Latest posts by ಶೇಡಿಗುಮ್ಮೆ ಪುಳ್ಳಿ (see all)
- ಅಬ್ಬಿ ಗೀತೆ – ಶರಲ್ಲಿ - October 11, 2012
- ಸತ್ಯ – ಇ(೦)ದು - April 17, 2012
- ಅವಿಲಿನ ಹಾಂಗೇ – ಒಂದು ಪ್ರಯೋಗ - April 10, 2012
ಬಳುಸಿದೆಲೆ ಕಾಲಿ ಆತನ್ನೇ – ಓ ಕುಂಞಿ ಅಕ್ಕ
ಬಳುಸಿದೆಲೆ ಕಾಲಿ ಆತನ್ನೇ ||ಪ||
ಹಸರು ಸಿವುದೇ ಇತ್ತು
ನಾಕುಬಗೆ ತಾಳು ಇತ್ತು ||೨||
ಅವಿಲು ಬೆಂದಿ ಕೋಸಂಬರಿ
ಭಾರಿ ಲಾಯಿಕ ಇತ್ತನ್ನೇ ||ಬಳುಸಿದೆಲೆ||
ಸಾರಿಂಗೆ ಹಪ್ಪಳ ಇತ್ತು
ಕೊದಿಲಜೊತೆಲಿ ಮೆಣಸುಕಾಯಿ ಇತ್ತು ||೨||
ತೊಂಡೆಕಾಯಿ ಮೇಲಾರ
ಕಡ್ಲೆ ಹಾಕಿದ್ದಿತ್ತನ್ನೇ ||ಬಳುಸಿದೆಲೆ||
ಹಲ್ವ ಜಿಲೇಬಿ ಇತ್ತು
ಕಾಯಿ ಹೋಳಿಗೆ ಇತ್ತು ||೨||
ಬಾಳೆಹಣ್ಣಿನ ಪ್ರಥಮದ ಜೊತೆಲಿ
ಚೌಚೌದೇ ಇತ್ತನ್ನೇ ||ಬಳುಸಿದೆಲೆ||
ಚೂರ್ಣಿಕೆಯ ಗೌಜಿಯು ಇತ್ತು
ರೂಪಾಯಿ ಎರಡು ದಕ್ಷಿಣೆ ಇತ್ತು ||೨||
ಮೊಸರು, ಮಜ್ಜಿಗೆ ಉಂಡಪ್ಪಗಳೇ
ಹೊಟ್ಟೆ ಬಾದಿ ಆತನ್ನೇ ||ಬಳುಸಿದೆಲೆ||
ಉಂಡಮೇಲೆ ಹಣ್ಣುಗೊ ಇತ್ತು
ಕೊಚ್ಚಿದ ಹಣ್ಣಿನ ರಸಾಯನ ಇತ್ತು ||೨||
ಮಾವನ ಮನೆಯ ಊಟದ ಗೌಜಿ
ಗಮ್ಮತ್ತಿಲಿ ಮುಗುತ್ತನ್ನೇ ||ಬಳುಸಿದೆಲೆ||
ಪದ್ಯ ಭಾರೀ ಲಾಯಿಕಾಯಿದು.
ವಿದ್ಯಕ್ಕನ ಒಪ್ಪಕ್ಕೆ ನಮ್ಮ ಒಪ್ಪಂಗೊ…
ಪದ್ಯ ಬರದ್ದು ತು೦ಬಾ ಲಾಯಿಕಾಯಿದು..
ವಿನಯತ್ತೆಯ ಪ್ರೋತ್ಸಾಹಕ್ಕೆ ಧನ್ಯವಾದಂಗೊ….
ಪದ್ಯ ಬಾರಿ ಲಾಯಿಕಾಯಿದು..ಊಟಕಿತ್ತ ಬಗೆಗಳ ಓದಿಯೇ ಹೊಟ್ಟೆತು೦ಬಿತ್ತುಃ)
ಪಾಪ…. ಮನೆಲಿ ಇನ್ನು ನಿತ್ಯಕ್ಕೆ ‘ಊಟಕ್ಕೆಂತರ ಅಮ್ಮಾ’ ಹೇಳಿ ಕೇಳಿದಲ್ಲಿಗೇ ಹೊಟ್ಟೆ ತುಂಬುತ್ತೋ ಹೇಂಗೆ?!!
ಅಕ್ಕೋ, ಇದಾ ಹೀಂಗೆಲ್ಲಾ ಹೇಳೀರೆ ಇನ್ನು ಮುಂದಾಣ ಜೆಂಬ್ರಂಗಳಲ್ಲಿ ಅಂತೇ ಬಗೆಪಟ್ಟಿ ಮಾತ್ರ ಕೈಲಿ ಕೊಟ್ಟು ಸುದಾರುಸುಗು ಮತ್ತೆ ಜೆಂಬ್ರ ನವಗೆಲ್ಲಾ ರೈಸ ಇದಾ ಹಾಂ…
ಮಾವನ ಮನೆ ಊಟವೊ? ವರ್ಣನೆ ಲಾಯ್ಕ ಆಯಿದು.
ಅಪ್ಪು ಅಣ್ಣೋ, ಯಾವ ಮಾವ ಹೇಳಿ ಮಾತ್ರಾ ಕೇಳಿಕ್ಕೆಡಿ ಆತೋ .. ಧನ್ಯವಾದಂಗೊ.
ಏ ಭಾವಾ,
ಇನ್ನಾಣ ಸರ್ತಿ ಹತ್ತರತ್ತರೆ ಕೂಪೊ° ಆತೋ? ಹೇ°..
ಎಂತಾ, ಬಳುಸಿಯೊಂಡು ಬಪ್ಪಗ ನಾವು ನಾವು ಮಾತಾಡಿಯೊಂಡಿದ್ದರೆ ಬಾಳೆಲಗೆ ರಜಾ ಹೆಚ್ಚಿಗೆ ಬೀಳುಗು ಹೇಳಿಯೋ ಹೇಂಗೆ ?
ಹೆ ಹೆ ಹೆ 😉
ಹೆಚ್ಚಿಗೆ ಬಿದ್ದರೆ ತಿಂದರಾತಪ್ಪ..
ಯೋ….ಪ ನಮ್ಮಂದ ಸುದಾರುಸುಲೆ ಎಡಿಯಪ್ಪ, ಇಲ್ಲಿ ಬೋಚಭಾವಂದೇ ಹಾಂಗೇ ಹೇಳ್ತಾ ಇದ್ದ ಆ ಮಾಣಿ ತಿಂದರೆ ಅಡ್ಡಿ ಇಲ್ಲೆ ಹೇದು… ಹ್ಮ್ಮ್
ಬಳುಸುದು ಆರು ಹೇಳುದರ ಮೇಲೆ ತಿಂಬದು ಬಿಡುದು ನಿರ್ಧಾರ.. 😉
ಆರಡ?
ಊಟದ ಗೌಜಿ ಓದಿಯೇ ಹೊಟ್ಟೆ ತುಂಬುಗನ್ನೆ. 🙂
[ಹಲ್ವ ಜಿಲೇಬಿ ಇತ್ತು, ಕಾಯಿ ಹೋಳಿಗೆ ಇತ್ತು, ಬಾಳೆಹಣ್ಣಿನ ಪ್ರಥಮದ ಜೊತೆಲಿ ಚೌಚೌದೇ ಇತ್ತನ್ನೇ ]-ಹಾಗಲ ಕಾಯಿ ಜ್ಯೂಸ್ ಇತ್ತಿಲ್ಲೆಯ ಕೇಳುಗು ಚೆನ್ನೈವಾಣಿ 🙂
ಊಟ ಭರ್ಜರಿ ಆಯಿದು, ಕವನ ಲಾಯಿಕ ಆಯಿದು
ಃ)
ಅಪ್ಪಪ್ಪು, ಅಲ್ಲಿದ್ದ ಹಣ್ಣುಗಳ ನೋಡಿ ಇದರಲ್ಲಿ ಹಾಗಲ ಹಣ್ಣು ಇಲ್ಲೆ ಹೇಳಿ ಯಾರೋ ಲಡಾಯಿ ಮಾಡಿಗೊಂಡಿತ್ತವಡಾ ಅದು ಅವ್ವೆಯೋ ಅಂಬಗಾ…? ಚೆ, ಮೊದಲೇ ನೆಂಪಾಗಿದ್ದರೆ ಅದರ ವ್ಯವಸ್ಥೆಯೂ ಮಾಡ್ತಿತವೋ ಏನೋ.
ಮೊಸರು ಮಜ್ಜಿಗೆ ಉಂಡಪ್ಪಗಳೇ ಹೊಟ್ಟೆ ತುಂಬುದು ಹೇಳಿ ಪ್ರಮಾಣ ಆತನ್ನೆ.
ಪಷ್ಟಾಯಿದು ಶೇಪುಭಾವ.
ಅಪ್ಪು ಮಾವಾ ಈ ಮಜ್ಜಿಗೆ ಮೊಸರಿನ ರುಚಿ ಉಂಡವಕ್ಕಲ್ಲದೋ ಗೊಂತಪ್ಪದು,
ಜಾನಪದ ಶೈಲಿಲಿ ಮಾವನ ಮನೆಯ ಜೆಂಬರದ ಊಟ ಭರ್ಜರಿ ಆತದ.
ಉಂಡಿಕ್ಕಿ ಶೇಡಿಗುಮ್ಮೆಂದ ಮೇಲೆ ಹತ್ತೆಕಾರೆ ಫಸ್ಟ್ ಗೇರೇ ಹಾಕೆಕು. ಪುಳ್ಳಿ ಲಾಯಕ್ ಆತು ಆತೋ.
ಮಾವಾ ಇದು ಮನೆ ಜೆಂಬಾರ ಅಲ್ಲ – ಮಾವನಮನೆ ಜೆಂಬಾರ ಏವ ಮಾವ ಹೇದು ಕೇಳಿಕ್ಕೆಡಿ ಇನ್ನು ..ಹ್ಮ್ಮ್
{ಸಾರಿಂಗೆ ಹಪ್ಪಳ ಇತ್ತು}
ರುಚಿಯೂಟಕ್ಕೆ ಹೊಟ್ಟೆಯೂ ಇತ್ತು..ಮಾವನ ಮನೆಯ ಜೆ೦ಬ್ರವೋ ಭಾವಾ? ರೈಸಿದ್ದು.
ಊಟಕ್ಕೆ ಅಷ್ಟು ಬಗೆ ಇದ್ದರೆ ಜೆಂಬರ ರೈಸದ್ದೆ ಇಕ್ಕೋ ಭಾವಾ…..?
ಅಲ್ಲಿ ವೇಣಿ ಅಕ್ಕನ ಅಡುಗೆಯೋದು !
ಆ ಎಣ್ಣೆ ತುಪ್ಪದ ಗ್ಲಾಸು ಆರು ಹುಗ್ಗಿಸಿ ಮಡುಗಿದ್ದು ?! ಬಾಳೆಲೆ ಊಟ, ಊಟಂದ ನತ್ರ ರಸಾಯನ ಹೊ ಹು… ರೈಸಿದ್ದಯ್ಯಾ!
ಅಲ್ಲಿ ಆಗ ಒಂದು ಸಂಗತಿ ಆದ್ದು ಗೊಂತಾಯ್ದೋ?? ?!
ನಿಂಗಳ ಹತ್ರೆ ತಂಗೆ ಕೂದ್ದಲ್ಲದಾ. ಉಂಡಿಕ್ಕಿ ಕೈತೊಳವಲೆ ಹೋಪಗ ಓ ಆ ಅವನೈಲಿ ಇದಾ ಒಂದರಿ ಹಿಡ್ಕೊಳ್ಳಿ ಹೇದು ಆ ಎರಡುರುಪಾಯಿ ಊಟದಕ್ಷಿಣೆ ಕೊಟ್ಟದಡಾ. ಆ ಮನುಷ್ಯ ಗಿಸಗೆ ಸುರ್ಕೊಂಡವ ತಿರುಗಿ ಕೊಟ್ಟಿದನಿಲ್ಲೆಡಾ ಇನ್ನೂ. ಅದು ಬೇಕಾರೆ ಬಂದು ಕೇಳಲಿ ಹೇದು ಇವ°, ಅದರೇಂಗೆ ಕೇಳ್ತದು ಅವನಾಗಿಯೇ ಕೊಡ್ಳಿ ಹೇದು ಇದು!! ಎಂತಾರು ಇನ್ನು ಊಟಕ್ಷಿಣೆ ಸಿಕ್ಕಿರೆ ಚೌಕಲ್ಲ್ಯೋ ಕೆಮಿಲಿಯೋ ಸುರ್ಕೊಳ್ಳೆಕ್ಕಪ್ಪಾ!
ಅದು ನಿಂಗ ಹೇಳಿದ್ದು ಹಳೆ ಕಾಲದ ಊಟದಕ್ಷಿಣೆಯ ಕಥೆ ಅಲ್ಲಿ t.v.ಲ್ಲಿ ನೋಡಿದ್ದರ ಅಲ್ಲದೋ… ಈಗ ಕಥೆ ಹಾ೦ಗಲ್ಲಡ… ಈಗ ರಾಮ ರಾಜ್ಯ ಶುರು ಆಯಿದಡ… ದಕ್ಷಿಣೆಯ ಎಲ್ಲಿ ಮಡಿಗಿರೂ ಇದು ಆರದ್ದು ಹೇಳಿ ಹುಡುಕ್ಕಿ ಪ್ರೀತಿಲ್ಲಿ ಅವಕ್ಕೆ ಒಪ್ಪುಸುತ್ತವಡ…
🙂
ಅಲ್ಲಿ ಆಗ ಒಂದು ಸಂಗತಿ ಆದ್ದು ಗೊಂತಾಯ್ದೋ?? ?! – ಇಲ್ಲೆ ಹೇಳೀರಕ್ಕೋ ಮತ್ತೆ, ಸಂಗತಿ ಅಪ್ಪಾದ್ದೇ ನೆಳ್ವು ತಿಂದು ಜಾತಿ ಕೆಡುಸಿ ಗೊಂಡ ಹಾಂಗಾದ್ದು ಅಲ್ಲದೋ, ಆದರೆ ಆಲೆಕ್ಕಲ್ಲಿ ಬೇರೆಕಡೆಲಿ ಅದರ ಹತ್ತುಪಟ್ಟು ಕರ್ಚಾಯಿದು ಅವಂಗೆ ಹೇಳಿಯೂ ಶುದ್ದಿ ಅಪ್ಪೋ…?
ಅದರ ನಂತರ ಅವಂಗೆ ಪಶ್ಚ್ಹಾತ್ತಾಪ ಆಗಿ ಅವು ಇವರ ಕಾಲು ಹಿಡುದು ಕ್ಷಮೆ ಕೇಳಿ ಈಗ ಭಾರಿ ಅನ್ಯೋನ್ಯತೆಲ್ಲಿ ಇದ್ದವಡ ಅಪ್ಪೋ…
ಅಕ್ಕೋ ಅದು ನಿಂಗೊಗೆ ಗೊಂತಿಪ್ಪ ಟೀವಿ ಕತೆ ಆದಿಕ್ಕು, ನಮ್ಮದು ಬೇರೆಕತೆ ಅದಕ್ಕೂ ಇದಕ್ಕೂ ಹೊಂದಾಣಿಕೆ ಆವುತ್ತಿಲ್ಲೆ. ನಮ್ಮ ಕತೆಲಿ ಬಪ್ಪವು ಅಂದೂ ಅನ್ಯೋನ್ಯತೆಲಿ ಇತ್ತವು ಇಂದೂ ಇದ್ದವು,ಮುಂದೆಯೂ ಇರ್ತವು , ಇಲ್ಲಿ ಜಗಳ ಆಯಿದು ಅಲ್ಲದ್ದರೆ ಅವರೊಳ ಮನಸ್ತಾಪಬಯಿಂದು ಆ ಎರಡು ರುಪಾಯಿಗೆ ಹೇಳಿ ನಿಂಗೊ ಗ್ರೇಶಿದರೆ ಅದು ಇಲ್ಲಿಗೆ ಸರಿಹೊಂದುತ್ತಿಲ್ಲೆ , ಹಾಂಗುದೇ ನಿಂಗೊ ಹೇಳಿದ ಹಾಂಗೆ ಎಲ್ಲಿಯಾರು ಒಂದು ಕತೆಯಿದ್ದರೆ ಅದರ ಬೈಲಿಂಗೆ ಬರದು ತಿಳುಶುವಿರೋ…?
ಓಹೋ… ಇದು ಕಥೆ ಬೇರೆ ಅಂಬಗ… ‘ಶುಷ್ಕಂ ಕಾಷ್ಟಂ ತಿಷ್ಟ್ಯತ್ಯಗ್ರೆ… ನೀರಸ ತರುರಿವ ವಿಲಸತಿ ಪುರತ:..’ ಕುರಿತು ಬೋಚ ಮೊನ್ನೆ ಒಂದು ಕಥೆ ಹೇಳಿಗೊಂಡು ಇತ್ತಿದ್ದ… ಅದೇ ಕಥೆಯ ಹಾಂಗೆ ಅನ್ನಿಸಿತ್ತು… ಪರವಾಗಿಲ್ಲೇ…