Oppanna.com

ಸ್ವಚ್ಛ ಭಾರತ – ವಿಷುವಿಶೇಷ ಸ್ಪರ್ಧೆ -2015 ಪ್ರಥಮ ಬಹುಮಾನ ಪಡದ ಕವನ

ಬರದೋರು :   ಸಂಪಾದಕ°    on   30/08/2015    14 ಒಪ್ಪಂಗೊ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2015″ ಯಶಸ್ವಿಯಾಗಿ ಈ ವರ್ಷದ ವಿಷು ಸಮಯಲ್ಲಿ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

 

ವಿಷು ವಿಶೇಷ ಸ್ಪರ್ಧೆ- 2015ಕವನ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಬರಹ.
ಲೇಖಕಿ ಶ್ರೀಮತಿ  ಇ೦ದಿರಾ ಜಾನಕಿ ಕೂಳಕೋಡ್ಳು, ಬೆ೦ಗಳೂರು ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

 

                            ಸ್ವಚ್ಛ ಭಾರತ  

ಕನಸ ಕ೦ಡವ° ಗಾ೦ಧಿಯಜ್ಜನು ರಾಮರಾಜ್ಯದ ಭಾರತಾIndiratte
ನನಸು ಮಾಡುಲೆ ಟೊ೦ಕ ಕಟ್ಟಿದ° ಎತ್ತಿ ಹೇಳಿ ಶುಚಿತ್ವವಾ
ಮನದೆ ಮೂಡಲಿ ದೇಶವಾಸಿಗಳೆಲ್ಲರಲ್ಲಿಯು ಎಚ್ಚರಾ
ನೆನೆದು ಹೀ೦ಗೆಯೆ ಬಿಟ್ಟುಹೋದನೆ ತನ್ನ ದೃಷ್ಟಿಯ ಚಕ್ರವಾ ||

ಕರಮಚ೦ದನ ಕಾರ್ಯವೈಖರಿ ಮೆಚ್ಚಿಗೊ೦ಡವ° ಮೋದಿಯೂ
ಕರಗಿ ಹೋತದ ಭಾವಶುದ್ಧಿಯು ಗಾ೦ಧಿ ತೋರಿದ ಕಾಣ್ಕೆಗೇ
ನರರ ಇ೦ದ್ರನು ದಾರಿಯುದ್ದಕು ಶುದ್ಧ ಮಾಡಿಯೆ ಬಿಟ್ಟನೂ
ಪರರು ನೋಡಿಯೆ ಕೂಡಿಗೊ೦ಡವು ತಮ್ಮ ಕೈಗಳ ಜೋಡಿಸೀ ||

ಭಕುತ ಮ೦ದಿಯು ಮಾಡೆ ಸಿ೦ಧುವ ಪಾಪಕೂಪವನಾಗಿಯೇ
ಸಕಲ ಪಾತಕ ನಾಶ ಮಾಡುವ ಗ೦ಗೆ ಹೊತ್ತಿದು ಭಾರವಾ
ಮುಕರದಾ೦ಗೆಯೆ ನೀರು ಕಾ೦ಬಲೆ ಗ೦ಗೆ ನಿರ್ಮಲಗೊಳ್ಳೆಕೂ
ನಿಕಷಗೊಡ್ಡುಗು ಚೊಕ್ಕ ಮಾಡುವ ಕಾರ್ಯಜಾಣ್ಮೆಲಿ ಮೋದಿಯೂ ||

ಹೆರಟು ಹೋಯಿದ° ತನ್ನ ಕಾಯಕ ದೇಶದೆಲ್ಲೆಡೆ ಹಬ್ಬುಸೀ
ತಿರುಗಿ ಬಕ್ಕವ° ಮೋದಿ ಮಾಡಿದ ಕಾರ್ಯ ಮೋಡಿಯ ಮೋಹಿಸೀ
ಬರಿದೆ ಹೇಳದೆ ಮಾಡಿ ತೋರ್ಸುವ ದೇಶಕಪ್ಪದು ಉನ್ನತೀ
ಎರಡು ಹೆಜ್ಜೆಯ ಮೆಟ್ಟಿ ಬನ್ನಿರಿ ಲೋಕದೆಲ್ಲೆಡೆ ಸೌಖ್ಯಕೇ ||

ಕಸವು ಕಶ್ಮಲ ಬಾಚಿ ಎತ್ತುವ ನಮ್ಮ ಸುತ್ತಣ ಜಾಗೆಲೀ
ವಿಷವು ತೊಟ್ಟೆಯು , ಕುತ್ತು ತಕ್ಕದು,ಇಡ್ಕಿ ಹಾಕೆಡಿ ಭೂಮಿಲೀ
ಉಸುರು ಸುಸ್ಥಿತಿಲಿಪ್ಪ ಹಾನ್ಗೆ ಮನಾರ ಮಾಡುಲೆ ಹೇಳೆಕೂ
ಕುಸುಮ ಕೋಮಲ ಮಕ್ಕೊಗೀಗಳೆ ಪಾಠ ಮಾಡಿಯೆ ಕಲ್ಸೆಕೂ  ||

ಬಡವ ಬಲ್ಲಿದರೆಲ್ಲರಲ್ಲಿಯು ಪೈಸೆ ಮಾಡುವ ಆಗ್ರಹಾ
ಕಡುದು ಕೊಲ್ಲುವ ಮಟ್ಟಕೆತ್ತುಗು ಭೂಗತಾದವರಾರ್ಭಟಾ
ಹುಡುಗಿ ಹಾದಿಲಿ ಹೋಪ ಹೊತ್ತಿಲೆ ಬೀದಿಕಾಮುಕ ಕಾಟಕೇ
ತಡೆಯಮಾಡದೆ ಶಾ೦ತಿ ಸಿಕ್ಕದು, ಎಲ್ಲ ಯತ್ನವ ಮಾಡುವಾ ||

ಜಲದ ಮೂಲವು ಶುದ್ಧವಪ್ಪಲೆ ಮ೦ದಿ ಎಚ್ಚರಗೊಳ್ಳಲಿ
ಸುಲಭ ಶೌಚವು ಕಾರ್ಯಗೊ೦ಡರೆ ಊರು ನೆಮ್ಮದಿ ಕಾಣಲಿ
ಕೆಲಸ ಕಾರ್ಯವು ಶೀಘ್ರವಾದರೆ ನಾಡು ಏಳ್ಗೆಯ ಹೊ೦ದಲಿ
ಒಲವು ಹೆಚ್ಚಲಿ ದೇಶಸೇವೆಗೆ ಭಾವ ನೂರ್ಮಡಿಯಾಗಲೀ ||

14 thoughts on “ಸ್ವಚ್ಛ ಭಾರತ – ವಿಷುವಿಶೇಷ ಸ್ಪರ್ಧೆ -2015 ಪ್ರಥಮ ಬಹುಮಾನ ಪಡದ ಕವನ

  1. ಪ್ರಥಮ ಬಹುಮಾನ ಕೊಡೆಕಾದ್ದದೇ. ಅಭಿನಂದನೆಗೊ ಇಂದಿರಕ್ಕ.
    ಬೈಲಿಲ್ಲಿ ವಿ ವಿ ಸ್ಪರ್ಧೆಯ ಲೇಖನಂಗೊ ಬಪ್ಪಲೆ ಶುರುವಾದ್ದು ಕಂಡು ಕೊಶೀ ಆತು. ಹಿಂದಾಣ ಎಲ್ಲ ಉತ್ತಮ ಪದ್ಯ/ ಲೇಖನಂಗಳೂ ಬರಲಿ.

  2. ಎನ್ನ ಕವನವ ಮೆಚ್ಚಿ ಅಭಿನಂದಿಸಿದ ಎಲ್ಲೋರಿಂಗೂ ಅಭಿವಂದನೆಗೊ. ನಿಂಗಳ ಮೆಚ್ಚುಗೆ ಎನ್ನ ಹಾಂಗಿಪ್ಪವಕ್ಕೆ ಪ್ರೋತ್ಸಾಹದಾಯಕವಾಗಿರುತ್ತು.

  3. ಸ್ವಚ್ಚ ಭಾರತ ಯಶಸ್ವಿಯಾಗಲಿ .ಯಶಸ್ವಿ ಕವಿತೆ. ಅಭಿನಂದನೆ ಇಂದಿರತ್ತೆ.

  4. ಇಂದಿರೆಯಕ್ಕನ
    ಪದ್ಯವನೋದಿದೆ
    ಎದೆಯೊಳ ತುಂಬಿದ ಭಾವನೆಲಿ|
    ಮೋದಿಯ ಗಾಂಧಿಯ
    ಹಾದಿಲಿ ನೆಡವಲೆ
    ಓದೆಕು ನಿತ್ಯವು ಶುದ್ದಿಗಳ||
    [ಖುಷಿ ಆತು ಅಭಿನಂದನಗೊ

  5. ಇಂದಿರತ್ತೆ,
    ಕವನ ಲಾಯ್ಕಾಯಿದು. ಅಭಿನಂದನೆಗೊ.
    ಬೈಲಿಲಿ ಸಕ್ರಿಯ ಆಗಿದ್ದುಗೊಂಡು ಬೈಲ ಪತ್ತಾಯ ತುಂಬುಸುದಕ್ಕೆ ಮನಸ್ಸಿನಾಳಂದ ಅಭಿನಂದನೆಗೊ.

  6. ಒಳ್ಳೆ ಒಪ್ಪ ಆಯಿದು ಇಂದಿರತ್ತೆಯ ಪ್ರಯತ್ನ. ಅಭಿನಂದನೆಗೊ. ಪ್ರಥಮ ಬಹುಮಾನ ಇದಕ್ಕೆ ಸಿಕ್ಕಿದ್ದದು ಹೇದು ನೋಡಿ ಕೊಶಿ ಆತು.

  7. ವಾಹ್.., ಒಳ್ಳೆದಾಯಿದು ತಂಗೆ. ಛಂದಸ್ಸಿನೊಟ್ಟಿಂಗೆ ಪ್ರಾಸ,ನೀತಿ,ಸಂದೇಶ ಎಲ್ಲ ಸೇರಿ ಪ್ರಸ್ತುತ:ವಾಗಿದ್ದು.

  8. ರಾಮರಾಜ್ಯದ ಕನಸು ಕಂಡ ಗಾಂಧೀ ಅಜ್ಜ ಮೋದಿಯ ಸ್ವಚ್ಛ ಭಾರತ ಅಭಿಯಾನವ ನೋಡಿ ತಿರುಗಿ ಬಕ್ಕು ಹೇಳ್ತ ಕಲ್ಪನೆಯೊಟ್ಟಿಂಗೆ ಸಮಾಜಕ್ಕೆ ಕೊಟ್ಟ ಸಂದೇಶ ತುಂಬಾ ಲಾಯ್ಕ ಆಯಿದು ಅತ್ತೆ .
    ತರಳ ಛಂದಸ್ಸಿನ ಬಳಸಿದ್ದು ನೋಡಿ ಕೊಶಿಯಾತು . ಅಭಿನಂದನೆಗೋ .

  9. ಪದ್ಯ ಪಷ್ಟಾಯಿದು ಇಂದಿರತ್ತೆ…. ಅಭಿನಂದನೆಗೋ…

  10. ಇಂದಿರತ್ತೆಗೆ ಅಭಿನಂದನೆಗೊ.ಸ್ವಚ್ಚ ಭಾರತದ ಯೋಚನೆ ಸಾಕಾರ ಆಯೆಕ್ಕಾರೆ ಎಲ್ಲೋರ ಜೆವಾಬ್ದಾರಿ ಇದ್ದು.
    ಅಡಿಗರ “ಯಾವ ಮೋಹನ ಮುರಳಿ…” ಧಾಟಿ ನೆಂಪಾತು

  11. ಒಳ್ಳೆ ಕವಿತೆ.
    ಸ್ವಚ್ಚ ಭಾರತ ಸಾಕಾರ ಆಯೆಕಾದರೆ ನಾಗರಿಕರು ಸರಿ ಆಯೆಕ್ಕು.
    ಎಂತ ಈ ಸರ್ತಿ ಬಹುಮಾನಿತ ಬರಹಗಳ ಹಾಕಲೇ ತಡ ಆವ್ತಾ ಇದ್ದು. ಬೇಗಬೇಗ ಹಾಕಿ ಮುಗಿಸಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×