- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಸಮಸ್ಯೆಯೋ? ಅಪ್ಪು.
ಇದು ಬೈಲಿನ ಬಗ್ಗೆ ಅಲ್ಲ, ಅವಧಾನಲ್ಲಿ ಬಪ್ಪ “ಸಮಸ್ಯೆ”.
ಒಂದು ವಾಕ್ಯವ ಕೊಟ್ಟು, ಆ ವಾಕ್ಯ ಕೊನೆಯ ಗೆರೆ ಆಗಿ ಬಪ್ಪ ಹಾಂಗೆ “ಪದ್ಯ ರಚನೆ”ಮಾಡ್ತ ಕಲೆಗೆ “ಸಮಸ್ಯಾ ಪೂರಣ” ಹೇಳ್ತವು.
ಅವಧಾನಕಲೆಯ ಈ ವೈಶಿಷ್ಟ್ಯಪೂರ್ಣ ಕಲೆಯ ನಮ್ಮ ಬೈಲಿಲಿಯೂ ಆರಂಭ ಮಾಡುವನೋ?
ಹಾಂಗೊಂದು ಪ್ರಶ್ನೆ ಬಂತು ನಮ್ಮ ಮನಸ್ಸಿಂಗೆ. ಬೈಲ ನೆರೆಕರೆಯೋರು ಕೊಶೀಲಿ ಒಪ್ಪಿಗೊಂಡಿದವು. ನಿಂಗಳೂ ಒಪ್ಪಿಗೊಳ್ತಿ ಅಲ್ಲದೋ?ಹಾಂಗಾರೆ ತಡವೆಂತಕೆ, ನಮ್ಮಲ್ಲಿಯೂ ಸುರು ಆಗಲಿ; ಅಲ್ಲದೋ?
ನಿರ್ದಿಷ್ಟ ಛಂದಸ್ಸಿಲಿ ಇಪ್ಪ ಒಂದು ವಾಕ್ಯವ ಇಲ್ಲಿ ಸಮಸ್ಯೆ ಆಗಿ ಕೊಡ್ತು.
ನಿಂಗಳೂ ಅದರ ಪೂರಣ ತುಂಬುಸಲೆ ಪ್ರಯತ್ನಮಾಡಿ. ಚೆಂದದ ಪದ ಬರದು ಒಪ್ಪ ಕೊಡಿ.
ಆಗದೋ?
~
ಬೈಲಿನ ಪರವಾಗಿ
ಸಮಸ್ಯಾ ಪೂರಣ: ನಾಳೆಂದ ಸುರು.
ಪೂರ್ವ ಮಾಹಿತಿ ಬೇಕಾರೆ:
ಬೈಲಿಲಿ ಈಗಾಗಲೇ ಬಂದ ಸಮಸ್ಯಾಪೂರಣದ ಸನ್ನಿವೇಶ:
ಸಮಸ್ಯೆ: ಬಿದರೆ ದಾರಿಲಿ ಬೆದುರ ಹೂಗುಗೊ ಚೆದುರಿ ಬಿದ್ದಿತ್ತು.
(https://oppanna.com/oppa/beduru-hoogu-bamboo-flower)
ಪರಿಹಾರಂಗೊ:
ಮುಳಿಯಭಾವ:
ಕದಿರೆ ದೇವಸ್ಥಾನದತ್ತರೆ
ಕುದುರೆ ಕ೦ಡತ್ತ೦ದು ಜಾಣ೦
ಗದರ ಬೆನ್ನಿಲಿ ಕೂದು ಶಾಲೆಗೆ ಹೋಪ ಮನಸಾತು |
ಅದಿರು ವಾಹನವಿಲ್ಲೆ ದಾರಿಲಿ
ಚದುರೆಯರ ಸುಳಿವಿಲ್ಲೆ ಮೂಡದ
ಬಿದರೆ ದಾರಿಲಿ ಬೆದುರ ಹೂಗುಗೊ ಚೆದುರಿ ಬಿದ್ದಿತ್ತು ||
ಗೋಪಾಲಣ್ಣ
ಉದಯಕಾಲಲ್ಲೆದ್ದು ನಿತ್ಯದ
ವಿಧಿಯ ತೀರಿಸಿ ಚದುರ ಜಾಣನು
ಮುದದಿ ಅಬ್ಬೆಗೆ ನಮಿಸಿ ಏರಿದ ಉದ್ದವಾಹನವ |
ಎದುರುಗಾಳಿಯು ತೊಟ್ಲು ತೂಗಲು
ನಿದಿರೆಯರೆಗಣ್ಣಿಂದ ನೋಡಿರೆ
ಬಿದರೆ ದಾರಿಲಿ ಬೆದುರ ಹೂಗುಗೊ ಚೆದುರಿ ಬಿದ್ದಿತ್ತು ||
ಸುಭಗ
ಕದುರು ತುಂಬಿದ ಬೆದುರ ಪೊದರುಗೊ
ಕೆದರುಶಿಖೆಯಾಸುರರ ಹಾಂಗೆಯೆ
ಎದುರೆ ಕಾಂಬಗಳೆನ್ನ ತಲೆಯೊಳ ಚೋದ್ಯವೆದ್ದತ್ತು ।
ಸದರ ಸರಸಲಿ ಸಾಗಿ ನೋಡಿರೆ-
ಚದರವೊಂದಡಿಗೊಂದು ಮುಡಿಯೋ!
ಬಿದಿರೆ ದಾರಿಲಿ ಬೆದುರ ಹೂಗುಗೊ ಚದುರಿ ಬಿದ್ದಿತ್ತು ||
ತೆಕ್ಕುಂಜ ಕುಮಾರ ಮಾವ° :
ಬಿದರೆ ಶಾಲೆಗೆ ಹೆರಟ ಜಾಣಗೆ
ಉದರ ಪೂಜೆಯ ಮುಗುಶಿ ಒರಗಿರೆ
ಉದಯ ಕಾಲಕ್ಕೊಂದು ತಣ್ಣನೆ ಕನಸು ಕಂಡತ್ತು।
ಮದಿರೆ ಕುಡುದಾ ಬೆಗುಡು ಸುಂದರ
ಬೆದುರು ಪುಂಡೆಲು ಹೊಕ್ಕಿ ಕೊಣಿವಗ
ಬಿದಿರೆ ದಾರಿಲಿ ಬೆದುರ ಹೂಗುಗೊ ಚದುರಿ ಬಿದ್ದಿತ್ತು ||
ಬೊಳುಂಬು ಮಾವ:
ಮದುವೆ ದಿಬ್ಬಣ ಎದುರುಗೊಂಬಗ
ಎದುರು ನಿಂದಾ ಮನೆಯವೆಲ್ಲವು
ಹೊದಳ ಕೈಯಲಿ ಹಿಡುದು ರಭಸಕೆ ಮೇಲೆ ಹಾರುಸುಗು ।
ಮದಲೆ ಸಗಣವ ಬಳುದ ಜಾಲಿಲಿ
ಮುದುರಿ ಬಿದ್ದಾ ಹೊದಳ ಹಾ೦ಗೆಯೆ
ಬಿದಿರೆ ದಾರಿಲಿ ಬೆದುರ ಹೂಗುಗೊ ಚದುರಿ ಬಿದ್ದಿತ್ತು ||
ನೆಗೆಗಾರ°:
ಮುದರ° ಬಂತದು ಪುಗೆರೆ ತಿಂಬಲೆ
ಪೊದರು ಗೆಡ್ಡದ ಎಡೆಲಿ ಮಾತಾ-
ಡುದರ ಕಂಡರೆ ಕುಂಞಿ ಮಾಣಿಗೊ ಹೆದರಿ ಓಡುಗೊಳ |
ಹೆದರಿಕಿಲ್ಲದೆ ಕತೆಯ ಹೇಳುಗು
ಅದರ ಹೆಂಡತಿಯಪ್ಪನಾಮನೆ
ಬಿದಿರೆ ದಾರಿಲಿ ಬೆದುರ ಹೂಗುಗೊ ಚದುರಿ ಬಿದ್ದಿತ್ತು ||
ಅಷ್ಟಾವಧಾನದ ಬಗ್ಗೆ ಬೈಲಿಲಿ ಬಂದ ಶುದ್ದಿ:
https://oppanna.com/oppa/ashta-avadhaana-kashta
ಷಟ್ಪದಿಗಳ ಬಗ್ಗೆ ಶುದ್ದಿ:
https://oppanna.com/oppa/shara-kusuma-bhoga-bhamini-shatpadi
ಪದ್ಯಪಾನಿಗೊಕ್ಕೆ ಶತಾವಧಾನಿಗಳ “ಪಾಟ”:
(ಕೃಪೆ: padyapaana.com)
http://padyapaana.com/?page_id=643
ಆನುದೆ ಓದುವೆ, ಖುಶಿ ಪಡುವೆ, ಒಪ್ಪ ಕೊಡುವೆ, ಬರವಲೆ ಎನ್ನಂದ ಎಡಿಯದಾಳಿ ಕಾಣ್ತು……
ರೆಡೀ…… ವನ್, ಟೂ ತ್ರೀ . . . . .
ಓ.. ಒಳ್ಳೆ ಶುದ್ದಿ..
ಆಗಲಿ ಆಗಲಿ..
ಬರವಲೆಡಿಯದ್ರೂ ಒಪ್ಪ ಕೊಡ್ತು ನಾವು 🙂
ಒಳ್ಳೆ ಕಾರ್ಯ ಇದು. ಬೈಲ ಬಂಧುಗೊಕ್ಕೆ ಒಳ್ಳೆ ಒಂದು ಸಾಹಿತ್ಯ ಕಸರತ್ತು.
ಆದರೆ ನವಗಿದು ಅರಡಿಯ., ನಮ್ಮಿಂದ ಇದು ಎಡಿಯ., ಅಂದರೂ ನಾವಿದ್ದು ಒಟ್ಟಿಂಗೇ ಕೆಕೆಪೆಕೆ ಹೇಳ್ಳೆ ಹೇಳಿ ಹೇಳಿತ್ತು – ‘ಚೆನ್ನೈವಾಣಿ’
ತುಂಬಾ ಸವಿಯಾದ ಸುದ್ದಿ… ಆನು ಛಂದಸ್ಸು,ಪದ್ಯ ರಚನೆ,ಸಾಹಿತ್ಯ ಈ ವಿಷಯಂಗಳಲ್ಲಿ ಅತ್ಯಂತ ಬಾಲ್ಯಾವಸ್ಥೆಲ್ಲಿ ಇಪ್ಪ ಕಾರಣ ಓದಿ ಖುಷಿ ಪಡುತ್ತೇ… ಸಾಧ್ಯವಾದರೆ ಕೆಲವು ಸರ್ತಿ ಅಭ್ಯಾಸಕ್ಕೋಸ್ಕರ ಎನ್ನ ಬಾಲಿಶವಾದ ಪ್ರಯತ್ನಂಗಳನ್ನೂ ಬರೆತ್ತೆ… ಓದಿದವು ಎನ್ನೊಳ ಇಪ್ಪ ಕವಿಯ ಬೆಳೆಶುಲೇ ಸಲಹೆ,ತಿದ್ದುಪಡಿಗಳ ಹೇಳಿ ಸಹಕರಿಸೆಕ್ಕು ಹೇಳಿ ಕೇಳಿಗೊಳ್ಳುತ್ತಾ ಇದ್ದೆ. ಹರೇ ರಾಮ…
ಆಹಾ..ಸಮಸ್ಯೆಗಳ ಸುರಿಮಳೆ ಸುರಿಯಲಿ,ಪರಿಹಾರ೦ಗಳೂ ಸಿಕ್ಕಲಿ.
ಬೈಲಿಲಿಯೂ ಕಾವ್ಯ ರಚನೆಯ ಪ್ರಯತ್ನ ಶುರುವಾಗಲಿ.