕಾಲೇಜಿನ ಪರಿಸರಲ್ಲಿ ಹವ್ಯಕ ಸಭಾದವು ಉಪಯುಕ್ತ ಗಿಡಂಗಳ ನೆಟ್ಟು “ವನಮಹೋತ್ಸವ”ವ ಆಚರಿಸಿದವು. ಮಂಗಳೂರು ಹವ್ಯಕ ಸಭಾಧ್ಯಕ್ಷ ಶ್ರೀ ಎಂ.ಟಿ.ಭಟ್ ಅಧ್ಯಕ ಮಾತಾಡಿ ಬಹಳ ಪುರಾತನ ಕಾಲಂದಲೇ ಪ್ರಚಲಿತವಾಗಿಪ್ಪ ಆಯುರ್ವೇದ ಹೇಳುವ ವೈದ್ಯಕೀಯ ಕ್ರಮ ಪ್ರಕೃತಿಗೆ ಸಂಬಂಧ ಪಟ್ಟಿದು, ಹಾಂಗಾಗಿ ಜೆನಂಗೊ ಅದಕ್ಕೆ ಒಳ್ಳೆ ಪ್ರಾಮುಖ್ಯತೆ ಕೊಟ್ಟಿದವು. ಪ್ರತ್ಯಕ್ಷ ಗಿಡಮೂಲಿಕೆಗಳ ತೋರುಸಿ ಪರಿಚಯಿಸಿ ಎಲ್ಲೋರಿಂಗೂ ಸರಿಯಾಗಿ ಮನದಟ್ಟಾವ್ತ ಹಾಂಗೆ ಡಾ.ಪ್ರಕಾಶ ಕೃಷ್ಣ ಅವು ವಿವರುಸಿದ್ದದಕ್ಕೆ ಅವರ ಅವು ಅಭಿನಂದಿಸಿದವು. ಶ್ರೀ ಉದಯಶಂಕರ ಕಾರ್ಯಕ್ರಮ ನಿರ್ವಹಣೆ ಮಾಡಿದವು. ಡಾ.ನಾರಾಯಣ ಭಟ್ ಮರುವಳ ಅತಿಥಿಗಳ ಪರಿಚಯ ಮಾಡಿದವು.
ಡಾ.ಪ್ರಕಾಶ ಕೃಷ್ಣ ಅವರ ಉಪನ್ಯಾಸದ ಕೆಲವು ವಿಚಾರಂಗಳ ನಮ್ಮ ಬೈಲಿಲ್ಲಿ ಹೇಳಿಕ್ಕುವನೋ ಹೇಳಿ ಕಂಡತ್ತು. ನಮ್ಮ ಬೈಲಿಲ್ಲಿ ಮದ್ದಿನ ಗಿಡಂಗಳ ಬಗ್ಗೆಯೂ ಆಸಕ್ತಿ ಹುಟ್ಟಿ ಅದುದೆ ಬೆಳೆಯಲಿ ಅಲ್ದೊ ?
ಮಜ್ಜಿಗೆ ಸೊಪ್ಪು ಎಲ್ಲೋರಿಂಗು ಗೊಂತಿಪ್ಪ ಸೊಪ್ಪು, ಅದರ ಪರಿಮಳ ಸೊಳ್ಳೆಗವಕ್ಕೆ ಆವ್ತಿಲ್ಲೆ ಆಡ. ಹಾಂಗೆ ಸೊಳ್ಳೆಗಳ ಓಡುಸಲೆ ಮಜ್ಜಿಗೆ ಸಪ್ಪಿನ ನಮ್ಮ ಮನೆ ಸುತ್ತಮುತ್ತ ಬೆಳಶಿರೆ ಸಾಕು. ಇನ್ನು, ತುಳಸಿಯ ವಿಚಾರ ಎಲ್ಲೋರಿಂಗು ಗೊಂತಿದ್ದು. ತೊಳಸಿ ಇಲ್ಲದ್ದ ನಮ್ಮವರ ಮನೆಯೇ ಇಲ್ಲೆ. ತುಳಸಿಯ ಗುಣಕ್ಕೆ ಬೇರೆದರ ತುಲನೆ ಮಾಡ್ಳೆ ಎಡಿಯಲೇ ಎಡಿಯ ಆಡ. ನವಗೆಲ್ಲ ಸುಲಾಭಲ್ಲಿ ಬೆಳಶಲೆ ಎಡಿಗಪ್ಪ ಹಾಂಗಿಪ್ಪ “ಅಮೃತ ಬಳಿ” ನಿಜವಾಗ್ಲೂ ಅಮೃತಕ್ಕೆ ಸಮಾನವೇ ಆಡ. ಶೀತ ನೆಗಡಿಗೆ, ರೋಗನಿರೋಧಕ ಶಕ್ತಿ ಬೆಳಸಲೆ ಎಲ್ಲದಕ್ಕುದೆ ಆವ್ತು. ಹೆಚ್ಚಿನ ಎಲ್ಲ ಆಯುರ್ವೇದ ಔಷಧಿಲಿಯುದೆ ಅದು ಇದ್ದಾಡ. “ಸಸ್ಯಾಹಾರಿ”ಗವಕ್ಕೆ ಕೆಟ್ಟ ಕೊಲೆಸ್ಟರಾಲ್ ರಜ್ಜ ಜಾಸ್ತಿ ಆಡ, ಏಕೆ ಹೇಳಿರೆ ನಾವು ಜಾಸ್ತಿ ಕಾರ್ಬೊಹೈಡ್ರೇಟು ತಿಂಬವು. ಹಾಂಗಾಗಿ ಕೊಲೆಸ್ಟರಾಲ್ ಜಾಸ್ತಿ. ಇದರ ಕಡಮ್ಮೆ ಮಾಡ್ಳೆ ಅಮೃತ ಬಳ್ಳಿಯ ಸೊಪ್ಪುದೆ ಒಟ್ಟಿಂಗೆ, ಒಂದು ಬೆಳ್ಳುಳ್ಳಿಯುದೆ, ದಿನಾಗಿಲು ಜ್ಯೂಸ್ ಮಾಡಿ ಕುಡುದರೆ ಆತು. ಮೈಲಿ ಕೊಬ್ಬು ಜಾಸ್ತಿ ಅಪ್ಪಲಿಲ್ಲೆ !!
ಹರಿದ್ರ (ಅರಸಿನ) ಒಳ್ಳೆಯ ಏಂಟಿ ಆಕ್ಸಿಡೆಂಟು. ಚೇಳು-ಗೀಳು ಕಚ್ಚಿದ ಭಾಗಕ್ಕೆ ಇದರ ಅರದು ಹಚ್ಚುತ್ತದು ನೆಂಪಿದ್ದಾನೆ. ಭೃಂಗರಾಜಲ್ಲಿ ಕಬ್ಬಿಣದಂಶ ಜಾಸ್ತಿ ಇದ್ದು, ಕಪ್ಪಿನ ನೀಳ ಕೇಶಕ್ಕೆ ಬೇಕಾಗಿ ಇದರ ತೈಲವ ಉಪಯೋಗಿಸುತ್ತದು ಎಲ್ಲೋರಿಂಗು ಗೊಂತಿದ್ದು. ಕೆಂಪು ಹೂಗಿನ ಅಶೋಕ ಮರದ ತೊಗಟೆ ಮತ್ತದರ ಹೂಗು ಮುಟ್ಟಿನ ತೊಂದರೆಗೆ ಒಳ್ಳೆ ಮದ್ದಾಡ. ಭದ್ರಮುಷ್ಟಿಯ ಗೆಂಡೆ, ಪಚನ ಕ್ರಿಯೆಗೆ ಭಾರೀ ಒಳ್ಳೆದಾಡ. ವಾಂತಿ/ಬೇಧಿಗೆ ಉತ್ತಮ ಔಷಧಿ. ಇನ್ನು “ಉಶಿರ” ಹೇಳಿರೆ ಲಾವಂಚ. ಇದರ ಬೇರಿನ ಬೆಶಿನೀರಿಂಗೆ ಹಾಕಿ ಕುಡಿಯಲೆ ಲಾಯಕಿರ್ತು. ನನ್ನಾರಿ ಬೇರು ರಕ್ತ ಶುದ್ದಿಗೆ ಒಳ್ಳೆದು. ಒಳ್ಳೆ ಪರಿಮಳ. ಇದನ್ನೂ ಕುಡಿವ ಬೆಶಿನೀರಿಂಗೆ ಉಪಯೋಗಿಸಲಕ್ಕು. ನಮ್ಮ ವಿಷು ವಿಶೇಷ ಕಾರ್ಯಕ್ರಮ ದಿನ ನಾವೆಲ್ಲೋರು ಹೀಂಗಿಪ್ಪ ನೀರು ಕುಡುದ್ದು ನೆಂಪಿಕ್ಕದ. ಉರಿಮೂತ್ರಕ್ಕೆ, ಸೆಕೆಬೊಕ್ಕಗೆ ಇದರ ಕಶಾಯ ಒಳ್ಳೆದಾಡ. ಬೆವರು ವಾಸನೆ ಕಡಮ್ಮೆ ಮಾಡ್ಳೆ “ದಿ ಬೆಸ್ಟ್” ಆಡ.
“ಬ್ರಾಹ್ಮೀ”“ಒಂದೆಲಗ ಉರಗೆ ತಿಮಿರೆ” ನವಗೆಲ್ಲ ಗೊಂತಿದ್ದು. ಬೌದ್ಧಿಕ ಶಕ್ತಿ ಬೆಳವಣಿಗೆಗೆ ಭಾರೀ ಒಳ್ಳೆದು. ಉದೀಯಪ್ಪಗ ಖಾಲಿ ಹೊಟ್ಟಗೆ ಅಂಬಗಳೇ ತಯಾರು ಮಾಡಿದ ಉರಗೆ ತಂಬುಳಿ ಒಳ್ಳೆ ಪರಿಣಾಮ ಬೀರುಗು. ಒಂದೆಲಗಂಗೆ ಸರೀ ವಿರುದ್ಧ ಪರಿಣಾಮ ಕೊಡ್ತ ಇನ್ನೊಂದು ಸಂಗತಿ ಇದ್ದು. ಅದು ಮನೆಲಿ ಮೇಲಾರಕ್ಕೆ ಉಪಯೋಗಿಸುವ ತೊಂಡೆಕಾಯಿ !! ತೊಂಡೆಕಾಯಿ ಮೇಣ ಮಂದ ಬುದ್ಧಿಗೆ ಕಾರಣ ಅಕ್ಕಾಡ. ಜಾಗ್ರತೆ ಮಿನಿಯ. ಪರೀಕ್ಷೆ ಸಮೆಯಲ್ಲಿ ಮಕ್ಕೊಗೆ ತೊಂಡೆಕಾಯಿ ಬೆಂದಿ ಮಾಡಿಕೊಟ್ಟರೆ ಅವಕ್ಕೆ ಪರೀಕ್ಷೆಲಿ ಕಡಮ್ಮೆ ಮಾರ್ಕು ಸಿಕ್ಕುಗು ಹೇಳಿ ಸಂಶೋಧನೆ ಹೇಳುತ್ತು !! ತೊಂಡೆಕಾಯಿಯ ಶಕ್ತಿ ಎಷ್ಟು ಹೇಳೀ ಕೇಳಿರೆ, ಒಂದು ದಿನ ತೊಂಡೆಕಾಯಿ ತಿಂದರೆ, ಅದರೆ ಪರಿಣಾಮವ ಸರಿಮಾಡೆಕಾರೆ ಒಂದು ವಾರ ಕಾಲ “ಉರಗೆ” ತಿನ್ನೆಕಾವ್ತಾಡ ! “ಶತಾವರಿ” ಬಾಣಂತಿಗವಕ್ಕೆ ಹಾಲು ಜಾಸ್ತಿಯಪ್ಪ ಹಾಂಗೆ ಮಾಡ್ಳೆ ಒಳ್ಳೆದಾಡ. ರಕ್ತದೊತ್ತಡ ಇಪ್ಪವು ಇದರ ಕಷಾಯ ಕುಡುದರೆ ಅದು ಅವರ ರಕ್ತನಾಳವ ಅಗಲುತ್ತ ಹಾಂಗೆ ಮಾಡಿ ಒತ್ತಡ ಕಡಮ್ಮೆ ಮಾಡುಗಾಡ. ಇನ್ನು ನೆಲ್ಲಿಕಾಯಿ, “ಅಮಲ” ಆಯಸ್ಸು ವೃದ್ಧಿ ಆವ್ತ ಹಾಂಗೆ ಮಾಡುಗಾಡ. ಭೃಂಗರಾಜ+ಎಳ್ಳು+ನೆಲ್ಲಿ ಕಾಂಬಿನೇಶನಿಲ್ಲಿ ತಲೆಕೂದಲು ಸಹಜವಾಗಿ ಕಪ್ಪಾಗಿಪ್ಪ ಹಾಂಗೆ ಮಾಡುವದು ಕೆಲವು ಜೆನಕ್ಕೆ ಗೊಂತಿಕ್ಕು. ನೆಲ್ಲಿಕಾಯಿಯ ಲೇಹ ಚ್ಯವನ ಪ್ರಾಶ ಆರಿಂಗೆ ಗೊಂತಿಲ್ಲೆ. ಇದಾ ಕೆಲವೊಂದರಿ ನೆಲ್ಲಿಕ್ಕಾಯಿ ಊರಿಲ್ಲಿ ಬೇಕಾದಷ್ಟು ಸಿಕ್ಕಿದ್ದಿಲ್ಲೆ ಹೇಳಿ ಆದರೆ, ಪೈನ್ ಆಪುಲಿನ (ಅನನಾಸು) ಚ್ಯವನಪ್ರಾಶ ಮಾಡಿಕೊಡ್ತವಾಡ ಜಾಗ್ರತೆ ಆತೋ !
ಇನ್ನು “ಕುಮಾರಿ” ಅಥವಾ ಲೋಳೆಸರವ ಗೊಂತಿಲ್ಲದ್ದ ಕುಮಾರಿಗೊ ಆರು ? ಎಲ್ಲಾ ಸೌಂದರ್ಯವರ್ಧಕ ಸಾಮಗ್ರಿಲಿಯುದೆ ಇದು ಇದ್ದಾಡ. ಲೋಳೆಸರದ ಪ್ರಯೋಜನಂಗೊ ಹೇಳಿದಷ್ಟು ಮುಗಿಯ ಮಿನಿಯ. ಶುಂಠಿ, ಪಚನಕ್ರಿಯೆಗೆ, ಸಂಧಿವಾತ ಕಡಮ್ಮೆ ಅಪ್ಪಲೆ ಒಳ್ಳೆದು. ಪುನರ್ನವ ಹೇಳಿ ಒಂದು ಸೆಸಿ ಇದ್ದು, ಅದು ಬೇಸಗೆಲಿ ಒಣಗಿ ಕಾಂಬಲೇ ಸಿಕ್ಕ, ಮಳೆಕಾಲಲ್ಲಿ ಚಿಗುರಿ ನಳನಳಿಸುಗಾಡ. ಇದು ರಕ್ತಹೀನತೆಗೆ, ರಕ್ತ ಪರಿಚಲನೆಗೆ ಭಾರೀ ಒಳ್ಳೆದಾಡ. ಸಾಂಬ್ರಾಣಿ ಎಸರು ಮೂಗು ಕಟ್ಟುತ್ತದಕ್ಕೆ ನಾಸಲ್ ಡ್ರಾಪ್ಸ್ ನ ಹಾಂಗೆ ಉಪಯೋಗ ಆವ್ತು. ಶಂಖಪುಷ್ಪ ಉನ್ಮಾದವ ಕಡಮ್ಮೆ ಮಾಡ್ಳೆ ಉಪಯೋಗ ಆವ್ತು. “ಎಸಿಡಿಟಿ” ಆಗಿ ಹೊಟ್ಟೆಬೇನೆಯಾದವಕ್ಕೆ ಪುನರ್ಪುಳಿ ಹುಳಿ ಭಾರೀ ಲಾಯಕ್ ಆಡ. ಹುಳಿಗೆ ಹುಳಿಯೇ ಮದ್ದೋ ಹೇಳಿ ಒಂದರಿ ಆಶ್ಚರ್ಯ ಅಕ್ಕು ನಿಂಗೊಗೆ. ಎಲ್ಲಾ ಹುಳಿಂದಲುದೆ “ಎಸಿಡಿಟಿ” ಜಾಸ್ತಿ ಆವ್ತಿಲ್ಲೆ ಹೇಳಿ ಡಾಕ್ಟ್ರು ಹೇಳಿದವು. “ತಮಕ್ಷೀರ” ಹೇಳಿರೆ ಕೂವೆ (ಏರೋ ರೂಟು), ಸಣ್ಣ ಬಾಬೆಗವಕ್ಕೆ ಮಣ್ಣಿ ಮಾಡಿ ಕೊಟ್ಟೊಂಡಿದ್ದಿದು ಆರಿಂಗೆ ನೆಂಪಿಲ್ಲೆ. ಈಗ ಮರಗೆಣಂಗಿನ ಹೊಡಿಯನ್ನುದೆ “ಏರೋ ರೂಟು” ಹೇಳಿ ಕೊಟ್ಟು ಜೆನಂಗಳ ಮಂಗ ಮಾಡ್ತವು ವ್ಯಾಪಾರಿಗೊ. “ನೆಕ್ಕಿ” ಒಳ್ಳೆ ಬೇನೆನಿವಾರಕ ಮದ್ದಾಡ. ಇದು ನರದೋಷಕ್ಕೆ, ನರಂದ ಬತ್ತ ಬೇನಗೆ ಒಳ್ಳೆದಾಡ. ನೇರಳೆ, ಮಧುಮೇಹಕ್ಕೆ ಉತ್ತಮ ಔಷಧಿಯಾಡ.
ಹೀಂಗೆ ತುಂಬಾ ಔಷಧಿಗಿಡಂಗಳ ಡಾ.ಪ್ರಕಾಶ ಕೃಷ್ಣ ಅವು ಪರಿಚಯ ಮಾಡಿಕೊಟ್ಟವು. ಡಾಕ್ಟ್ರು ಹೇಳಿದ ಒಂದೊಂದೇ ಮದ್ದಿನಗಿಡದ ವಿಶೇಷವ ಆನು ಅರ್ಥ ಮಾಡಿಯೊಂಡ ಹಾಂಗೆ ಹೇಳಿದ್ದೆ. ಇದ, ಗಿಡದ ಪರಿಚಯ ಸರೀ ಇಲ್ಲದ್ದೆ ಮದ್ದಿನ ಪ್ರಯೋಗ ಮಾಡಿಕ್ಕೆಡಿ. ಗಿಡಂಗಳ ಸರಿಯಾಗಿ ಗುರ್ತ ಇದ್ದವರತ್ರೆ ಕೇಳ್ಯೊಳಿ. ಇಲ್ಲದ್ರೆ ಆಯುರ್ವೇದದ ವೈದ್ಯರನ್ನೆ ಭೇಟಿಯಾಗಿ.
ಡಾಕ್ಟ್ರುಗಳ ಕೈಲಿ ಆದ ತಪ್ಪುಗಳ (ಹೆಚ್ಚಿನ ಕಡೆಯೂ ತಪ್ಪು ಆಗಿರ್ತಿಲ್ಲೆ) ವಾರ್ತೆಯ ಪತ್ರಿಕೆಲಿ ಹಾಕುವಗ ಮಾಂತ್ರ, “ವೈದ್ಯೋ ನಾರಾಯಣ ಹರಿ:” ಹೇಳುವ ಮಾತಿನ ವ್ಯಂಗ್ಯವಾಗಿ ಅದರ ಸರಿಯಾದ ಅರ್ಥ ಗೊಂತಿಲ್ಲದ್ದೆ ಪತ್ರಿಕೆಯವು ಉಪಯೋಗಿಸುತ್ತವು ಹೇಳ್ತದು ಬೇಜಾರಿನ ವಿಷಯ. ಸರಿಯಾಗಿ ನೋಡಿರೆ ಆ ಮಾತಿನ ಅರ್ಥ “ದೇವರೇ ವೈದ್ಯ” ಹೇಳ್ತದು. ದೇವರ ಸಹಾಯ ಇಲ್ಲದ್ರೆ ಆರನ್ನೂ ಬದುಕುಸಲೆ ಎಡಿಯ. ವೈದ್ಯನೇ ದೇವರು ಅಪ್ಪಲೆ ಸಾಧ್ಯವೇ ಇಲ್ಲೆ.
ನಕಲಿ ಔಷಧಿಗಳ ಬಗ್ಗೆಯುದೆ ತುಂಬಾ ಜಾಗ್ರತೆಲಿ ಇರೆಕು. ಪೇಪರಿಲ್ಲಿ ಎಂತೆಂತದೋ ಜಾಹೀರಾತು ನೋಡಿ, ಅದಕ್ಕೆ ಮಾರು ಹೋಗೆಡಿ. ರೋಗ ಶಮನಕ್ಕೆ ಏವ ಆಸ್ಪತ್ರೆಗೆ ನಿಂಗೊ ಹೋವ್ತಿ ಹೇಳುವದು ಮುಖ್ಯ ಅಲ್ಲ, ಡಾಕ್ಟ್ರು ಆರು ಹೇಳುವದು ಮುಖ್ಯ ಆವ್ತು.
ಬೇಗನೆ ಕೆಡುವ ಆಹಾರ ನಮ್ಮ ದೇಹಕ್ಕೆ ಒಳ್ಳೆದು, ಏಕೆ ಕೇಳಿರೆ, ಕೆಡದ್ದ ಆಹಾರಲ್ಲಿ “ಪ್ರಿಸರ್ವೇಟಿವ್” ಖಂಡಿತಾ ಇಕ್ಕು. ಅದು ಆರೋಗ್ಯಕ್ಕೆ ಒಳ್ಳೆದಲ್ಲ. ಹೀಂಗಿಪ್ಪ ಹಲವಾರು ವಿಚಾರಂಗಳ ಡಾಕ್ಟ್ರು ಸಭಿಕರಿಂಗೆ ತಿಳುಸಿದವು.
ನಮ್ಮಲ್ಲೇ ಸಿಕ್ಕುವ ಮದ್ದುಗಳ ಬಿಟ್ಟು ಏವದೇವದೋ ಭಾರೀ ಕ್ರಯದ ಮಾತ್ರೆಗಳ ಎಂತಕೆ ನಾವು ತಿನ್ನೆಕು ? ಹೀಂಗೆ ನಮ್ಮ ಹಿತ್ತಿಲು ಕಾಡುಗಳಲ್ಲೇ ಸಿಕ್ಕುವ ಮದ್ದುಗಳ ಉಪಯೋಗಿಸಿ ಆರೋಗ್ಯಲ್ಲಿಪ್ಪೊ ಎಂಥ ಹೇಳ್ತಿ ? ಹೀಂಗಿಪ್ಪ ಗಿಡಂಗಳ ಪರಿಚಯ ಮಾಡ್ಯೊಂಡು, ಎಡಿಗಾದರೆ ನಮ್ಮ ಹಿತ್ತಿಲಲ್ಲೇ ಬೆಳಶಿ ಬಳಸುವೊ ಅಲ್ಲದೊ ?
ಹರೇ ರಾಮ. ಶುದ್ಧಿ ಓದಿ ಕೊಶಿಯಾತು
ನಮ್ಮ ಹಿತ್ತಿಲಿಲ್ಲಿ ಇಪ್ಪ ಸೆಸಿಗಳ ಪರಿಚಯ ನವಗೆ ಇರ್ತಿಲ್ಲೆ, ಅದರ ಮದ್ದಿನ ಗುಣಂಗಳೂ ಗೊಂತಿರ್ತಿಲ್ಲೆ. ಸಣ್ಣ ಸಣ್ಣ ಅಸೌಖ್ಯ೦ಗೊಕ್ಕೆ ಕೂಡಾ ನಾವು ಪೇಟೆ ಮದ್ದನ್ನೇ ಆಶ್ರಯಿಸುತ್ತು.
ಮಂಗಳೂರು ಹವ್ಯಕ ಸಭಾ ಒಂದು ಒಳ್ಳೆಯ ಕಾರ್ಯಕ್ರಮ ಮಾಡಿ ಜೆನಂಗಳಲ್ಲಿ ಇದರ ಬಗ್ಗೆ ಆಸಕ್ತಿ ಮೂಡುತ್ತ ಹಾಂಗೆ ಮಾಡಿದ್ದು ಒಳ್ಳೆದಾತು. ಬೊಳುಂಬು ಮಾವನ ಈ ಲೇಖನಲ್ಲಿ ಫೊಟೊ ಸಮೇತ ಅದರ ಪರಿಚಯ ಮಾಡಿ ಕೊಟ್ಟದರಿಂದಾಗಿ ನವಗೆ ಒಳ್ಳೆ ಮಾಹಿತಿ ಸಿಕ್ಕಿತ್ತು .
ಧನ್ಯವಾದಂಗೊ.
ಒಳ್ಳೆ ಕಾರ್ಯಕ್ರಮ
ಉಪಯುಕ್ತ ಕಾರ್ಯಕ್ರಮ. ಮಂಗಳೂರು ಹವ್ಯಕ ಸಭೆಯ ಕಾರ್ಯಕರ್ತರಿಂಗೆ ಅಭಿನಂದನೆಗೊ.
ತುಂಬ ಚೆಂದಕ್ಕೆ ವರದಿ ಮಾಡಿದ್ದೀರಿ ಗೋಪಾಲಣ್ಣ, ಈ ವಿಷಯದ ಬಗೆಗೆ ನಿಂಗೊಗೆ ಇಪ್ಪ ಆಸಕ್ತಿ ಮತ್ತೆ ಕಳಕಳಿಯ ದ್ಯೋತಕ ಇದು.
ಮರುವಳ ನಾರಾಯಣ ಭಟ್