Oppanna.com

ಮಳೆಗಾಲಲ್ಲಿ ಒ೦ದು ದಿನ

ಬರದೋರು :   ಸಂಪಾದಕ°    on   22/06/2013    6 ಒಪ್ಪಂಗೊ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013″ ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ
ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2013ಕವನ ಸ್ಪರ್ಧೆಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಬರಹ.
ಲೇಖಕರಾದ ಶ್ರೀ ಈಶ್ವರಭಟ್ ಕೆ,ಕೊಮ್ಮೆ ಮನೆ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದು೦ಬಿದ ಅಭಿನ೦ದನೆಗೊ.ಈಶ್ವರಕಿರಣ

. ಮಳೆಬಂತು

ತೆಂಕಿನ ಮುಗಿಲಿನ ಬಿಂಕದ ನೆಡೆಗೆ

ಶಂಕೆಯ ಶೆಖೆಯೂ ಶುರುವಾತು

ಉಬ್ಬರಗಾಳಿಯ ಬೊಬ್ಬೆಯ ನಡುವೆಯೆ

ಹಬ್ಬದ ಮಳೆಯದು ಬಂದತ್ತು!


ಕೊಳೆತೊಳವದೆ ಸೈ! ನೆಲತೊಳವದೆ ಸೈ

ಬಲಕೊಡುವುದು ಮಳೆ ಸ್ವಂತಕ್ಕೆ!

ನಿರನಿರ್ಮಲ ಸಂತೋಷದ ಭಾವಕೆ

ಬಿರುಮಳೆ ಬೀಳ್ವದು ಗಮನಕ್ಕೆ.

 ನಾಚಿಕೆಲೋಡುವ ಹೆಣ್ಣಿನ ಬೆನ್
ರಾಚಿದ ತುಂತುರು ಹನಿ ಹಾಂಗೆ!
ಭೂಮಿಯ ತಬ್ಬಿದ ಮಳೆಹನಿ ಹಬ್ಬಿತು
ಕಾಮಿಸಿದ್ದದು ಆಕಾಶ!

. ಆಶೆಯತಂತು

ಬೆಶಿಲಿಂಗೆ ಮೈ ಒಡೆದು ಸತ್ತನರವೆಲ್ಲದುದೆ

ಖುಷಿಯ ಪಡೆಯೆಕ್ಕಿನ್ನು ಮಳೆಯ ಹೀರಿ
ಹೊಸದು ಹುಟ್ಟುವ ಭಾಷೆ ಬೆಳೆಯೆಕ್ಕು ಬೆಳೆಸೆಕ್ಕು
ವಿಷಮವಾಗದ್ದಿರಲಿ ಮಳೆಯ ಭೇರಿ!

 ಮಳೆಗಾಲದಾ ಕೆಸರು; ಒಗರಲ್ಲ ಹುಳಿಯಲ್ಲ
ಪುಳಕವಾ ಕೊಡುವಂತಾ ಸೀವು ಅಲ್ಲ!
ಮುಳಿ ಸೋಗೆ ಮಾಡುಗಳ ಬ್ರಹ್ಮಕಲಶವ ಮಾಡು!
ತೊಳೆವದೊಂದವಕಾಶ ಹಿರಿದು ಅಲ್ಲ!

 ಧಗೆಗೆಷ್ಟು ಬಿರುಸಿಕ್ಕೋ ಮಳೆಗು ಅಷ್ಟೇ ಕನಸು
ಜಗವೆಲ್ಲ ತುಂಬುಗೋs ಹನಿಯ ಮೇಳ,
ನೆಗೆಯ ಸುಖ ಕೊಡುವಂತ ಸೊಗದ ಮಳೆ ಬರಲೇಳಿ
ಮೊಗೆದು ಚಿಮ್ಮಲಿ ರಾಗಿ ಅಕ್ಕಿ ಜೋಳ!
. ಉಪಸಂಹಾರ

ಅಬ್ಬೆ ಮೋರೆಯ ತೊಳದು; ಕಿಚ್ಚಿನೊಲೆ ಹತ್ತರೆ
ಸುಟ್ಟುಗೊಂಡದು ತ್ಯಾಗ; ಹಸಿವು ಕಳೆಯೆ
ಮಳೆಯು ಪ್ರೀತಿಲಿ ಸುರಿದು ; ಆ ಪ್ರವಾಹಲ್ಲಳೆದು
ಬಿಟ್ಟು ಹೋದ್ದದು ಜಾಗ; ಫಸಲು ಬೆಳೆಯೆ.

 

6 thoughts on “ಮಳೆಗಾಲಲ್ಲಿ ಒ೦ದು ದಿನ

  1. ಭ್ಹಟ್ಟರೇ ನಿಮ್ ಪದ್ಯ ಚಲೋ ಇತ್ತು ಓದಕೆರೆ
    ಧನ್ಯವಾದ, ಹ

  2. ಎನಗೆ ತುಂಬ ಇಷ್ಟ ಆತು, ಈ ಕವನ.

  3. ಕೋಳ್ಯೂರು ಭಾವಾ..
    ಭಾವಗೀತೆಯೇ ಸೈ.. ಸುಮಾರು ವಿಷಯ೦ಗೊ,ಕಲ್ಪನೆಗೊ ಒಟ್ಟು ಸೇರಿದ ಚೆ೦ದದ ಕವಿತೆ.
    ಒ೦ದೇ ಛ೦ದಸ್ಸಿಲಿದ್ದರೆ ಅತ್ಯದ್ಭುತ ಆವುತ್ತಿತ್ತು.
    ಮು೦ದೆಯೂ ಬರಳಿ ಗುಣಮಟ್ಟದ ಸಾಹಿತ್ಯ.
    ಅಭಿನ೦ದನೆಗೊ.

  4. ಲಾಯ್ಕ ಕವನ .ಅಭಿನಂದನೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×