- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.
ವಿಷು ವಿಶೇಷ ಸ್ಪರ್ಧೆ- 2013 ರ ಕವನ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಬರಹ.
ಲೇಖಕರಾದ ಶ್ರೀಮತಿ ಇಂದಿರಾ ಜಾನಕಿ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.
ಮಳೆಗಾಲಲ್ಲಿ ಒಂದು ದಿನ : ಶ್ರೀಮತಿ ಇಂದಿರಾ ಜಾನಕಿ
ಶಾಲೆ ಸುರುವಿಲಿ ಮಳೆಯು ಬಪ್ಪಗ
ಚೀಲ ನೇಲಿಸಿ ಕೊಡೆಯ ಕೈಯೊಳ
ಗಾಳಿಗೊಡ್ಡಿರೆ ಜೋರು ರಭಸಕೆ ಕೊಡೆಯೆ ಹಾರುಗದಾ |
ಬೇಲಿ ಕೊಡಿಲಿಯೆ ತಡಮೆ ದಾಂಟಿರೆ
ಬೋಳುಗುಡ್ಡೆಯ ಹಾದಿ ಸಿಕ್ಕುಗು
ಗೋಳಿಮರದಡಿ ಗೆಳೆಯರೆಲ್ಲರು ಸೇರಿ ಹೋಪದದಾ ||
ಆಟಿತಿಂಗಳ ಮಳೆಯು ಸೊಯ್ಪುಗು
ಕೋಟುಹಾಕುವ ಚಳಿಲಿ ದರುಸಿರು
ಪಾಟಿಚೀಲವ ಹಿಡುದು ಬಪ್ಪಗ ಚಳಿಯೆ ಗೊಂತಾಗ |
ಚೀಟಿ ಹರುದಿಕಿ ದೋಣಿ ಮಾಡಿಕಿ
ಮೀಟಿ ಬಿಟ್ಟರೆ ಹರಿವ ತೋಡಿಲಿ
ಮೋಟುಮರದಾ ಬೇರಿನೆಡಕಿಲಿ ಸಿಕ್ಕಿ ಹಾಯ್ಕೊಂಗೂ ||
ಜಾಲಿನೊಳದಿಕೆ ಹರಿವ ನೀರಿಲಿ
ಕಾಲು ಕುಟ್ಟಿಸಿ ನೀರು ರಟ್ಟಿಸಿ
ಮೇಲೆ ಬೀಳುವ ಮಳೆಯ ಸೀರಣಿ ಮರವಲೆಡಿಯನ್ನೆ |
ಕಾಲ ತೊಳದಿಕಿ ಚೆಂಡಿಯುದ್ದಿಕಿ
ಹಾಲು ಕುಡಿವಲೆ ಹೋಗಿ ಕೂದರೆ
ಬೇಳೆಹೋಳಿಗೆ ಹೊರುದ ಹಪ್ಪಳ ಕೊಡುಗು ಸಾಂತಣಿಯಾ ||
ಗೆದ್ದೆ ಹೂಡುಲೆ ಕಿಟ್ಟ ತಕ್ಕದ
ಮುದ್ದಿನಿಂದಲೆ ಸಾಂಕಿ ಬೆಳೆಶಿದ
ತಿದ್ದಿ ಮಾಡಿದ ಬೆಳಿಯ ಬಣ್ಣದ ಜೋಡಿ ಹೋರಿಗಳಾ|
ಎದ್ದು ಬಕ್ಕದ ಕೂದ ಹೆಣ್ಣುಗೊ
ಬಿದ್ದ ನೀರಿಲಿ ನೆಡುಗು ನೇಜಿಯ
ಶುದ್ದಿ ಹೇಳುವ ನಮುನೆ ಹಾಡುಗು ಕೊಶಿಲಿ ಓಬೇಲೇ…….||
ಕಾಲ ದಾರಿಯ ಕೊಡಿಲಿ ತೋಡಿನ
ಪಾಲ ಬಿಟ್ಟಿಕಿ ನೀರಿಗಿಳುದರೆ
ಚೋಲಿ ತೆಗೆಗದ ಹುಳಿಯಡರು ತಂದೋಡುಸುಗು ಮನಗೇ |
ಸಾಲುಸಾಲಿನ ಬಾಲ್ಯ ನೆಂಪುಗೊ
ಮೂಲೆಮನಸಿಲಿ ಹುಗ್ಗಿ ಕೂದ್ದರ
ಲೀಲೆಯಿಂದಲೆ ಮೆಲುಕುಹಾಕಿರೆ ಮನವು ಮುದಗೊಳುಗೂ ||
~*~*~
ಸೂ:
ಇಂದಿರಾ ಜಾನಕಿ, ನಮ್ಮ ಬೈಲಿನ ಇಂದಿರತ್ತೆ ಪ್ರೊ. ಹರಿನಾರಾಯಣ ಮಾಡಾವು – ಇವರ ಕೈಂದ ಬಹುಮಾನ ಸ್ವೀಕಾರ ಮಾಡುವ ಸಂದರ್ಭ:
ಸಣ್ಣಾಗಿಪ್ಪಗ ಗೆದ್ದೆಲಿ ನೆಟ್ಟಿಯ ಹೆಣ್ಣುಗೊ
”ಲಕುಜರಯೇ ಲಕುಜರಯೇ ದೂಜ ಪುರ್ಬುಳೇ”, ಹೇಳಿ ರಾಗಲ್ಲಿ ಹಾಡಿದ ಪಾಡ್ದನದ ನೆ೦ಪಾತು.
ಹೂಡೊಗ ದೂಮನ ಲಯಬದ್ಧ ಹಾಡುಗಾರಿಕೆ,ಹೋರಿಗಳ ಮಾದುಸುವ ಚಳಕ ಕಣ್ಣಿ೦ಗೆ ಕಟ್ಟಿತ್ತು.
ಆವಗ ಜೋರು ಮಳೆಗೆ ಬಹುತೇಕ ಮಕ್ಕೊ ಚೆ೦ಡಿಯಾಗಿ ಬ೦ದರೆ ಶಾಲೆಗೆ ರಜೆ ಕೊಟ್ಟುಗೊ೦ಡಿತ್ತಿದ್ದವು.ಒ೦ದರಿ ಬೇಕು ಹೇಳಿಯೇ ಚೆ೦ಡಿ ಆಗಿ ರಜೆ ಕೇಳುಲೆ ಹೋಗಿ ಬೈಶಿಗೊ೦ಡದೂ ನೆ೦ಪಾತು..ಆ ದಿನ೦ಗಳ ನೆನೆಸಿರೇ ಗಮ್ಮತ್ತಾವುತ್ತು.
ಅಭಿನ೦ದನೆಗೊ ಅತ್ತೇ..
ಕವನ ಭಾರೀ ಲಾಯಕ ಆಯಿದು ಚಿಕ್ಕಮ್ಮಾ! ಆನಂದ ತಂದ ಕವನ ಇದು ಅಭಿನಂದನೀಯ!
{ಲೀಲೆಯಿಂದಲೆ ಮೆಲುಕುಹಾಕಿರೆ ಮನವು ಮುದಗೊಳುಗೂ} ಅಪ್ಪಪ್ಪು, ನಿಂಗ ಮೆಲುಕು ಹಾಕುಸಿದಿ. ಮನಸು ಮದಗೊಂಡತ್ತು.
ಕವನವ ಓದಿ ನಿಂಗೊಗೆಲ್ಲಾ ನಿಂಗಳ ಬಾಲ್ಯ ನೆಂಪಾತನ್ನೆ, ಅಂದ್ರಾಣ ದಿನಂಗಳ ನೆನಪ್ಪಿಸಿಕೊಂಬಾಗ ಮನಸು ಮುದಗೊಂಡತ್ತನ್ನೆ- ಅಭಿಮಾನಂದ ಅಭಿನಂದಿಸಿದ ನಿಂಗಳೆಲ್ಲರ ಮೆಚ್ಚುಗೆಯೇ ಎನಗೆ ದೊಡ್ಡ ಪಾರಿತೋಷಿಕ – ಅದೇ ಸ್ಪೂರ್ತಿಯು ಕೂಡ. ಒಪ್ಪಣ್ಣನ ಬೈಲಿಂಗೆ ಮೊದಲು ಥ್ಯಾಂಕ್ಸ್ ಹೇಳೆಕ್ಕು ಆನು – ಇದು ಎನ್ನ ಶಾಲೆ – ಸುಮಾರು ಜೆನ ಬರವದು ನೋಡಿ ಅಪ್ಪಾಗ ಎನಗೂ ಉಮೇದು ಎಳಗಿತ್ತು , ತಪ್ಪಾದರೆ ತಿದ್ದಿ ಸರಿಮಾಡುಲೆ ಜೆನ ಇಪ್ಪಾಗ ಬರವ ಧೈರ್ಯವೂ ಮಾಡಿದೆ- ಊಚು ಹೇಳಿ ಅಲ್ಲದ್ರೂ ಮೋಸಯಿಲ್ಲೆ – ಅಷ್ಟೇ.
ಅತ್ತೇ…. ಕವನ ಪಷ್ಟಾಯಿದು.. ಅಭಿನಂದನೆಗೋ
ಕವನವ ಮೆಚ್ಚಿ ಬೆನ್ನುತಟ್ಟಿ ಪ್ರೋತ್ಸಾಹಿಸಿದ ಎಲ್ಲಾ ಆತ್ಮೀಯರಿಂಗೂ ವಂದನೆಗೊ.
ಇಂದಿರಕ್ಕ ,ಆನು ಕಿಡಿಂಜಾಲು ಹಾಕಿಂಡು ಶಾಲಗೆ ಹೋದ್ದು ನೆಂಪಾತು.ಅದು ಗಾಳಿಗೆ ಹಾರಿ ಹೋಗಾನ್ನೇ.ಮಳೆ ನೀರಿಲಿ ನೆಂದಂಡು ಬಪ್ಪದು, ಕಾಲಿಲಿ ಕೆಸರು ನೀರು ರಟ್ಟುಸುದು , ಕಾಗದದ ದೋಣಿ ಮಾಡಿ ನೀರಿಲಿ ಬಿಟ್ತದು ಎಲ್ಲಾ ಲಾಯಕ ಆಯಿದು.ಅಭಿನಂದನೆಗೊ.
ಚೊಕ್ಕ ಆಯಿದು
ಓಬೇಲೇ….ಸಾಂತಾಣಿ… ಮಳೆಯ ಸೀರಣಿ…ಕಾಗದದ ದೋಣಿ…ವಾಹ್..ಎಲ್ಲಾ ನೆಂಪಾವ್ತಾ ಇದ್ದು ಇಂದಿರೆ..ಪದ್ಯ ತುಂಬಾ ಲಾಯಿಕಾಯಿದು..ಅಭಿನಂದನೆಗೊ
ಕವನ ತು೦ಬಾ ತು೦ಬಾ ಲಾಯಿಕ ಆಯಿದು ಇ೦ದಿರಾ . ಅಭಿನ೦ದನೆಗೊ.
ಮಳೆಕಾಲದ ರಸ ಕ್ಷಣಂಗೊ ಎಲ್ಲವೂ ನೆಂಪಾತು. ಲಾಯಕಾಯಿದು ಪದ್ಯ, ಅಭಿನಂದನೆಗೊ.
ಅಪ್ಪಪ್ಪು ಎನಗೂ ಬಳಂಕಿದ ಕೊಡೆ ಕಡ್ಡಿಯ ಕೊಡೆಯ ಹಿಡ್ಕೊಂಡು ಪುಸ್ತಕ ಚೀಲವ ಬೆನ್ನಿಂಗೆ ಏರ್ಸಿಗೊಂಡು ಹೋಪ ದೃಶ್ಯ ನೆಂಪಾದು. ಕವನ ಪಷ್ಟಾಯ್ದು. ಅಭಿನಂದನೆಗೊ.
ಕವನ ಲಾಯಿಕಾಯಿದು ಇಂದಿರಾ ಅಭಿನಂದನಗೊ.. ಇಂದಿರಾ ಬಾಲ್ಯದ ನೆಂಪು ಬತ್ತಾಇದ್ದು