Oppanna.com

ನಾಚಿಕೆಕೇಡು…

ಬರದೋರು :   ಡೈಮಂಡು ಭಾವ    on   10/10/2010    27 ಒಪ್ಪಂಗೊ

ಡೈಮಂಡು ಭಾವ

ಮೋರೆಲಿ ಚೋಲಿ ಇಲ್ಲೆಯಾ ಬಾವಾ ಇವಕ್ಕೆ. ಮಾನ ಮರಿಯಾದೆ ಹೇಳಿದರೆ ಎಂತ ಹೇಳಿ ಗೊಂತಿದ್ದ? ಏವ ಭಾಷೆಲಿ ಬೈಯೆಕ್ಕು ಹೇಳಿ ಗೊಂತಾವುತಿಲ್ಲೆ ಈ ರಾಜಕಾರಣಿಗಳ, ಬಿಜೆಪಿ ಸರ್ಕಾರವ, ವಿರೋಧ ಪಕ್ಷಂಗಳ. ಪಕ್ಷ ನಿಷ್ಠೆ, ಸಿದ್ಧಾಂತಕ್ಕೆ ಬದ್ಧವಾಗಿಪ್ಪ ಗುಣ ಇವರ ಜನ್ಮಲ್ಲೇ ಬೈಂದಿಲ್ಲೆಯ ಕಾಣ್ತು. ಸ್ವಾರ್ಥ ಸಾಧನೆಯೇ, ಕಿಸೆ ದಪ್ಪ ಮಾಡುವ ಕೈಂಕರ್ಯವೇ ಮೇಲಾವ್ತ ಇದ್ದನ್ನೇ ಹೇಳಿ ಅನುಸುತ್ತು.

ಕಳೆದ ಐದು ದಿನಂದ ರಾಜ್ಯದ ರಾಜಕೀಯ ನೋಡ್ತಾ ಇಪ್ಪಗ ಹೀಂಗೆ ಹೇಳೆಕ್ಕಾವ್ತು. ಅಭಿವೃದ್ಧಿಯ ಜಪಲ್ಲಿ ಆಡಳಿತಕ್ಕೆ ಬಂದ ಬಿಜೆಪಿಯ ಬಗ್ಗೆ ಜನಂಗೊಕ್ಕೆ ಇದ್ದ ನಿರೀಕ್ಷೆಗೊ ಕಡಮ್ಮೆಯಾ? ಕಾಂಗ್ರೆಸ್, ದಳದ ಆಡಳಿತಕ್ಕೆ ಅವಕಾಶ ಮಾಡಿಕೊಟ್ಟ ಕರ್ನಾಟಕದ ಜನಂಗೊ  ಬಿಜೆಪಿಗೂ ಒಂದು ಅವಕಾಶ ಕೊಟ್ಟಿತ್ತವು. ಬೆಜೆಪಿಂದ ರಾಜ್ಯಕ್ಕೆ ಒಳ್ಳೆ ಆಡಳಿತ ಸಿಕ್ಕುಗು ಹೇಳ್ತ ನಿರೀಕ್ಷೆಯೂ ಅವರದ್ದಾಗಿತ್ತು. ಆದರೆ ಇವು ಮಾಡಿದ್ದು ಎಂತರ? ಶಿಸ್ತಿನ ಪಕ್ಷದ ಸದಸ್ಯರು ಹೇಳಿ ದಿನೆಗೊಳಿಸಿಕೊಂಡವು,  ಅವರ ಕುಟುಂಬದವರ ಕಿಸೆ ದಪ್ಪ ಮಾಡಿದ್ದು, ಸಾಮ್ರಾಜ್ಯ (ಆಸ್ತಿ) ವಿಸ್ತರಣೆ ಮಾಡಿದ್ದು ಬಿಟ್ಟರೆ ಬೇರೆಂತ ಮಾಡಿದ್ದವು?

ಎಲ್ಲಾ ಪಕ್ಷದವೂ, ಎಲ್ಲಾ ಸರ್ಕಾರದ ಹುರಿಯಾಳುಗಳುದೆ ರಜ್ಜ ರಜ್ಜ ಬೇರೆ ಬೇರೆ ವೈವಾಟು (ನಿಂಗೊ ಅರ್ಥ ಮಾಡಿಗೊಂಬಿ) ಮಾಡ್ತವು ಹೇಳುವ. ಆದರೆ ಶಿಸ್ತು,  ಸಿದ್ಧಾಂತ, ನಿಷ್ಠೆ ಹೇಳಿ ಕೊಚ್ಚಿಕೊಳ್ಳುವವು ಹಾಂಗೆ ಮಾಡ್ಳೆ ಆವುತ್ತಿತಿಲ್ಲೆ. ಹೋಗಲಿ ಅದನ್ನೂ ಕ್ಷಮಿಸುವ. ಅಕೇರಿಗೆ ಒಂದು ಸ್ಥಿರ ಆಡಳಿತ ಕೊಡ್ಳೆ ಆತಾ ಇವಕ್ಕೆ. ಸಂಪೂರ್ಣ ಬಹುಮತ ಇದ್ದುಗೊಂಡು ಸರ್ಕಾರ ನಡೆಸಲೆ ಇವಕ್ಕೆ ಎಡಿಗಾವುತ್ತಿಲ್ಲೆ ಹೇಳಿದರೆ ಅದಕ್ಕಿಂತ ದೊಡ್ಡ ನಾಚಿಕೆಗೇಡು ಇನ್ನೊಂದಿದ್ದ?

ಮಾನ್ಯ ಯಡಿಯೂರಪ್ಪನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಏನೆಲ್ಲಾ ನಡದ್ದು ಹೇಳಿ ಲೆಕ್ಕಹಾಕುದಕ್ಕೆ ಬದಲು ಎಂತ ನಡೆದಿಲ್ಲೆ ಹೇಳ್ತದರ ಲೆಕ್ಕ ಹಾಕುದು ಸುಲಭ. ಶಾಸಕ ಸಂಖ್ಯೆ ಕಡಮ್ಮೆ ಆತು ಹೇಳಿ ಆಪರೇಷನ್ ಕಮಲ. ಅಲ್ಲಿ ಕುದುರೆ ವ್ಯಾಪಾರ, ಕೆಲವರ ಶಾಸಕರ ರಾಜೀನಾಮೆ ಕೊಡ್ಸಿ, ಅವಕ್ಕೆ ಮಂತ್ರಿ ಆಮಿಷ ತೋರ‍್ಸಿ ಇತ್ಲಾಗಿ ಕರಕ್ಕೊಂಡು ಬಂದಾತು. ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದು ಕೆಲವು ತಿಂಗಳು ಅಪ್ಪಗ ಹಾರಿದ ರೆಡ್ಡಿ ಪಡೆಯ ಭಿನ್ನಮತದ ದೂಳಿಲ್ಲಿ ಇಡೀ ಸರ್ಕಾರವೇ ಮುಚ್ಚಿ ಹೋಪ ಚಾನ್ಸು ಇತ್ತು.
ಅತ್ಲಾಗಿ ಮಳೆ ಬಂದು ನೀರಿಲ್ಲಿ ಉತ್ತರ ಕರ್ನಾಟಕ ಇಡೀ ಕೊಚ್ಚಿಕೊಂಡು ಹೋದಪ್ಪಗ  ಇವರದ್ದು ರೆಸಾರ್ಟ್ ರಾಜಕಾರಣ ನಡದತ್ತು. ಸಂತ್ರಸ್ತರ ವಿಷಯ, ಅವಕ್ಕೆ ಸಕಾಯ ಮಾಡುದು ಬಿಟ್ಟು ಇವು ತಮ್ಮ ಬೇಳೆ ಬೇಯಿಸಿಕೊಂಬಲೆ ಹೆರಟವು.  ಅಂಬಗ
ಕೂಗಿ, ಬೇಡಿ, ಕೆಲವರ ತಲೆದಂಡ ಕೊಡ್ಸಿ, ರೆಡ್ಡಿಗಳ ಸಮಾಧಾನ ಮಾಡಿ ರಾಜ್ಯ ಸರ್ಕಾರ ಉಳುದ್ದು ಮಾತ್ರವಲ್ಲ  ಯಡಿಯೂರಪ್ಪ ಖುರ್ಚಿಯೂ ಉಳುಸಿಕೊಂಡತ್ತು.

ಅದಾದ ನಂತರ ಮತ್ತೆ ಒಳಜಗಳ, ಭಿನ್ನಮತ, ಒಬ್ಬನ ಕಾಲು ಮತ್ತೊಬ್ಬ ಎಳವದು. ಹೀಂಗೆ ಹಾಂಗೆ ಹೀಂಗು, ತೇಲಿಗೊಂಡೊ, ಉಯ್ಯಾಲೆ ಆಡಿಗೊಂಡೊ ಸರ್ಕಾರ ಮುಂದೆ ಹೋಗಿಯಿಂಡು ಇಪ್ಪಗಳೇ ಹಗರಣಂಗೊ ಹೆಗ್ಣಂಗಳ ಹಾಂಗೆ ಸರ್ಕಾರವ ತಿಂಬಲೆ ಸುರುಮಾಡಿತ್ತು. ಭೂ ಹಗರಣ, ಗಣಿ ಹಗರಣ,  ಹೀಂಗೆ ಪಟ್ಟಿ ದೊಡ್ಡದಿದ್ದು. ಇದರ ಒಟ್ಟೊಟ್ಟಿಂಗೆ  ಸಂಪುಟ ವಿಸ್ತರಣೆ, ಪುನರ್‌ರಚನೆ  ಚರ್ಚೆ ಅಲ್ಲಿ ಒಂದಿಷ್ಟು ಗಲಾಟೆ ಎನಗೆ ಕೊಡಿ, ಅವಕ್ಕೆ ಕೊಡಿ, ಇವಕ್ಕೆ ಬೇಡ ಹೇಳ್ತ ಗಲಾಟೆಗೊ. ಅಲ್ಲೂ ಭಿನ್ನಮತ ಏಳುವ ಸಂಭವ ಇತ್ತು. ಆದರೆ ಹಾಂಗೆ ಆಯಿದಿಲ್ಲೆ. ದೇವರು ದೊಡ್ಡವ.

ಈಗ ಐದು ದಿನಂದ ನಡೆಯುತ್ತಾ ಇಪ್ಪದು ಹೊಸ ಪ್ರಹಸನ. ಕಾಮೆಡಿ ಸೀರಿಯಲ್ಲಿಂದಲೂ ಕಡೆ. ಅತೃಪ್ತರು ಚೆನ್ನೈಗೆ ಹೋಪದು ಅವರ ಹಿಂದೆ ಇಲ್ಲಿಂದ ಸಂಧಾನಕ್ಕೆ ಇನ್ನೊಂದಷ್ಟು ಜನಂಗ, ಅವರ ಕಣ್ತಪ್ಪಿಸಿ ಇವು ಇನ್ನೊಂದು ದಿಕ್ಕಂಗೆ. ಅಲ್ಲಿಂದ ಮತ್ತೊಂದು ದಿಕ್ಕಂಗೆ.. ಅವಕ್ಕೆ ಓಟು ಹಾಕಿದ ಜನಂಗ, ಕ್ಷೇತ್ರವ  ಬಿಟ್ಟು ಸ್ವಾರ್ಥ ಸಾಧನೆ ಮಾಡಿಗೊಂಬಲೆ ರೆಸಾರ್ಟುಗೊಕ್ಕೆ ಹೋಗಿ ಮಜಾ ಮಾಡ್ತಾ ಇದ್ದವು. ಎಂಥಾ ದುರಂತ. ಇನ್ನೂ ವಿಪರ್ಯಾಸ ಹೇಳಿದರೆ ಕಳೆದ ವರ್ಷ ಭಿನ್ನಮತ ಸೃಷ್ಟಿಕರ್ತ ರೆಡ್ಡಿ ಇಂದು ಸಂಧಾನಕಾರ! ಈಗ ರೆಡ್ಡಿಗವೊಕ್ಕೆ ಸರ್ಕಾರ ಉರುಳುದು ಬೇಡ. ಅದಕ್ಕೆ ಈ ದೊಂಬರಾಟ.
ಈ ಮಂತ್ರಿಗೊ, ಶಾಸಕಂಗೊ ಇಷ್ಟು ದಿನ ವಿಧಾನಸೌಧಲ್ಲಿ ಇತ್ತಿತವು ಹೇಳುದರ ಲೆಕ್ಕ ಹಾಕಲಕ್ಕು, ಹಲವು ದಿನಂಗಳ ಅವು ಕಳದ್ದು ರೆಸಾರ್ಟುಗಳಲ್ಲಿಯೇ.

ಇದು ಸರ್ಕಾರದ ವಿಷಯಂಗ ಆತು. ಇನ್ನು  ವಿರೋಧ ಪಕ್ಷಂಗಳ ವಿಚಾರ ನೋಡುವಾಗ ಅವರದ್ದೂ ಭಿನ್ನ ಏನೂ ಇಲ್ಲೆ. ಈ ಎರಡೂವರೆ ವರ್ಷ ಅವು ವಿರೋಧ ಪಕ್ಷಗಳಂಗೆ ಕಾರ್ಯ ನಿರ್ವಹಿಸಿದ್ದವೇಲ್ಲೆ. ಅಲ್ಲೂ ಹಾಂಗೆ ಒಬ್ಬರ ಕಂಡ್ರೆ ಇನ್ನೊಬ್ಬರಿಂಗೆ ಆವುತ್ತಿಲ್ಲೆ. ಒಬ್ಬನ ಕಾಲು ಇನ್ನೊಬ್ಬನ ಎಳವದು. ಎಂಗ ವಿರೋಧ ಪಕ್ಷ ಹೇಳಿ ಕಾಂಗ್ರೆಸ್ಸು ತೋರ‍್ಸಿದ್ದು ಮೊನ್ನೆ. ಅಕ್ರಮ ಗಣಿಗಾರಿಕೆ ವಿಷಯಲ್ಲಿ ಮಾತ್ರ. ಅದು ಪಾದಯಾತ್ರೆ ಮಾಡುವ ಮುಖಾಂತರ. ಕಾಂಗ್ರೆಸ್, ದಳಂದ ಜಾಸ್ತಿ ಅವರಿಂದ ಜಾಸ್ತಿ ರಾಜ್ಯಪಾಲರೇ ವಿರೋಧಪಕ್ಷಗಳ ಹಾಂಗೆ ಕೆಲಸ ಮಾಡಿದ್ದವು!
ಈಗ ನಡೆಯುತ್ತಿಪ್ಪ ರಾಜಕೀಯ ಪ್ರಹಸನದ ಸೂತ್ರಧಾರ ಕುಮಾರಸ್ವಾಮಿ. ಅವಂಗೆ ಒಳ್ಳೆ ಹೆಸರಿತ್ತು. ಅಂದು ಯಡಿಯೂರಪ್ಪಂಗೆ ಅಧಿಕಾರ ಕೊಡದ್ದೆ ಮರಿಯಾದಿ ಕಳಕ್ಕೊಂಡ°. ಆದರೆ ಅವನ ಹೆಸರಿಂಗೆ ಏನೂ ಕೊರತೆ ಆಗಿತ್ತಿಲ್ಲೆ.

ಆದರೆ, ಈಗ ಭಿನ್ನಮತೀಯರ ಕೂಡಿಸಿ ಮತ್ತೆ ವಿಲನ್ ಆಯಿದ. ಅವನ ಗುರಿ ರೆಡ್ಡಿಗಳ ಹೆಣವದು. ಅದಕ್ಕೆ ಸರ್ಕಾರ ಉರುಳೆಕ್ಕು. ಒಂದೋ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಬರೆಕ್ಕು ಇಲ್ಲದ್ರೆ ರಾಷ್ಟ್ರಪತಿ ಆಡಳಿತ ಜಾರಿಗೆ ಬರೆಕ್ಕು, ರಾಜ್ಯಪಾಲರುದೆ ಗಣಿ ಮಾಫಿಯಾವ ಕೊನೆಗಾಣುಸಲೆ ಕೊಡಿಕಾಲಿಲ್ಲಿ ನಿಂದಿದವು. ಪ್ರತಿ ದಿನ ರಾಷ್ಟ್ರಪತಿಗೆ ವರದಿ ಕೊಡ್ತಾ ಇದ್ದವು. ಜೆಡಿಎಸ್-ಕಾಂಗ್ರೆಸ್ ಸರ್ಕಾರ ಮಾಡುದು ಮತ್ತಾಣ ವಿಷಯ. ನಾಳ್ತು ಬಿಜೆಪಿ ಸರ್ಕಾರ ವಿಶ್ವಾಸ ಮತ ಕಳಕ್ಕೊಂಡ್ರೆ ಮೊದಲು ರಾಷ್ಟ್ರಪತಿ ಆಡಳಿತ ಜಾರಿಗೆ ಬತ್ತು. ವಿರೋಧ ಪಕ್ಷಂಗಳಿಗೂ ಅದೇ ಬೇಕದ್ದು.

ಈಗಣ ಪರಿಸ್ಥತಿ ನೋಡಿದರೆ ಸರ್ಕಾರ ಉರುಳುವ ಎಲ್ಲಾ ಲಕ್ಷಣವೂ ಕಾಣ್ತ ಇದ್ದು. ನಾಳಂಗೆ ನಿಘಂಟು ಗೊಂತಾವ್ತು.

ಕಡೇ ಮಾತು : ಹೀಂಗೆ ಮೊನ್ನೆ ಆಫೀಸಿಲ್ಲಿ ಈಗ ರಾಜಕಾರಣ ಹೇಳಿದರೆ ಬ್ಯುಸಿನೆಸ್ ಹೇಳಿ ಆರೋ ಹೇಳಿದವು. ಅದಕ್ಕೆ ಹಿರಿಯ ವೆಗ್ತಿಯೊಬ್ಬ ರಾಜಕಾರಣ ಯಾವತ್ತೂ ಸಮಾಜದ, ಜನರ ಒಳ್ಳೆದಕ್ಕಾಗಿ ಆಯಿದಿಲ್ಲೆ.  ರಾಜಕಾರಣವ ಇತಿಹಾಸ ನೋಡಿದರೆ ಬ್ಯುಸಿನೆಸ್ ಬಿಟ್ರೆ ಅಲ್ಲಿ ಬೇರೆಂತು ಇತ್ತಿಲ್ಲೆ ಹೇಳಿ ಹೇಳಿದವು.

ಆದಿಕ್ಕೂ ಆದರೆ ಈಗಣಷ್ಟು ಮಟ್ಟಿಂಗೆ ಇದ್ದಿರಾ ಅಲ್ಲದೋ. ಈಗ ಸೂಟುಕೇಸು ಹೊರತಾಗಿ ಬೇರೆಂತು ರಾಜಕಾರಣಲ್ಲಿ ಕೇಳಿ ಬತ್ತಿಲ್ಲೆ. ಹೇಂಗಿತ್ತು ಹೇಂಗಾಗಿ ಹೋತು….

ರಾಜಕೀಯ ಹೇಳಿದರೆ ಹಂಗೇನೇ.. ಹೇಳಿ ಅಜ್ಜಕಾನ ಬಾವ ಮೊನ್ನೆ ಹೇಳಿಗೊಂಡು ಇತ್ತಿದಾ. ನಿಜಾ ಹೇಳಿ ಅನುಸುತ್ತು.

-ಕೆಪ್ಪಣ್ಣ

27 thoughts on “ನಾಚಿಕೆಕೇಡು…

  1. ವೈ.ವೀ ಮಾವಾ° ಒಪ್ಪಕ್ಕೆ ಧನ್ಯವಾದ
    (ನೆಗೆಟಿವ್‌ ಓಟಿಂಗ್‌)ನಿಂಗಳ ಸಲಹೆ ಒಳ್ಳೆದಿದ್ದು…

  2. Sorry freinds. Eagana rajakeeyalli, vyavastheli aradaru hechu otu sikkidavu gelludu.Ella partigalli ippadu goondango.Elloru rajakeeya maduvudu paisegagi. Ondu dari haelidare “negative voting ” bareku .Arude bedaddare beda heli vote hakule irekku.Hangadare hechu vote Beda heli bandare thirugi vote bareku. Hanagadare mantra olleyavara select madlakku.Alladdare in munde kallango, kolepatakigo, mosa maduthavu,lotte heluthavu,rape mdidavu mantra votinge ningu .Adu avakke badukkale bekagi.
    Yogyaru, vidyavantaru, samartharu, samajika kalakali ippavu arude votinge nimbadu kashta.Avu entahru sanna mattinge samaja seve madugu.Avakke hoogina male, shaalu ,photo beku heli ille.Idu nirashe alla, paristhithi.Navella ondu kalalli kumbale seeme ge bandavu. Indu hange hopale heratavu .Oorilli thuba kashta. Idu namage mantra alla. Ella oorilliu krishikaringe banda tondare.Sarakarada neeti, sampadanege bere bere dari iddu.Ellavannu paiseli tugua kala.Vidyege, buddige,maryadi ille, bele ille.Paise ondiddare saku.Namma “basic strcture ” badalaidu . Prashne ippadu , idu heenge irekka all badalayekka heludu”. Namma uddesh paise madude heli adare heengippa badalavanegala oppigomba.

    Ella partigalu onde.Rajakeeyakke iludavella onde jathi.Avu anna tammandru.Raja aachavange paise hechadare ivange hotte kitchu. Indu jagaladidavu nalange onde.Konage namgelloringu tondare.

    1. nice… ವೋಟು ಕಡ್ಡಾಯ ಮಾಡದ್ದೆ, ನೆಗೆಟಿವ್ ವೋಟಿಂಗ್ ಇಲ್ಲದ್ದೆ ಇಪ್ಪ ಕಾರಣವೇ ಹಿಂಗಿಪ್ಪ ಮಂಗಂಗೋ ಕುರ್ಚಿಲಿ ಹತ್ತಿ ಕುದೊಂಡದು …

  3. Public memory short heluvadu sari aadare aagaaga nempusiyondiddare nempakkada.kelavu jana aadaru nelakke eliyalee beku rajya oliyekaare.enna appa Panchaayath memberaagiddiddavu avakke ottu ootu kalivaaga aada karchu Rs.18 paise 75.ennu paisele ootu gelluttavu adara baddi sameta vasulu maadadde ekko? (Appa member aaddu 60ra dashakalli)Nelakke eludu kelasa maadeku heliddara uddesha enta helire saadya eddastu patrikagokke ,madyamango T.V.etc.prati vykti maadida brastaachaara vishwasa vanchane (avan yavade party aagirali)etyaadigala tilusutta hoyeku yevadee party avange ticket kottare gelladda paristiti tandu madageku.avu yava contituvency yavo alli hechhu prachara kodeku;ondu hanta varege phalakaari akku.sampurna akku helta brame enage elle aadaru prayatna nedeku.oppangalottinge.

  4. ಗ್ರಹಚಾರಕ್ಕೆ ಓಡಿಗೊಂಡು ಹೋಗಿ ಪುತ್ತೂರಿಲಿ ವೋಟು ಹಾಕಿದ್ದು ಅಂದು.. ಇಲ್ಲದ್ರೆ ಅವಂದ ಕಡೆಯವು ಬಕ್ಕು..

  5. ಇದೀಗ ಬಂದ ಸುದ್ದಿ – ಗುಣಾಜೆ ಮಾಣಿ ಹೇಳಿದ್ದು!
    ಸಧ್ಯ ಕರ್ಣಾಟಕ ಸರಕಾರ ೧೦೬-೦ ದ್ವನಿ ಮತದ ನಿರ್ಣಯಂದ ಗೆದ್ದಿದು..
    ಆದರೆ ರಾಜ್ಯಪಾಲ ಇದರ ಒಪ್ಪ, ಹಾಂಗಾಗಿ ಮತ್ತೆ ರಾಜ್ಯಪಾಲರ ಆಡಳಿತ ಬಕ್ಕೊ ಕಾಣ್ತು..

  6. ಇಂದು ಉದಿಯಪ್ಪಗ ಬಪ್ಪಗ ಈ ಚೋಲಿ ಇಲ್ಲದ್ದ ಪ್ರಾಣಿಗಳ ದರುಶನ ಭಾಗ್ಯ ಸಿಕ್ಕಿತ್ತು.ಮೂರು ವೋಲ್ವೋ ಬಸ್ಸಿಲಿ ಪೋಲಿಸ್ ರಕ್ಷಣೆಯ ಒಟ್ಟಿ೦ಗೆ ,ಭಾಜಪ ದ ಶಾಸಕರು ವಿಧಾನಸೌಧದ ಹೊಡೆ೦ಗೆ ಹೋದವು.ಸುಮಾರು ಐವತ್ತು ವಾಹನ೦ಗಳಲ್ಲಿ ರೌಡಿಗಳೂ ಇತ್ತಿದ್ದವು,ಇವರ ಹಿ೦ದ೦ದ. ಅತ್ತ ದರೆ ಇತ್ತ ಪುಲಿ, ಈ ನಾಡಿ೦ಗೆ ಬ೦ದ ದುರ್ಗತಿಯೇ !!!

    1. ಮುಳಿಯ ಬಾವಾ ಒಪ್ಪಕ್ಕೆ ಧನ್ಯವಾದ…
      ಎಂತ ಮಾಡುದು ಪರಿಸ್ಥಿತಿ ಕೈ ಮೀರಿ ಹೋಯಿದು

      1. ೪೦% ಜನ ವೋಟು ಹಾಕಿ ನಿಲ್ಲಿಸಿದ ಸರ್ಕಾರ… ಇನ್ನೂ ಎಷ್ಟು ಚಂದ ಆಡಳಿತ ಮಾಡೆಕು????

  7. ಕರ್ಣಾಟಕ ರಾಜಕೀಯದ ಬಗ್ಗೆ ಮಾತಾಡಿ ಬಾಯಿ ಬಚ್ಚಿಸಿಗೊಂಬಲೆ ಅಕ್ಕು. ದೂರ್ವಾಸ ಮುನಿಯ ಅಪರಾವತಾರದ ಹಾಂಗಿಪ್ಪ ಯೆಡ್ಡಿ, ಎಂತದೂ ಹಾಯದ್ದಿಪ್ಪಗ ಕಂಡ ಕಂಡ ದೇವರಿಂಗೆ ನಮಸ್ಕಾರ ಮಾಡುವ ಬದಲು ಜೆನಂಗಳ ಯೋಗ ಕ್ಷೇಮಕ್ಕೆ ಸಮಯ ಕೊಟ್ಟಿದ್ದರೆ, ಅವು ಆದರೂ suport ಮಾಡ್ತಿತ್ತವು.
    ಹಗರಣಂಗಳ ರಾಶಿಯನ್ನೇ ಹೊತ್ತೊಂಡು ಇಪ್ಪ ಸರ್ಕಾರ. ಅದರ ಮೇಲುಸ್ತುವಾರಿ ಮಾಡ್ಲೆ ಒಬ್ಬ ಮುಖ್ಯ ಮಂತ್ರಿ, ಪ್ರತಿ ಸರ್ತಿಯೂ ಸೋತಪ್ಪಗ ಇನ್ನು ಮುಂದೆ ಹಾಂಗೆ ಮಾಡ್ತಿಲ್ಲೆ, ಈ ಸರ್ತಿ ಒಂದರಿ ಮೇಲೆ ನೆಗ್ಗಿರೆ ಮತ್ತೆ ಆನು ಬೇರೆಯೇ “ಯೆಡ್ಡಿ” ಆವುತ್ತೆ ಹೇಳಿ ಎಲ್ಲರ ಎದುರು ಕಣ್ಣೀರು ಹಾಕುವದು…. ಯಾವ ಸಿನೆಮಾ ಕಂಪೆನಿಲಿ ಪಾರ್ಟ್ ಮಾಡಿದ್ದರೂ ಓಸ್ಕರ್ ಪ್ರಶಸ್ತಿಯೇ ಬತ್ತಿತೋ ಎಂತೋ.
    ಇನ್ನು ಪ್ರತಿ ಪಕ್ಷದವು ಇವಕ್ಕಿಂತ ಯಾವುದರಲ್ಲೂ ಕಮ್ಮಿ ಇಲ್ಲೆ ಹೇಳುವದರ ತೋರಿಸಿ ಕೊಟ್ಟಿದವು
    “ತೌಡು ಮುಕ್ಕೆಲ ಹೋದರೆ ಬಪ್ಪದು ಉಮಿ ಮುಕ್ಕೆಲ”

    1. ನಿಂಗೋ ಹೇಳಿದ್ದು ಅಪ್ಪು… ಕಡ್ಡಾಯ ಮತದಾನವೇ ಈ ಎಲ್ಲ ಸಮಸ್ಯೆಗೊಕ್ಕಿಪ್ಪ ಏಕೈಕ ಪರಿಹಾರ ಹೇಳಿ ಅನಿಸುತ್ತಾ ಇದ್ದು… ಎಂತ ಹೇಳ್ತಿ???

    2. ಅಪ್ಪಚ್ಚಿ ಧನ್ಯವಾದಂಗೊ ನಿಂಗಳ ಒಪ್ಪಕ್ಕೆ..
      ನಿಂಗ ಹೇಳಿದ್ದು ೧೦೦ ಪರ್ಸೆಂಟ್‌ ಸರಿ..
      (“ತೌಡು ಮುಕ್ಕೆಲ ಹೋದರೆ ಬಪ್ಪದು ಉಮಿ ಮುಕ್ಕೆಲ”)
      ಅದ್ಭುತ ವಾಕ್ಯ… ಹೆ ಹೆ ಹೆ 🙂

    3. {ತೌಡು ಮುಕ್ಕೆಲ ಹೋದರೆ ಬಪ್ಪದು ಉಮಿ ಮುಕ್ಕೆಲ}
      ಇದು ಎನಗೂ ಬೋಸಂಗೂ ಹೇಳಿದ್ದೋ ಹೇಂಗೆ? 😉

      1. ಏ ನಗೆಗಾರ
        ಬೋಸಂಗೆ ಹಾಂಗೆಲ್ಲ ಹೇಳ್ಲೆ ಆಗಪ್ಪ. ಅವನ ಹೇಂಗಾರೂ ಮಾಡಿ ಉಶಾರು ಮಾಡೆಕ್ಕು.
        ನೀನಂತೂ ಎಂಗಳ ಪುಟ್ಟ. ನಿನ್ನ ಹಾಂಗೆಲ್ಲ ಹೇಳ್ಲೆ ಆಕ್ಕೋ?

  8. ಬಾಣಲೆಂದ ತೆಗೆದು ಸೀದಾ ಕಿಚ್ಚಿಂಗೆ ಹಾಕಿದ ಹಾಂಗೆ ಆತು ಕರ್ನಾಟಕದ ಜನರ ಅವಸ್ಥೆ. ಆ ದೇವರೇ ಕಾಪಾಡೆಕ್ಕು. ಎಂಗ ಕೇರಳಲ್ಲಿ ಹುಟ್ಟಿದ ಕಾರಣ ಬಚಾವು ಆದೆಯ…!!!

    1. ಈ ಸಮಸ್ಯೆ ಬಾರೆ ಕರ್ನಾಟಕಕ್ಕೇ ಹೇಳಿ ಗ್ರೆಶಿಯೊಂದು ಸುಮ್ಮನೆ ಕೂದರೆ ಅದು ನಮ್ಮ ಕಾಲ ಬುಡಕ್ಕೆ ಬಪ್ಪಲೆ ಹೆಚ್ಚು ಹೊತ್ತು ಬೇಕಾಗ… beware..

    2. { ಬಾಣಲೆಂದ ತೆಗೆದು ಸೀದಾ ಕಿಚ್ಚಿಂಗೆ ಹಾಕಿದ ಹಾಂಗೆ }
      ಮುಣ್ಚಿಕಾನದ ಮುಣ್ಚಿಯನ್ನೋ? 😉
      ಅಪುರೂಪಕ್ಕೆ ಬೈಲಿಂಗೆ ಬಂದದು ಕೊಶಿ ಆತು.

  9. English fontilli baraddadakke kshame erasli.ningo Karnaatakadavu Biharinavara mirsiddi.Brastaachaarakke ondu trophy madagidre Commonwealthhilli eduraanavu evakke walkover kottu hera nedettitavu.Bahushaha 10ra olana sthanango beraaringuu sikka.anu commonwealth games avutha kaarana adara hesaru tegaddadu bhoolookallee evara mirsuvavu elle.Ningo naale ootu kele bappaga evara morage sagna niru tokale tayaariddare sari akku.ee haarida brastachaarada candidate gokke Ticket koduvaagalee edurseku adakkagiyee ondastu jena eludare khanditha saamaanya jena avarottinge battavu.oppangalottinge.

    1. public ನ ನೆಂಪು ಶಕ್ತಿ ತುಂಬಾ ವೀಕು ಭಾವ… ಇನ್ನಾಣ ಸರ್ತಿಯೂ ನಾವು ಅವಕ್ಕೆ ವೋಟು ಹಾಕುದು…

      1. ಧನ್ಯವಾದ ಇದ್ದು ಮಂಗ್ಳೂರು ಮಾಣಿಗೆ..
        ನೀನು ಹೇಳಿದಾಂಗೆ ಜನಂಗಳ ನೆಂಪು ಶಕ್ತಿ ತುಂಬಾ ವೀಕು..
        ಮರವ ಗುಣ-ದೇವರು ಮನುಷ್ಯಂಗೆ ಕೊಟ್ಟ ಅದ್ಭುತ ಗುಣ ಹೇಳಿ ಹೇಳ್ತವು

    2. ಕೃಷ್ಣಪ್ಪಚ್ಚಿ ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೊ..
      ನಿಂಗಳ ಒಪ್ಪ ಕಂಡಪ್ಪಗ ಎನಗೆ ಬೈದಾಂಗೆ ತೋರುತ್ತು 🙂
      ಹ್ಞಾಂ ಕಾಮನ್‌ವೆಲ್ತ್‌ ರಾಜಕೀಯವನ್ನುದೆ ಇದರೊಟ್ಟಿಂಗೆ ಸೇರಿಸಿದ್ದು ಲಾಯ್ಕಾ ಆಯ್ದು…
      ಧನ್ಯವಾದ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×