- ಉಪ್ಪುಸೊಳೆಯ ಸುತ್ತ - May 1, 2020
- ಮಂಗಳೂರು ಹವ್ಯಕ ಸಭೆಲಿ “ವಿಷು ಸಂಭ್ರಮದ ಸಂಗೀತ ಸೌರಭ” - May 1, 2017
- ಶಪಥಪರ್ವ – ಕ್ಯಾಮರಲ್ಲಿ - October 9, 2016
ಇಂದು ಮಂಗಳೂರು ಹವ್ಯಕ ಸಭೆಲಿ “ಯಕ್ಷಧಾರೆ” ಹೇಳಿ ಯಕ್ಷಗಾನ ಹಿಮ್ಮೇಳ ವೈಭವ ನೆಡದತ್ತು. ವಿಶೇಷ ಎಂತರ ಹೇಳಿರೆ, ಭಾಗವತಿಕೆ, ಮದ್ದಳೆ, ಚಂಡೆ ತಾಳ ಎಲ್ಲವೂ ಮಕ್ಕಳದ್ದೇ. ರೈಸಿತ್ತಯ್ಯಾ ರೈಸಿತ್ತು. ಮಂಗಳೂರು ಹತ್ರಾಣ ಗಂಜಿಮಠಲ್ಲಿಪ್ಪ ರಾಜ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕೊ ಚೆಂದಕೆ ಕಾರ್ಯಕ್ರಮ ನೆಡಸಿಕೊಟ್ಟವು.
ಚೆಂದಕೆ ಎರಡು ಜೆಡೆ ಹಾಕಿ, ಹೂಗು ಮುಡುದು, ಲಂಗ ದಾವಣಿ ಹಾಕಿದ ಕೂಸುಗೊ ಭಾಗವತಿಕೆ ಮಾಡಿದ್ದದು, ತಾಳ ಕುಟ್ಟಿದ್ದದು, ಮದ್ದಳೆ ಬಡುದ್ದದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಕೊಟ್ಟತ್ತು. ವೆಂಕಟೇಶ ತಂತ್ರಿ ಮುಂಡು ಸುತ್ತಿ, ಬೆಳಿ ಅಂಗಿ ಶಾಲು ಹಾಕಿ ರಟ ರಟನೆ ಚೆಂಡೆ ಬಾರುಸಿ ಎಲ್ಲೋರ ಗಮನ ಸೆಳದ°.
ಪ್ರಖ್ಯಾತ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಡಿತ್ತಾಯ, ಮತ್ತೆ ಅವರ ಪತಿ ಶ್ರೀ ಹರಿನಾರಾಯಣ ಬೈಪಡಿತ್ತಾಯ ಈ ಮಕ್ಕೊಗೆಲ್ಲ ತರಬೇತಿ ಕೊಡುತ್ತಾ ಇದ್ದವು. ಅವು ಇಬ್ರುದೆ ಬಂದು ಕಾರ್ಯಕ್ರಮವ ನಿರ್ದೇಶಿಸಿದವು. ಕಡೇಂಗೆ, ಲೀಲಾವತಿ ಬೈಪಡಿತ್ತಾಯ ಅವು ಸಭಿಕರ ಒತ್ತಾಯದ ಮೇರೆಗೆ ಎರಡು-ಮೂರು ಯಕ್ಷಗಾನ ಪದ್ಯಂಗಳ ಹಾಡಿ ರಂಜಿಸಿದವು.
ಅವರ ಶಾಲೆಯ ಪ್ರಿನ್ಸಿಪಾಲ, ಶ್ರೀಯುತ ಗಜಾನನ ಭಟ್ ಈ ಮಕ್ಕೊಗೆಲ್ಲ ಒಳ್ಳೆ ಪ್ರೋತ್ಸಾಹ ಕೊಡುತ್ತವಾಡ. ಅವುದೆ ಬಂದು ಸಭಾ ಕಾರ್ಯಕ್ರಮಲ್ಲಿ ಭಾಗವಹಿಸಿ ಮಾತಾಡಿದವು. ಅವರ ಶಾಲೆಲಿ, ಶನಿವಾರ ದಿನ ಪೂರ್ತಿ ಮಕ್ಕೊಗೆ ಕಲಾಭಿರುಚಿಯ ಕಾರ್ಯಂಗಳಲ್ಲಿ ಅಭ್ಯಾಸ ಮಾಡುಸುತ್ತವಾಡ. ಯಕ್ಷಗಾನ ಹಿಮ್ಮೇಳ, ಕುಣಿತ, ಚಿತ್ರಕಲೆ, ಸಂಗೀತ, ಬೊಂಬೆ ತಯಾರಿ ಇತ್ಯಾದಿ ಕಲುಶುತ್ತವಾಡ. ಯಕ್ಷಗಾನದ ಎಲ್ಲಾ ವಿಷಯಂಗಳನ್ನು ಮಕ್ಕೊಗೆ ಹೇಳಿ ಕೊಟ್ಟು, ಪ್ರೋತ್ಸಾಹಿಸಿ, ಬೇರೆ ಬೇರೆ ದಿಕ್ಕೆ ಅದರ ಪ್ರದರ್ಶಿಸಿ ಉತ್ತೇಜನ ಕೊಡುತ್ತಾ ಇದ್ದದರ ನಾವೆಲ್ಲ ಪ್ರಶಂಸಿಸಲೆ ಬೇಕು. ಇಂಗ್ಲೀಷು ಮಾಧ್ಯಮಲ್ಲಿ ಕಲಿತ್ತವಾದರೂ, ನಮ್ಮ ಸಂಪ್ರದಾಯದ ಉಡುಗೆಲಿ ಬಂದು, ಯಕ್ಷಗಾನದ ಹಿಮ್ಮೇಳವ ಪ್ರದರ್ಶಿಸಿದ ಮಕ್ಕಳ ಅಭಿನಂದಿಸಲೇ ಬೇಕು. ಹವ್ಯಕ ಸಭಾದ ಅಧ್ಯಕ್ಷ ಶ್ರೀ ಕಿಳಿಂಗಾರು ಈಶ್ವರ ಭಟ್ ಸಭೆಯ ಅದ್ಯಕ್ಷತೆ ವಹಿಸಿದ್ದಿದ್ದವು. ಕಾರ್ಯಕ್ರಮ ರೂಪುಗೊಂಬಲೆ ಸಹಕಾರ ನೀಡಿದ ಶ್ರೀ ಪಕಳಕುಂಜ ಗೋಪಾಲಕೃಷ್ಣ ಭಟ್ ಎಲ್ಲೋರನ್ನು ಪರಿಚಯ ಮಾಡಿದವು. ಶ್ರೀ ವೇಣುಗೋಪಾಲ ಭಟ್ ಮಾಂಬಾಡಿ ಕಾರ್ಯಕ್ರಮವ ನಿರ್ವಹಿಸಿದವು. ಕಳುದ ವರ್ಷದ ಅಧ್ಯಕ್ಷ ಶ್ರೀ ಪಳ್ಳ ಪದ್ಮನಾಭ ಭಟ್, ಸಭಾದ ಉಪಾಧ್ಯಕ್ಷ ಶ್ರೀ ಕೆ.ಎಸ್.ಶಾಸ್ತ್ರಿ ವೇದಿಕೆಲಿ ಇದ್ದಿದ್ದವು.
ಚಂಡೆ, ಮೃದಂಗಲ್ಲಿ ವೆಂಕಟೇಶ ತಂತ್ರಿ, ಶಶಾಂಕ್, ಮೃದಂಗ, ತಾಳಲ್ಲಿ ಯೋಗ್ಯಶ್ರೀ, ದೀಪ್ತಿ, ನಿಕಿಲಾ, ಹಾಡುಗಾರಿಕೆಲಿ, ಧನ್ಯಶ್ರೀ, ನವ್ಯಶ್ರೀ, ಚಿನ್ಮಯಿ, ಐಶ್ವರ್ಯ, ಪವಿತ್ರ, ಪವನ್ ಕುಮಾರ್, ಸಂವಾದ ಜೈನ್, ನಿರೀಕ್ಷಾ, ಅನಿರುದ್ದ್, ಅನನ್ಯ ಪ್ರಭಾ, ಮತ್ತೆ, ಅಮೂಲ್ಯ ಭಾಗವಹಿಸಿದ್ದಿದ್ದವು.
ಕಾರ್ಯಕ್ರಮ ಚೆಂದ ಆತು, ಎಲ್ಲೋರಿಂಗು ಕೊಶಿ ಕೊಟ್ಟತ್ತು.
ಬಲ್ಲಿರೆನಯ್ಯ ರೈಸಿತ್ತಯ್ಯ ರೈಸಿತ್ತು ಶಾಬ ಭಾಲ ರೈಸಿತ್ತೊ ರೈಸಿತ್ತು ನಮ್ಮ ಹವ್ಯಕ ಮಕ್ಕಳಾ ಯಕ್ಸಗಾನ! ತಿಳುಶಿದ
ಕಲುಷಿದ ಎಲ್ಲೊರಿನ್ಗು ಒಪ್ಪೊನ್ಗೊ
Bolumbu mavana suddi odi khushi athu. Bengaloorilli agidre navagu hopalavthithu
ಶುದ್ದಿ ಹೇಳಿದ ಬೊಳುಂಬು ಭಾವಂಗೆ ತುಂಬಾ ಧನ್ಯವಾದಂಗೊ.
ಎಲ್ಲರ ಶುಭಾಶೀರ್ವಾದ ಆ (ಮಕ್ಕಳ) ಭಾವಿ ಕಲಾವಿದರ ಮೇಲಿರಲಿ…
ಸಂಬಂಧ ಪಟ್ಟ ಪ್ರಿನ್ಸಿಪಾಲ್ ಗಜಾನನ ಭಟ್ಟ್, .. ಗುರು ಬೈಪ್ಪಡಿತ್ತಯ ದಂಪತಿಗಕ್ಕೊ ನಮಸ್ಕಾರಂಗೊ..
ಅವಕಾಶ ಕೊಟ್ಟ ಮಂಗಳೂರು ಹವ್ಯಕ ಸಭಾ ಕ್ಕೆ ಪ್ರತ್ಯಕ ಕೃತಜ್ನತೆಗೊ
ಕೊಶೀ ಆತು ಮಾವ,ಶುದ್ದಿ ಓದಿ.
ಈ ಶಾಲೆಯ ನೆಡೆಶುವವಕ್ಕೆ ಅಭಿನ೦ದನೆ ಸಲ್ಲೆಕ್ಕು. ವೇದಿಕೆ ಒದಗುಸಿಕೊಟ್ಟ ”ಹವ್ಯಕ ವಲಯಕ್ಕೂ”
ಖುಶಿ ಆತು…
ಛೆ ! ಗೊಂತಾಗದ್ದೇ ಹೋತನ್ನೇ, ಶುದ್ದಿ ತಿಳುಶಿದ ಬೊಳುಂಬು ಮಾವಂಗೆ ಧನ್ಯವಾದಂಗೊ…
ಓ, ನಿನಗೆ ಗೊಂತಿತ್ತಿಲ್ಲೆ, ಹೇಳಿ ಎನಗೆ ಗೊಂತಾತಿಲ್ಲೇನೆ. ಪ್ರತಿ ತಿಂಗಳ ಕಡೇಣ ಆದಿತ್ಯವಾರ ಐದು ಗಂಟಕೆ ನಂತೂರು ಕಾಲೇಜಿಲ್ಲಿ ಮಂಗಳೂರು ಹವ್ಯಕ ಸಭೆಯ ಕಾರ್ಯಕ್ರಮ ಇದ್ದೇ ಇರ್ತು. ತಪ್ಪದ್ದೇ ಬಾ ಆತೊ.
ಕಾರ್ಯಕ್ರಮ ನಡೆಶಿಕೊಟ್ಟ ಮಕ್ಕೊಗೆ, ಅವಕ್ಕೆ ಪ್ರೋತ್ಸಾಹ ಕೊಡುವ ಅವರ ಗುರು ಹಿರಿಯರಿಂಗೆ ಅಭಿನಂದನೆಗೊ.
ಮಕ್ಕಳಲ್ಲಿ ಇಪ್ಪ ಸುಪ್ತ ಪ್ರತಿಭೆಗೆ ಇನ್ನೂ ಹೆಚ್ಚಿನ ಅವಕಾಶ ಸಿಕ್ಕಲಿ, ಯಕ್ಷಗಾನ ಕ್ಷೇತ್ರಲ್ಲಿ ಒಳ್ಳೆ ಹೆಸರು ಮಾಡಲಿ ಹೇಳಿ ಶುಭ ಹಾರೈಕೆಗೊ.
ಮಕ್ಕೊಗೂ,ಮಕ್ಕ ಕಲಿತ್ತ ಶಾಲೆಯೋರಿಂಗೂ ಅಭಿನಂದನೆಗೊ.
ಬೊಳುಂಬು ಮಾವನ ಶುದ್ದಿ ಓದಿ ನವಗೂ ಖುಶೀ ಆತು. ಪಟಂಗಳೂ ಲಾಯಕ ಆಯ್ದು. ಮಕ್ಕೊ ಇನ್ನೂ ವಿಜೃಂಭಿಸಲಿ ಹೇಳಿತ್ತು -‘ಚೆನ್ನೈವಾಣಿ’
“ಚೆಂದಕೆ ಎರಡು ಜೆಡೆ ಹಾಕಿ, ಹೂಗು ಮುಡುದು, ಲಂಗ ದಾವಣಿ ಹಾಕಿದ ಕೂಸುಗೊ ಭಾಗವತಿಕೆ ಮಾಡಿದ್ದದು, ತಾಳ ಕುಟ್ಟಿದ್ದದು, ಮದ್ದಳೆ ಬಡುದ್ದದು”… ಪ್ರತ್ಯಕ್ಷ ನೋಡುಲೆ ಎಡಿಗಾಯಿಲ್ಲೆ… ಮಾವನ ಫೋಟೋ ಗಳಲ್ಲಿ, ವಿವರಣೆಲ್ಲಿ ‘ಯಕ್ಷಧಾರೆ’ ನೋಡಿ ಖುಷಿ ಆತು… ಧನ್ಯವಾದ…
ಶುಭವಾಗಲಿ
ಸೂಪೆರ್…