ಬೈಲ ಓದುಗರಿಂಗೆ ಇಂದು ಒಂದು ಹೊಸ ಲೇಖಕಿಯ ಪರಿಚಯ ಮಾಡ್ಲೆ ಎನ್ಗೆ ತುಂಬಾ ಕೊಶೀ ಆವ್ತು. ಹೆಚ್ಚಿಗೆ ದೂರಾಣವು ಆರೂ ಅಲ್ಲ. ನಮ್ಮ ನೆರೆಕರೆಯ ನೆಕ್ಕರೆಕಾಡು ಮನೆಯ ನೆಡ್ಲೆ ಈಶ್ವರ ಭಟ್ಟರ ಮಗಳು ಕುಮಾರಿ ರಮ್ಯಾ ನೆಕ್ಕರೆಕಾಡು್. ಪುತ್ತೂರಿನ ರಾಮಜ್ಜನ ಕಾಲೇಜಿಲ್ಲಿ ಅಂತಿಮ ವರ್ಷದ ಬಿ.ಎಸ್ಸಿ ಕ್ಲಾಸಿಲ್ಲಿ ಕಲಿತ್ತ ಈ ಕೂಸಿನ ಹವ್ಯಾಸ ಹೇಳಿದರೆ ಯಕ್ಷಗಾನಲ್ಲಿ ಪಾತ್ರಮಾಡುವದು, ಏಕಪಾತ್ರಾಭಿನಯ, ಭಾಷಣ ಮಾಡುವದು ಮಾತ್ರ ಅಲ್ಲದ್ದೆ ಕತೆ, ಕವನ, ಪ್ರಬಂಧ ಎಲ್ಲಾ ಬರೆತ್ತ ಹವ್ಯಾಸವನ್ನೂ ಮೈಗೂಡಿಸಿಗೊಂಡಿದು. ಇನ್ನೊಂದು ವಿಶೇಷ ಎಂತ ಹೇಳಿದರೆ ಈ ಕೂಸಿನ ಸಂಗ್ರಹಲ್ಲಿ 480 ಕ್ಕೂ ಹೆಚ್ಚಿನ ಸಸ್ಯಂಗಳ ಆಯುರ್ವೇದ ಗುಣಂಗಳ ಬಗ್ಗೆ ಮಾಹಿತಿಗೊ ಇದ್ದು. ಈ ಅಭ್ಯಾಸವ ಸಣ್ಣದಿಪ್ಪಗಳೇ ಸುರುಮಾಡಿ, ಎಂಟನೇ ಕ್ಲಾಸಿಲ್ಲಿ ಇಪ್ಪಗಳೇ ತನ್ನ ಶಾಲೆಯ ಮಕ್ಕೊಗೆ ಬೇರೆ ಬೇರೆ ತರದ ಔಷಧೀಯ ಸಸ್ಯಂಗಳ ಪರಿಚಯ ಮಾಡಿಸಿಕೊಟ್ಟ ಕೀರ್ತಿ ಇದ್ದು. ಅಂದಿನ ವೃತ್ತ ಪತ್ರಿಕೆಗಳಲ್ಲಿ ಈ ಕೂಸಿನ ಬಗ್ಗೆ ಲೇಖನಂಗೊ ಬೈಂದು.
ಆತ್ಮೀಯ ಓದುಗರೇ, ನವಗೆಲ್ಲರಿಂಗಾಗಿ ಬರದು ಕಳ್ಸಿದ ರಮ್ಯಾಳ ಈಗ ಲಘು ಲೇಖನವ ಓದಿ ನಿಂಗಳ ಅಭಿಪ್ರಾಯವ ಇಲ್ಲಿ ಕೊಟ್ಟು ಪ್ರೋತ್ಸಾಹಿಸೆಕ್ಕು ಹೇಳಿ ಕೇಳಿಗೊಳ್ತಾ ಇದ್ದೆ. ಸಾಹಿತ್ಯ ಕ್ಷೇತ್ರಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಿ ಸಮಾಜಕ್ಕೆ ಹಾಂಗೂ ತನ್ನ ಹೆತ್ತವರಿಂಗೆ ಒಳ್ಳೆಯ ಹೆಸರು ತಪ್ಪಂತೆ ಆಗಲಿ ಹೇಳಿ ಹಾರೈಸುವೊ°
-ಶ್ರೀಕೃಷ್ಣ ಶರ್ಮ ಹಳೆಮನೆ
ಶಾಮಣ್ಣನ ಕಾರುಬಾರು
ಹೆಮ್ಮಕ್ಕ ಮನೆಲಿಲ್ಲದ್ರೆ ಕೇಳೆಕ್ಕಾ? ಗೆಂಡುಮಕ್ಕಳದ್ದೇ ಕಾರುಬಾರು ಅಲ್ಲದೋ??..ಇಂದು ಶಾಮಣ್ಣನ ಹೆಂಡತಿ ಸರೋಜಕ್ಕನ ಅಬ್ಬೆಯ ತಿಥಿ,ಹಾಂಗಾಗಿ ತವರು ಮನೆಗೆ ಹೆರಟುಗೊಂಡಿತ್ತು. “ಕೇಳ್ತಾ…ಆನು ಹೇಳಿದ್ದು ನೆನಪಿದ್ದಲ್ದೋ?….ಹಾಲಿನ ಕೊದಿಶಿಕ್ಕಿ…”ಹೇಳುವಷ್ಟರಲ್ಲಿ ಶಾಮಣ್ಣ,”ಆತು ಮಾರಾಯ್ತಿ, ಎಷ್ಟು ಸರ್ತಿ ಹೇಳಿದ್ರನ್ನೇ ಹೇಳ್ತೆ? ಎಲ್ಲಾ ಮಾಡಿಗೊಂಬೆ, ನಿನಗೆ ಬಸ್ಸಿಂಗೆ ಹೊತ್ತಾತು ಹೋಗು..”ಹೇಳಿ ಹೆಂಡತಿಯ ಕಳ್ಸಿದ. ಇನ್ನೆಂತ ಹೆಂಡತ್ತಿಯೂ ಹೋತು,ಆನು ನಡಿದ್ದೇ ದಾರಿ ಹೇಳಿ ಶಾಮಣ್ಣಂಗೆ ಭಾರೀ ಖುಷಿ.
ಶಾಮಣ್ಣ ಕಳ್ದ ಸರ್ತಿ ಬೆಂಗ್ಳೂರಿಂಗೆ ಮಗಳ ಮನೆಲಿ ನಿಂಬಲೆ ಹೋದಿಪ್ಪಗ ಮಗಳು ಚಿನ್ನದ ರಂಗಿನ ಕಂಬಿಯ ವಸ್ತ್ರ ತೆಗದು ಕೊಟ್ಟಿತ್ತು. ಅದರ ಸುತ್ತಿಗೊಂಡು ಮೆರವಲೆ ಶಾಮಣ್ಣಂಗೆ ಅವಕಾಶವೇ ಸಿಕ್ಕಿತ್ತಿಲ್ಲೆ. ಇಂದು ಮನೆಲಿ ಹೆಂಡತಿಯೂ ಇಲ್ಲೆ! ಆ ವಸ್ತ್ರವ ಸುತ್ತಿಗೊಂಡು ಚೋಮನ ಅಂಗಡಿಗೆ ಹೋದರೆ ಹೇಂಗೆ? ಹೇಳಿ ಆಲೋಚನೆ ಮಾಡಿದ ಶಾಮಣ್ಣ. ಕೂಡ್ಲೇ ಅಡಿಗೆ ಕೋಣೆಗೆ ಹೋಗಿ ತಿಂಡಿ ತಿಂದ. ತಿಂಡಿ ರೆಜ ಹಳಸಿದ ಹಾಂಗಿತ್ತು. ಹೆಂಡತಿಯತ್ರೆ ಹೇಳೆರೆ ಬೆಶಿ ಮಾಡೆಕ್ಕಿತ್ತು ಹಾಂಗೆ ಹೀಂಗೆ ಹೇಳಿ ಸುರು ಮಾಡುಗು. ಅದಕ್ಕಿಂತ ಹೆಂಡತಿಯತ್ರೆ ಹೇಳದ್ದೇ ಇಪ್ಪದು ಒಳ್ಳೆದು ಹೇಳಿ ಸುಮ್ಮನಾದ. ತಿಂಡಿ ಎಲ್ಲಾ ಮೂಗು ಮುಚ್ಚಿಗೊಂಡು ತಿಂದಿಕ್ಕಿ, ನಾಯಿಗೆ ಹಾಕುಲಿಪ್ಪದರ ಹಾಕಿಕ್ಕಿ, ಬಳ್ಳಿಲಿ ಆರ್ಸಿತ್ತ ಹೊಸ ವಸ್ತ್ರವ ಸುತ್ತಿಗೊಂಡು, ಹೊಳವ ಮಂಡೆಗೆ ಬಾಚಣಿಗೆ ತೋರ್ಸಿ, ಗತ್ತಿಲಿ ಶಾಮಣ್ಣ ಚೋಮನ ಅಂಗಡಿಗೆ ಹೋದ. ದೂರಂದಲೇ ಗಣಪಣ್ಣ ಅಂಗಡಿಲಿ ಕೂದುಗೊಂಡಿಪ್ಪದು ಕಂಡತ್ತು. ಶಾಮಣ್ಣಂಗೆ ಭಾರೀ ಖುಷಿ ಆತು. ಗಣಪಣ್ಣನ ಎದುರೆ ಇಂದು ರೈಸೆಕ್ಕೇ ಹೇಳಿ ಬೇಗ ಬೇಗ ನಡೆದ.
“ಹೋ.. ಶಾಮಣ್ಣ ಎಂತ ಇಂದು ಇತ್ಲಾಗಿ ಬಂದದು..? ಹೆಂಡತಿ ಇಂದು ಅಬ್ಬೆ ಮನೆಗೆ ಹೋಯ್ದಾಳಿ ಅಲ್ಲದೋ?” ಹೇಳಿದ ಗಣಪಣ್ಣ. ಶಾಮಣ್ಣ ಬೇಕೋಳಿಯೇ ವಸ್ತ್ರವ ಮೇಲೊಂದರಿ ಕಟ್ಟಿ ಪುನಃ ಬಿಡ್ಸಿ “ಅದರ ಅಬ್ಬೆ ತಿಥಿ ಇಂದು, ಹಾಂಗೆ ತವರಿಂಗೆ ಹೋಯ್ದು” ಹೇಳಿದ. ಗಣಪಣ್ಣ ವಸ್ತ್ರದ ವಿಷಯ ಎಂತದುದೆ ಕೇಳದ್ದೇ ಇಪ್ಪದರ ಕಂಡು, ಶಾಮಣ್ಣನೇ ಮೆಲ್ಲಗೆ,”ಈ ವಸ್ತ್ರ ಭಾರೀ ಲಾಯ್ಕ ನಿಲ್ತು. ಮೊನ್ನೆ ಮಗಳು ತೆಗೆದು ಕೊಟ್ಟದು… ಇಸ್ತ್ರಿ ಹಾಕೆಕ್ಕೋಳಿಯೇ ಇಲ್ಲೆ ಇದಕ್ಕೆ..” ಹೇಳೆರುದೇ ಗಣಪಣ್ಣ ಕ್ಯಾರೇ ಮಾಡಿದ್ದನೇಲ್ಲೆ.”ಶಾಮ ಮತ್ತೆ ಬೆಂಗ್ಳೂರಿನ ಸುದ್ದಿ ಎಂತರ?” ಕೇಳಿದ..ಅಷ್ಟಪ್ಪಗ ಶಾಮಣ್ಣಂಗೆ ಬೀಗುಲೆ ಇನ್ನೊಂದು ವಿಷಯ ಸಿಕ್ಕಿತ್ತು. “ಅದರ ಕೇಳೆಕ್ಕೋ…ಎಂತ ಜೆನ ದೇವರೇ…! ಮಗಳು ಎನ್ನ ಎಂತದೋ ಮಾಲು ಹೇಳುವಲ್ಲಿಗೆ ಕರ್ಕೊಂಡು ಹೋಯ್ದು.. ಮುಗಿಲೆತ್ತರದ ಕಟ್ಟಡ.. ವಸ್ತ್ರ, ಕಾಜಿ, ತಿಂಬದು ಎಲ್ಲಾ ಅಲ್ಲಿಯೇ ಸಿಕ್ಕುತ್ತು. ನಮ್ಮ ಊರಿನ ಜಾತ್ರೆಯ ಹಾಂಗೆ… ಅಲ್ಲಿ ಹೋಗಿ ನಮ್ಮ ಚೋಮನ ಅಂಗಡಿಲಿ ಕೇಳಿದ ಹಾಂಗೆ, ಒಂಜಿ ಕಿಲ ಬಜಿಲ್ ಇಪ್ಪಾಡ್ ಹೇಳುದಲ್ಲ.. ದೊಡ್ಡ ಬಾಲ್ದಿ ನೂಕಿಗೊಂಡು ಹೋಗಿ ಬೇಕಾದ್ದರ ತೆಕ್ಕೊಳ್ಳೆಕ್ಕು. ನಾವು ತೋಟಕ್ಕೆ ಹೋಪಗ ಗೋಣಿ ತೆಕ್ಕೊಂಡು ಹೋಗಿ ಅಡಕ್ಕೆ, ಕಾಯಿ, ಬಾಳೆಗೊನೆ ತೆಕ್ಕೊಂಡು ಬಂದ ಹಾಂಗೆ…ಕಡೆಂಗೆ ಮೂಲೆಲಿ ಪೈಸೆ ಕಟ್ಟೆರಾತು…”ಹೇಳಿಕ್ಕಿ ಎದ್ದು ನಿಂದು,”ಆನಿನ್ನು ಹೋತೆ..ಹೆಂಡತಿ ಹೇಳಿದ ಕೆಲಸ ಬಾಕಿ ಇದ್ದು ಮನೆಲಿ….ಎಂತಾರುದೇ ಗಣಪಣ್ಣ, ನಮಗೆ ಈ ಮಾಲು-ಗೀಲು ಎಲ್ಲಾ ಆಗ, ಚೋಮನ ಅಂಗಡಿಯಷ್ಟು ಒಳ್ಳೆದು ಯಾವುದೂ ಇಲ್ಲೆ…. ಇಲ್ಲಿ ಸಾಲವೂ ನಡೆತ್ತು ಅಲ್ಲದೋ..??” ಹೇಳಿಕ್ಕಿ ಚೋಮನತ್ರೆ ” ಚೋಮ ರಡ್ಡ್ ಬಚ್ಚಿರೆ ದೆತ್ತೊನ್ಪೆ…ಕೋಡೆದ ಲೆಕ್ಕಗ್ ಸೇರ್ಸಾಲ…ಮಾತಾ ಒಟ್ಟ್ ಗೇ ಸೇರ್ಸಾದ್ ಎಲ್ಲೆ ಕೊರ್ಪೆ..” ಹೇಳಿಕ್ಕಿ ಹೆರಟ ಶಾಮಣ್ಣ.ಎಂತ ಗಣಪಣ್ಣ ವಸ್ತ್ರದ ವಿಷಯವೇ ಕೇಳಿದ್ದನೇಲ್ಲೆ…ಹೇಳಿ ಗ್ರೇಶಿಗೊಂಡೇ ರೆಜ ಮುಂದೆ ಹೋಪಗ, “ಶಾಮಣ್ಣ ಮಗಳು ಕೊಡ್ಸಿದ ವಸ್ತ್ರ ಮಾತ್ರ ಪಸ್ಟ್ ಇದ್ದು…” ಹೇಳಿ ಗಣಪಣ್ಣ ಹೇಳಿದ್ದೇ ತಡ, ಶಾಮಣ್ಣ ಎದೆಯುಬ್ಬಿಸಿ ಹಿಂದೆ ತಿರುಗಿ, ಗತ್ತಿಲಿ ಒಂದು ನೆಗೆ ಬೀರಿ, ಮನೆಗೆ ನಡೆದ.
ಹೊತ್ತಪ್ಪಗ ಸರೋಜಕ್ಕ ಬಂತು. ಶಾಮಣ್ಣ ಹಸೆ ಬಿಡ್ಸಿ, ರೇಡಿಯೋ ಕೇಳಿಗೊಂಡು ಮನುಗಿತ್ತಿದ್ದ. ಸರೋಜಕ್ಕ ಮನೆ ಒಳ ನುಗ್ಗೆಕ್ಕಾರೆ,” ಇದಾ… ಕೇಳ್ತಾ..”ಹೇಳಿ ಬೊಬ್ಬೆ ಹಾಕಿತ್ತು. ಶಾಮಣ್ಣ ರೇಡಿಯೋ ಆಫ್ ಮಾಡಿ ಹೆರ ಬಂದ,”ಎಂತ ಮಾರಾಯ್ತಿ ಬೊಬ್ಬೆ ಹೊಡೆಯುವದು??” ಕೇಳಿಯಪ್ಪಗ, ” ನಿಂಗೋಗೆ ಪಲಾವ್ ಮೆಚ್ಚಿದ್ದಿಲ್ಲೆಯ..? ನಾಯಿಗೆ ಎಂತಕೆ ಹಾಕಿದ್ದು..ನಾಯಿದೇ ತಿಂದಿದಿಲ್ಲೆ” ಹೇಳಿತ್ತು. ಶಾಮಣ್ಣ ಮನಸ್ಸಿಲಿಯೇ “ಹೋ…ಅಂಬಗ ಅದು ಪಲಾವೋ..ಹಳಸಿದ ವಾಸನೆಗೆ ಎಂತಾಳಿಯೇ ಗೊಂತಾಯ್ದಿಲ್ಲೆ..”ಹೇಳಿ ಗ್ರೇಶಿಕ್ಕಿ, “ಮೆಚ್ಚಿದ್ದನ್ನೆ…ನಾಯಿಗೆ ನೀನು ಮಡುಗಿದ ಪಾತ್ರೆಂದಲೇ ಹಾಕಿದ್ದು..” ಹೇಳಪ್ಪಗ ಸರೋಜಕ್ಕ” ಅಯ್ಯೋ…ಆನು ಪಾತ್ರೆಲಿ ಮಡುಗಿದ್ದು ಪಲಾವ್ ನಿಂಗೊಗೇಳಿ… ನಾಯಿಗೆ ಒಂದು ಬಟ್ಲಿಲಿ ಮೊನ್ನೆಣ ಹಳಸಿದ ಉಪ್ಪಿಟ್ಟು, ಅಶನ ಸೇರ್ಸಿ ಒಟ್ಟಿಂಗೆ ಮಡುಗಿತ್ತಿದ್ದೆ…ನಿಂಗ ಅದರನ್ನೇ ತಿಂದಿರಾ ಹೇಂಗೆ..?”ಹೇಳಿಯಪ್ಪಗ ಶಾಮಣ್ಣಂಗೆ ತಿಂದದಿಡೀ ಬಾಯಿಲಿ ಬಂದ ಹಾಂಗಾತು..ಹೆಂಡತಿಗೆ ಗೊಂತಾದರೆ ಮರ್ಯಾದೆ ಹೋಕ್ಕು ಹೇಳಿ ವಿಷಯವನ್ನೆ ಬದಲ್ಸಿದ ಶಾಮಣ್ಣ.” ನಿನಗೆ ಒಂದು ವಿಷಯ ಗೊಂತಿದ್ದ?? ಮೊನ್ನೆ ಮಗಳು ಕೊಡ್ಸಿದ ವಸ್ತ್ರ ಇತ್ತಲ್ಲ..ಅದರ ಸುತ್ತಿಗೊಂಡು ಚೋಮನ ಅಂಗಡಿಗೆ ಹೋಯ್ದೆ… ಅಲ್ಲಿ ಗಣಪಣ್ಣಂಗೆ ಅದರ ನೋಡಿ ಭಾರೀ ಖುಷಿ ಆತು ಗೊಂತ್ತಿದ್ದ..??” ಹೇಳಿಯಪ್ಪಗ, ಸರೋಜಕ್ಕ, ” ಯಾವುದು..ಆ ಬಂಗಾರ ಬಣ್ಣದ ಕಂಬಿದೋ..?”ಹೇಳಿ ಕೇಳಿತ್ತು.” ಅದುವೇ ಮಾರಾಯ್ತಿ..” ಹೇಳಿದ ಶಾಮಣ್ಣ. ಅಂಬಗ ಸರೋಜಕ್ಕ,” ಅದರ ತಂದ ಲಾಗಾಯ್ತಿ ತೊಳದ್ದಿಲ್ಲೆ. ಅದರ ತೊಳವಲೆ ಹೇಳಿ ವಾಷಿಂಗು ಮೆಷಿನಿಂಗೆ ಹಾಕುವ ವಸ್ತ್ರದೊಟ್ಟಿಂಗೆ ಮಡುಗಿತ್ತಿದ್ದೆ ನಿಂಗೊಗೆ ಹೇಂಗೆ ಸಿಕ್ಕಿತ್ತು..???” ಕೇಳಿಯಪ್ಪಗ ಶಾಮಣ್ಣ ” ಎಲ್ಲಿಂದ… ಅದು ಬಳ್ಳಿಲಿಯೇ ಆರ್ಸಿಗೊಂಡಿತ್ತು…”ಹೇಳಿದ ಕೂಡ್ಲೆ ಸರೋಜಕ್ಕ,” ಯೋ….ನಿಂಗಳ ಅವಸ್ಥೆಯೇ…! ಆ ವಸ್ತ್ರ ಮೊನ್ನೆ ಮಾಪಣ್ಣನ ಮಗನ ಉಪನಯನಂದ ಬಪ್ಪಗ ಬಾಗಿಲಿಂಗೆ ಸಿಕ್ಕಿ, ಹಿಂದೆ ದೊಡಾ ತೂಂಬಿನಾಂಗೆ ಆದ್ದಲ್ಲದಾ… ಅದಕ್ಕೆ ಪುರ್ಸೊತ್ತಿಲಿ ಪತ್ತೆ ಹಾಕುಲಕ್ಕು ಹೇಳಿ ಆನು ಬಳ್ಳಿಲಿ ಆರ್ಸಿದ್ದು…ನಿಂಗಳ ಗಡಿಬಿಡಿಲಿ ಎನ್ನಂದ ಎಡಿಯ…”ಹೇಳಿಯಪ್ಪಗ ಶಾಮಣ್ಣಂಗೆ ಎಂತ ಮಾಡೆಕ್ಕು ಹೇಳಿ ಗೊಂತಾಯ್ದಿಲ್ಲೆ. ಗಣಪಣ್ಣ ಆಗ ವಸ್ತ್ರ ಪಸ್ಟ್ ಇದ್ದು ಹೇಳಿದ್ದು ಇನ್ನೊಂದು ಅರ್ಥಲ್ಲಿ ಹೇಳಿ ಈಗ ಗೊಂತಾತು ಶಾಮಣ್ಣಂಗೆ.
ಶಾಮಣ್ಣನ ಕಾರುಬಾರು ಗ್ರೇಶಿ ಪಿಸಿಕ್ಕನೆ ನೆಗೆ ಮಾಡಿತ್ತು, ಸರೋಜಕ್ಕ..!
***~~~***
D/o.ನೆಡ್ಲೆ ಈಶ್ವರ ಭಟ್
ನೆಕ್ಕರೆಕಾಡು ಮನೆ
ವಿಟ್ಲ ಕಸಬ ಗ್ರಾಮ, ಅಂಚೆ ವಿಟ್ಲ
ಬಂಟ್ವಾಳ ತಾಲೂಕು
ದ.ಕ 574243
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ರಮ್ಯಾ.. ಶ್ಯಾಮಣ್ಣನ ಕಥೆ ಭಾರೀ ಲಾಯ್ಕಾಯ್ದು… ಹೀಂಗೇ ಬರೆತ್ತಾ ಇರು…
ಲಾಯಕ ಆಯ್ದು ಶಾಮಣ್ಣನ ಕಾರುಬಾರು 😛
🙏
ಧನ್ಯವಾದಂಗೊ… ಹೀಂಗೆ ಪ್ರೋತ್ಸಾಹಿಸಿ
ಧನ್ಯವಾದಂಗೋ…ಹೀಂಗೆ ಪ್ರೋತ್ಸಾಹಿಸಿ…
ಶಾಮಣ್ಣನ ಅವಸ್ಥೆ ನೋಡಿ ನೆಗೆ ಬಂದು ತಡೆಯ. ರಮ್ಯಾನ ಬರವಣಿಗೆ ಶೈಲಿ ಸೂಪರ್ !! ಆ ಸಸ್ಪೆನ್ಸು ಕಡೇಂಗೆ ವರೆಗೆ ಒಳುಸಿದ್ದು ಲಾಯಕಾಯಿದು. ಇನ್ನುದೆ ಲೇಖನಂಗೊ ಬೈಲಿಂಗೆ ಬತ್ತಾ ಇರಳಿ.