Oppanna.com

ಕೊಡೆಯಾಲದ ಪಿಲಿಕುಳಲ್ಲಿ ಗೋಣಂಗೊ ಓಡಿದ್ದು…

ಬರದೋರು :   ಹಳೆಮನೆ ಅಣ್ಣ    on   13/03/2010    12 ಒಪ್ಪಂಗೊ

ಹಳೆಮನೆ ಅಣ್ಣ

ಅದಾ… ಪಿಲಿಕುಳ ನಿಸರ್ಗಧಾಮಲ್ಲಿ ಶನಿವಾರ ಕಂಬಳ ಅಡ… ಸುದ್ದಿ ಕೆಮಿಗೆ ಬಿದ್ದ ಕೂಡಲೇ ಎನ್ನ ಕೆಮರ ರೆಡಿ ಆತು. ನಮ್ಮ ತುಳುನಾಡಿನ ಜನಂಗೊಕ್ಕೆ ಕಂಬಳ ಹೇಳಿರೆ ಎಂತದೋ ಕೊಶಿ. ಕೆಮರದ ಮರ್ಲು ಇಪ್ಪವಕ್ಕೂ.
ಹಾಂಗೆ ನಿನ್ನೆ ಉದಿಯಪ್ಪಗ ಪಿಲಿಕುಳ ನಿಸರ್ಗಧಾಮದ ದೊ….ಡ್ಡ ಗುತ್ತಿನ ಮನೆಯ ಎದುರಾಣ ಗೆದ್ದೆಯ ಹತ್ರಂಗೆ ಹೋದೆ. ಎನ್ನ ಎರಡೂ ಕೆಮರ ಕಟ್ಟಿಗೊಂಡು. ಒಟ್ಟಿಂಗೆ ತಮ್ಮನೂ ಬಯಿಂದ°. ಒಂದು ಕೆಮರಲ್ಲಿ ಸಾಧಾರಣ ಝೂಮ್ ಲೆನ್ಸ್. ಇನ್ನೊಂದರಲ್ಲಿ ರಜ್ಜ ಹೆಚ್ಚು ಝೂಮ್ ಇಪ್ಪ ಲೆನ್ಸು.
ಮೂರ್ನಾಲ್ಕು ದಿನಂದ ಎಂಗಳ ಕೇರಳ ಹೊಡೆಲಿ ಭಯಂಕರ ಸೆಖೆ. ಹಾಂಗೆ ಸಮೋಸ ಮಾಡ್ತ ಭಾವಂದ್ರ ರಿಪೋರ್ಟು ಬತ್ತಾ ಇತ್ತು. ಅದು ನವಗೂ ಗೊಂತಾವುತ್ತು. ಮನೆಲಿಪ್ಪ ಥರ್ಮೋಮೀಟರ್ ಮೂವತ್ತೈದು ತೋರ್ಸಿಕೊಂಡು ಇತ್ತು. ಹಾಂಗಾಗಿ ಕುಡಿವಲೆ ಬೇಕಾದರೆ ಆತು ಹೇಳಿ ಮನೆಂದಲೇ ಎರಡು ಲೀಟರ್ ಕುಪ್ಪಿ ದಾಹಶಮನಿ ಹಾಕಿ ಕಾಸಿದ ನೀರು ತೆಕ್ಕೊಂಡು ಹೋಯಿದೆಯ°.
ಅಲ್ಲಿಗೆ ಎತ್ತಿಯಪ್ಪಗ ಮೊಬೈಲು ಕೆಮರ, ಕುಞ್ಞಿ ಕೆಮರ, ದೊಡ್ಡ ಕೆಮರ, ದೊ………..ಡ್ಡ ಕೆಮರ, ವೀಡ್ಯ ಕೆಮರ… ಹೀಂಗೆ ಕೆಮರಂಗಳ ಸಂತೆಯೇ ಇತ್ತು. ಎಲ್ಲೋರ ಕೈಲಿಯೂ ಕೆಮರ. ಎಲ್ಲೋರು ಪಟ ತೆಗವದೇ. ಹಾಂಗೆ ಪಟ ತೆಗದು ತೆಗದು ಎಂಗೊಗೆ ಬಚ್ಚಿದರೂ ಎಂಗಳ ಕೆಮರಂಗೊಕ್ಕೆ ಬಚ್ಚಿದ್ದಿಲ್ಲೆ. ಮಧ್ಯಾನ ಅಪ್ಪಗ ಕರ್ನಾಟಕದ ಪ್ರವಾಸೋದ್ಯಮ ಸಚಿವ° ಗಾಲಿ ಜನಾರ್ದನ ರೆಡ್ಡಿ ತನ್ನ ಪರಿವಾರ ಸಮೇತ (ಹೆಂಡತಿ ಮಕ್ಕೊ ಅಲ್ಲ…) ಬಂತು. ಅಷ್ಟಪ್ಪಗ ಒಂದು ಸೆಟ್ಟು ಕೆಮರದವು ಪೂರಾ ಆ ಸೈಡಿಂಗೆ ಓಡಿದವು.
ಅಲ್ಲಿ ಗುತ್ತಿನ ಮನೆಲಿ ಪಟ, ಚಿತ್ರ ಪ್ರದರ್ಶನ ಇತ್ತು. ಹಾಂಗೆ ಅದರ ಉದ್ಘಾಟನೆ ಮಾಡಿತ್ತು ರೆಡ್ಡಿ. ಮಧ್ಯಾನ ಅಲ್ಲೇ ಕ್ಯಾಂಟೀನಿಲ್ಲಿ ಊಟ ಮಾಡಿದೆಯೋ°. ಕೇರಳಲ್ಲಿ ಸೆಖೆ ಆಗಿ ಮೈಕೈ ಪೂರ ಸುಟ್ಟು ಹೋಯಿದಡ. ಹಾಂಗೆ ಅಕ್ಕೋ ಹೇಳಿ ಎಂಗೊಗೂ ಹೆದರಿಕೆ ಆತು. ಎಡೆಡೆಲಿ ಬಚ್ಚಂಗಾಯಿ ತುಂಡು ತಿಂದೆಯೊ°. ಹಾಂಗಾಗಿ ರಜ್ಜ ತಂಪಾತು.
ತುಳುನಾಡಿನ ಕಂಬಳ ಹೇಳಿದರೆ ಮೊದಲೇ ಬರದ ಹಾಂಗೆ ಪಟ ತೆಗವವಕ್ಕೆ ಒಂದು ಮರ್ಲು. ನಮ್ಮ ಇಲ್ಯಾಣ ಫೊಟೋಗ್ರಫಿ ಪತ್ರಿಕೆಗೊ ಮಾತ್ರ ಅಲ್ಲ, ಅಮೇರಿಕದ ಪಾಪ್ಯುಲರ್ ಫೊಟೋಗ್ರಫಿ, ಅಮೇರಿಕನ್ ಫೊಟೋ, ಡಿಜಿಟಲ್ ಕೆಮರಾ ವರ್ಲ್ಡ್ ಇತ್ಯಾದಿ ಪತ್ರಿಕೆಗಳಲ್ಲೂ ಕೆಲಾವು ಸರ್ತಿ ಕಂಬಳದ ಪಟ ಬತ್ತು ಹೇಳಿದರೆ ಇದರ ಕ್ರೇಝ್ ನಿಂಗೊಗೂ ಗೊಂತಕ್ಕು. ಹಾಂಗಾಗಿ ರಜ್ಜ ಕೆಮರ ಹಿಡುದು ಅಭ್ಯಾಸ ಇಪ್ಪವು ಎಲ್ಲ ಕಂಬಳ ಇದ್ದು ಹೇಳ್ತ ಸುದ್ದಿ ಕೇಳಿದರೆ ಅಲ್ಲಿಗೆ ಓಡಿಯೊಂಡು ಹೋಕು.
ಪಟಂಗೊ ಸಾಧಾರಣ ಬಯಿಂದು. ಕೆಲಾವು ಪಟ ಇಲ್ಲಿ ಹಾಕಿದ್ದೆ. ನೋಡಿ. ಹೇಂಗಾಯಿದು ಹೇಳಿ. ಅಲ್ಲಿ ಗುತ್ತಿನ ಮನೆಲಿ ಚಿತ್ರ, balenciaga schoenen verkoop ಪಟ ಎಲ್ಲ ನೋಡ್ತವಕ್ಕೆ ನೋಡ್ಲೆ ಹೇಳಿ ಮಡುಗಿದ್ದವು. ಹೆರ ಹೊಡೆಲಿ ಒಂದೆರಡು ಪೊಣ್ಣುಗೊ ಭತ್ತ ಮೆರಿವದು ಹೇಂಗೆ ಹೇಳಿ ತೋರ್ಸಿ ಕೊಟ್ಟುಗೊಂಡು ಇತ್ತಿದ್ದವು. ಇದೆಲ್ಲ ಹಳೆ ಕಾಲದ ಕ್ರಮಂಗೊ. ನವಗೆ ಮರದು ಹೋಪದು ಬೇಡ ಹೇಳಿ ಆನುದೆ ಕೆಲಾವು ಪಟ ತೆಗದು ಮಡುಗಿದೆ.

ಕಂಬಳ

ಕಂಬಳ

ಕಂಬಳ

ಕಂಬಳಕ್ಕೆ ಗೋಣ ಇಳುಶುದು

ಕೊಂಬು ಊದುದರ ಪಟ ತೆಗವದು

ಕಂಬಳ

 
ಧಾನ್ಯದ ಕಣಜ

ಭತ್ತ ಮೆರುದು ಅಕ್ಕಿ ಮಾಡುದು ಹೀಂಗೆ

ಗುತ್ತಿನ ಮನೆಯ ಬಾಗಿಲು

ಗುತ್ತಿನ ಮನೆಯ ಕಂಬದ ವಿನ್ಯಾಸ

12 thoughts on “ಕೊಡೆಯಾಲದ ಪಿಲಿಕುಳಲ್ಲಿ ಗೋಣಂಗೊ ಓಡಿದ್ದು…

  1. ಹರೀಶಣ್ಣ, ಚಿತ್ರಪಟಂಗ ಭಾರಿ ಚೆಂದ ಇದ್ದು.. ಇಲ್ಲಿಂದಲೇ ಕಂಬ್ಳ ನೀಡಿದ ಹಾಂಗೆ ಆತು..

  2. ಅಜ್ಜಂದ್ರು, ಮಾವಂದ್ರು, ಅಣ್ಣಂದ್ರು, ಭಾವಂದ್ರು, ತಂಗೆಕ್ಕೊ ಎಲ್ಲರ ಕಮೆಂಟುದೇ ನೋಡಿ ಕೊಶಿ ಆತು. ಹೀಂಗೇ ಒಪ್ಪಣ್ಣನ ಜಾಗೆ ನೋಡುತ್ತಾ ಒಪ್ಪ ಕೊಡ್ತಾ ಇರಿ. ಯುಗಾದಿ ಹಬ್ಬದ ಶುಭಾಶಯಂಗೊ ಎಲ್ಲೊರಿಂಗೂ…

  3. ಹರೀಶಣ್ಣನ ಪಟಂಗೊ ಲಾಯಿಕ್ಕ ಬಯಿಂದು. ಗೋಣಂಗೊ ಒಳ್ಳ ಪೊಸು ಕೊಟ್ಟಿದವು…

  4. ಹರೀಶನ ಪಟ ಲೇಖನ ಲಾಯಕಾಯಿದು. ಕುಂಬ್ಳೆಂದ ಮಂಗ್ಳೂರಿಂಗೆ ಬಂದು ಕಂಬ್ಳವ ಕಂಡು ಪಟ ತೆಗದು ವರ್ಣನೆಯ ಮೇಳೈಸಿ ಬೈಲಿನ ಎಂಗೊಗೆಲ್ಲಾ ತೋರುಸಿದ್ದು ಸಿಂಬ್ಳೀ ಗ್ರೇಟ್. ಬತ್ತ ಮೆರಿತ್ತ ಹೆಣ್ಣು ಆಧುನಿಕತೆಗೆ ತಕ್ಕ ಹಾಂಗೆ ಚೂಡಿದಾರವೆ ಹಾಕಿದ್ದು ಸಹಜವೇ ಬಿಡು !
    ಇತ್ತೀಚೆಕೆ ಕದ್ರಿ ಕಂಬಳಕ್ಕೆ ಆನೂ ಹೋಗಿ ಎನ್ನ ಪಟ ತೆಗೆತ್ತ ಸೇವೆ ಮಾಡಿಕ್ಕಿ ಬಯಿಂದೆ. ಸ್ಲೋ ಮೋಶನ್, ಫಾಸ್ಟ್ ಮೋಶನ್, ರಿಫ್ಲೆಕ್ಶನು ಎಲ್ಲವನ್ನೂ ಪಟ ತೆಗೆವಗ ಸೇರಿಸೆಂಬಲೆ ಕಂಬಳ ಒಳ್ಳೆ ಅವಕಾಶ ನೀಡುತ್ತು. ಕೆಮರಕ್ಕೆ ಕೆಸರು ರಟ್ಟದ್ದ ಹಾಂಗೆ ಜಾಗ್ರತೆ ವಹಿಸೆಕಾವುತ್ತು !!

  5. ಹರೀಶನ ಎಲ್ಲಾ ಪಟಂಗೊ ಭಾರೀ ಲಾಯಿಕ್ ಬೈಂದು. ಮೊದಲು ಇಲ್ಲಿ ಹೊಸಬೆಟ್ಟಿಲ್ಲಿ ಕಂಬಳ ನಡಕ್ಕೊಂಡು ಇತ್ತಿದ್ದು ನೆಂಪು ಆತು. ಉದಿಯಪ್ಪಗ ಸುರು ಆದರೆ ಮರು ದಿನೆ ಉದಿಯಪ್ಪಗಳೇ ಮುಗಿಗಷ್ಟೆ. ಈಗ ಗದ್ದೆ ಹೋಗಿ ಎಲ್ಲಾ ಸೈಟ್ ಆಯಿದು.ಕಂಬಳ ಇಲ್ಲೆ. ಓಡ್ಲೆ ಬೇಕಾಗಿ ಆ ಗೋಣಂಗೊಕ್ಕೆ ಜೋರು ಬಡಿವದು ನೋಡುವಾಗ ಬೇಜಾರು ಕೂಡಾ ಆವುತ್ತು. ಭತ್ತದ ಕಣಜ, ಅಕ್ಕಿ ಮೆರಿವದು ಇದೆಲ್ಲಾ ಇನ್ನು ಪಟಂಗಳಲ್ಲಿ ನೋಡೆಕ್ಕಷ್ಟೆ.

  6. ನಿಂಗಳ ಕೆಮರಕ್ಕೆ ಸಿಕ್ಕಿಬಿದ್ದ ಗೋಣಂಗಳ ಜೀವನ ಧನ್ಯ ಆತು 🙂
    ಒಳ್ಳೆಯ ಚಿತ್ರ ಮತ್ತು ವಿವರಣೆ ಹರೀಶಣ್ಣ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×