ಬೊಳುಂಬುಮಾವನ ಗುರ್ತ ಇದ್ದನ್ನೆ!ಅದಾ, ಕೊಡೆಯಾಲಲ್ಲಿ ಬೇಂಕಿಲಿರ್ತವು!! ಕುಶಾಲಿಲಿ ಎಲ್ಲೊರನ್ನುದೇ ನೆಗೆನೆಗೆಲಿ ಮಾತಾಡುಸಿಗೊಂಡು ಇಪ್ಪದು, ಒಪ್ಪಣ್ಣಂಗೆ ಅವರತ್ರೆ ಮಾತಾಡ್ಳೆ ಕೊಶೀ ಅಪ್ಪದು.ಇವು ಪೈಸೆ ಕೊಡ್ತಲ್ಲಿ ಕೂದಿದ್ದರೆ ‘ನಗದು’ ಹೇಳ್ತ ಬೋರ್ಡಿನ ತಿರುಗುಸಿ ‘ನಗುವುದು’ ಹೇಳಿ ಮಾಡ್ತವಡ. ಮೂಲ ಬೊಳುಂಬು ಆದರೂ, ಅವು ಕಾರ್ಯನಿಮಿತ್ತ ಅಂದೇ ಊರು ಬಿಟ್ಟಿದವು..!ಊರು ಬಿಟ್ರುದೇ ಊರ ನೆಂಪು ಬಿಟ್ಟಿದವಿಲ್ಲೆ, ಹಳ್ಳಿಕ್ರಮಂಗಳ ಬಿಟ್ಟಿದವಿಲ್ಲೆ! ಕೊಡೆಯಾಲದ ಪೇಟೆನೆಡುಕೆ ಇದ್ದರುದೇ, ಪ್ರತಿಒರಿಶ ಸೋಣೆತಿಂಗಳಿಲಿ ಬೇಳೆಹೋಳಿಗೆ ಇದ್ದೇ ಇಕ್ಕು.ಆ ದಿನ ಒಪ್ಪಣ್ಣನ ದಿನಿಗೆಳಿಯೇ ದಿನಿಗೆಳುಗು! ;-)ಬೇಂಕಿಲಿ ಪೈಸೆ ಎಣುಶುದರ ಒಟ್ಟೊಟ್ಟಿಂಗೇ ಅವಕ್ಕೆ ಕೆಲವೆಲ್ಲ ಒಯಿವಾಟುಗೊ ಇದ್ದು!ಪಟತೆಗವದೋ, ಪದ್ಯಕಟ್ಟುದೋ, ಪದ್ಯ ಹಾಡುದೋ, ಕತೆಬರವದೋ, ಶುದ್ದಿ ಓದುದೋ, ಆಟ ನೋಡುದೋ, ಪಾಟಮಾಡುದೋ - ಇನ್ನೂ ಏನೇನೋ!ಇವರ ಪಟತೆಗೆತ್ತ ಮರುಳು ಇದ್ದಲ್ದ, ಅದರ ಒಂದು ಮೆಚ್ಚೆಕ್ಕಾದ್ದೇ, ತುಂಬ ಚೆಂದಕೆ ತೆಗೆತ್ತವಡ - ಅಜ್ಜಕಾನ ಬಾವ ಹೇಳಿತ್ತಿದ್ದ!ಎಲ್ಲಿಗೇ ಹೋಗಲಿ, ಪಟ ತೆಗದು, ಚೆಂದಲ್ಲಿ ಮಡಿಕ್ಕೊಂಗು. ಅವರ ಮನೆ ಗೋಡೆಲಿಡೀ ಅವು ತೆಗದ ಪಟಂಗಳೇ ಅಡ.ಅತ್ತೆಗೆ ವಾರವಾರ ಉಡುಗುವಗ ಬಂಙ ಅಪ್ಪದಿದಾ!ಮೊನ್ನೆ ಬೆಡಿರಿಪೆರಿಗೆ ಹೇಳಿಗೊಂಡು ಕೊಡೆಯಾಲಕ್ಕೆ ಹೋಗಿತ್ತಿದ್ದೆ.ಬೊಳುಂಬುಮಾವ ಸಿಕ್ಕಿದವು, ಪಣಂಬೂರಿಂಗೆ ಹೆರಟವು.ಕೆಮರದ ಬೇಗು ಕಂಡಪ್ಪಗ ಪಕ್ಕನೆ ಕೇಳಿದೆ, ಈ ಪಟಂಗ ನಮ್ಮ ನೆರೆಕರೆಗುದೇ ಕಾಣಲಿಯೋ?ಹೇಳಿಗೊಂಡು! ‘ಅಕ್ಕಪ್ಪಾ, ಧಾರಾಳ!’ ಹೇಳಿದವು. ಅವು ತೆಗದ ಚೆಂದದ ಪಟಂಗಳ ಒಪ್ಪಣ್ಣನ ಬೈಲಿ ತೋರುಸುಲೆ ಕೊಶೀಲಿ ಒಪ್ಪಿದವು.ನೋಡುವ ಕೆಲಸ ನಮ್ಮದು! ಅದರೊಟ್ಟಿಂಗೆ ಪುರುಸೊತ್ತಪ್ಪಗ ಶುದ್ದಿಗಳನ್ನೂ ಹೇಳ್ತವು. ಓದಿ, ಒಪ್ಪ ಕೊಡುವೊ.
ಬೊಳುಂಬು ಮಾವ°,
ಕಾರ್ಯಕ್ರಮದ ವಿವರ, ಪಟ ನೋಡಿ ಅಪ್ಪಗ ಹಳತ್ತು ಇದೇ ಕಾರ್ಯಕ್ರಮ ಒಂದು ನೆಂಪಾತಿದಾ!!! 😉 🙂
ನಿಂಗಳ ಕಾರ್ಯಕ್ರಮ ಲಾಯ್ಕಾಯಿದು ಹೇಳಿ ಪೆಂಗಣ್ಣ ಬೆಶಿ ಬೆಶಿ ಶುದ್ದಿ ಹೇಳಿ ಅಪ್ಪಗ ಕೊಶೀ ಆತು. ಲಾಯ್ಕಾಗದ್ದೆ ಇಕ್ಕೋ ನಿಂಗೋ ಮಾಡಿದ ಯಾವುದೇ ವೇಷ ಆದರೂ!!! 🙂
ಪಟ ಬೈಲಿಲಿ ನೇಲ್ಸಿದ್ದಕ್ಕೆ ಧನ್ಯವಾದ ಮಾವ°
ಚೆಂದದ ಪಟಂಗೊ ಮತ್ತೊಂದರಿ ಕಾರ್ಯಕ್ರಮಂಗಳ ನೆಂಪು ಮಾಡಿಸಿಕೊಟ್ಟತ್ತು
ಪಟನ್ಗೋ ಲಾಯಕ ಬಯಿಂದು ಬೊಳುಂಬು ಮಾವ…
ಪಟಂಗೊ ಲಾಯ್ಕ ಇದ್ದು.ಅದರಲ್ಲಿ ಇಪ್ಪವರ ಗುರ್ತ ಆವುತ್ತಿಲ್ಲೆ.ಅಡಿ ಬರಹ ಇದ್ದರೆ ಉತ್ತಮ.
KARYAKRAMANGO BHARI OPPA IDDU
ಮೆಚ್ಚಿ ಒಪ್ಪ ಆಯ್ದು ಹೇಳಿತ್ತು – ‘ಚೆನ್ನೈವಾಣಿ’.