- ಮಸರು ಕಡದು ಬೆಣ್ಣೆ ಕೂಡ್ತದಕ್ಕೆ ಗೌಜಿ ಮಾಡುದೆಂತಕೆ? - May 29, 2019
- ಒಪ್ಪಣ್ಣ ಪ್ರತಿಷ್ಠಾನಂದ ಇಸಿಜಿ ಯಂತ್ರ ಕೊಡುಗೆ - January 8, 2019
- ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಪ್ರದಾನ – ವರದಿ - April 29, 2015
ಬೆಂಗ್ಳೂರಿಲ್ಲಿ ಮೈಸೂರು – ಮಂಡ್ಯದ ಕನ್ನಡ, ಮಲೆಯಾಳ, ತೆಲುಗು, ತಮಿಳು ಭಾಷೆ ಕೇಳಿ ಕೇಳಿ ಬೊಡುದಪ್ಪಗ ನಮ್ಮ ಭಾಷೆಯ ಹೊರತಾಗಿ ತುಳು ಭಾಷೆಯ ಕೇಳೆಕ್ಕು ಹೇಳ್ತ ಆಷೆ ಆವ್ತ ಕ್ರಮ ಇದ್ದು ಬಾವಾ ಎನಗೆ. ಎಂತಕೆ ಹೇಳ್ರೆ ಬೆಂಗ್ಳೂರಿಲಿ ಈ ಮೇಲೆ ಹೇಳಿದ ಭಾಷೆಂಗಳ ಮಾತಾಡುವವೇ ಜಾಸ್ತಿ ಇದಾ. ನಾವು ಮನೆಲಿ ತುಳು ಮಾತಾಡದ್ರು ನಮ್ಮ ಊರ ಭಾಷೆ ಅಲ್ಲದೋ. ಅದರ ಕೇಳದ್ರೆ ಸಮಾಧಾನ ಆವುತ್ತಿಲ್ಲೆ.
ಸಮಾಧಾನ ಆಯೆಕ್ಕಾರೆ ಬೆಂಗ್ಳೂರಿಲ್ಲಿ ಮಾಡುತೆಂತರಾ. ಎಂತು ಇಲ್ಲೆ. ಇರುಳು ಸೀದಾ ಮೆಜೆಸ್ಟಿಕ್ ಬಸ್‌ಸ್ಟೇಂಡಿಗೆ ಹೋಪದು, ಮಂಗ್ಳೂರು, ವಿಟ್ಲ, ಪುತ್ತೂರು, ಕಾಸರಗೋಡು, ಸುಬ್ರಮಣ್ಯಕ್ಕೆ ಹೋಪ ಬಸ್ಸಿಲ್ಲಿ ಹೋಗಿ ರಜ್ಜ ಹೊತ್ತು ಕೂದುಗೊಂಬದು. ಬಸ್ಸಿನ ಕಂಡಕ್ಟ್ರು, ಡ್ರೈವರಿಂದ ಹಿಡಿದು ಊರಿಂಗೆ ಹೆರಟ ತುಳುವಂಗ (ತುಳುವರು) ಎಲ್ಲರೂ ತುಳು ಭಾಷೆಲಿ ಮಾತಾಡುದರ ಕೇಳಿ ಕರ್ಣಾಂನದ ಪಡವದು. ಎಡಿಗಾರೆ ಆನುದೆ ಎರಡು ಮಾತಾಡಿತ್ತು.
ಈಗ ಆಟಿ ಸಮೆಯ ಅಲ್ಲದೋ, ಊರಿಂಗೆ ಹೆರಡುವವು ತುಂಬಾ ಜೆನ ಇರ‍್ತವಿದಾ. ಮೊನ್ನೆ ಹೀಂಗೆ ತುಳು ಭಾಷೆ ಕೇಳೆಕ್ಕೇಳಿ ಆತು. ಸೀದಾ ಹೋದೆ ಮೆಜೆಸ್ಟಿಕ್ಂಗೆ. ಹೀಂಗೆ ಮಂಗ್ಳೂರ್ ಬಸ್ಸಿಲ್ಲಿ ಹತ್ತಿ ತುಳುವಂಗ ಇದ್ದವಾ ನೋಡುವಗ ಇಬ್ರು ಎರಡ್ನೇ ಸೀಟಿಲ್ಲಿ ಕೂದುಗೊಂಡು ನಮ್ಮ ಭಾಷೆಲಿ ಪಟ್ಟಾಂಗ ಹೊಡತ್ತಾ ಇತ್ತವು. ಹತ್ತರೆ ನೋಡುವಾಗ ಆರು? ನಮ್ಮ ಅಜ್ಜಕಾನ ಬಾವಂದೆ, ನೆಗೆಗಾರಂದೆ. ಚೆಲಾ….ಎಂತ ಇಲ್ಲಿ? ಊರಿಂಗೆ ಹೆರಟಾದ ಹೇಳಿ ಕೇಳಿತ್ತು. ಇಲ್ಲೆಪ್ಪಾ ಹೀಂಗೆ ಬಂದದು ಹೇಳಿ ಇಬ್ರು ಹೇಳಿದವು. ಬೇರಾರನ್ನಾದರೂ ಬಿಡ್ಲೆ ಬಂದದ ಕೇಳಿಯಪ್ಪಗ, ಎನ್ನ ತಡದು ನೀನೆಂತ ಇಲ್ಲಿ ಕೇಳಿದವು. ಆನು ಹೀಂಗೀಂಗೆ ಹೇಳಿ ಹೇಳಿದೆ. ಓಹ್ ಅಂಬಗ ನಾವು ಸೇರಿದ್ದು ಒಳ್ಳೆದೇ ಆತು. ಎಂಗಳದ್ದುದೆ ಅದೇ ಸಮಸ್ಯೆ ಹೇಳಿ ನೆಗೆಗಾರ ನೆಗೆ ಮಾಡಿಗೊಂಡೇ ಹೇಳಿದ. ತುಳುವಂಗ ಆರೂ ಬಾರದ್ರೆ ನಾವೇ ತುಳುವಿಲ್ಲಿ ಮಾತಾಡಿಗೊಂಬ ಹೇಳಿ ಅಜ್ಜಕಾನ ಬಾವ ಹೇಳಿದ. ಮೂರು ಜೆನ ಒಟ್ಟಿಂಗೆ ಸೇರಿಯಪ್ಪ ತುಳು ಭಾಷಲಿ ನಡೆವ ಸಂಭಾಷಣೆಯ ಕೊಶಿಯೇ ಬೇರೆ ಇದಾ. ಅವನ ಸಲಹೆಗೆ ಆನು, ನೆಗೆಗಾರಂದೆ ಆತು ಹೇಳಿ ಹೇಳಿದೆಯಾ. ಗ್ರಹಚಾರಕ್ಕೆ ಆದಿನ ಬಸ್ಸಿಲ್ಲಿ ಜೆನಂಗ ಕಡಮ್ಮೆ ಇತ್ತವು. ನಾವು ಮೂರು ಜೆನ ಇದ್ದಲ್ಲದೋ.. ತುಳುಟ್ಟು ಪಾತೆರಿಯರೆ ಹೇಳಿ ಸುರು ಮಾಡಿದ ನೆಗೆಗಾರ. ಆವು ತುಳುವಿಲ್ಲಿ ಹೇಳಿ ಬಸ್ಸಿಂದ ಇಳಿದು ಕೆಎಸ್‌ಆರ್‌ಟಿಸಿ ಬಸ್ ಸ್ಟೇಂಡಿಂದ ಬಿಎಂಟಿಸಿ ಸ್ಟೇಂಡಿಂಗೆ ಹೆರಟೆಯಾ.
ಕೆಪ್ಪಣ್ಣೆರೆ ಬೇತೆ ದಾಲ ವಿಷಯ ಪಾತೆರುನ ಬೋಡ್ಚಿ, ನಮ್ಮ ಒಪ್ಪಣ್ಣೆರ ಬೈಲ್‌ದ ಸುದ್ದಿಯೇ ಪಾತೆರ‍್ಗ. ಮುರಾಣಿ ಈರ‍್ನ ಕವಿತೆಲು ಬಾರಿ ಎಡ್ಡೆ ಆದಿತ್ತಿಂಡ್, ಅಂಚಿನ ಕವಿತೆ ತುಳುಟ್ ಪಟ್ಲೆ ಹೇಳಿ ನೆಗೆಗಾರ ಹೇಳಿದ. ಪಸ್ಟ್ ಈರ್ ಪನೊಡೊ ಬುಕ್ಕ ಅಜ್ಜಕಾನ ಬಾವೆರ್ ಬುಕ್ಕೊ ಯಾನ್ ಪನ್ಪೆ ಹೇಳಿ ಆನು ಹೇಳಿದೆ.
ಇಜ್ಜಿ ಯಾನ್ ನೀರ್ಕಜೆ ಚಿಕ್ಕಪ್ಪಡ ಪದ್ಯ ಬರೆದು ಕೊರ್ರ ಪಣ್ತೆ. ಆರ್ ಎಲ್ಲೆ ಮಿನಿ ಕೊರುವೆರ್, ಬುಕ್ಕಾ ಪನ್ಪೆ ಹೇಳಿ ನೆಗೆಗಾರ ಹೇಳಿದ. ಮತ್ತೆ ಅಜ್ಜಕಾನ ಬಾವನ ಸರದಿ ಇದಾ, ಅವಂದು ಏನಿದ್ದರೂ ಎರಡೇ ಗೆರೆಯ ಪದ್ಯ ಅಲ್ಲದೋ.
ಆವು ಅಪಗಾ ಈರ್ ನನೊರ ಪಣ್ಲೆ ಹೇಳಿ ನೆಗೆಗಾರಂಗೆ ಹೇಳಿದ ಅಜ್ಜಕಾನ ಬಾವ,
ಏರೊ ಒರಿ ಅಂಬರಮರ‍್ಲೆ ಬುದ್ದಿ ಪನ್ಪೆಗೆ
ಬಾರಿ ಬೇಜಾರ್ ಇತ್ತೆ ಬಾರಿ ಬೇಜಾರ್….
ಹೇಳ್ತ ಸಾಲಿನ ಪರಸಂಗದ ಗೆಂಡೆತಿಮ್ಮ ಪಿಚ್ಚರಿನ ’ತೇರನೇರಿ ಅಂಬರದಾಗ ನೇಸರ ನಗುತಾನೆ…..’ ಪದ್ಯದ ರಾಗಲ್ಲಿ ಹೇಳಿದ.
ಈ ಪದ್ಯ ಓಲ್ ತಿಕ್ಕ್ಂಡ್ ಇರೆಗ್? ನೆಗೆಗಾರ ಕೇಳಿದ. ಓಲೊ ಕೇಣ್ದಿತ್ತೆ, ಅಯಿನ್ ಪಂಡೆ. ನನ ಕೆಪ್ಪಣ್ಣೇರ್ ಪನೊಡ್ ಹೇಳಿದ ಅಜ್ಜಕಾನ ಬಾವ.
ನಂತರದ್ದು ಎನ್ನ ಸರದಿ ಇದಾ, ಕನ್ನಡಲ್ಲಿ ಆದರೆ ಎಂತಾರು ಪದ್ಯ ಹೇಳ್ಳಕ್ಕು. ತುಳುವಿಲ್ಲಿ ಎಂತರ ಹೇಳುದು. ಎಲ್ಲಿಯೋ ಕೇಳಿದ ಒಂದು ಪದ್ಯ ಇತ್ತು. ಅದು ಕೇವಲ ಒಂದೇ ಪ್ಯಾರಾ ಗೊಂತಿಪ್ಪದು. ನೆಗೆಗಾರ ಕೇಳಿದಾಂಲ್ಲೆ. ದೊಡ್ಡ ಪದ್ಯವೇ ಆಯೆಕ್ಕು ಹೇಳಿದ. ಎಂತಾರು ಇಬ್ರನ್ನೂ ಬಿಡ್ಲೆ ಗೊಂತಿಲ್ಲೆ ಇದಾ.. ಹಾಂಗೆ ಆ ಪದ್ಯಕ್ಕೆ ಇನ್ನೊಂದು ಪ್ಯಾರಾವ (೨ನೇ ಚರಣ) ಆನು ಸೇರಿಸಿ ಪದ್ಯ ಹೇಳ್ಳೆ ಸುರು ಮಾಡಿದೆ. ’ಮೋಕೆದ ಪೊಣು’ ಹೇಳಿ ಪದ್ಯದ ಹೆಸರು. (ಕನ್ನಡದ ಪಿಚ್ಚರಿನ (ಹೆಸರು ಗೊಂತಿಲ್ಲೆ) ಬಿಂಕದ ಸಿಂಗಾರಿ… ಮೈ ಡೊಂಕಿನ ವೈಯ್ಯಾರಿ.. ರಾಗಲ್ಲಿ ಆತೋ ಏ)
ಲತ್ ಪೊಣ್ಣ ಸ್ಟೈಲ್
ಆ ಲತ್ ಮೋಣೆ ಸ್ಮೈಲ್
ಎಂಚಿ ಪೊರ್ಲು ದಾದ ಮರ್ಲ್
ತೂವೊಡೂಂದ್ ಒರ ಆಂಡ್.. (ಪಲ್ಲವಿ)
ಕಪ್ಪು ಈ ಮೋಣೆದಾ
ಸ್ವರ ಆ ನಿನದಾ…
ನಿನ್ನ ಕಣ್ಣ್ ದಾನೆ ಒಂಜಿ ಕೋಸು
ಮೂಂಕು ಒರ್ದನೇ.. ಸ್ಟೈಲ್ ದಾದನಾ
ನಿನ್ನನ್ ತೂವೊಡೂಂದ್ ಒರ ಆಂಡ್ (೧)
ಕಾಲೇಜ್ ಕ್ವೀನ್‌ಲಾ ಈ
ಎನ್ನ ಫ್ರೆಂಡ್‌ಲ ಈ….
ನಿನ್ನ ಕಾರ್ ದಾನೆ ಒಂಜಿ ಡೊಂಕು
ಅಟ್ಟೆ ಕಾರ್‌ದ ಕ್ಯಾಟ್ ವಾಕ್‌ನ್
ತೂವೊಡೂಂದ್ ಒರ ಆಂಡ್ (೨)
ಲತ್ ಪೊಣ್ಣ ಸ್ಟೈಲ್
ಆ ಲತ್ ಮೋಣೆ ಸ್ಮೈಲ್
ಎಂಚಿ ಪೊರ್ಲು ದಾದ ಮರ್ಲ್
ತೂವೊಡೂಂದ್ ಒರ ಆಂಡ್..
ಪದ್ಯ ಹೇಳಿ ನಿಲ್ಸೆಕ್ಕು, ನೆಗೆಗಾರಂಗೆ ಕೊಶಿಯೋ ಕೊಶಿ.. ಚೆಲಾ ಈರ್ ಪದ್ಯಲ ಲಾಯ್ಕ ಪಣ್ಪಾರ್ ಹೇಳಿದ. ಆತು ಮರಾಯ ಇನ್ನಾದರು ನಮ್ಮ ಭಾಷೆಲಿ ಮಾತಾಡುವ ಹೇಳಿ ಆನುದೆ ಅಜ್ಜಕಾನ ಬಾವಂದೆ ಹೇಳಿದೆಯಾ..
ಅಷ್ಟುತ್ತೊಪ್ಪಗ ಎಂಗ ಬಿಎಂಟಿಸಿ ಬಸ್ ಸ್ಟೇಂಡಿಗೆ ಎತ್ತಿತ್ತೆಯಾ. ಅವರ ಬಸ್ ಹೋಪಲೆ ರೆಡಿ ಆಗಿತ್ತು. ಗಂಟೆ ಇರುಳು ೧೧ ಗಂಟೆ ಆಗಿತ್ತಿದಿದಾ. ಲಾಸ್ಟ್ ಬಸ್. ಎಲ್ಲರಿಂಗೂ ಅರ್ಜೆಂಟ್.. ಎನ್ನ ಮನೆಯ ಹೊಡೆಂಗಿಪ್ಪ ಬಸ್‌ದೆ ಹೆರಡ್ಲೆ ರಡಿ ಆತು. ಬಸ್ ಹತ್ತುವಗ ನೆಗೆಗಾರಂದೆ ಅಜ್ಜಕಾನ ಬಾವಂದೆ ಹೇಳಿದವು ಈ ಸುದ್ದಿಯ ಒಂದರಿ ನಮ್ಮ ಬೈಲಿಂಗೆ ತಿಳುಸು ಮರಾಯಾ ಹೇಳಿ.
ಅದಕ್ಕಾಗಿ ಈ ಸುದ್ದಿ ಬರದ್ದು ಸುಮ್ಮನೆ ಓದಿಕ್ಕಿ… ಆತೋ
ನೆಗೆಗಾರ ತುಳು ಪದ್ಯ ಹೇಳ್ತೆ ಹೇಳಿ ಮಾತು ಕೊಟ್ಟಿದಾ, ನೀರ್ಕಜೆ ಅಪ್ಪಚ್ಚಿ ಬರದು ಕೊಡ್ತವೋ, ಇವ ಬೈಲಿನವಕ್ಕೆ ಕೇಳ್ತಾಂಗೆ ಹೇಳ್ತನಾಳಿ ನೋಡೆಕಷ್ಟೇ…!
ಹೇಳಿದಾಂಗೆ ಇನ್ನೊಂದು ವಿಷಯ..
ಆನೊಂದರಿ ಅಮೆರಿಕಲ್ಲಿ ಎಣ್ಣೆ ಸೋರ‍್ತ ಸುದ್ದಿ ಹೇಳಿದ್ದೆ. ನೆನಪಿದ್ದನ್ನೆ. ವಿಷಯ ಎಂತ ಹೇಳ್ರೆ.. ಮೆಕ್ಸಿಕೋ ಸಮುದ್ರಲ್ಲಿ ಎಣ್ಣೆ ಸೋರ‍್ತದು ಈಗ ನಿಂದಿದಡ.. ಎಣ್ಣೆ ಬೋರ್‌ವೆಲ್‌ನ ಬಿಪಿ ಕಂಪೆನಿ ಮುಚ್ಚಿದ್ದಡ. ಸಮುದ್ರವೂ ಬಹು ಮಟ್ಟಿಂಗೆ ಕ್ಲೀನ್ ಆಯಿದಡ. ಆ ಬೋರ್‌ವೆಲ್‌ನ ಶಾಶ್ವತವಾಗಿ ಮುಚ್ಚಲೆ ವಿಜ್ಞಾನಿಗ ನಿರ್ಧರಿಸಿದ್ದವಡ. ಇನ್ನದರೂ ಏಮೆ, ಮೀನು, ಸೇರಿದಂತೆ ಇತರ ಎಲ್ಲಾ ಜಲಚರಂಗ ಏವಗಳಣಾಂಗೆ ಸ್ವಚ್ಚಂದಲ್ಲಿ ಜೀವನ ನಡೆಸಲಕ್ಕು.
-ಕೆಪ್ಪಣ್ಣ
masth layk itthnd
ಕೆಪ್ಪಣ್ಣ ಭಾವಾ..
ನಾವು ಗುಟ್ಟಿಲಿ ಮಾತಾಡಿಗೊಂಡದರ ಬೈಲಿಂಗೆ ಹೇಳಿ ಎನ್ನ ಮರಿಯಾದಿ ಪೂರ ಕಳದೆ…
ಚೆ ಚೆ!! 😉
{ ಲತ್ ಪೊಣ್ಣ ಸ್ಟೈಲ್
ಆ ಲತ್ ಮೋಣೆ ಸ್ಮೈಲ್ }
ಇದರ್ಲಿದೇ ಇಂಗ್ಳೀಶು ಇದ್ದದು ಬಲ್ನಾಡುಮಾಣಿಗೆ ಕಂಡಿದೇ ಇಲ್ಲೆ.. 🙂
ಮಜ್ಜಿಗಗೆ ಇಂಗು ಹಾಕಿದ ಹಾಂಗಲ್ಲದೋ ಕನ್ನಡಲ್ಲಿ ಇಂಗ್ಲಿಷು ??
ಕೆಲವು ಸರ್ತಿ ಇಂಗು ಮಜ್ಜಿಗೆಯೊಳಗೋ ಮಜ್ಜಿಗೆಯು ಇಂಗೊಳಗೋ ಹೇಳಿ ಆವುತ್ತು.. ( ಸ್ವಲ್ಪಎಡ್ಜಸ್ಟ್ ಮಾಡ್ರಿ..)
ಹಾಂಗಾಗಿ ಇದು ಕಂಗ್ಲಿಶು !!
ಹಳಬರು ಕೇಳಿ ಕನ್ಫ್ಯೂಸು..
ಒಹ್! ಅದಪ್ಪು, ಕಂಗ್ಲೀಷು ಕೇಳಿ ಕೇಳಿ, ತುಳು, ಕನ್ನಡದ ಎಡೆಲಿ ಇಂಗ್ಲೀಷು ಬಂದರೇ ಗೊಂತೇ ಆವ್ತಿಲ್ಲೆ ನಗೆಗಾರಣ್ಣೋ!! 🙂
ಬರದ್ದದು ಒಳ್ಳೆದಾಯಿದು ಕೆಪ್ಪಣ್ಣ.. ಬೆಂಗ್ಳೂರಿಲಿ ನಮ್ಮ ಭಾಷೆ, ತುಳು ಮಾತ್ರ ಅಲ್ಲ, ಕನ್ನಡವುದೆ ಕೇಳದ್ದೆ ಅಸಕ್ಕ ಆವುತ್ತು. ಎಲ್ಲಾರುದೆ (ನಮ್ಮನ್ನು ಸೇರ್ಸಿ) ಕಂಗ್ಲಿಷೇ ಮಾತಾಡುದು.. ರಿಕ್ಷಾದವನ ಹತ್ರೆ ದಾರಿ ಕೇಳಿರುದೆ “ಹಿಂಗೇ ಸ್ಟ್ರೈಟಾಗ್ ಹೋಗ್ಬಿಟ್ಟು ರೈಟ್‍ಗೆ ತಗಳಿ, ನೆಕ್ಸ್ಟು ಲೆಫ಼್ಟ್‍ಗೆ ಕಟ್ ಹೊಡ್ದು ಮತ್ತೆ ಸ್ಟ್ರೈಟ್‍ಆಗ್ ಹೋದ್ರೆ ಡೆಡ್ ಎಂಡ್‍ನಲ್ಲಿ ಮನೆ ಇದೆ” ಹೇಳಿ ಹೇಳ್ತವು. ಕನ್ನಡ ಎಲ್ಲಿದ್ದು, ಅರ್ಧಾಂಶವು ಇಂಗ್ಲೀಷೇ.. 🙂 ನಮ್ಮ ಊರಿನ ಅಚ್ಚಗನ್ನಡ, ತುಳು ಕೇಳಿಯಪ್ಪಗ ಸಮಾಧಾನ ಆವುತ್ತು.. 🙂 ಪದ್ಯ ಲಾಯ್ಕಾಯಿದು.. ಒಂದರಿ ಒಪ್ಪಣ್ಣನ ಬಯಲಿನ ಲೆಕ್ಕಲ್ಲಿ ಒಂದು ಕಾರ್ಯಕ್ರಮ ಮಾಡುವ, ನಿನ್ನ ಪದ್ಯ ಅಲ್ಲಿಯುದೆ ಹೇಳೆಕ್ಕಾತಾ?? 🙂
ಇನ್ನೊಂದು ಪದ .. ಚೆಲುವೆ ಒಂದು ಹೇಳ್ತೀನಿ ಧಾಟಿಲಿ..
ಕೊರ್ಪೆ ಪೂರಿ ಕ್ಷೀರಾಂದ್ ಸಜ್ಜಿಗೆ ಬಜಿಲ್ ಕೊರ್ಪೆರ್ಯೇ
ನಾಲೈ ಸಪಾಯಿ ಉಂಡುಂದು ಸರಾಗ್ ರೈಲ್ ಬುಡ್ಪೆರ್ಯೆ
ಪಾತೆರ ಕೆನೋ ಡಾನ್ಡ ಯಾನ್,
ಬೋಡೆನ್ನ ಕೈಟ್ ಫೋನು ,ತಿನ್ಯೆರೆ ಬಂಗುಡೆ ಮೀನ್
ರಾಗೋಡು ಪಣ್ಪಿನ ಪದೊನು ಕೇಣ್…
ಕೆಪ್ಪಣ್ಣನ concept ಲಾಯಿಕ್ ಆಗಿ, ಬರದ್ದು ಕೂಡಾ ಲಾಯಿಕ ಆಯಿದು.
ನಮ್ಮ ಊರು ಬಿಟ್ಟು ಹೆರ ಹೋದಪ್ಪಗ ಅರಾರೂ ನಮ್ಮ ಭಾಷೆ ಮಾತಾದುವದು ಎಲ್ಲಾದರೂ ಕೇಳಿರೆ ಕೆಮಿ ಕುತ್ತ ಆವುತ್ತು. ನಮ್ಮವು ಅಲ್ಲದ್ದರೆ ಕನ್ನಡದವು, ಇಲ್ಲದ್ದರೆ ತುಳು ಆರೂ ಸಿಕ್ಕರೂ ಸಂಬಂಧಿಕರು ಸಿಕ್ಕಿದ ಹಾಂಗೇ ಆವುತ್ತು. ತುಳುವರು ಹೆಚ್ಚಾಗಿ ಎಲ್ಲ ಊರಿಲ್ಲಿಯೂ ಇದ್ದವು. ಬೊಂಬಾಯಿಗೆ ಹೋದರೆ ಹೋಟೆಲ್ ಗಳಲ್ಲಿ ತುಳುವರೇ ಹೆಚ್ಚು. ಕೊಡೆಯಾಲಂದ ಬಂದದು ಹೇಳಿ ಗೊಂತಾದರೆ ಅವೇ ಬಂದು ತುಳುವಿಲ್ಲಿ ಮಾತಾಡ್ಲೆ ಸುರು ಮಾಡ್ತವು. ನವಗೂ ಕೊಶಿಯೇ.
“ಲತ್ ಪೊಣ್ಣು….” ಪದ್ಯ ಕೇಳಿ ಅಪ್ಪಗ ಹಳೆ ತುಳು ಸಿನೆಮಾದ ಒಂದು ಪದ್ಯ ನೆಂಪು ಆತು.
“ಮೋಕೆದ ಸಿಂಗಾರೀ…..
ಉಂತುದೆ ವೈಯ್ಯಾರೀ
ಯಾನು ಮೂಲೆ ಕಾತೊಂದುಲ್ಲೆ ಮದತೇ ಪೋಪನಾ
ಓ.. ಪೊಣ್ಣೆ ಎನ್ನ ಮೋನೆ ತೂದು ದಾಯೇ ಪೋಪನಾ”
ಶ್ರೀ. ಹೆಚ್. ಎಂ ಮಹೇಶ ಹಾಡಿದ ಪದ್ಯ ಹೇಳಿ ಎನ್ನ ನೆನಪು
ಕೊಷಿ ಅಂಡ್ ಅನ್ಣೆರೆ , ರಡ್ಡ್ ಸಾಲ್ ಎನ್ನಲ ಉಪ್ಪಡ್,
ನಾನೊಂದು ತೀರ ನೀನೊಂದು ತೀರ ದ ಧಾಟಿಲಿ..
ಯಾನೊಂಜಿ ಶೀರ ಈಯೊಂಜಿ ಪೂರಿ
ಒಟುಗು ಪೂರಿ ಶೀರಾ..
ಇಡ್ಲಿ ದೋಸೆ ದೂರಾ..
ಪುಲ್ಯ ಕಾಂಡೇನೆ ಲಕದ್
ರಿಕ್ಷಾಡ್ ತಾಜ್ಮಾಲ್ಗ್ ಪೋದು
ಒಂಜೊಂಜಿ ಗ್ಲಾಸು ಪರ್ದಾದ್ ಜ್ಯೂಸು
ಬಸ್ಸುಡ್ ಪೋಯಿ ರಿಕ್ಷ ನಂಕ್ ಲೋಸು // ಯಾನೊಂಜಿ //
ನೆಗೆಗಾರಣ್ಣ ಬತ್ತಾ ಇದ್ದವು..
ಓಹ್! ಕೆಪ್ಪಣ್ಣ, ಭಾರಿ ಲಾಯಕಾಯಿದಾನೆ. ನಮ್ಮ ಹವ್ಯಕಭಾಷೆಯುದೆ, ತುಳುವುದೆ ಅಕ್ಕ ತಂಗೆಕ್ಕಳ ಹಾಂಗೆ ಒಟ್ಟು ಸೇರಿದ್ದದು ಇನ್ನೂ ಲಾಯಕಾಯಿದು. ಬರದ ಶೈಲಿ ಲಾಯಕಿತ್ತು. ನಿನ್ನ ತುಳು ಪದ್ಯವ, “ಬಿಂಕದ ಸಿಂಗಾರಿ” ಸ್ಟೈಲಿಲ್ಲ್ಲಿ ಹಾಡ್ಳೆ ಪ್ರಯತ್ನ ಮಾಡಿದೆ. ಸುರುವಿಂಗೆ ಎಡಿಗಾತಿಲ್ಲೆ. ನಾಲ್ಕನೇ ಸರ್ತಿ ಅಪ್ಪಗ ಸಾಧಾರಣ ರಾಗ ಸಿಕ್ಕಿತ್ತ್ತು. ಹಿಂದೆ ತಿರುಗಿ ನೋಡಿರೆ ನಾಲ್ಕೈದು ಜೆನ ನಿಂದು ನೋಡಿ ನೆಗೆ ಮಾಡ್ತಾ ಇದ್ದಿದ್ದವು. ಮೆಲ್ಲನೆ ಎನ್ನ ವಾಲ್ಯೂಂ ಕಡಮ್ಮೆ ಮಾಡಿದೆ ! ಇರಳಿ. ಇನ್ನೊಂದರಿ ಮುಖತಾ ಸಿಕ್ಕಿರೆ ನಿನ್ನ ಹತ್ರೆ ಹಾಡುಸೆಕು ಹೇಳಿ ಇದ್ದೆ. ಎಂಗೊಗೆ ನಾಟಕಕ್ಕೆ ಎಲ್ಲ ಬೇಕಾವುತ್ತು ಇದಾ !
ಈಗ ನೆಗೆಗಾರನ ಹಾಡಿಂಗೆ ಕಾಯ್ತಾ ಇದ್ದೆ.
ಬೆಂಗ್ಳೂರಿಂಗೆ ಹೋಗಿಯಪ್ಪಗ ನಮ್ಮ ಊರು ನೆಂಪು ಅಪ್ಪದು ಸಹಜವೇ. ಹಾಂಗೆ ಹೇಳಿ ಊರಿಂಗೆ ಬಂದಪ್ಪಗ ಬೆಂಗ್ಳೂರು ಅಷ್ಟು ನೆಂಪು ಆವುತ್ತಿಲ್ಲೆ. ಎಲ್ಲೊರಿಂಗೂ ಹಾಂಗೆ ಅಲ್ಲ. ಬಸ್ಸಿಲ್ಲಿಯೋ, ಪ್ರೊವಿಶನಲ್ ಸ್ಟೋರ್‌ಲ್ಲಿಯೋ ಮಣ್ಣ ನಮ್ಮ ಭಾಷೆ, ತುಳು ಭಾಷೆ ಕೇಳಿರೆ ಭಾರೀ ಕೊಷಿ ಆವುತ್ತು. ಒಂದಾರಿ ಹುಬ್ಬಳ್ಳಿಲಿ ಇರುಳು ಬಸ್ಸಿಂಗೆ ಕಾದುಗೊಂಡಿಪ್ಪಗ ನಮ್ಮ ಭಾಷೆ (ಹವ್ಯಕ ಭಾಷೆ) ಕೇಳಿ ಭಾರೀ ಕೊಷಿ ಆಯಿದು… ಧಾರವಾಡದ ಪೇಡ ತಿಂದ ಹಾಂಗೆ ಆಯಿದು.