ಬರದೋರು :   ಶ್ರೀಹರ್ಷ ಭಟ್ (ಸಾಹಸಿ)    on   07/10/2012    1 ಒಪ್ಪಂಗೊ

ಎನ್ನಜ್ಜ ಹೋಟೆಲ್ ನಡೆಶಿ, ಬ್ರಾಹ್ಮಣಾರ್ಥಕ್ಕೆ ಹೋಗಿ, ಅಡಿಗೆಮಾಡಿ,ಗೇಣಿಗೆ ಜಾಗೆಮಾಡಿ ಅದರ ಕ್ರಯಕ್ಕೆ ತೆಕ್ಕೊಂಡು, ಎರಡು ಮದುವೆ ಆಗಿ 9 ಮಕ್ಕಳ ಹೆತ್ತು, ಅವಕ್ಕೆಲ್ಲಾ ದಾರಿತೋರ್ಸಿದಲ್ಲಿಗೆ
ಒಂದು ಅಧ್ಯಾಯ ಮುಗುತ್ತು.

ಎನ್ನ ಅಪ್ಪ ಅಜ್ಜಕೊಟ್ಟ ಭೂಮಿಯನ್ನುದೇ ದೇವರು ಕೊಟ್ಟ ಬುದ್ದಿಯನ್ನುದೇ ಉಪಯೋಗುಸಿ ಹಳ್ಳಿಂದ ಪೇಟೆ ಸಂಪರ್ಕಮಾಡಿ ಎಂಗೊ 3 ಜೆನ ಮಕ್ಕಳನ್ನೂ ವಿದ್ಯಾವಂತರನ್ನಾಗುಸಿ,
ಕೃಷಿ ವಿಸ್ತರಣೆ ಮಾಡಿ, ಕೃಷಿಂದ ಹೊರತಾಗಿ ವ್ಯಾಪಾರರಂಗ ಪ್ರವೇಶಮಾಡಿ ಆದರ ಪರಿಚಯಮಾಡ್ಸಿದಲ್ಲಿಗೆ
ಎರಡನೇ ಅಧ್ಯಾಯ ಮುಗುತ್ತು.

20 ನೇ ಶತಮಾನದ ಸುರುವಿಂದ ಈಗಾಣವರೆಗೆ ನಮ್ಮದೇಶ,ನಮ್ಮ ಜನಂಗೊ ಕಂಡ ಬದಲಾವಣೆ ನವಗೆಲ್ಲಾ ನಮ್ಮ ನಮ್ಮದೇ ಆದ ರೀತಿಲಿ ಗೊಂತಿಪ್ಪಹೊತ್ತಿಲಿ “ಸ್ವ ಉದ್ಯೋಗವೇ ನವಗೆ” ಹೇಳುವ ಅಜ್ಜಂದ್ರ ಸ್ಪೂರ್ತಿ ತೆಕ್ಕೊಂಡು ಕೃಷಿ, ಉದ್ಯೋಗ, ಬಿಟ್ಟು ವ್ಯಾಪಾರಕ್ಕೆಇಳುದ ಹಲವು ಜೆನ ಎನ್ನಾಂಗಿರ್ತ ಹುಡುಗರ ಒಬ್ಬೊಬ್ಬನ ಕಥೆಯುದೇ ಕಷ್ಟ, ತಾಪತ್ರಯಂಗಳ, ಅಜ್ಜಂದ್ರ ಅಂದ್ರಾಣ ನೆಂಪು ಬತ್ತಾಂಗಿತ್ತ ಕಥೆಗಳ ಒಂದು ಮಾಲೆ.
ಕೈಲಿಪ್ಪ ನಗಣ್ಯ ಹೇಳುವಷ್ಟು ಮೊತ್ತದ ಭಂಡವಾಳ ತೆಕ್ಕೊಂಡು ‘ಸರಕಾರ’ ಹೇಳ್ತ ಮೋರೆ ಇಲ್ಲದ್ದ, ಮನಸ್ಸು ಇಲ್ಲದ್ದ ಹ್ರುದಯ ಇಲ್ಲದ್ದ ‘ಭೂತ’ ದೊಟ್ಟಿಂಗೆಹೋರಾಟ ಮಾಡಿಗೊಂಡು ‘ಗ್ರಾಹಕ’ ಹೇಳ್ತ ದೇವರತ್ರುಪ್ತಿ ಗಾಗಿ ‘ಪೈಪೋಟಿ’ ಹೇಳ್ತ ಮೊಸಳೆ ಗಳ ಮಧ್ಯೆ ದಾಂಟಿಗೊಂಡು ಒಂದು ನೆಲೆಕಂಡುಗೊಂಬಲೆಮಾಡುವ ಹೋರಾಟವೇ ಒಂದು ವಿಚಿತ್ರ!

ಅಜ್ಜಂದ ಅಪ್ಪಂಗೆ, ಅಪ್ಪಂದ ಎನ್ನತಲೆಮಾರಿಂಗೆ ಬದಲಾವುತ್ತ ಬಂದ ವೃತ್ತಿ, ಪ್ರವೃತ್ತಿ, ಅದಕ್ಕೆ ಪ್ರತೀ ಹಂತಲ್ಲಿ ಮಾಡಿದ ಸಾಹಸಂಗೊ, ಬದುಕ್ಕುಲೆ ಬೇಕಾಗಿ ಮಾಡುವ ದಿನಾಗುಳಾಣ ಹೋರಾಟವೋ ಅದರಿಂದ ಹೆಚ್ಚೋ ಹೇಳಿ ಅರಡಿಯದ್ದ ಇಂದ್ರಾಣ ಸ್ತಿತಿ.
ಇದು ಈಗ ನಡೆತ್ತಾಇಪ್ಪ ಕಥೆ.

One thought on “ಪ್ರಗತಿ

  1. ಹಾ°. …. ಇನ್ನೋ°?

    ಉಳುಶೋದು ಬೆಳೆಶೋದು ಬಿಟ್ಟಿಕ್ಕಿ ನಡವದು ಎಲ್ಲ ಅವರವರ ಕೈಲಿ ಇಪ್ಪದಲ್ಲದೋ ಬಾವ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×