ಪ್ರತಿವರ್ಷದಂತೇ, ನಮ್ಮ ಬೈಲಿಂದ ವಿಷು ವಿಶೇಷ ಸ್ಪರ್ಧೆಯ ಆಯೋಜನೆ ಮಾಡ್ತಾ ಇದ್ದು. ಆಸಕ್ತ ಬೈಲ ನೆಂಟ್ರು ಎಲ್ಲೋರುದೇ ಹೆಚ್ಚಿನ ಸಂಖ್ಯೆಲಿ ಭಾಗವಹಿಸಿ, ಹವ್ಯಕ ಸಾಹಿತ್ಯ ಸರಸ್ವತೀ ಸೇವೆಮಾಡಿಗೊಂಡೇ, ಸ್ಪರ್ಧೆಯ ಯಶಸ್ವಿಗೊಳುಸೆಕ್ಕಾಗಿ ಕೇಳಿಗೊಳ್ತಾ ಇದ್ದೆಯೊ.
ಸ್ಪರ್ಧೆಗೊ:
- ಪ್ರಬಂಧ :
ಪ್ರಸ್ತುತ ಸಾಮಾಜಿಕ ಮತ್ತು ಕೌಟುಂಬಿಕ ಜೀವನದಲ್ಲಿ ಹಿರಿತನದ ನಿರ್ವಹಣೆ
(750 ಶಬ್ದ ಮಿತಿ) - ಕಥೆ:
ಕುಟುಂಬ ಹಾಗೂ ಮಾನವೀಯ ಮೌಲ್ಯಗಳು (ವಿಷಯ ಸ್ಪರ್ಧಾರ್ಥಿಗಳ ಆಯ್ಕೆ) - ಕವಿತೆ:
ಗೋವು ಮತ್ತು ನಾವು
(30 ಸಾಲುಗಳ ಮಿತಿ, ಛಂದೋಬದ್ಧ ಕವಿತೆಗೊಕ್ಕೆ ಆದ್ಯತೆ) - ನೆಗೆಬರಹ:
ಸದಭಿರುಚಿಯ ಲಘು ಬರಹ
(500 ಶಬ್ದ ಮಿತಿ)
ಸೂಚನೆಗೊ:
ಬರಹಂಗೊ ಕಡ್ಡಾಯವಾಗಿ ಹವ್ಯಕ ಭಾಷೆ, ಕನ್ನಡ ಲಿಪಿಲಿಯೇ ಇರೆಕ್ಕು.
ವಿಶು ವಿಶೇಷ ಸ್ಪರ್ಧೆ 2016 ರಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದೋರದ್ದು ಈ ಸರ್ತಿ ಅದೇ ವಿಭಾಗಲ್ಲಿ ಭಾಗವಹಿಸುದು ಪರಿಗಣನೆ ಆವುತ್ತಿಲ್ಲೆ.
ಹಸ್ತಪ್ರತಿಗಳ ಕಳುಹಿಸುವೋರು ಕಡ್ಡಾಯವಾಗಿ A4 (21cmX30cm) ಕಾಗದಲ್ಲೇ ಬರೆದು ಕಳುಸೆಕ್ಕು.
ಹೆಸರು, ವಿಳಾಸ, ಜನ್ಮದಿನಾಂಕ, ದೂರವಾಣಿ ಸಂಖ್ಯೆ, ಸ್ವವಿವರಂಗಳ ಪ್ರತ್ಯೇಕ ಕಾಗತಲ್ಲಿ ಬರೆದು, ಬರಹದ ಒಟ್ಟಿಂಗೆ ಕಳಿಸಿಕೊಡೇಕು.
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ,
C/O ಶ್ರೀಕರ ಅಸೋಸಿಯೇಟ್ಸ್,
ಪ್ರಥಮ ಮಹಡಿ,
ಕಲ್ಪತರು ಸಂಕೀರ್ಣ,
ಗಾಂಧಿನಗರ, ಸುಳ್ಯ 574239
ಮಿಂಚಂಚೆ:-
editor@Oppanna.com
ಕೊನೆಯ ದಿನಾಂಕ
15/03/2017
ಸಂಪರ್ಕಕ್ಕೆ:
ಮಂಗಳೂರು : 9449806563 / 9901200134
ಕಾಸರಗೋಡು : 08547245304
ಬೆಂಗಳೂರು : 9535354380 /9448271447
ವಿಶುವಿಶೇಷ ಸ್ಪರ್ಧೆ ಹೆಸರಿಲ್ಲಿದ್ದಾಂಗೇ ವಿಶೇಷವಾಗಿ ಚೆಂದಾಗಿ ನೆಡದು ಬರಲಿ. ಆದಷ್ಟು ಹೊಸಬ್ಬರು ಭಾಗವಹಿಸಿ ಮುಂದೆ ಬರಲಿ.
ಎಲ್ಲೋರುದೆ ಈ ಬಗ್ಗೆ ಅವರವರ ಬಳಗ ನೆಂಟ್ರ ಹತ್ರೆ ತಿಳುಸಿ ಆದಷ್ಟು ಹೆಚ್ಚಿನ ಸಂಖ್ಯೆಲಿ ಈ ಸ್ಪರ್ಧೆಗಳಲ್ಲಿ ಭಾಗವಹಿಸುತ್ತ ಹಾಂಗೆ ಮಾಡಿ. ನಮ್ಮ ಕಾರ್ಯಕ್ರಮ ಯಶಸ್ವಿಯಾಗಲಿ.