ಬೊಳುಂಬುಮಾವನ ಗುರ್ತ ಇದ್ದನ್ನೆ!ಅದಾ, ಕೊಡೆಯಾಲಲ್ಲಿ ಬೇಂಕಿಲಿರ್ತವು!! ಕುಶಾಲಿಲಿ ಎಲ್ಲೊರನ್ನುದೇ ನೆಗೆನೆಗೆಲಿ ಮಾತಾಡುಸಿಗೊಂಡು ಇಪ್ಪದು, ಒಪ್ಪಣ್ಣಂಗೆ ಅವರತ್ರೆ ಮಾತಾಡ್ಳೆ ಕೊಶೀ ಅಪ್ಪದು.ಇವು ಪೈಸೆ ಕೊಡ್ತಲ್ಲಿ ಕೂದಿದ್ದರೆ ‘ನಗದು’ ಹೇಳ್ತ ಬೋರ್ಡಿನ ತಿರುಗುಸಿ ‘ನಗುವುದು’ ಹೇಳಿ ಮಾಡ್ತವಡ. ಮೂಲ ಬೊಳುಂಬು ಆದರೂ, ಅವು ಕಾರ್ಯನಿಮಿತ್ತ ಅಂದೇ ಊರು ಬಿಟ್ಟಿದವು..!ಊರು ಬಿಟ್ರುದೇ ಊರ ನೆಂಪು ಬಿಟ್ಟಿದವಿಲ್ಲೆ, ಹಳ್ಳಿಕ್ರಮಂಗಳ ಬಿಟ್ಟಿದವಿಲ್ಲೆ! ಕೊಡೆಯಾಲದ ಪೇಟೆನೆಡುಕೆ ಇದ್ದರುದೇ, ಪ್ರತಿಒರಿಶ ಸೋಣೆತಿಂಗಳಿಲಿ ಬೇಳೆಹೋಳಿಗೆ ಇದ್ದೇ ಇಕ್ಕು.ಆ ದಿನ ಒಪ್ಪಣ್ಣನ ದಿನಿಗೆಳಿಯೇ ದಿನಿಗೆಳುಗು! ;-)ಬೇಂಕಿಲಿ ಪೈಸೆ ಎಣುಶುದರ ಒಟ್ಟೊಟ್ಟಿಂಗೇ ಅವಕ್ಕೆ ಕೆಲವೆಲ್ಲ ಒಯಿವಾಟುಗೊ ಇದ್ದು!ಪಟತೆಗವದೋ, ಪದ್ಯಕಟ್ಟುದೋ, ಪದ್ಯ ಹಾಡುದೋ, ಕತೆಬರವದೋ, ಶುದ್ದಿ ಓದುದೋ, ಆಟ ನೋಡುದೋ, ಪಾಟಮಾಡುದೋ - ಇನ್ನೂ ಏನೇನೋ!ಇವರ ಪಟತೆಗೆತ್ತ ಮರುಳು ಇದ್ದಲ್ದ, ಅದರ ಒಂದು ಮೆಚ್ಚೆಕ್ಕಾದ್ದೇ, ತುಂಬ ಚೆಂದಕೆ ತೆಗೆತ್ತವಡ - ಅಜ್ಜಕಾನ ಬಾವ ಹೇಳಿತ್ತಿದ್ದ!ಎಲ್ಲಿಗೇ ಹೋಗಲಿ, ಪಟ ತೆಗದು, ಚೆಂದಲ್ಲಿ ಮಡಿಕ್ಕೊಂಗು. ಅವರ ಮನೆ ಗೋಡೆಲಿಡೀ ಅವು ತೆಗದ ಪಟಂಗಳೇ ಅಡ.ಅತ್ತೆಗೆ ವಾರವಾರ ಉಡುಗುವಗ ಬಂಙ ಅಪ್ಪದಿದಾ!ಮೊನ್ನೆ ಬೆಡಿರಿಪೆರಿಗೆ ಹೇಳಿಗೊಂಡು ಕೊಡೆಯಾಲಕ್ಕೆ ಹೋಗಿತ್ತಿದ್ದೆ.ಬೊಳುಂಬುಮಾವ ಸಿಕ್ಕಿದವು, ಪಣಂಬೂರಿಂಗೆ ಹೆರಟವು.ಕೆಮರದ ಬೇಗು ಕಂಡಪ್ಪಗ ಪಕ್ಕನೆ ಕೇಳಿದೆ, ಈ ಪಟಂಗ ನಮ್ಮ ನೆರೆಕರೆಗುದೇ ಕಾಣಲಿಯೋ?ಹೇಳಿಗೊಂಡು! ‘ಅಕ್ಕಪ್ಪಾ, ಧಾರಾಳ!’ ಹೇಳಿದವು. ಅವು ತೆಗದ ಚೆಂದದ ಪಟಂಗಳ ಒಪ್ಪಣ್ಣನ ಬೈಲಿ ತೋರುಸುಲೆ ಕೊಶೀಲಿ ಒಪ್ಪಿದವು.ನೋಡುವ ಕೆಲಸ ನಮ್ಮದು! ಅದರೊಟ್ಟಿಂಗೆ ಪುರುಸೊತ್ತಪ್ಪಗ ಶುದ್ದಿಗಳನ್ನೂ ಹೇಳ್ತವು. ಓದಿ, ಒಪ್ಪ ಕೊಡುವೊ.
ಮುಳಿಯದಜ್ಜನ ಆಟ ನೋಡ್ಲೆ ಒಂದು ಒಳ್ಳೆ ಅವಕಾಶ ಸಿಕ್ಕಿತ್ತು.ಪೂರ್ತಿ ನೋಡ್ಲೆ ಎಡಿಗಾಯಿದಿಲ್ಲೆ.ಬೊಳೂಂಬು ಮಾವನ ಸಚಿತ್ರ ವರದಿಂದಾಗಿ ಆ ಕೊರತೆ ನೀಗಿತ್ತು.
ತಿಮ್ಮಪ್ಪಯ್ಯರ ಮಗ,ಮಗಳು, ಅಳಿಯಂದ್ರ ಕಂಡು ಬಾಯಿ ತುಂಬ ಮಾತಾಡ್ಲೆ ಸಿಕ್ಕಿದ್ದು ಕೊಶೀ ಆತು.
ಪಟ ತೆಗದು ಬೈಲಿಲಿ ಹ೦ಚಿದ ಬೊಳು೦ಬು ಮಾವ೦ಗೆ ಧನ್ಯವಾದ.
ಗಡಿಬಿಡಿಲಿ ಎಲ್ಲಾ ನೆರೆಕರೆಯ ನೆ೦ಟ್ರಿ೦ಗೆ ಹೇಳಿಕೆ ಹೇಳುಲೆ ಎಡಿಗಾತಿಲ್ಲೆ,ಕ್ಷಮೆ ಇರಳಿ.
ದೊಡ್ಡಜ್ಜ ನೂರು ಬವರುಷ ಮದಲು ಬರದ ಅದ್ಭುತ ಪ್ರಸ೦ಗಲ್ಲಿ ಮೂರು ಜೆನ ಪುಳ್ಯಕ್ಕೊಗೆ ಪಾತ್ರ ವಹಿಸುವ ಯೋಗ ಸಿಕ್ಕಿದ್ದು ಎ೦ಗೊಗೆ ತು೦ಬಾ ನೆಮ್ಮದಿ ತಯಿ೦ದು.
ಗೊಪಾಲಣ್ಣ ಹೇಳಿದ ಹಾ೦ಗೆ ಒ೦ದು ವಿಶೇಷ ನಡೆಯ ಪ್ರಸ೦ಗ ಇದು.ಉದಿಯಪ್ಪಗಾಣ ಹೊತ್ತಿಲಿ ಅತ್ಯುತ್ತಮವಾಗಿ ಪ್ರದರ್ಶನ ಮಾಡಿದ ನಿಡ್ಲೆ ಗೋವಿ೦ದಣ್ಣನ ತ೦ಡದ ಪ್ರಯತ್ನಕ್ಕೆ ನೂರು ನಮಸ್ಕಾರ.
ಸೂರ್ಯಕಾಂತಿ ಕಲ್ಯಾಣದ ಪ್ರದರ್ಶನದ ಬಗ್ಗೆ ಓದಿ ಕುಶಿ ಆತು. ಮುಳಿಯರ ಒಂದು ಕ್ಲಿಷ್ಟ ಕೃತಿ ಇದು.ಬಾಕಿ ಪ್ರಸಂಗದ ಹಾಂಗೆ ಸರಳ ಇಲ್ಲೆ.
‘ಸೂರ್ಯಕಾಂತಿ ಕಲ್ಯಾಣ’ದ ಎರಡನೆಯ ಪ್ರಯೋಗ ಭಾರೀ ಲಾಯಕಾಯಿದು ಹೇದು ಪ್ರತ್ಯಕ್ಷದರ್ಶಿಗೊ ಹೇಳಿದವು.
ಹರೇ ರಾಮ.
ಸಚಿತ್ರ-ಶುದ್ದಿ ಭಾರೀ ಲಾಯ್ಕಾಯಿದು ಬೊಳುಂಬುಮಾವ. ಅಲ್ಲಿಗೆ ಬಾರದ್ದರೂ ಆಟದ ದೃಷ್ಯಂಗೊ ಕಣ್ತುಂಬಿತ್ತು.
ಸೂಪರ್ ಆಯಿದು ಮಾವ°. ಆಟ ನೋಡಿದಾಂಗೇ ಆತು…
ಪಟ೦ಗ ಚ೦ದಾಯಿದು. ಧೂಮ್ರಶಿಖೆ-ಕಾ೦ತಿ ಕ್ಯೂಟಾಗಿ ಕಾಡುತ್ತು!!!
ಬೊಳುಂಬು ಮಾವಂಗೆ ಹರೇ ರಾಮ. ಶುದ್ದಿಯೂ ಪಟವೂ ನೋಡಿ ಕೊಶಿ ಆತಿದಾ. ಮುಳಿಯದೋರಿಂಗೆ ಧನ್ಯವಾದ, ಪ್ರತಿಷ್ಠಾನಕ್ಕೆ ಅಭಿನಂದನೆ.
ಶುದ್ದಿ ಗೊ೦ತಾಗದ್ದೆ ಹೋತನ್ನೆಭಾವ! ವರ್ತಮಾನ ಸಿಕ್ಕಿರೆ ಬಪ್ಪಲಾವುತ್ತಿದಾ?ಏ೦ತಮಾಡುವದು ಪ್ರಾಪ್ತಿ ಬೇಕನ್ನೆ! ಶುದ್ದಿಯನ್ನೂ,ಪಟವನ್ನೂ ಹಾಕಿದ ಬೊಳು೦ಬು ಮಾವ೦ಗೆ ಧನ್ಯವಾದ೦ಗೊ.ಹರೇ ರಾಮ.
ಕೊಶಿ ಆತು ಮಾವಾ, ಆಟದ ಕಥೆ ಚಿತ್ರಣದ ರೂಪಲ್ಲಿ ಚೆಂದಕೆ ಸಿಕ್ಕಿತ್ತು,
ಆನು ಅಲ್ಲಿಗೆ ತಲಪುವಗ ಅಟ ಸುರುವಾಗಿದ್ದತ್ತು,
ಹಾಂಗಾಗಿ ಪೂರ್ತಿ ಆಟ ನೋಡ್ಳೆ ಎಡಿಯದ್ದ ಬೇಜಾರು ಇದ್ದತ್ತು,
ಈಗ ಸಮಧಾನ ಆತು,
ಥ್ಯಾಂಕ್ಸ್…