- ಅಬ್ಬಿ ಗೀತೆ – ಶರಲ್ಲಿ - October 11, 2012
- ಸತ್ಯ – ಇ(೦)ದು - April 17, 2012
- ಅವಿಲಿನ ಹಾಂಗೇ – ಒಂದು ಪ್ರಯೋಗ - April 10, 2012
ಉಡುಪಿಯ ಕೃಷ್ಣನ ಪೂಜಗೆ ಮಠಂಗಳ
ಗೌಜಿಲಿ ಒಂದೂ ಪರ್ಯಾಯ
ಅಲ್ಲಿ ಹೋದವಕ್ಕೆ ಊಟ ತಿಂಡಿಗಿದ್ದು
ಭಾರೀಲಾಯಕದ ಸೌಕರ್ಯ ||ಪ||
ಕೋಟಿ ಕೋಟಿ ಜೆನ ಟೀವಿಲಿ ನೋಡುಲೆ
ವೀಡಿಯೋ ಮಾಡುತ್ತ ಜೆನ ಇದ್ದು
ಉರಿ ಉರಿ ಬೆಶಿಲಿಲಿ, ನಡುಗುತ್ತ ಚಳೀಲಿ
ಎಲ್ಲೆಲ್ಲಿ ನೋಡೀರೂ ಜೆನಂಗಳೆ ||ಉಡು||
ಮದ್ಯಾಹ್ನ ಇರುಳಿಂಗೆ, ಹೋದ ಎಲ್ಲೋರಿಂಗೆ
ಬಗೆ ಬಗೆ ಬೆಂದಿಗೋ ಊಟಕ್ಕೆ
ಬೇಳೆ ಹೋಳಿಗೆಯು, ಕಡ್ಲೆ ಪಾಯಸವೂ
ಎಣ್ಣೆಲಿ ಹೊರುದಾ ಬಾಳೆಕಾಯಿ ||ಉಡು||
ಉಡುಪಿಯ ಗುಳ್ಳನ ಹಸಿ ಹಸಿ ಬೆಂಡೆಯ
ಒಟ್ಟಿಂಗೆ ಹಾಕಿದಾ ಸಾಂಬಾರು
ಪಲ್ಯ ಸಾಲದ್ದರೆ, ಅವಿಲು ಬೆಂದಿಯುದೇ
ಹಾಗಲ ಕಾಯಿಯಾ ಮೆಣಸ್ಕಾಯಿ ||ಉಡು||
ಭಾವನ ಚೂರಿಲಿ ಸಣ್ಣಕೆ ಕೊಚ್ಚಿದ
ಮುಳ್ಳು ಸೌತೆಯ ಪಚ್ಚಡಿ
ಮರದಿನ ಊಟಕ್ಕೆ ಕಾಯಾಲು ಹಾಕಿದ
ಸಾಗು ಸೇಮಗೆಯಾ ಪರಮಾನ್ನಾ ||ಉಡು||
ಯಾವಗಾರು ಒಂದುಸರ್ತಿ ಪುರುಸೊತ್ತು ಇಪ್ಪಗ
ಹೋಗಿ ನೋಡೆಕ್ಕು ಗೌಜೀಯಾ
ದಿನ ವಾರ ತಿಂಗಳು ವರ್ಷ ಎರಡು ಕಳಿವಗ
ವಾಪಾಸು ಬತ್ತೀ ಪರ್ಯಾಯಾ ||ಉಡು||
ಲಾಯಕಾತು ಪರ್ಯಾಯದ ಪದ್ಯ. ಒಂದು ಊಟ ತಪ್ಪಿತ್ತಾನೆ.
(ಉಡುಪಿಯ ಗುಳ್ಳನ ಹಸಿ ಹಸಿ ಬೆಂಡೆಯ)
ಅದೆಂತಕೆ ಹಸಿ ಹಸಿ ಬೆಂಡೆ? ಸರಿ ಬೈಂದಿಲ್ಲೆಯಾ?
ಧನ್ಯವಾದಂಗೊ ಶ್ಯಾಮಣ್ಣಂಗೆ,
ಅದೆಂತಕೆ ಹಸಿ ಹಸಿ ಬೆಂಡೆ? ಸರಿ ಬೈಂದಿಲ್ಲೆಯಾ? – ಅಣ್ಣೋ ಅದೆಲ್ಲಾ ಅಂಡರ್ ಸ್ಟೇಂಡಿಂಗು……ಅಬೆರ್ಪಿಲಿ ಹಾಂಗೆಲ್ಲಾ ಆವುತ್ತು ಕೆಲಾವು ಸರ್ತಿ…
ಮಟ್ಟಿ(ಉಡುಪಿ)ಗುಳ್ಳ ಸಾಂಬಾರು ಭಾರಿ ರುಚಿ..!!!
ಧನ್ಯವಾದಂಗೊ ಟೀಕೆ ಮಾವಂಗೆ….
ರಾಶಿ ಚೊಲೊ ಇದ್ದದ್ದೆ ಹೌದು .. ನಂಗೂ ತಪ್ಪಿ ಹೋತಲಾ ಹೇಳಿ ಬೇಜಾರು..>
ಧನ್ಯವಾದಂಗೊ ,
ಬೇಜಾರು ಆಯೆಕ್ಕೂಳಿ ಇಲ್ಲೆ
ದಿನ ವಾರ ತಿಂಗಳು ವರ್ಷ ಎರಡು ಕಳಿವಗ
ವಾಪಾಸು ಬತ್ತೀ ಪರ್ಯಾಯಾ……….
ಪರ್ಯಾಯದ ಸೌಕರ್ಯದ ಬಗ್ಗೆ ಪದ್ಯ ಲಾಯಿಕ ಆಯಿದು.
ಉಡುಪಿಲಿ, ಬ್ರಾಹ್ಮರಿಂಗೆ ಊಟಕ್ಕೆ ಪ್ರಾಮುಖ್ಯತೆ ಹೆಚ್ಚು. ಎಲ್ಲಾ ಜೆಂಬಾರಂಗಳಲ್ಲಿಯೂ ಸುಮಾರು ಐಟಮ್ ಮಾಡ್ತವು.
ಈ ಸರ್ತಿಯಾಣದ್ದು ಅಷ್ಟ ಮಠದ ಒಗ್ಗಟ್ಟಿಂಗೆ ಸವಾಲ್ ಆದ್ದು ಬೇಜಾರಿನ ಸಂಗತಿ.
ಕಾನ (ಕುಂಬಳೆ ಸೀಮೆ) ಶಂಕರನಾರಾಯಣ ಮಠಲ್ಲಿಯೂ ಆಢಳಿತ ಪರ್ಯಾಯ ಪದ್ಧತಿಲಿಯೇ ಅಪ್ಪದು
ಬ್ರಾಹ್ಮರಿಂಗೆ ಬೇರೆ ಹಂತಿ ಹಾಕಿದ್ದಕ್ಕೆ ‘ಮಾನವಂತರು’ ವಿರೋಧ ಹೇಳ್ತಾ ಇದ್ದವಡ ಅಪ್ಪೋ?
ಅಪ್ಪಚ್ಚೀ ಧನ್ಯವಾದಂಗೊ ,
ಈ ಸರ್ತಿಯಾಣದ್ದು ಅಷ್ಟ ಮಠದ ಒಗ್ಗಟ್ಟಿಂಗೆ ಸವಾಲ್ ಆದ್ದು ಬೇಜಾರಿನ ಸಂಗತಿ. – ಅಪ್ಪಪ್ಪು
ಕಾನ (ಕುಂಬಳೆ ಸೀಮೆ) ಶಂಕರನಾರಾಯಣ ಮಠಲ್ಲಿಯೂ ಆಢಳಿತ ಪರ್ಯಾಯ ಪದ್ಧತಿಲಿಯೇ ಅಪ್ಪದು- ಅಪ್ಪಪ್ಪು ಆದರೆ ಅಲ್ಲಿ ವರುಷಕ್ಕೊಂದಾರಿ ಅಲ್ಲದೋ, ಅದು ದೀಪಾವಳಿಂದ ದೀಪಾವಳಿಗೆ ಅಲ್ಲದೊ,
ಕಣಿಪುರ ಮುಗಿಶಿ ಉಡುಪಿಗೆ ಎತ್ತಿದವಿದಾ ಈ ಭಾವಯ್ಯ! ಓಯಿ., ಲಾಯಕ ಆಯ್ದು ಇದು. 3 -3 ಸರ್ತಿ ಓದಿ ನೋಡಿದೆ ಎಂತಾರು ಬಿಂಗಿ ಬರವಲೆ ಸಿಕ್ಕುತ್ತೋದು. ಇಲ್ಲೆ ಆತ.
[ಯಾವಗಾರು ಒಂದುಸರ್ತಿ ಪುರುಸೊತ್ತು ಇಪ್ಪಗ ಹೋಗಿ ನೋಡೆಕ್ಕು ಗೌಜೀಯಾ] ಅಪ್ಪು. ಅಪ್ಪು ಹೇಳಿತ್ತು – ‘ಚೆನ್ನೈವಾಣಿ’
ಧನ್ಯವಾದಂಗೊ ,
ಭಾವಾ ನಾವು ವಾಪಾಸು ಕೊಡೆಯಾಲಕ್ಕೆತ್ತಿದ್ದು , ರಾಮಕಥೆಗೆ ಎರಡು ದಿನ ಮೊದಲೇ……
ಈ ಸರ್ತಿಯ ಪರ್ಯಾಯ ತಪ್ಪಿತ್ತನ್ನೇ.. (ಭಯಂಕರ ಶುದ್ದಿ ಆದ್ದು..)
🙁
ಈಗ ಹೀಂಗೆಲ್ಲ menu list ಕೊಟ್ಟು ಆಶೆಬರುಸುದೇ.. ?? ಹೀಂಗೆ ಮಾಡ್ಲಾಗ ಆತಾ..
ಧನ್ಯವಾದಂಗೊ ,
ನಾವು ಇತ್ತದರ ಹೇಳಿತ್ತು ಆಶೆಆದರೆ ಎಂತ ಮಾಡುದು….ಚೆ , ಅದಾ ಮಾಣಿ, ಮಾಣಿಮಠಲ್ಲಿ ಕಾರ್ಯಕ್ರಮ ಇದ್ದದಾ……
ಮಾಣಿ ಮಠಕ್ಕೆ ಬಪ್ಪಲಾತಿಲ್ಲೆ.
ರಾಮ ಕಥೆಲಿ ಕಾಂಬೊ..
ಎನಗೊಂದು ಲೈನು ಹೊಡೆರಿ,
9483457875
ಇದು ಲಾಯ್ಕಾಯಿದು ಶೇಡಿಗುಮ್ಮೆ ಭಾವಾ.. ಒಪ್ಪ೦ಗೊ..
ಪೆರುವದ ಭಾವಯ್ಯಂಗೆ ಧನ್ಯವಾದಂಗೊ ,