- ಉಪ್ಪುಸೊಳೆಯ ಸುತ್ತ - May 1, 2020
- ಮಂಗಳೂರು ಹವ್ಯಕ ಸಭೆಲಿ “ವಿಷು ಸಂಭ್ರಮದ ಸಂಗೀತ ಸೌರಭ” - May 1, 2017
- ಶಪಥಪರ್ವ – ಕ್ಯಾಮರಲ್ಲಿ - October 9, 2016
ಅದೊಂದು ಜೂನ್ ತಿಂಗಳ ಆದಿತ್ಯವಾರ. ಕಸ್ತ್ಲೆಪ್ಪಗ ಐದು ಗಂಟೆಯ ಹೊತ್ತು. ಟಿವಿಲಿ ಕನ್ನಡ ಸಿನೆಮಾವ ನೋಡೆಂಡು ಇದ್ದ ಎಂಗೊಗೆಲ್ಲ ಗಮ್ಮತ್ತಿನ ಸಮಯ. ಜೂನ್ ತಿಂಗಳಾದರುದೆ ಮಳೆ ತಲೆ ತೋರುಸದ್ದೆ ಒಳ್ಳೆ ಬೆಶಿಲು ರೈಸೆಂಡಿದ್ದತ್ತು. ಮನೆ ಹೆರ ಎಂತೋ ಶಬ್ದ ಆದ ಹಾಂಗೆ ತೋರಿ ಮನೆಂದ ಹೆರ ಬಂದು ನೋಡಿರೆ, ಎಂಗಳ ಮನೆ ಹತ್ರಾಣ ಜೆನಂಗೊ ಎನ್ನ ಕೈತಟ್ಟಿ ದಿನಿಗೇಳ್ತಾ ಇದ್ದವು.
“ಬನ್ನಿ ಬನ್ನಿ ಬಟ್ರೇ. ನಿಮ್ಮ ಕೆಮರ ತನ್ನಿ ಹೇಳಿ”. ಒಂದು ಅಪೂರ್ವ ನೋಟ ಎನ್ನ ಕೆಮರಾಕ್ಕೆ ಕಾದು ಕೂದೊಂಡಿದ್ದತ್ತು. ಕೆಮರಾ ಫ್ಲಾಶ್ ಎಲ್ಲ ತೆಕ್ಕೊಂಡು ಹೆರ ಓಡಿದೆ. ಪೇಟೆಲಿಪ್ಪ ಎಂಗಳ ಮನೆಯ ಎದುರಾಣ ವಿಶಾಲ ಹೊರಾಂಗಣಲ್ಲಿ ಪ್ರೇಮಗೀತೆ ! ಅದು ಸಿನಿಮಾ ಶೂಟಿಂಗ್ ಅಲ್ಲ. . .
ಎರಡು ದೊಡ್ಡ ಕರಿ ಕೇರೆಹಾವುಗೊ ಒಂದಕ್ಕೊಂದು ಸುತ್ತಿಯೊಂಡು ಮಾಡ್ತಾ ಇದ್ದವು ಸರಸ ಸಲ್ಲಾಪ ! ಮನೆಯೊಳ ಟಿವಿಲಿ ನಾಯಕ ನಾಯಕಿಗೊ ಮರಸುತ್ತಿ ಪದ್ಯ ಹೇಳುತ್ತಾ ಇದ್ದರೆ, ಇಲ್ಲಿ ಇವು ಮೈಗೆ ಮೈ ಸುತ್ತಿ ನೆಲಕ್ಕಂದ ತಲೆ ನೆಗ್ಗಿ, ಹೊರಳೆಂಡು ಅವರದ್ದೇ ಲೋಕಲ್ಲಿ ಮೈ ಮರದ್ದವು. ಸ್ಪರ್ಧಾ ಕಣಲ್ಲಿ ಜಗ ಜಟ್ಟಿಗೊ ತೊಡೆ ತಟ್ಟಿ ಕಾದಿದ ಹಾಂಗೆ ಕಂಡೊಂಡಿತ್ತು. ನೆಲಕ್ಕಂದ ಎರಡು ಅಡಿಯಷ್ಟು ಮೇಗೆ ತಲೆ ನೆಗ್ಗಿ ನರ್ತನ ನೆಡಕ್ಕೊಂಡಿತ್ತು.
ಎನ್ನ ಕೈಲಿ ಇದ್ದ ಕೆಮರಾ ಬೇರೆ ಬೇರೆ ಕೋನಲ್ಲಿ ಕ್ಲಿಕ್ಕು ಮಾಡ್ತಾ ಇತ್ತು. ಹತ್ರ ಹೋಪೋ ಹೇಳಿರೆ ಹೆದರಿಕೆ !
ಅಂಬಗಳೇ ಊರಿನ ಮಕ್ಕೊ ಜವ್ವನಿಗರು ಹೆಮ್ಮಕ್ಕೊ ಎಲ್ಲೋರು ಸುತ್ತು ಸೇರಿ ಆಗಿತ್ತು. ಎಲ್ಲೋರ ಗಲಾಟೆ ಎಡೆಲಿ ಆಟ ನಿರಾತಂಕಲ್ಲಿ ಆಗಿತ್ತು. ಎನ್ನ ಫ್ಲಾಷುದೆ ಜೋಡಿ ಮೇಲೆ ಪರಿಣಾಮ ಬೀರಿದ್ದಿಲ್ಲೆ.
ಊರಿನವು ಕಂಡ ಪ್ರಕಾರ ಇದೇ ರೀತಿ ಮೂರು ದಿನಂದ ಅದೇ ಜಾಗಲ್ಲಿ ಅದೇ ಸಮೆಲಿ ಅವು ಬೇಟಿ ಆಗೆಂಡು ಇದ್ದಿದ್ದವಾಡ. ಅದು ಕದ್ದು ಮುಚ್ಚಿ ನೆಡದ ಭೇಟಿ ಅಲ್ಲ ನಿಜ, ಆದರೆ ಹೀಂಗಿಪ್ಪ ನೋಟ ಕಾಂಬಲೆ ಸಿಕ್ಕುವದು ಅಪರೂಪ. ಅಂದೊಂದರಿ ಸುಧಾ ವಾರ ಪತ್ರಿಕೆಲಿ ಓದಿದೆ ನೆಂಪು, ಎರಡು ಕಾಳಿಂಗ ಸರ್ಪಂಗೊ ಮಾರ್ಗದ ಮಧ್ಯೆ ಈ ರೀತಿ ಬಂದು, ಎರಡು ಹೊಡೆಲಿಯುದೆ ವಾಹನಂಗೊ ಕಾದು ಕೂರೆಕಾಗಿ ಬಂದದು. ಹಾಂಗಿಪ್ಪಗ ಅವುಗಳ ಹತ್ರೆ ಹೋಪದು ಅಪಾಯ ಹೇಳಿ ಎಲ್ಲೋರ ಅಭಿಮತ.
ಮಿಲನ ಸುರುವಾಗಿ ಆಗಲೇ ಅರ್ಧ ಗಂಟೆ ಕಳುದಿರೆಕು. ಅವುಗಳ ಹೊರಳಾಟ ಹಾರಾಟ ನೋಡ್ಳೆ ಅಲ್ಲಿ ಒಂದು ಪುಚ್ಚೆಯುದೆ ಬಂದು ಕೂಯಿದು !! ಅದರ ಮೋರೆಯ ಭಾವನೆ ಅದರ ಕಣ್ಣಿಲ್ಲೇ ಕಾಣ್ತಾ ಇತ್ತು. ನಾಚಿಕೆಯೊ, ಹೆದರಿಕೆಯೊ, ಆಶ್ಚರ್ಯವೋ, ಉದ್ವೇಗವೋ, ಅಂತೂ ಎಲ್ಲವುದೆ ಆ ಕಣ್ಣುಗಳಲ್ಲಿ ಇದ್ದತ್ತು. ಪುಚ್ಚೆಯನ್ನುದೆ ಸೇರುಸಿ ಮತ್ತೆರಡು ಫೊಟೊಂಗಳ ತೆಗದೆ.
ಒಟ್ಟಿಂಗೆ ಎಷ್ಟು ಫೊಟೊ ತೆಗದ್ದೆ ಹೇಳಿ ಗೊಂತೇ ಇಲ್ಲೆ. ಕೆಮರಾದ ಚಕ್ರವ ಅರ್ಧ ತಿರುಗುಸಿ ಅಪ್ಪಗ ಗಟ್ಟಿ ಆತು.. ಓ.. ಎನ್ನ ಕೆಮರಲ್ಲಿ ಮೂವತ್ತ ಎಂಟನೆಯ ಫೊಟೊ ಕಳುದು ರೀಲು ಮುಗುದತ್ತು ..!
ಹಾವುಗೊ ಹೊಡಚ್ಚೆಂಡು ಹತ್ರ ಹತ್ರ ಬಂದರೂ ಪುಚ್ಚೆ ಅಲ್ಲಿಂದ ಎದ್ದಿದಿಲ್ಲೆ !! ಪುಚ್ಚೆಯ ಮೈಗೆ ಈಗ ಹಾವುಗೊ ಸುತ್ತಿಯೊಳ್ತು ಸುತ್ತಿಯೊಳ್ತು ಹೇಳಿ ಅನಿಸಿತ್ತು. ಅಂಬಗ ..
ಎರಡು ಕೇರೆಗಳುದೆ ಬೇರೆ ಬೇರೆ ಆದವು. ಎರಡುದೆ ಎರಡು ದಿಕ್ಕಿಂಗೆ ಹರದು ಹೋದವು. ಪುಚ್ಚೆಯುದೆ ಒಂದು ಹಾವಿನ ಹಿಂದೆ ಹೋತು. ಅದು ಎಲ್ಲಿಗೆ ಹೋವ್ತು ಹೇಳಿ ನೋಡ್ತ ಕುತೂಹಲವೋ ಎಂತೊ ಪುಚ್ಚಗೆ.. !?
ಈ ಘಟನೆ ನೆಡದು ಹದಿನೈದು ವರ್ಷ ಕಳುದತ್ತು, ಈಗ ಮೈದಾನ ಎಲ್ಲ ಹೋಗಿ ಅಲ್ಲಿ ಟೇರೇಸು ಮನೆಗೊ ಬಯಿಂದು. ಹಾವುಗೊ ಬಿಟ್ಟು ಮನುಷ್ಯರಿಂಗು ಹೋಪಲೆ ಜಾಗೆ ಇಲ್ಲೆ.
ಕಾಡು ಕಡುದು, ಬೋಳಾಗಿ, ಪ್ರಾಣಿಗವಕ್ಕುದೆ ಒಂದು ಸ್ವಚ್ಚಂದವಿಹಾರಕ್ಕೆ ಜಾಗೆ ಇಲ್ಲದ್ದೆ ಆಯಿದು. ಇದಕ್ಕೆಲ್ಲ ಕಾರಣ ನಾವೇ ಹೇಳುವದು ಅಪ್ರಿಯ ಸತ್ಯ.
ಇದು ಒ೦ದು ಹಾಸ್ಯ ಪ್ರಸ೦ಗ ಇದ್ದಿಕ್ಕು ಹೇಳಿ ಕ್ಲಿಕ್ಕಿಸಿದ್ದು, ಆದರೆ ಇಲ್ಲಿಪ್ಪದು ನಿಜವಾದ್ದೇಯಾ.
ರೀಲು ಕ್ಯಾಮರಾದ ಕಾಲದಲ್ಲಿ ಚೆ೦ದದ ಪಟ೦ಗಳ ತೆಗದ್ರಿ , ಬರಹವೂ ಚೊಲೋ ಆಯ್ದು ಮಾವಾ.
ಆ ಪುಚ್ಚೆಗೆ ಶೌರ್ಯ ಪ್ರಶಸ್ತಿ ಕೊಡ್ಸಲೆ ಅಡ್ಡಿಲ್ಲೆ, ಕ೦ಡಾಬಟೆ ಧೈರ್ಯವಪಾ ಅದಕ್ಕೆ.
ಅಲ್ಲಿ ಕ೦ಡ ಹಾರ್ಲಿಕ್ಸ್ ಕೊಟ್ಟೆ ಮು೦ದೊ೦ದು ದಿನ ಇಲ್ಲಿ ಸಿಮೆ೦ಟಿನ ಕಾಡು ಬೆಳೆಗು ಹೇಳಿ ಸೂಚನೆ ಕೊಟ್ಟ೦ಗೆ ಕ೦ಡಿತು.
ನಿಜ ಮಾಣೀ, ಕಣ್ಣಾರೆ ಕಂಡದು.
ಓದಿ ಒಪ್ಪ ಕೊಟ್ಟ ಎಲ್ಲೋರಿಂಗು ವಂದನೆಗೊ.
ಪ್ರಸಂಗ ಪಷ್ಟಾಯ್ದು ಮಾವ°
laayak eddu….
ಚಿತ್ರ-ಲೇಖನ ಲಾಯ್ಕ ಇದ್ದು.
ಹಳೆ ಫಟಂಗಳ ಹೇಮಾರ್ಸಿ ಮಡಗಿ, ಈಗ ಒಳ್ಳೆ ಶುದ್ದಿ ಬರದ್ಸು ಲಾಯ್ಕಾಯಿದು.
ಹೀಂಗೊಂದು ಪ್ರಣಯ ಪ್ರಸಂಗ . . .
ಕುತೂಹಲ ಹುಟ್ಟುಸುವ ಹೆಡ್ಡಿಂಗ್…
ಚೆಂದದ ಪಟಂಗೊ…
ಒಳ್ಳೆ ನಿರೂಪಣೆ
ಆ ಕಾಲಲ್ಲಿಯೇ ಅದ್ಭುತ ಪಟಂಗಳ ತೆಗದು ಮಡಗಿದ್ದಿ, ಮಾವಾ°..
ಒಳ್ಳೆ ಶುದ್ದಿ ಹೇದ್ಸಕ್ಕೆ ಧನ್ಯವಾದಂಗೊ.