- ರಕ್ಷಾ ಬಂಧನದ ದಿನ ಶಿಷ್ಯರಿಂಗೆ ಗುರುಗಳ ಅಭಯ ರಕ್ಷೆ - August 28, 2014
- ಹೊಸತ್ತರ ಒಪ್ಪಿಗೊಂಬದು - June 11, 2014
- ಪುಸ್ತಕ ಪರಿಚಯ : How to talk with God - September 3, 2013
ಬೈಲ ಎಲ್ಲೋರಿಂಗೂ ಮಾಣಿಯ ನಮಸ್ಕಾರಂಗೊ,
ಸುಮಾರು ದಿನ ಆತು ಬೈಲಿಂಗೆ ಬಪ್ಪಲೇ ಎಡಿಗಾಯಿದಿಲ್ಲೆ, ಹಾಂಗೆ ಬಪ್ಪಗ ಬರೇ ಕೈಲಿ ಬಪ್ಪಲಾವುತ್ತೋ? ಹಸ್ತಕ್ಕೆ ಪುಸ್ತಕ ಭೂಷಣ ಅಡ – ಗಣೇಶ ಮಾವ° ಹೇಳುಗು. ಹಾಂಗಾಗಿ ಒಂದು ಪುಸ್ತಕ ಹಿಡ್ಕೊಂಡು ಬೈಂದೆ.
ದೇವರು ಹೇಳುವ concept ನ ವೈಜ್ಞಾನಿಕ ವಾಗಿ ಇದರಲ್ಲಿ ನಿರೂಪಿಸಿದ್ದವು.
ಈ ಪುಸ್ತಕಲ್ಲಿ ಲೇಖಕರು ಪ್ರೀತಿ, ಜೀವನ, ನಂಬಿಕೆಯ ಶಕ್ತಿ, ಪ್ರಕೃತಿಯ ಚೈತನ್ಯ ಶಕ್ತಿ (Cosmic Energy) ಮತ್ತೆ ನಮ್ಮೊಳವೇ ಇಪ್ಪ ಒಂದು ದೂರವಾಣಿ ವ್ಯವಸ್ಥೆಯ (intuitive telephonic system) ತುಂಬ ವೈಜ್ಞಾನಿಕವಾಗಿ ಹೇಳುತ್ತವು. ಅವು ದೇವರು ಮತ್ತು ಮನುಷ್ಯನ ವ್ಯಕ್ತಿತ್ವ ಮತ್ತು ಸಂಬಂಧದೊಟ್ಟಿಂಗೆ, ನಾವು ಏಕೆ ದೇವರ ಅಚ್ಚಿನ ಹಾಂಗೇ ಇಪ್ಪದು ಹೇಳುದಕ್ಕೂ ಕಾರಣ ಕೊಡ್ತವು. ನಮ್ಮ ದೇವರ ಸಂಬಂಧ ಹೇಂಗಿರೆಕು ಹೇಳುದನ್ನೂ ತುಂಬ ಸರಳವಾಗಿ – ಮಕ್ಕೊಗೂ ಅರ್ಥ ಅಪ್ಪಹಾಂಗೆ ವಿವರಿಸಿದ್ದವು.
ಇದರ ಬರದವ್ವು ಆಧ್ಯಾತ್ಮಿಕ ಗುರುಗಳ ಸಾಲಿಲ್ಲಿ ಪ್ರಮುಖರಲ್ಲೊಬ್ಬರಾದ, ಶ್ರೀ ಶ್ರೀ ಪರಮಹಂಸ ಯೋಗಾನಂದರು. ಅವರ ಜೀವನ ಕಥೆಯಾದ ‘ಯೋಗಿಯ ಆತ್ಮಕಥೆ ಪೌರಾತ್ಯ ಮತ್ತೆ ಪಾಶ್ಚಿಮಾತ್ಯ ದೇಶಲ್ಲೆಲ್ಲ ತುಂಬ ಜನರಿಂದ ಮೆಚ್ಚುಗೆಗೆ ಪಾತ್ರ ಆಯಿದು.
ಅದರಲ್ಲಿ ಆಧ್ಯಾತ್ಮಿಕ ವಿಚಾರಂಗಳ ವೈಜ್ಞಾನಿಕವಾಗಿ ನಿರೂಪಿಸಿದ್ದೂ, ಬೈಬಲ್ ಮತ್ತು ಭಗವದ್ಗೀತೆಲಿ ಹೇಳಿದ ವಿಷಯಂಗಳ ತುಲನೆ ಮಾಡಿ ಅವೆರಡೂ ಒಂದೇ ಹೇಳಿ ತೋರುಸಿದ್ಡೂ ತುಂಬ ಜನ ಅದರ ಓದುಲೆ ಕಾರಣ ಆತು. ಅವು ಅಂದು ಹೇಳಿದ ವಿಷಯಂಗಳ ‘ಯೋಗದಾ ಸತ್ಸಂಗ ಸೊಸೈಟಿ’ ಈಗಳೂ ಮುದುವರೆಸಿಯೊಂಡು ಬತ್ತಾ ಇದ್ದು.
ಆ ದಿವ್ಯತೆಯೊಟ್ಟಿಂಗೆ ಅವರ ಸ್ವಂತದ ಅನುಭವವ ಬರವ ಲೇಖಕರು, ದೇವರು ಜಗತ್ತಿನ ಎಲ್ಲದರ ಅಪ್ಪನೂ ಅಪ್ಪು, ಅಬ್ಬೆಯೂ ಅಪ್ಪು ಹೇಳಿ ಹೇಳ್ತವು. ದೇವರು ನಮ್ಮಿಂದ ಬಯಸುದು ಎಂತರ? ನಾವು ಪ್ರಾರ್ಥನೆ ಮಾಡೆಕಾದ್ದು ಹೇಂಗೆ ಹೇಳಿಪ್ಪದರ ವಿವರುಸುತ್ತವು. ದೇವರ ಸ್ವರ ನಾವು ಕೇಳೆಕಾದ್ದು ಹೇಂಗೆ? ಕೇಳಿ ಉತ್ತರ ಕೊಡುದು ಹೇಂಗೆ? ಹೇಳಿ ಹೇಳುವ ಈ ಪುಸ್ತಕ ಅವರ ಆತ್ಮಕಥೆಯನ್ನೇ ಸಣ್ಣಕೆ ಬರದ ಹಾಂಗಿದ್ದು. ಒಂದು ಸಣ್ಣನೂರು ಪುಟದ ಹದಿನೈದಿಪ್ಪತ್ತು ರುಪಾಯಿಯ ಈ ಪುಸ್ತಕ ನಿಜವಾಗಿಯೂ ಸಂಗ್ರಹಯೋಗ್ಯ.
ತುಂಬ ದೊಡ್ಡ ವಿಚಾರವ ತುಂಬ ಸುಲಭಲ್ಲಿ ಹೇಳುವ ಕೆಲವೇ ಕೆಲವು ಪುಸ್ತಂಗಳಲ್ಲಿ ಇದೂ ಒಂದು. ಎನ್ನ ದೋಸ್ತಿ ಬೆಂಗ್ಳೂರಿಲ್ಲಿಪ್ಪವ° ಬಂದಿಪ್ಪಗ ಈ ಪುಸ್ತಕ ತಂದಿತ್ತಿದ್ದ°.
ಓದಿ ಖುಶೀ ಆತು, ಹಾಂಗೆ ಬೈಲಿಂಗೆ ಹೇಳಿಕ್ಕುವೊ° ಕಂಡತ್ತು.
ಒಪ್ಪ.
—
ನಿಂಗಳ,
ಮಂಗ್ಳೂರ ಮಾಣಿ.
ಒಳ್ಳೆ ಪುಸ್ತಕದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಂಗ
ಧನ್ಯವಾದ ಅತ್ತೆ ಃ)
ಉತ್ತಮಮ್ । ಮಾಹಿತಿಗಾಗಿ ಧನ್ಯವಾದಗಳು.
ಒಪ್ಪಕ್ಕೆ ಧಯವಾದ ಭಾವಾ… ಹ! ಮಾಣಿ ಮಠಲ್ಲಿ, ನಿಂಗಳ ಕಾಣದ್ದೆ ಭಾರಿ ಬೇಜಾರಾತೆನಗೆ 🙁