Oppanna.com

ಸ್ವಯಂವರ : ಕಾದಂಬರಿ : ಭಾಗ 44 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   13/04/2020    4 ಒಪ್ಪಂಗೊ

ಸ್ವಯಂವರ 44

“ಏಯ್….ವಿಜೂ….ಕತೆ ಅರ್ಧಲ್ಲಿ ನಿಲ್ಸಿದ್ದೆಂತಕೆ? ಸುಶೀಲಂಗೆ ಎಂತಾತು ಹೇಳು?” ಸುಪ್ರಿಯ ವಿಜಯನ ಹೆಗಲು ಹಿಡುದು ಕುಲ್ಕಿಸಿತ್ತು.

ವಿಜಯ ಅದರ ಮೋರೆ ನೋಡಿ ಸುಮ್ಮನೆ ನೆಗೆ ಮಾಡಿತ್ತು.
“ಹೀಂಗೆ ಮಾಡಿರಾಗ, ಸುಶೀಲನ ಜೀವಕ್ಕೆ ಎಂತಾತು ಹೇಳು? ಕೇಶವನ ಮದುವೆ ಕಳುದ್ದಾ? ದಿನೇಸ,ತಂಗಮ್ಮ ಎಂತ ಮಾಡಿದವು?…ಎಲ್ಲದಕ್ಕೂ ಉತ್ತರ ಕೊಡು”

“ಅದು ಮತ್ತೆ ಹೇಳ್ತೆ ಮಾರಾಯ್ತೀ..ಈಗ ಹಾಸ್ಟೆಲ್ ಗೆ ಹೋಪ°.

” ಅದಾಗ..ಇಂದು ಆನು ನೀನು ಹೇಳಿದಲ್ಲೆಲ್ಲ ಬಯಿಂದೆ. ನೀನು ಹೇಳಿದಾಂಗೆ ಕೇಳಿದ್ದೆ. ಎನಗೆ ಸುಶೀಲಂಗೆ ಎಂತಾತೂಳಿ ಗೊಂತಪ್ಪದಕ್ಕಿಂತ ಹೆಚ್ಚು ಕೇಶವಂಗೆ ಎಂತಾತೂಳಿ ಗೊಂತಾಯೆಕು. ಹೀಂಗೆ ಅರ್ಧ ಕತೆ ಹೇಳ್ತರೆ ನೀನೆಂತಕೆ ಕತೆ ಹೇಳಿದ್ದು..? ಸುಪ್ರಿಯಂಗೆ ಕತೆ ನಿಲ್ಸಿದ್ದಕ್ಕೆ ಕೋಪವೇ ಬಂತು.

“ಅದಾ..ನಿನ್ನ ಪೋನು ರಿಂಗಾವ್ತು ನೋಡು…ತೆಗೆ .ಮದಾಲು..!”

ಮೊಬೈಲ್ ಲಿ  ಹೆಸರು ಕಂಡದೂದೆ ರಜ ಹೆದರಿದ ಹಾಂಗೆ ಮಾಡಿ ಸುಪ್ರಿಯ ಪೋನು ಕೆಳ ಮಡುಗಿತ್ತು

“ಆನು ಈ ಪೋನು ತೆಗೆತ್ತಿಲ್ಲೆ. ಎನಗೆ ಇನ್ನೊಂದು ಸುಶೀಲ° ಅಪ್ಪದು ಬೇಡ, ಎನ್ನ ಅಣ್ಣನೂ ಕೇಶವನ ಹಾಂಗೆ, ಅವನ ಪ್ರೀತಿ ಬಿಟ್ಟು ಎನಗೆ ಬೇರೆ ಆರದ್ದೂ ಬೇಡ”

“ಅಷ್ಟು ಹೇಳುಗ ಕಣ್ಣು ತುಂಬಿ ಬಂತನ್ನೇ..ಅಣ್ಣ ಹೇಳಿರೆ…….ದಲೂ ಹೆಚ್ಚು  ಪ್ರೀತಿಯಾ…..” ವಿಜಯ ಕುಶಾಲಿಂಗೆ ರಾಗಲ್ಲಿ ಹೇಳಿತ್ತು.

“ತಮಾಶೆ ಮಾಡೆಡ, ಎನ್ನ ಅಣ್ಣ ಹೇಳಿರೆ ನಿನಗೆ ಗೊಂತಿಲ್ಯಾ? ಆನೆಂತಾರು ತಪ್ಪು ಮಾಡಿದ್ದಕ್ಕೆ ಅಪ್ಪ,ಅಮ್ಮ ಬೈದರೆ ಕೂಡ ಅವನೇ ಎನ್ನ ಪಾರ್ಟಿಗೆ ನಿಂಬದು. ನೀನು ಸುಶೀಲನ ಕತೆ ಹೇಳದ್ರೆ ಆನೂದೆ ಬಹುಶಃ ಇವರ ಪ್ರೀತಿಯ ಅರ್ಥ ಮಾಡದ್ದೆ ಇನ್ನಾಣ ತಿಂಗಳು ನಮ್ಮ ಪರೀಕ್ಷೆ ಮುಗುದಪ್ಪಗ…..!!! ಎನಗದರ ಗ್ರೇಶಲೆ ಸಾನು ಎಡಿತ್ತಿಲ್ಲೆ.. …”

ಸುಪ್ರಿಯನ ಮನಸಿಲ್ಲಿ ಸುಶೀಲ ದಿನೇಸನ ಮದುವೆಯಾಗಿ ತಂಗಮ್ಮನೊಟ್ಟಿಂಗೆ ಬಂಙ ಬಂದ ವಿಶಯಂಗೊ ಸಿನೆಮಾದ ಹಾಂಗೆ ತೇಲಿ ಬಂತು. ಈ ಸುಶೀಲ° ಹೇಳಿರೆ ಆರು, ಅದರ ಕತೆಯ ವಿಜಯ ಹೇಳಿ ಅರ್ಧಲ್ಲಿ ನಿಲ್ಸಿದ್ದೆಂತಕೆ……..!!

“ವಿಜೂ…..ಆನೊಂದು ಕೇಳೆಕಾ..ಇಷ್ಟು ಹೊತ್ತು ನೀನು ಹೇಳಿದಾಂಗೆ ಕೇಳಿದೆ. ನೀನು ಹೇಳಿದಲ್ಲಿಗೆ ಬಂದೆ.ಎಲ್ಲ ನಿನ್ನ ಇಷ್ಟದ ಹಾಂಗೆ ನಡಕ್ಕೊಂಡೆ. ಅಷ್ಟಪ್ಪಗ ನೀನು ಈ ಕತೆಯ ಇಷ್ಟು ಹೇಳಿ ನಿಲ್ಸಿದ್ದೆಂತಕೆ? ಸುಶೀಲ° ಎಂತ ಮಾಡಿತ್ತು? ಅದರ ಮಕ್ಕೊ ಎಂತಾದವು? ಸುಶೀಲ ಬಹುಶಃ ನಾವು ಹೋದ ಆಶ್ರಮಕ್ಕೆ ಬಂದಿಕ್ಕು ಅಲ್ಲದಾ? ಅದರ ಎರಡು ಮಕ್ಕೊ ಎಲ್ಲಿದ್ದವು?  ಎಲ್ಲದಕ್ಕಿಂತ ಹೆಚ್ಚು ಆ ಅಣ್ಣ… ಕೇಶವ°…!! ಅವಂಗಾದರು ಎಂತಾತು ಹೇಳು? ಆ ಮದುವೆ ನಡದ್ದಾ? ಸುಶೀಲ ಜೀವಾಪಾಯ ಮಾಡಿದ್ದಿಲ್ಲೆನ್ನೇ.. ಇದೆಲ್ಲ ನಿಜಕ್ಕೂ ನಡದ ಕತೆಯಾಂಗೇ ಆವ್ತೆನಗೆ. ಇದರ ಎಡೇಲೆಲ್ಯೋ ನಾವೆಲ್ಲ ಇದ್ದಾಂಗೆ.. ಪ್ಲೀಸ್.. ಹೇಳು ಮಾರಾಯ್ತೀ.. ”

ವಿಜಯ ಸುಮ್ಮನೇ ಕೂದುಕೊಂಡು ಸುಪ್ರಿಯನ ಮೋರೆ ನೋಡಿತ್ತು. ಅದರತ್ರೆ ಎಂತರ ಹೇಳುದು?  ಈ ಕತೆ ಅದಕ್ಕೆ ಹೇಳದ್ರೆ ಅದು ಖಂಡಿತ ಪರೀಕ್ಷೆ ಕಳುದ ಕೂಡ್ಲೇ ಆ ಟೆಂಪೋ ಡ್ರೈವರನೊಟ್ಟಿಂಗೆ ಹೋಕು ಹೇಳಿ ವಿಜಯಂಗೆ ಅಂದಾಜಿದ್ದು. ಪ್ರೀತಿಯ ಮರ್ಲು ತಲಗೇರಿದ್ದದು ಬಿರಿಶೆಕಾರೆ ಅದಕ್ಕೆ ಬೇರೆ ದಾರಿ ಕಂಡಿದಿಲ್ಲೆ.
ಸುಪ್ರಿಯನ ಅದರ ಮನೆಯವು ಎಷ್ಟು ಕೊಂಗಾಟ ಮಾಡ್ತವು ಹೇಳಿ ವಿಜಯಂಗೆ ಗೊಂತಿದ್ದು. ಅಂದರೂ ಆ ಪ್ರೀತಿಂದಲೂ ಹೆಚ್ಚು ಶಕ್ತಿ ಇಪ್ಪದು “ಈ” ಪ್ರೀತಿಗೆ ಹೇಳಿ ಅದಕ್ಕೆ ನಿಜವಾಗಿಯೂ ಆಶ್ಚರ್ಯ ಆಯಿದು. ಇಷ್ಟು ಶ್ರೀಮಂತರ ಮನೆಯ ಕೂಸು ಹಾಸ್ಟೆಲಿಂಗೆ ಸಾಮಾನು ತಪ್ಪ ಟೆಂಪೋ ಡ್ರೈವರನ ಪ್ರೀತಿಸುದು ಹೇಳಿರೆ…..!!

ಸುದೀಪನ ಹಾಂಗಿದ್ದ ಯೋಗ್ಯ ಮಾಣಿ ಕೂಡ ಅದರ ಕಣ್ಣಿಂಗೆ “ಮೋಞ್ಞ” ನ ಹಾಂಗೆ ಕಾಣೆಕಾರೆ ಪ್ರೀತಿಯ ಅಮಲು ಎಷ್ಟು ತಲಗೆ ಏರಿಕ್ಕು..

ಕಳುದ ಮೂರು ತಿಂಗಳಿನ ಎಡೇಲಿ ಸುಪ್ರಿಯನ ಬದ್ಕಿಲ್ಲಿ ಸುರುವಾದ ಪ್ರೀತಿ ಇದು. ಅಂಬಗಳೇ ವಿಜಯ ಅದಕ್ಕೆ ಬುದ್ದಿ ಹೇಳ್ಲೆ ನೋಡಿರೂ ಅದೆಲ್ಲ ಅದಕ್ಕೆ ನಾಟಿದ್ದಿಲ್ಲೆ. ಹಾಂಗಾಗಿ ಸುರುವಿಂಗೆ ಸುಮ್ಮನೇ ಕೂದರೂ ಸುಪ್ರಿಯನ ಮೇಗೆ ಒಂದು ಕಣ್ಣು ಮಡುಗಿ ಆ ಡ್ರೈವರನೊಟ್ಟಿಂಗೆ ಹೆಚ್ಚು ತಿರುಗುಲೆ ಹೋಪಲೆ ಬಿಡದ್ದೆ ಒಂದೊಂದೇ ಉಪಾಯ ಮಾಡಿದ್ದದು. ಅಂದರೂ ಈ ಮೊಬೈಲು,ವ್ಯಾಟ್ಸಪ್ಪು ಇದ್ದ ಕಾರಣ ಅದರ ಪ್ರೀತಿ ಹಬ್ಬಿ ಹರಡಿತ್ತು.
ವಿಜಯ ಹಾಸ್ಟೆಲಿಲ್ಲಿ ಇಪ್ಪದಲ್ಲದ್ದ ಕಾರಣ ಸುಪ್ರಿಯಂಗೆ ಇರುಳೆಲ್ಲ ಆ ಡ್ರೈವರನೊಟ್ಟಿಂಗೆ ಚಾಟ್ ಮಾಡ್ಲೆ, ಮಾತಾಡ್ಲೆ ಲಾಯ್ಕ ಆಗಿಂಡಿದ್ದತ್ತು. ಅದು ಎಷ್ಟು ಜಾಗ್ರತೆ ಮಾಡಿ ಆರಿಂಗೂ ಗೊಂತಾಗದ್ದ ಹಾಂಗೆ ನೋಡ್ಯೊಂಡರೂ ವಿಜಯ ಅದರ ಮೇಗೆ ಜಾಗ್ರತೆಯ ಒಂದು ದೃಷ್ಟಿ ಮಡುಗಿಂಡೇ ಇದ್ದತ್ತು. ಪ್ರೀತಿಯ ಜತೆಕ್ಕಾರ್ತಿಯ ಬದುಕಿಲ್ಲಿ ಕಷ್ಟ ಬಪ್ಪಲಾಗ, ಅದಕ್ಕೆ ಹೆರಾಣ ಪ್ರಪಂಚದ ಅರಿವೇ ಇಲ್ಲದ್ದ ಕಾರಣ ಹೀಂಗಿದ್ದ ವಿಶಯಲ್ಲಿ ಅದೆಂತಾರು ದಡಬಡ ಮಾಡುಗು ಹೇಳಿ ಗೊಂತಿದ್ದತ್ತು.

ಅದಕ್ಕೇ ಇಂದು ಅದರ “ಚಂದನವನ” ಹೇಳುವ ಆ ಅನಾಥಾಶ್ರಮಕ್ಕೆ ಕರಕ್ಕೊಂಡು ಹೋದ್ದು. ಊರಿಂಗೆ ಹೋಗದ್ದೆ ಹಾಸ್ಟೆಲಿಲ್ಲಿ ಇದ್ದರೆ ಆ ಜನರೊಟ್ಟಿಂಗೆ ತಿರುಗುಲೆ ಹೋದರೇಳಿ ಹೆದರಿಕೆ ವಿಜಯಂಗೆ.

ಒಂದರಿಯೂ ಬಸ್ಸಿಲ್ಲಿ ಹೋಗದ್ದ ಸುಪ್ರಿಯಂಗೆ ಬಸ್ಸಿಲ್ಲಿ ಹೋಗಿ ಬಂದಪ್ಪಗ ಸಾಕು ಸಾಕಾತು.
“ಅಯ್ಯೋ.. ಎಷ್ಟು ಜನ ಮಾರಾಯ್ತೀ..ನಮ್ಮ ಮೈಗೇ ಬೀಳುದು. ಈ ಗೆಂಡುಮಕ್ಕೊಗೆಲ್ಲ ಬಾಶೆಯಿಲ್ಲೆ. ನಮಗೆ ಸೀಟು ಸಿಕ್ಕಿದ್ದು ಪುಣ್ಯ” ಬಸ್ಸಿಲ್ಲಿ ಬೇರೆ ಕೂಸುಗೊ ನಿಂದು ಬಂಙ ಬಪ್ಪದು ಕಂಡೇ ಸಾಕಾಯಿದದಕ್ಕೆ.
ವಿಜಯ ಸಣ್ಣಕೆ ನೆಗೆ ಮಾಡಿತ್ತಷ್ಟೆ.
ಆಶ್ರಮಕ್ಕೆ ಕರಕ್ಕೊಂಡು ಹೋದ್ದು ಸುಪ್ರಿಯಂಗೆ ಕೊಶಿಯಾತು. ಅಲ್ಲಿಪ್ಪ ಜನಂಗಳ ಕೆಲಸ,ಪ್ರೀತಿಯ ವರ್ತನೆ ,ಆಶ್ರಮದ ಸುತ್ತ ಇಪ್ಪ ತೋಟ, ಗೋಶಾಲೆಯ ದನಗೊ….ಎಲ್ಲವನ್ನೂ ನೋಡಿತ್ತು.

“ಆನು ಹೀಂಗಿದ್ದಲ್ಲಿಗೆ ಬಪ್ಪದು ಸುರೂ..,ಎಷ್ಟು ಲಾಯ್ಕ ಜಾಗೆ. ಆದರೂ ಇಲ್ಲಿಪ್ಪವರ ಮೋರೆಲೆಲ್ಲ ಸಂತೋಶ ಇಲ್ಲೆ. ಹೆರಾಂಗೆ ನೆಗೆ ಕಾಣ್ತರೂ ಮನಸ್ಸಿನೊಳ  ಎಂತೋ ಬೇಜಾರ ಹಿಡುದವರ ಹಾಂಗೆ ಇದ್ದವಲ್ಲದಾ?”

ಸುಪ್ರಿಯಂಗೆ ಅದು ಅರ್ಥ ಆತನ್ನೇಳಿ ಸಮದಾನ ವಿಜಯಂಗೆ. ಅಲ್ಲಿಪ್ಪ ಕೆಲವು ಹೆಮ್ಮಕ್ಕಳ ಎಲ್ಲ ಗುರ್ತ ಮಾಡಿತ್ತು. ಅಕೇರಿಗೆ ಗುರ್ತ ಮಾಡಿದ್ದು ಅಲ್ಯಾಣ ಮೆನೇಜರ್.
ಮೆನೇಜರ್ ಹೇಳುಗ ಸುಪ್ರಿಯನ ಮನಸಿಲ್ಲಿ ರಜ ಪ್ರಾಯ ಆದ ಹೆಮ್ಮಕ್ಕಳ ಚಿತ್ರ ಇದ್ದದು. ಆದರೆ ಅವರ ಆಪೀಸಿನ ಕೋಣೆಯೊಳಾಂಗೆ ಹೋಗಿ ನೋಡಿಯಪ್ಪಗ ಆಶ್ಚರ್ಯ ಆತು.
ಬೆಳೀ ಬಣ್ಣದ ಉದ್ದ ಜೆಡೆಯ ಚಂದದ ಹೆಮ್ಮಕ್ಕೊ. ಅವರ ಕಣ್ಣುಗೊಕ್ಕೆ ಎಂತೋ ವಿಶೇಷ ಆಕರ್ಷಣೆ ಇದ್ದು ಹೇಳಿ ಆತು ಸುಪ್ರಿಯಂಗೆ.
ನಸು ನೀಲಿ ಬಣ್ಣದ ಕೆಂಪು ಕರೆ ಇಪ್ಪ ಮಗ್ಗದ ಸೀರೆ. ಮೋರೆಲಿ ಸಣ್ಣ ಬೊಟ್ಟು, ಕೆಮಿಲಿ ಒಂದು ಸಣ್ಣ ಟಿಕ್ಕಿ. ಕೊರಳಿಲ್ಲಿ ಎಂತ ಇದ್ದೂಳಿ  ಅದಕ್ಕೆ ಗೊಂತಾಯಿದಿಲ್ಲೆ. ಆದರೂ ಎಂತೋ ಒಂದು ಚಂದ ಅವರ ಕಾಂಬಗ.

ಸುಗುಣ ಹೇಳಿ ಹೆಸರು. ಸ್ವರ ಸಣ್ಣಾದರೂ ಆ ಸ್ವರಕ್ಕೆ ಒಳ್ಳೆ ಶಕ್ತಿ ಇದ್ದತ್ತು.
“ಅಪರೂಪಕ್ಕೆ ಬಂದ ಗೆಳತಿಗೆ ಇಲ್ಲಿ ಯೇವದೇ ಕೊರತೆ ಆಗದ್ದಾಂಗೆ ನೋಡಿಗೋ. ಹಾಂಗೇ ನಿಂಗೊ ವಾಪಾಸು ಹೋಪಗ ಇಲ್ಯಾಣ ವಾಹನಲ್ಲಿ ಹೋಪಲಕ್ಕು” ಹೇಳಿದವು.
ಹಾಂಗೆ ಅಲ್ಲೆಲ್ಲ ತಿರುಗಿದವು. ಸುಪ್ರಿಯಂಗೆ ಎಲ್ಲ ಹೊಸತ್ತು. ವಿಜಯ ಎಲ್ಲಾ ದಿಕಂಗೂ ಕರಕ್ಕೊಂಡು ಹೋಗಿ ತೋರ್ಸಿತ್ತು.
ಆ ಆಶ್ರಮಲ್ಲಿ  ಹೆಮ್ಮಕ್ಕೊ ಮಾತ್ರ ಇದ್ದದು. ಹತ್ತು ವರ್ಷಂದ ಸಣ್ಣ ಮಾಣಿಯಂಗೊ ಅಬ್ಬೆಕ್ಕಳ ಒಟ್ಟಿಂಗೆ ಇದ್ದವು. ಈ ಆಶ್ರಮ ನಡಶುದು ಅಮೇರಿಕಲ್ಲಿಪ್ಪ ಒಬ್ಬರು ಡಾಕ್ಟರ್ ಆಡ. ಗೆಂಡು ಮಕ್ಕೊಗೆ ಇಲ್ಲಿ ಪ್ರವೇಶ ಇಲ್ಲೆ. ಜೀವನದ ದಾರಿಲಿ ತಪ್ಪು ದಾರಿಗೆ ಹೋಗಿ ಬದುಕು ಕಳಕ್ಕೊಂಡ ಹೆಮ್ಮಕ್ಕೊ ಅವೆಲ್ಲ. ಕೆಲವು ಜನ ಆರೂ ಆಶ್ರಯ ಇಲ್ಲದ್ದವು.
ಅಲ್ಯಾಣ ಶಿಸ್ತಬದ್ಧ ಜೀವನ ಕಂಡು ಕೊಶೀ ಆತು ಸುಪ್ರಿಯಂಗೆ. ಅದರ ಪೋನಿಂಗೆ ಅಂಬಗಂಬಗ ಆ ಡ್ರೈವರನ “ಕಾಲು” ಬಂದುಕೊಂಡಿದ್ದತ್ತು.
“ಮಧ್ಯಾಹ್ನ ನಂತರ ಒಟ್ಟಿಂಗೆ ಸಿನಿಮಾಕ್ಕೆ ಹೋಪ° ಹೇಳಿ ಇಬ್ರೂ ಮದಲೇ ಮಾತಾಡಿತ್ತವು. ಈಗ ಆಶ್ರಮಕ್ಕೆ ಬಂದ ಕಾರಣ ಹೋಪಲೆಡಿಯ. ಅದು ವಿಜಯಂಗೂ ಗೊಂತಪ್ಪಲಾಗ ಹೇಳಿ ಇದ್ದತ್ತದಕ್ಕೆ. ಆದರೆ ವಿಜಯಂಗೆ ಅದು ಗೊಂತಾಗದ್ದಿಕ್ಕಾ?
” ನೀನು ನಿನ್ನ……. ನೊಟ್ಟಿಂಗೆ ಎಲ್ಲಿಗೋ ಹೋಪಲೆ ಅಂದಾಜು ಮಾಡಿದ್ದೆ ಕಾಣ್ತು.. ಒಂದು ಜಾತಿ ದಿನಿಗೇಳ್ತು” ಹೇಳಿ ರಜ ಕುಶಾಲು ಮಾಡಿ ಮಾತಾಡಿಯಪ್ಪಗ ಸುಪ್ರಿಯ ಒಪ್ಪಿತ್ತು.
“ಅಂಬಗ ಉಂಡಿಕ್ಕಿ ಬೇಗ ಹೋಪ° ” ಹೇಳಿ ಜತೆಕ್ಕಾರ್ತಿಗೆ ಸಮದಾನ ಹೇಳಿದ ವಿಜಯ ಹೋಪ ದಾರಿಲಿ ಸುಶೀಲನ ಕತೆ ಹೇಳ್ಲೆ ಸುರು ಮಾಡಿತ್ತು.
“ಆಶ್ರಮದ ವಾಹನಲ್ಲಿ ಹೋಪಲಕ್ಕು” ಹೇಳಿರೂ ವಿಜಯ
“ಬೇಡ, ಎಂಗೊ ಬಸ್ಸಿಲ್ಲಿ ಹೋವ್ತೆಯ°” ಹೇಳಿ ಬಸ್ಸಿಲ್ಲಿ ಬಪ್ಪಗ ಹೇಳ್ಲೆ ಸುರು ಮಾಡಿದ ಕತೆ ವಿಜಯ ಇಪ್ಪ ರೂಮಿಂಗೆ ಎತ್ತಿರೂ ಮುಗುದ್ದಿಲ್ಲೆ. ಅಂದರೂ ವಿಜಯ ಇಲ್ಲಿಗೆತ್ತಿಯಪ್ಪಗ ಕತೆ ನಿಲ್ಸಿದ್ದು ಸುಪ್ರಿಯಂಗೆ ಬೇಜಾರಾದರೂ ಪುಣ್ಯಕ್ಕೆ ಅದರ ಮನಸ್ಸುದೆ ಬದಲಿತ್ತು.

“ಏ…..ವಿಜೀ….ನಾವೀಗ ಹೋದ ಆಶ್ರಮಲ್ಲಿಪ್ಪ ಜನ ಆದಿಕ್ಕು ಸುಶೀಲ ಅಲ್ಲದಾ..ಈ ಕತೆ ನೀನು ಹೋಪಗ ಹೇಳಿದ್ದರೆ ಆ ಜನ ಆರೂಳಿ ಸರಿಯಾಗಿ ನೋಡ್ತಿತೆ. ಅದರತ್ರೆ ಮಾತಾಡ್ತಿತೆ. ಛೇ..ಪ್ರೀತಿಯ ಬಲಗೆ ಬಿದ್ದರೆ ಹೀಂಗೆಲ್ಲ ಆವ್ತೂಳಿ ಗೊಂತೇ ಇತ್ತಿದ್ದಿಲ್ಲೆ”

“ನೋಡಿ ಎಂತ ಮಾಡ್ಲಿದ್ದು ನಿನಗೆ? ಅದರ ಮನಸಿಂದ ತೆಗದಿಡ್ಕು. ನೀನು ಆ ಟೆಂಪೋ ಡ್ರೈವರನೊಟ್ಟಿಂಗೆ ಪಟ್ಟಾಂಗ ಹೊಡವದಕ್ಕೆ ಆನಂತೇ ಒಂದು ಕತೆ ಹೇಳಿದ್ದಷ್ಟೆ. ಎನಗಾರನ್ನೂ ಗೊಂತಿಲ್ಲೆ. ಪ್ರೀತಿಸಿ ಮದುವೆಪ್ಪಲಾಗಾಳಿ ಆನು ಹೇಳ್ತೂ ಇಲ್ಲೆ. ಅಂದರೂ ಒಂದು ರೀತಿಯ ಸಮಾನತೆ ಬೇಕು. ಪರಸ್ಪರ ಸರಿಯಾಗಿ ಅರ್ಥ ಮಾಡಿಕೊಳ್ಳೆಕು. ಮನೆಯವರ ವಿರೋಧ ಕಟ್ಟಿಕೊಂಬಲಾಗ. ನಿಜವಾಗಿ ಪ್ರೀತಿಸುವವಾದರೆ ಬದುಕಿಲ್ಲಿ ಒಂದು ನೆಲೆ ಅಪ್ಪನ್ನಾರ ಕಾಯೆಕು. ಮತ್ತೆ ಪ್ರೀತಿ, ಪ್ರೇಮ…. ಅದೂ….ಇದೂ…..”

“ಆತಪ್ಪಾ….ಆತು..ಎ‌ನ್ನದು ತಪ್ಪಾತು ಮಾರಾಯ್ತೀ. ಆ ಟೆಂಪೋ ಡ್ರೈವರನ ಜಾತಿ ಯೇವದು ಹೇಳಿ ಸಾನು ಎನಗೆ ಗೊಂತಿಲ್ಲೆ, ಅದು ಎಷ್ಟು ಕಲ್ತಿದು ಗೊಂತಿಲ್ಲೆ. ಅಂದರೂ ಅದರ ಚೆಂದದ ಮಾತು ಕೇಳಿ ಅದನ್ನೇ ಅಮರಮಧುರ ಪ್ರೇಮ ಹೇಳಿ ಜಾನ್ಸಿ ಅದರೊಟ್ಟಿಂಗೆ ಓಡಿ ಹೋಪಲೆ ಹೆರಟದಪ್ಪು.ನೀನು ಸುಶೀಲನ ಕತೆ ಹೇಳಿದ ಕೂಡ್ಲೇ ಆನು ಎಲ್ಲಾ ರೀತಿಲೂ ಆಲೋಚನೆ ಮಾಡಿದೆ. ಒಂದರಿಯೂ ಬಸ್ಸಿಲ್ಲಿ ಹೋಗದ್ದ ಎನಗೆ,ಬೆಶಿಲಿಲ್ಲಿ ನಡೆಯದ್ದ ಎನಗೆ ಆ ಮನುಶ್ಯನೊಟ್ಟಿಂಗೆ ಒಂದು ದಿನವೂ ಬದ್ಕುಲೆಡಿಯ. ಈಗ ಅದರ ಮೋರೆ ಗ್ರೇಶುಗ ಹೇಸಿಗೆ ಆವ್ತು ಮಾರಾಯ್ತೀ..ಆನೆಂತ ಜಾನ್ಸಿ ಅದರತ್ರೆ ಮಾತಾಡ್ಲೆ ಸುರು ಮಾಡಿದ್ದು ಹೇಳಿ ಆವ್ತೀಗ‌‌‌‌‌…..”

ಸುಪ್ರಿಯನ ಮಾತು ಕೇಳುಗ ವಿಜಯಂಗೆ ನೆಗೆ ಬಂತು. ಎಷ್ಟು ಕೊಂಗಾಟಲ್ಲಿ ಬೆಳದ ಕೂಸು.ಇದು ತಪ್ಪು ದಾರಿಲಿ ಹೋಗಿದ್ದರೆ ಅದರ ಮನೆಯವಕ್ಕೆ ಎಷ್ಟು ಸಂಕಟ ಆವ್ತಿತು..ದೇವರೇ ಎನಗೊಂದು ಒಳ್ಳೆ ಬುದ್ದಿ ಕೊಟ್ಟದು ಈ ಸಮಯಲ್ಲಿ.

“ನೀನು ಕತೆ ಪೂರ್ತಿ ಹೇಳದ್ದೆ ತಪ್ಸುದು ಕಾಂಬಗ ಎನಗೊಂದು ಸಣ್ಣ ಸಂಶಯ” ಸುಪ್ರಿಯ° ಹಾಂಗೆ ಹೇಳಿಯಪ್ಪಗ ವಿಜಯನ ಮೋರೆಯ ಬಣ್ಣ ಬದಲಿದಾಂಗಾತು. ಅದು ಫಕ್ಕನೆ ಎದ್ದು ನಿಂದು
“ಗಂಟೆ ನಾಲ್ಕಾತು ಕೂಸೇ..ಹಾಸ್ಟೆಲ್ ಗೆ ಹೋಗು. ಕತೆ ಇನ್ನಾಣ ವಾರ ಹೇಳ್ತೆ. ಒಂದೇ ಬಿಟ್ಟಿಂಗೆ ಹೇಳಿರೆ ಲಾಯ್ಕ ಆವ್ತಿಲ್ಲೆ. ಇನ್ನಾಣ ವಾರ ಮುಂದುವರಿಸಲಾಗುವುದು….ಹ್ಹ..ಹ್ಹ.…” ನೆಗೆ ಮಾಡಿ ಅದರ ಬಾಯಿ ಮುಚ್ಚುಸಿತ್ತು.
ಅಂಬಗಳೂ ಅದರ ಮೊಬೈಲಿಂಗೆ ಆ ಜನರ ಪೋನು ಬಂದುಕೊಂಡಿದ್ದತ್ತು. ಸುಪ್ರಿಯನ ಮೋರೆ ಕೋಪಲ್ಲಿ ಕೆಂಪು ಕೆಂಪಾತು.
“ಈ ಶನಿಯ ಕೈಂದ ಹೇಂಗೆ ಬಿಡುಗಡೆ ಹೇಳಿ ಎನಗೆ ಗೊಂತಿದ್ದು” ಹೇಳಿಕ್ಕಿ ಪೋನು ಬಿಡ್ಸಿ ಅದರೊಳಾಂದ ಸಿಮ್ ಕಾರ್ಡು ತೆಗದು ಮೆಟ್ಟಿ ಹೊಡಿ ಮಾಡಿತ್ತು.

“ಅಯ್ಯೋ.. ಇದೆಂತ ಮಾಡಿದ್ದು ನೀನು? ಆ ಸಿಮ್ ಹೊಡಿ ಮಾಡಿ ಎಂತ ಪ್ರಯೋಜನ?” ವಿಜಯಂಗೆ ಸುಪ್ರಿಯನ ಈ ಕ್ರಮ ಹೊಸತ್ತು.

“ಈ ಒಂದು ನಂಬ್ರ ಅದರತ್ರೆ ಇಪ್ಪದು. ಒಂದು ವಾರ ಎನಗೆ ಪೋನು ಬೇಡ. ಇನ್ನಾಣ ವಾರ ಅಣ್ಣನತ್ರೆ ಹೇಳಿರೆ ಹೊಸ ಸಿಮ್ಮು ತಂದುಕೊಡುಗು…”

“ಯಬ್ಬಾ..ಕೂಸೇ…ಭಾರೀ ಉಶಾರಿ ನೀನು. ನಿನ್ನ ಅಮ್ಮ ಊರಿಂದ ಪೋನು ಮಾಡೆಕು ಅಂಬಗ ಗೊಂತಕ್ಕು. ಪಾಪ…ನೀನು ಪೋನು ತೆಗೆಯದ್ರೆ ಅವಕ್ಕೆ ಹೆದರಿಕೆ ಅಕ್ಕು”
“ಒಂದು ವಾರ ಅಲ್ಲದ ,ಎಂತಾಗ, ಹಾಂಗೆಂತಾರಿದ್ದರೆ ಅಣ್ಣನ ಕಳ್ಸುಗು..ಇಲ್ಲದ್ರೆ ಸುದೀಪ ಭಾವ ಬಕ್ಕು..”

“ಹೇ…..ಅದಾರು ಈ ಭಾವ°. ಈಗ ಹೇಂಗೆ ಅವ° ಭಾವ° ಆದ್ದು.ಒಳ್ಳೆ ಜನ ನೀನು. ಅವು ಬರ್ಲಿ. ಆನು ಹೇಳ್ತೆ ಅವರತ್ರೆ “ಸುಪ್ರಿಯ ನಿಂಗಳ ಹೀಂಗೆ…… ಹೇಳಿ ಹೇಳುದು” ಹೇಳಿ…. ”

“ಅವ° ಎಂತದೂ ಮಾಡ°. ಅವಂಗೆ‌ನ್ನ ಗೊಂತಿದ್ದು..” ಅಯ್ಯೋ ಗಂಟೆ ಸುಮಾರಾತು. ಆನು ಹಾಸ್ಟೆಲ್ ಗೆ ಹೋವ್ತೆ. ಇಲ್ಲದ್ರೆ ಆ ವಾರ್ಡನಜ್ಜಿಯ ಬಾಯಿಂದ ಸಹಸ್ರನಾಮ ಕೇಳೆಕಕ್ಕು .ಈಗ ಬತ್ತೆ ಅಂಬಗ,ನಾಳೆ ಕಾಂಬ” ಹೇಳಿಂಡೇ ವಿಜಯನ ಮನೆಂದ ಹೆರ ಇಳುದ ಸುಪ್ರಿಯ ಆ ಗೇಟು ತೆಗದು ಒಳ ಬಂದ ಕಾರಿಂದ ಇಳುದವರ ಕಂಡು ಆಶ್ಚರ್ಯಲ್ಲಿ ನಿಂದತ್ತು.

ಇನ್ನೂ ಇದ್ದು ಇನ್ನಾಣ ವಾರಕ್ಕೆ >>>>

ಪ್ರಸನ್ನಾ ಚೆಕ್ಕೆಮನೆ

4 thoughts on “ಸ್ವಯಂವರ : ಕಾದಂಬರಿ : ಭಾಗ 44 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಕಥೆಲಿ ಸುಶಿ ಕಾಣದ್ದೆ ಬೇಜಾರು ಆತು..ಆದರೆ ಅದರ ಕಥೆ ಕೇಳಿದ ಗೆಳತಿ ಕೂಡಲೇ ಸಿಮ್ idukkidde ಖುಷಿ…ಹೀಂಗೆ ಎಲ್ಲರೂ ಬುದ್ದಿ ಕಲ್ತರೆ ಒಳ್ಳೆದಕ್ಕು…ಒಳ್ಳೆ ತಿರುವು… ಸುಶಿಯ ಕಥೆ ಒಳ್ಳೆ ರೀತಿಲಿ ಕೊನೆ ಎತ್ತೆಕ್ಕಾರೆ ಹೀಂಗೆ ಕೆಲವು ಬುದ್ಧಿ ವಿಷಯಂಗಳ ಹಾಕಿದ್ದು ಒಳ್ಳೆದಾತು…ದಿನೇಶ ತಂಗಮ್ಮ ಕೋರೋಣ ಹಿಡಿದು ಸಾಯಲಿ…ಕೇಶವ ಸುಶಿ ಮತ್ತೆ ಎಲ್ಲೋರ ಜೀವನ ಚೆಂದ ಆಗಲಿ..ಅಂತೂ ಇನ್ನೂ ಒಂದು ವಾರ ಕಾಯೇಕ್ಕನ್ನೆ…ಬುದ್ಧಿ ಮಾತುಗಳು ಇರಲಿ… ಈ ಭಾಗ ಲಾಯ್ಕ ಬೈಂದು

  2. ಛೇ ಎಷ್ಟೊಂದು ಕುತೂಹಲಂಗಳ ಬಾಕಿ ಮಡುಗಿತ್ತು ಕತೆ.ಗೊಂತಾಯಕ್ಕಾರೆ ಇನ್ನೂ ಒಂದು ವಾರ ಕಾಯಕ್ಕನ್ನೇ.

  3. ಕಥೆಯ ಕೇಳಿ ಸುಪ್ರಿಯನ ಮನಸ್ಸು ಬದಲಾವಣೆ ಆದ್ದದು, ಸಿಮ್ ಕಾರ್ಡ್ ಮುರುದು ಇಡುಕ್ಕಿದ್ದದು ಕೇಳಿ ಖುಷಿಯಾತು. ನಿಜಾ ಹೇಳ್ತರೆ, ಈ ಕತೆ ಓದಿರೆ ಖಂಡಿತಾ ಕೆಲಾವು ಕೂಸುಗೊ ಅವರ ಸಿಮ್ ಕಾರ್ಡ್ ಮುರುದು ಇಡುಕ್ಕೆಕು. ಸುಶೀಲನ ಕತೆ ಎಲ್ಲೋರ ಕಣ್ಣು ತೆರಶುವ ಹಾಂಗಿದ್ದು. ಸುಪ್ರಿಯನ ಕುತೂಹಲವೇ ಎನಗೂ ಇದ್ದು. ಸುಶೀಲ, ಅದರ ಮಕ್ಕಳ ವಿಷಯ ಎಂತಾತು. ಕೇಶವಂಗೆ ಮದುವೆ ಆತೋ ? ಬಿಗುನಾಶಿ ದಿನೇಸನ ವಿಷಯ ಎಂತಾತು ? ಇನ್ನೊಂದು ವಾರ ಕಾಯೆಕು ಹುಂ.

  4. Katheya ola inondu kathe…. Hudugaatikeli jeevana haalu madigoltitta koosinge ee vyathe tumbida kathe heli sari daarige tanda gelathidu athyantha shreshta geletana.. intaha thiruvina nireeksheya ittille.. allige susheelana baalina horaata inondu koosinge paata aadu mecchekkaadde… 👏👏👏

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×