- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಒಪ್ಪಣ್ಣನ ಬೈಲು ಹವ್ಯಕ ವೆಬ್-ಸೈಟ್ ಕಳುದ ಎಂಟು ವರ್ಷಂದ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ಕೊಡ್ತಾ ಇದ್ದು.
Oppanna.com – ಸಾಹಿತಿ-ಚಿಂತಕ-ಬರಹಗಾರರ ಬಳಗ ಈಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ಹೇಳ್ತ ಹೆಸರಿಲ್ಲಿ ಮಾನ್ಯತೆ ಹೊಂದಿದ ಸಂಸ್ಥೆ ಆಯಿದು. ಕಳುದ ನಾಲ್ಕು ವರ್ಷಂದ ಸೌರ ಯುಗಾದಿಗೆ ಸಂಪೂರ್ಣ ಹವ್ಯಕಭಾಷೆಲೇ ಆಯೋಜನೆ ಅಪ್ಪ ವಿಷು ವಿಶೇಷ ಸ್ಪರ್ಧೆಹವ್ಯಕ ಸಾಹಿತ್ಯ ಲೋಕಕ್ಕೆ ಹೊಸ ಸಂಚಲನ ಕೊಟ್ಟಿದು.
ಈ ವರ್ಷವೂ ವಿಷು-ಯುಗಾದಿಯ ಪರ್ವಕಾಲದಲ್ಲಿ ಹೊಸ ಸಾಹಿತಿಗಳ ಅನ್ವೇಷಣೆಗೆ “ವಿಷು ವಿಶೇಷ ಸ್ಪರ್ಧೆ – 2016” ಆಯೋಜಿಸಿದ್ದು.
ಬನ್ನಿ, ಭಾಗವಹಿಸಿ, ನಿಂಗಳ ಪೈಕಿಯೋರಿಂಗೂ ತಿಳುಶಿ…
ವಿಷು ವಿಶೇಷ ಸ್ಪರ್ಧೆ – 2016 ಸ್ಪರ್ಧಾ ವಿವರಂಗೊ:
- ಪ್ರಬಂಧ:
ವಿಷಯ – “ಅತಿಯಾದ ನಗರೀಕರಣ – ವರವೋ ಶಾಪವೋ..”
750 ಶಬ್ದಕ್ಕೆ ಸೀಮಿತಗೊಳಿಸಿ - ಕಥೆ :
ವ್ಯಾಪ್ತಿ: ಕುಟುಂಬ ಹಾಗೂ ಮಾನವೀಯ ಮೌಲ್ಯಂಗೊ (ವಿಷಯ ಸ್ಪರ್ಧಾರ್ಥಿಗಳ ಆಯ್ಕೆ)
1000 ಶಬ್ದಕ್ಕೆ ಸೀಮಿತಗೊಳಿಸಿ - ಕವಿತೆ:
ವಿಷಯ: ಪ್ರಕೃತಿ ವಿಕೋಪ
30 ಸಾಲುಗೊಕ್ಕೆ ಮಿತಿಗೊಳಿಸಿ. ಛಂದೋಬದ್ಧವಾದ ಕವಿತೆಗೊಕ್ಕೆ ಹೆಚ್ಚಿನ ಆದ್ಯತೆ. - ವ್ಯಂಗ್ಯ ಚಿತ್ರ (ಕಾರ್ಟೂನು) ಸ್ಪರ್ಧೆ:
ವ್ಯಾಪ್ತಿ: ಭೋಜನ ಸಮಯಲ್ಲಿ ಕಂಡ ರಸನಿಮಿಷಂಗಳ ಬಗ್ಗೆ ವ್ಯಂಗ್ಯ ಚಿತ್ರವೂ ಹವ್ಯಕ ಭಾಷೆಲಿ ಸೂಕ್ತ ಅಡಿಬರಹವೂ ಕೊಟ್ಟು ಕಳುಸೆಕ್ಕು.
ಗಾತ್ರ: ಅಂಚೆಲಿ ಕಳುಹಿಸುವುದಾದರೆ A4 ಅಳತೆ.
ಮಿಂಚಂಚೆ ಆದರೆ ಗರಿಷ್ಠ – 1 MB. - ಹಾಸ್ಯ ಬರಹ ಸ್ಪರ್ಧೆ:
ಸದಭಿರುಚಿಯ ಲಘುಬರಹ ಈ ವಿಭಾಗಕ್ಕೆ ಬರಲಿ. (ಅಪಹಾಸ್ಯ, ಅಶ್ಲೀಲತೆಗೊ ಬೇಡ)
500 ಶಬ್ದಕ್ಕೆ ಮಿತಿಗೊಳುಸಿ.
ನಿಯಮಂಗೊ:
- ಎಲ್ಲಾ ಬರಹಂಗೊ ಕಡ್ಡಾಯವಾಗಿ ಹವ್ಯಕಭಾಷೆ- ಕನ್ನಡಲಿಪಿಲಿಯೇ ಇರೇಕು.
- ಹವ್ಯಕ ಪರಂಪರೆ – ಸಂಸ್ಕೃತಿಯ ಹಿರಿಮೆ ಬಿಂಬಿಸುವ ಬರಹಂಗೊಕ್ಕೆಆದ್ಯತೆ.
- ಸ್ಪರ್ಧೆಯ ಯಾವುದೇ ಬರಹ / ವ್ಯಂಗ್ಯ ಚಿತ್ರ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿಪ್ಪಲಾಗ.
- ಎಲ್ಲಾ ಬರಹ / ವ್ಯಂಗ್ಯಚಿತ್ರಂಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ದ್ದೇ ಆಗಿರ್ತು.
- ಸ್ಪರ್ಧೆಯ ವಿಚಾರಲ್ಲಿ ಪ್ರತಿಷ್ಠಾನದ ತೀರ್ಮಾನವೇ ಅಂತಿಮ.
- ಕಳೆದ ವರ್ಷದ ಸ್ಪರ್ಧೆಗಳಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ವಿಜೇತರು ಈ ಸರ್ತಿ ಅದೇ ಸ್ಪರ್ಧೆಯಲ್ಲಿ ಭಾಗವಹಿಸುವ ಹಾಂಗಿಲ್ಲೆ.
- ಪ್ರತಿ ವಿಭಾಗಲ್ಲಿಯೂ ಪ್ರಥಮ – ದ್ವಿತೀಯ ಎರಡು ಬಹುಮಾನಂಗೊ ಇರ್ತು. ಸೂಕ್ತ ಸಂದರ್ಭಲ್ಲಿ ಪ್ರೋತ್ಸಾಹಕ ಬಹುಮಾನವೂ ಇರ್ತು.
- ಬಹುಮಾನ ವಿಜೇತರ ವಿವರಂಗಳ ವಿಷುವಿನ ದಿನ (14-04-2016ರಂದು) https://oppanna.com ಅಂತರ್ಜಾಲಲ್ಲಿ ಪ್ರಕಟಿಸುತ್ತು.
- ಹಸ್ತಪ್ರತಿಗಳ ಕಳುಸುದಾದರೆ ಕಡ್ಡಾಯ A4 ಕಾಗತಲ್ಲಿ ಇರೇಕು.
- ಭಾಗವಹಿಸಲೆ ಕೊನೆಯ ದಿನಾಂಕ: 03-03-2016
ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಂಗಳ ಕಡ್ಡಾಯವಾಗಿ ಪ್ರತ್ಯೇಕ ಕಾಗದಲ್ಲಿಯೇ ಬರದು ಬರಹ/ಕಾರ್ಟೂನಿನ ಒಟ್ಟಿಂಗೆ ಈ ವಿಳಾಸಕ್ಕೆ ಕಳುಸಿಕೊಡಿ:
ಅಂಚೆ ವಿಳಾಸ:
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ),
c/o “ಶ್ರೀಕರ ಅಸೋಸಿಯೇಟ್ಸ್”,
ಪ್ರಥಮ ಮಹಡಿ, ಕಲ್ಪತರು ಸಂಕೀರ್ಣ,
ಗಾಂಧಿ ನಗರ, ಸುಳ್ಯ – 574239.
ಮಿಂಚಂಚೆ ವಿಳಾಸ:
editor@oppanna.com
ಹೆಚ್ಚಿನ ಮಾಹಿತಿಗಾಗಿ :
- ಕೊಡೆಯಾಲ – 9901200134 / 9449806563
- ಕಾಸರಗೋಡು – 08547245304
- ಬೆಂಗ್ಳೂರು – 09535354380 / 09448271447
~
ದೊಡ್ಡಭಾವ (ರವಿಶಂಕರ ದೊಡ್ಡಮಾಣಿ)
ಸಂಚಾಲಕರು – ವಿಷು ವಿಶೇಷ ಸ್ಪರ್ಧೆ 2016
08547245304
ಸ್ಪರ್ಧೆ ಯಶಸ್ವಿಯಾಗಲಿ . ಮೊದಲ ವರ್ಷ ಎನ್ನ ಕತೆಗೆ ಪ್ರಥಮ ಬಹುಮಾನ ಸಿಕ್ಕಿದ್ದು. ಆನು ಈಗ ಕತೆ ಕಳಿಸಲೆ ಅಕ್ಕೋ?
ಹವ್ಯಕ ಭಾಷಾ ಸಾಹಿತ್ಯವ ಬೆಳೆಸುವ ಈ ಪ್ರಯತ್ನಲ್ಲಿ ಎಲ್ಲೋರೂ ಭಾಗವಹಿಸುವ°.
ಹರೇ ರಾಮ. ಯಶಸ್ಸಾಗಲಿ, ಬಹುಮಂದಿ ಸ್ಪೂರ್ತಿಲಿ ಭಾಗವಹಿಸಿ ಅವಕಾಶ ಸದುಪಯೋಗಪಡಿಸಿಕ್ಕೊಳ್ಳೆಕ್ಕಾಗಿ ವಿನಂತಿ