Oppanna.com

ಹವ್ಯಕ ಸಭೆಲಿ ಸಂಮಾನ-ಬಯಲಾಟ

ಬರದೋರು :   ಬೊಳುಂಬು ಮಾವ°    on   25/09/2012    14 ಒಪ್ಪಂಗೊ

ಬೊಳುಂಬು ಮಾವ°

ಯಕ್ಷಗಾನ ಹೇಳಿರೆ ಒಂದು ದೊಡ್ಡ ಸಮುದ್ರ ಇದ್ದ ಹಾಂಗೆ, ಅದರಲ್ಲಿ ಆನು ಒಂದು ಬಿಂದು ಮಾಂತ್ರ ಹೇಳಿ ಸವಿನಯಲ್ಲಿ ಹೇಳಿದವು ಖ್ಯಾತ ಯಕ್ಷಗಾನ ಭಾಗವತರಾದ ತೆಂಕಬೈಲು ಶ್ರೀಯುತ ತಿರುಮಲೇಶ್ವರ ಶಾಸ್ತ್ರಿಗೊ. ಮನ್ನೆ ಆದಿತ್ಯವಾರ ಕೊಡೆಯಾಲದ ಪುರಭವನಲ್ಲಿ ಮಂಗಳೂರು ಹವ್ಯಕ ಸಭೆ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮಲ್ಲಿ ಅವು ಮಾತಾಡಿದವು. ಒಂದು ರಂಗಲ್ಲಿ ಪರಿಪೂರ್ಣತೆ ಹೇಳಿ ಆರಿಂಗೂ ಸಾಧಿಸಲೆ ಸಾಧ್ಯ ಇಲ್ಲೆ. ಕಲಾವಿದ, ಸನ್ಮಾನವ ಹುಡ್ಕೆಂಡು ಹೋಪಲಾಗ, ಸನ್ಮಾನಂಗಳೇ ಅವರ ಹುಡುಕ್ಕಿಕೊಂಡು ಬಪ್ಪ ಹಾಂಗಾಯೆಕು. ಅಂಬಗಳೇ ಅದಕ್ಕೆ ಮರ್ಯಾದಿ. ಈಗಾಣ ಕಾಲಲ್ಲಿ ರಾಜಕೀಯ ಪ್ರಶಸ್ತಿ ಹೇಳ್ತ ಒಂದು ಪ್ರಶಸ್ತಿ ಇದ್ದು, ಅದು ರಾಜ್ಯ ಪ್ರಶಸ್ತಿ ಅಲ್ಲ, ನಮ್ಮ ನಮ್ಮನ್ನೇ ಹೊಗಳೆಂಡು, ಸಿಕ್ಕುವ ಹಾಂಗಿಪ್ಪ ರಾಜಕೀಯ ಪ್ರಶಸ್ತಿ ಅದು, ಅದು ಎಷ್ಟು ಮಾಂತ್ರಕ್ಕೂ ಒಳ್ಳೆದಲ್ಲ. ಮಂಗಳೂರು ಹವ್ಯಕ ಸಭೆ ಪ್ರತಿವರ್ಷವುದೆ ಉತ್ತಮ ರೀತಿಲಿ ಸನ್ಮಾನ ಕಾರ್ಯಕ್ರಮವ ಮಾಡ್ತಾ ಇಪ್ಪದು ಸಂತೋಷ. ಈ ಸಭೆಲಿ ಇನ್ನುದೆ ಹಲವು ಜೆನ ಕಲಾವಿದರು ಸನ್ಮಾನಗೊಳ್ಳಲಿ ಹೇಳಿ ಶಾಸ್ತ್ರಿಗೊ ಸನ್ಮಾನಕ್ಕೆ ಉತ್ತರುಸೆಂಡು ಹೇಳಿದವು. ಕರ್ನಾಟಕ ಬ್ಯಾಂಕಿನ ಮಹಾಪ್ರಬಂಧಕ, ಶ್ರೀಯುತ ಎಂ ಎಸ್. ಮಹಾಬಲೇಶ್ವರ, ಕಾರ್ಯಕ್ರಮಲ್ಲಿ ಮುಖ್ಯ ಅತಿಥಿಗೊ ಆಗಿ ಭಾಗವಹಿಸಿದವು.

ಸಭೆಯ ಸುರುವಿಲ್ಲಿ ಕುಮಾರಿ ಮೇಘಾ ಚೆಂದಕೆ ಪ್ರಾರ್ಥಿಸಿತ್ತು, ಉಪಾಧ್ಯಕ್ಷ ಶ್ರೀ ಶ್ರೀಕೃಷ್ಣ ನೀರಮೂಲೆ ಸ್ವಾಗತಿಸಿದವು. ಶ್ರೀ ಉಳ್ಳೋಡಿ ಗೋಪಾಲಕೃಷ್ಣ ಭಟ್, ಮುಖ್ಯ ಅತಿಥಿಗಳ ಪರಿಚಯಿಸಿದವು. ಶ್ರೀ ಸೇರಾಜೆ ಗೋಪಾಲಕೃಷ್ಣ ಭಟ್, ಸನ್ಮಾನಿತರ ಪರಿಚಯಿಸಿ ನುಡಿವಂದನೆ ಸಲ್ಲಿಸಿದವು. ನಲುವತ್ತು ವರ್ಷಂದ ಯಕ್ಷಗಾನ ರಂಗಕ್ಕೆ ಸೇವೆ ಸಲ್ಲಿಸುತ್ತಾ ಇಪ್ಪ ತೆಂಕಬೈಲು ಶಾಸ್ತ್ರಿಗೊ ಏವತ್ತುದೆ ಅದರ ಆರ್ಥಿಕ ನೆಲೆಲಿ ನೋಡಿದವಲ್ಲ. ಅವಕ್ಕೆ ಅನೇಕ ಶಿಷ್ಯ ವರ್ಗದವಿದ್ದವು. ಐದಾರು ಪ್ರಸಂಗಂಗೊ ಇಡೀ ಅವಕ್ಕೆ ಬಾಯಿಪಾಟವೇ ಬತ್ತು, ತೆಂಕು ತಿಟ್ಟಿನ ಅಗ್ರಮಾನ್ಯ ಭಾಗವತರಲ್ಲಿ ಒಬ್ಬ ಶ್ರೀಯುತ ತೆಂಕಬೈಲು ಶಾಸ್ತ್ರಿಗೊ ಹೇಳಿ ಸೇರಾಜೆ ಹೇಳಿದವು. ಶ್ರೀ ಕಿಳಿಂಗಾರು ಈಶ್ವರ ಭಟ್, ಸನ್ಮಾನ ಪತ್ರವ ಓದಿದವು. ಸಭೆಯ ಅಧ್ಯಕ್ಷ,ಶ್ರೀ ಕೆ.ಸುಬ್ರಹ್ಮಣ್ಯ ಶಾಸ್ತ್ರಿಗೊ, ಅತಿಥಿಗಳ ಒಟ್ಟಿಂಗೆ ಶಾಸ್ತ್ರಿಗಳ ಸನ್ಮಾನಿಸಿದವು.

ಕೃಷಿಗೂ ಯಕ್ಷಗಾನಕ್ಕೂ ಅವಿನಾಭಾವ ಸಂಬಂಧ ಇದ್ದು. ಮುಮ್ಮೇಳ ರೈಸೆಕಾರೆ ಹಿಮ್ಮೇಳ ರೈಸಲೇ ಬೇಕು. ಬೇರೆಲ್ಲಿಯೂ ಕಾಂಬಲೆ ಸಿಕ್ಕ ಭಾಷಾ ಶುದ್ಧತೆ ನಮ್ಮ ಯಕ್ಷಗಾನಲ್ಲಿ ಮಾಂತ್ರ ಕಾಂಬಲೆ ಸಿಕ್ಕುತ್ತು ಹೇಳಿ ಮುಖ್ಯ ಅತಿಥಿ, ಶ್ರೀ ಎಂ.ಎಸ್. ಮಹಾಬಲೇಶ್ವರ ಮಾತಾಡಿ ಸನ್ಮಾನಿತರ ಅಭಿನಂದಿಸಿದವು. ಬ್ರಾಹ್ಮಣರಲ್ಲಿ ಬುದ್ದಿ ಬಲ ಇದ್ದು, ಸಂಖ್ಯಾ ಬಲ ಇದ್ದು, ಆದರೆ ಒಗ್ಗಟ್ಟಿಲ್ಲೆ. ನಮ್ಮಲ್ಲಿಪ್ಪ ಸಂಕುಚಿತ ಭಾವನೆಯ ದೂರ ಮಾಡಿ ಬ್ರಾಂಮರೆಲ್ಲ ಒಟ್ಟು ಸೇರಿ ನಾವು ಉದ್ದಾರ ಆವ್ತರ ಒಟ್ಟಿಂಗೆ ಬೇರೆ ಸಮಾಜದವುದೆ ಉದ್ದಾರ ಅಪ್ಪ ಹಾಂಗಿಪ್ಪ ಪ್ರೇರಣೆ ಎಲ್ಲೋರಿಂಗು ಸಿಕ್ಕಲಿ ಹೇಳಿ ಶುಭ ಹಾರೈಸಿದವು.

ಜಾಗತೀಕರಣಕ್ಕೆ ಒಳಗಾಗಿ ಕ್ಷೀಣಿಸುತ್ತಾ ಇಪ್ಪ ಕಲೆಗವಕ್ಕೆ ಹಲವಾರು ಸಂಸ್ಥೆಗೊ ಬೆಳವಲೆ ಉತ್ತೇಜನ ಕೊಡ್ತಾ ಇಪ್ಪದು ಸಂತೋಷದ ವಿಷಯ, ಹೇಳಿ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿಗೊ ಸಹಕರಿಸಿದ ಎಲ್ಲೋರಿಂಗೂ ವಂದಿಸಿದವು. ಸಭೆಯ ಕೋಶಾಧಿಕಾರಿ, ಡಾ.ಕೆ.ಕೃಷ್ಣ ಶರ್ಮಾ ಧನ್ಯವಾದ ಸಮರ್ಪಣೆ ಮಾಡಿದವು. ಸಭಾ ಕಾರ್ಯಕ್ರಮವ ಕಾರ್ಯದರ್ಶಿ, ಮಾಂಬಾಡಿ ಶ್ರೀ ವೇಣುಗೋಪಾಲ ಭಟ್ ನಿರೂಪಣೆ ಮಾಡಿದವು.

ಸಭೆ ಕಳುದಿಕ್ಕಿ “ದಕ್ಷಾಧ್ವರ” ಯಕ್ಷಗಾನ ಬಯಲಾಟ ಭರ್ಜರಿಲಿ ನೆಡದತ್ತು. ಹಿಮ್ಮೇಳಲ್ಲಿ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಪದ್ಯಾಣ ಶಂಕರನಾರಾಯಣ ಭಟ್, ನಿಡುವಜೆ ಶಂಕರ ಭಟ್ ಸಹಕರಿಸಿದವು. ದಕ್ಷನ ವೇಷಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಶ್ರೀಯುತ ಸೂರಿಕುಮೇರು ಕೆ.ಗೋವಿಂದ ಭಟ್, ಶಿವನಾಗಿ ರವಿರಾಜ ಪನೆಯಾಲ, ದಾಕ್ಷಾಯಣಿಯಾಗಿ ಸರವು ರಮೇಶ ಭಟ್, ದೇವೇಂದ್ರನಾಗಿ ಶ್ರೀಕೃಷ್ಣ ದೇವಕಾನ, ನಾರದನಾಗಿ ಜಿ.ಕೆ.ಭಟ್ ಸೇರಾಜೆ, ವೃದ್ಧ ಬ್ರಾಹ್ಮಣನಾಗಿ ಪಿ.ಸುಬ್ರಹ್ಮಣ್ಯ, ಅವನ ಹೆಂಡತಿಯಾಗಿ ಅನೀಶ ಮಾಂಬಾಡಿ, ಮಾಣಿಯಾಗಿ ರಾಮಚಂದ್ರ ಮಾಣಿಪ್ಪಾಡಿ, ಅಗ್ನಿ-ವಾಯು ಆಗಿ ಕುಮಾರಿ ಸಿಂಧು ನಿಡುವಜೆ ಹಾಂಗೂ ಅನುಶ್ರೀ ಬಿ. ಮಿಂಚಿದವು.

 

14 thoughts on “ಹವ್ಯಕ ಸಭೆಲಿ ಸಂಮಾನ-ಬಯಲಾಟ

  1. ಗೋಪಾಲ ಭಾವನ ವರದಿ ಸರಳ ಸು೦ದರ ಆಯಿದು. ಕಾರ್ಯಕ್ರಮದ ಮುಖ್ಯ ವಿವರವನ್ನ – ಯಾವುದು ಬೇಕು -ಬ್ಯಾಡ ಅ೦ತ ಅಚ್ಚುಕಟ್ಟಾಗಿ ಬರೆದಿದ್ದು – ಓದುಲೆ ಚೊಲೋ ಆಗ್ತು. ಸಾಮಾನ್ಯವಾಗಿ ಯಾವುದೇ ಸಮಾರ೦ಭದಾಗೆ ಪಟದ ಕೆಲ್ಸ ಕಷ್ಟ, ಯಾರಾದ್ರೂ ಅಡ್ಡ ಬರ್ತ, ಯೆ೦ತಾರೂ ಆಗ್ತು. ಆದ್ರೆ ಇಲ್ಲಿ ಪಟಗೊ ಅಡ್ಡಿಲ್ಲೆ, ನೋಡೋ ಹಾ೦ಗೆ ಬೈ೦ದು. ’ಹಬ್ಬ ತಪ್ಪಿದ್ರೂ ಹೋಳಿಗೆ ತಪ್ಪಿದ್ದಿಲ್ಲೆ’, ಬೆ೦ಗ್ಳೂರಿ೦ದ್ಲೇ ಮ೦ಗ್ಳೂರಿನ ಸಮಾರ೦ಭ ನೋಡಿದ ಹಾ೦ಗಾತು! ಧನ್ಯವಾದಗೋ.

  2. ದಕ್ಷನ ಪ್ರವೇಶ ಭಾರೀ ರೈಸಿದ ಹಾ೦ಗೆ ಕಾಣುತ್ತು,ಪಟಲ್ಲಿ.ಯಕ್ಷಗಾನದ ಅಗ್ರ ಕಲಾವಿದರ ಒಟ್ಟಿ೦ಗೆ ಕಾ೦ಬ ಯೋಗ ! ಧನ್ಯವಾದ ಬೊಳು೦ಬು ಮಾವ೦ಗೆ.
    ಮಾ೦ಬಾಡಿ ವೇಣು ಅಣ್ಣನ ಪಟಲ್ಲಿ ಕ೦ಡು ಕೊಶಿ ಆತು.

  3. ಓದಿ ಆಟಕ್ಕೆ ಹೊದ್ಸರ ಅರೆವಶಿ ಖುಶಿ ಆತು. ಅದರೆ ವೀರಭದ್ರ ಅರು ಗೊನ್ತಾಯಿದಿಲ್ಲೆ

    1. ಬಣ್ಣದ ವೇಶ ವೀರಭದ್ರ ದಿವಾಣ ಶಿವಶಂಕರ ಮಾಡಿದ್ದದು. ಲಾಯಕಾಗಿತ್ತು. ವರದಿಲಿ ಬರವಲೆ ಬಿಟ್ಟತ್ತದ. ನೆಂಪು ಮಾಡಿದ ಗಣೇಶಂಗೆ ಧನ್ಯವಾದಂಗೊ.

      1. ವೀರಭದ್ರ ತಿ೦ದು ತೇಗಿ, ತೋಕಿ ,ರ೦ಗ-ವಲ್ಲಿ ಚೆಲ್ಲಿದ್ದು , ಅದು ಹುರಿಯಕ್ಕಿಯೋ ಅಲ್ಲಾ ಹೊದಳೋ ?

  4. ಚೆ೦ದದ ವಿವರಣೆ ..ಅದ್ಭುತ ಪಟ೦ಗೋ ಬೊಳು೦ಬು ಮಾವಾ

  5. ರಾಮ ರಾಮ. ಭಾರೀ ಲಾಯಕ ಆಯ್ದು ಶುದ್ದಿ. ಓದಿ ಕೊಶಿ ಆತು. ಫಟಂಗೊ ಸೂ..ಪರ್

  6. Surikumeru Govinda Bhat’s excellent performance. Quality Bhagavathike taken the programme to new heights, Thanks to Shri Thenkabail

  7. ವಿವರವಾದ ಶುದ್ದಿ. ಫಟಂಗಳೂ ಲಾಯಕ ಇದ್ದು.
    ಹ್ಮ್.. ನವಗೆ ನೋಡ್ಲೆ ಅವಕಾಶ ಇತ್ತಿಲೆ.

  8. ಕಾರ್ಯಕ್ರಮದ ವಿವರವಾದ ಶುದ್ದಿ, ಮತ್ತೆ ಪಟಂಗೊ ಲಾಯಿಕ ಆಯಿದು.
    ಕಾರಣಾಂತರಂದ ಈ ಕಾರ್ಯಕ್ರಮಕ್ಕೆ ಹಾಜರಿ ಇಪ್ಪಲೆ ಎಡಿಗಾತಿಲ್ಲೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×