ಸೌಂದರ್ಯಮಾಧುರ್ಯಶೋಭೇ! (ಅನುರಾಗ-ಗೀತಮ್)
ಸೌಂದರ್ಯಮಾಧುರ್ಯಶೋಭೇ!
ಕಮನೀಯ-ಸುಸ್ವಪ್ನಸಮ್ರಾಜ್ಞಿ!
ಆನೀಯ ಆನಂದಸರಣಿಮ್
ಸಂರಂಜನೀಯಂ ಮಮ ಜೀವನಮ್॥
ಹೇ ಸೌಂದರ್ಯದ ಮಾಧುರ್ಯ ತುಂಬಿದ ಶೋಭೆಯೇ! ಚೆಂದದ ಕನಸಿನ ರಾಣಿಯೇ!
ಆನಂದದ ಸರಣಿಯನ್ನೇ ತಂದು ಎನ್ನ ಜೀವನವ ರಂಜಿಸುವ ಹಾಂಗೆ ಮಾಡು.
ಸ್ಪಂದತೇ
ಹೃದಯಂ ಮಮ
ಸಂವೀಕ್ಷ್ಯ ರೂಪಂ ಮಧುರಂ ತವ।
ಸ್ಥಗಿತೋ ರಥಃ
ಮಮ ಮನೋರಥಃ
ನ ಹಿ ಚಲತಿ ತೇ ರೋಹಣಂ ವಿನಾ।
ಎನ್ನ ಹೃದಯ ಮಿಡಿಯುತ್ತಾ ಇದ್ದು ನಿನ್ನ ಸುಂದರ ರೂಪವ ನೋಡಿ!
ರಥ ನಿಂತೇ ಬಿಟ್ಟಿದು, ಸ್ಥಗಿತವಾಗಿಪ್ಪ ಎನ್ನ ಈ ಮನೋರಥ ನೀನು ಹತ್ತದ್ದೆ ಮುಂದೆ ಹೋಪಲೇ ಹೋಗ!
ಹೇ ಸುಸ್ಮಿತೇ
ಮಮಾಭಿಮತೇ
ಕಿಂ ಕಾರಣಂ ತೇ ವಿಲಂಬನೇ।
ಪ್ರತಿಸ್ಪಂದನಂ
ತವ ಇಷ್ಯತೇ
ನಾಯಾತಿ ; ಕಿಂ ತೇ ನ ರೋಚತೇ??
ಹೇ ಚಂದದ ಮುಗುಳ್ನಗೆಯವಳೇ! ಎನಗೆ ಇಷ್ಟವಾದವಳೇ! ಎಂತ ಕಾರಣ ನಿನ್ನ ಈ ವಿಲಂಬಕ್ಕೆ?
ಎನ್ನ ಸ್ಪಂದನಕ್ಕೆ ನಿನ್ನ ಪ್ರತಿಸ್ಪಂದನ ಬೇಕು. ಅದು ಬತ್ತಾ ಇಲ್ಲೆ ಎಂತಕೆ? ಎಂತ ನಿನಗೆ ಇಷ್ಟ ಇಲ್ಲೆಯೋ?
ಶೃಣು! ಪ್ರತಿಪಲಂ
ಯುಗಾಯತೇ
ಪ್ರತಿಕ್ಷಣಂ ತವ ಪ್ರತೀಕ್ಷಣೇ।
ಪ್ರಿಯೇ! ಪ್ರತಿಪಲಂ
ತವ ದೀಯತಾಂ
ಪ್ರತಿಫಲಂ ಕಿಮಪೇಕ್ಷಸೇ?
ಕೇಳು ನೀನು, ಪ್ರತಿಯೊಂದು ಪಲ (ಸಮಯದ ಸಣ್ಣ ಪರಿಮಾಣ) ವೂ ಯುಗದ ಹಾಂಗೆ ಅನಿಸುತ್ತಿದ್ದು – ಪ್ರತಿಕ್ಷಣವೂ ನಿನ್ನ ಪ್ರತೀಕ್ಷೆಲ್ಲಿ!
ಪ್ರಿಯೇ! ಪ್ರತಿಯೊಂದು ಕ್ಷಣವೂ ನಿನ್ನ ಒಡನಾಟವ ಕೊಡು. ಪ್ರತಿಫಲವಾಗಿ ನಿನಗೆ ಎಂತ ಬೇಕು?
ಆಶ್ವಾಸಯ
ಮೇ ಪ್ರಸಾರಯ
ನಯನಾಂಚಲೇನ ಕರುಣಾಮಿಹ।
ಮಾಸಾ ದಿವಸಾಃ
ಕ್ಷಣವನ್ನೀತಾಃ
ಪ್ರೇಮಕಲ್ಪನಾವಿಲಾಸೇ।
ಆಶ್ವಾಸನೆ ಕೊಡು ಎನಗೆ. ನಿನ್ನ ಕರುಣೆಯ ಕಣ್ಣಿನ ಅಂಚಿಂದ ಇತ್ತಲಾಗಿ ಪಸರಿಸು!
ನಿನ್ನ ಪ್ರೇಮದ ಕಲ್ಪನೆಯ ವಿಲಾಸಲ್ಲಿಯೇ ಮಾಸ, ದಿನಂಗ ಎಲ್ಲ ಕಳದು ಹೋತು.
ಧೀರೋಸ್ಮ್ಯಹಂ
ತಥಾಪಿ ಕಿಂಚಿತ್
ಯಾಚ್ನಾವೈಫಲ್ಯಭೀರುತಾ।
ಮಮ ಜೀವನಂ
ಮನಮೋಹಕಂ
ಕರಣೀಯಮಾನೀಯ ಧನ್ಯತಾ॥
ಆನು ಧೈರ್ಯವಂತನೇ! ಆದರೆ ನಿನ್ನತ್ರೆ ಕೇಳ್ಳೆ ರಜ್ಜ ಹೆದರಿಕೆ! ಎಲ್ಲಿ ಎನ್ನ ಯಾಚನೆ ವಿಫಲವಾಗಿ ಹೋಕೋ ಹೇಳುವ ಹೆದರಿಕೆ!!
ನೀನೇ ಬಂದು ಎನಗೆ ಧನ್ಯತೆಯ ತಂದು ಎನ್ನ ಜೀವನವ ಮನ ಮೋಹಕವಾಗಿ ಮಾಡೆಕು.
ಆನಂದಃ
ಅನುಬಂಧಃ
ಆವಯೋರ್ಯುಗಲೇ ಅನುರೂಪತಾ।
ಇಯಂ ಕಲ್ಪನಾ
ಸಾಕಾರತಾಂ
ಯಾಯಾತ್ ಆಯಾಹಿ ಗೇಹಂ ಮಮ॥
ಆಹಾ! ಎಂತಹ ಆನಂದ! ಅನುಬಂಧ! ನೋಡು, ನಮ್ಮ ಜೋಡಿ ಎಷ್ಟು ಅನುರೂಪವಾಗಿ ಇದ್ದು!
ಹೀಂಗಿಪ್ಪ ಕಲ್ಪನೆ ಸಾಕಾರ ಆಯೆಕಲ್ಲದೊ? ಬಾರೇ ನೀನೆನ್ನ ಮನೆಗೆ !!
——
ಹೇಂಗಿದ್ದು? ಇದಕ್ಕೆ ಯಾವ ರಾಗ ಹಾಕಲಕ್ಕು?
- ಸೌಂದರ್ಯಮಾಧುರ್ಯಶೋಭೇ!(ಅನುರಾಗ-ಗೀತಮ್) - November 13, 2014
- Hello world! - October 22, 2014
- ಅನುರಾಗ ರಾಗ - June 13, 2014
ಅನುರಾಗಕ್ಕೆ ಯಾವ ರಾಗ !! ಶ್ರುತಿಯ ಅನುಸರಣೆಯುದೇ ಬೇಕದಾ !!