- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.
ವಿಷು ವಿಶೇಷ ಸ್ಪರ್ಧೆ- 2013 ರ ಕವನ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಬರಹ.
ಲೇಖಕರಾದ ಶ್ರೀ ಬಾಲ ಮಧುರಕಾನನರಿಂಗೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.
ಮಳೆ ಬರಳಿ ಶುಭ ತರಳಿ: ಬಾಲ ಮಧುರಕಾನನ
ಪಡುಬಾನ ಕೆದರಿತ್ತು
ಕರಿಮುಗಿಲು ಎದ್ದತ್ತು
ಬಿರುಬೀಸ ಓಡಿತ್ತು ಗಾಳಿ ಬೀಸಿತ್ತು |
ಹಿಡುದ ಕೊಡೆ ಹಾರಿತ್ತು
ಬಜವೆಲ್ಲ ಚೆದರಿತ್ತು
ಆಕಾಶದೆತ್ತರಕೆ ಧೂಳು ಎದ್ದತ್ತು ||
ದಡಬಡನೆ ಗುಡುಗಿತ್ತು
ನಿ೦ದ ನೆಲ ಅದುರಿತ್ತು
ಬಾನದಜ್ಜಿಯೆ ಕಡವ ಶಬ್ದ ಕೇಳಿತ್ತು |
ಚೆ೦ಡೆಮದ್ದಳೆ ಬಡುದು
ಬಾನ ರ೦ಗಸ್ಥಳದಿ
ಕೆದರುತಲೆ ರಕ್ಕಸನ ವೇಷ ಕೊಣುದತ್ತು ||
ಕಡಲತೆರೆ ಅಬ್ಬರುಸಿ
ಪಾರೆಕಲ್ಲಿನ ಬಡುದು
ತೆ೦ಗಿನಷ್ಟೆತ್ತರಕೆ ಹಾರಿ ಮೇಗೇ |
ಸೋನೆ ಮಳೆ ಹೊಡದತ್ತು
ಜಲಧಾರೆ ಸುರುದತ್ತು
ಮು೦ಗಿತ್ತೊ ನೀರಿಲೀ ಊರಿ೦ಗೂರೇ? ||
ಹೊಳೆಕಟ್ಟ ಒಡದತ್ತು
ಕಟ್ಟಪುಣಿ ಜೆರುದತ್ತು
ಎಲ್ಲೋರ ತೋಟಕ್ಕು ಬೆಳ್ಳ ಮೊಗಚಿತ್ತು |
ತೋಟಗೆದ್ದೆಗೊ ತು೦ಬಿ
ಹರುದು ಮಧುವಾಹಿನಿಯು
ಮದವೂರ ಗೆಣಪನಾ ಪಾದ ತೊಳದತ್ತು ||
ಗುಡ್ಡೆ ಬಯಲಿಲ್ಲೆಲ್ಲ
ನೀರೊರತೆ ಹರಿದಿರಲಿ
ಊರ ತು೦ಬಾ ಹಸುರು ಚಿಗುರು ಹಾಸಿರಲೀ |
ಕಾಲ ಕಾಲಕು ಹೀ೦ಗೆ
ಚಿಗುರಿರಲಿ ಶುಭ ತರಳಿ
ಲೋಕದೆಲ್ಲೆಡೆ ನಿತ್ಯ ಶಾ೦ತಿ ತು೦ಬಿರಳೀ ||
~*~*~
ಸೂ:
ಮಧುರಕಾನನ ಬಾಲಣ್ಣಮಾವನ ಮೋರೆಪುಟ: ಸಂಕೊಲೆ
ಸೆಕೆಗೆ ದೊರ್ದ ಮಳೆಲಿ ನೆನದ ಕುಶಿ ಆತು ಬಾಲಣ್ಣ ! ಅಭಿನಂದನೆಗೊ.
ಮಳೆಗಾಲ ಕಣ್ಣಿಂಗೆ ಕಟ್ಟಿದ ಹಾಂಗೆ ಬಂತು. ಮಳೆಗಾಲವ ಬಯಲಾಟಕ್ಕೆ ಹೋಲುಸಿದ್ದದು ಲಾಯಕಾಯಿದು. ಮಧೂರ ಹೊಳೆ ತುಂಬಿ ಬೆಳ್ಳ ಮೊಗಚ್ಚಿದ್ದದು ಸೇರುಸಿದ್ದು ಬೆಸ್ಟ್ ಆತು. ಕಡೇಣ ಶಾಂತಿ ವಾಕ್ಯ ಪದ್ಯಕ್ಕೆ ಇನ್ನುದೆ ಕಳೆ ಕೊಟ್ಟತ್ತು. ಮನ್ನೆಯೇ ಪದ್ಯ ಓದಿತ್ತಿದ್ದೆ. ಒಪ್ಪ ಕೊಡ್ಳೆ ತಡವಾದ್ದಕ್ಕೆ ಕ್ಷಮೆ ಇರಳಿ. ಅಭಿನಂದನೆಗೊ ಬಾಲಣ್ಣ.
ಒಪ್ಪಕ್ಕೆ ಎಲ್ಲೋರಿಂಗುದೇ ಒಪ್ಪ. ಭಾರೀ ಮಳೆ ಬಂದರೆ ಮಾಂತ್ರ ಮದವೂರ ಗೆಣಪ್ಪನ ಪಾದ ತೊಳಗಷ್ತೆ!(ಹೇಳಿರೆ ಗರ್ಭಗುಡಿಯೊಳದಿಕಂಗೆ ಕೂಡಾ ಮಳೆ ನೀರು ಹೊಕ್ಕತ್ತು).ಒಟ್ಟಿಂಗೇ ಊರ ಕಸ ಕೊಳ ಎಲ್ಲವನ್ನುದೇ ತೊಳದತ್ತು ಹೇಳಿ ಅರ್ಥ.
ಮಳೆಯಬ್ಬರವ ಕಣ್ಣಿಂಗೆ ಕಟ್ಟುವಾಂಗೆ ಪದ್ಯ ಕಟ್ಟಿ ಪಷ್ಟು ಪ್ರೈಸು ತೆಕ್ಕೊಂಡ ಬಾಲಣ್ಣಂಗೆ ಅಭಿನಂದನೆಗೊ.
ಕವನ ಬರದ್ದು ಲಾಯಿಕ ಆಗಿ ಬಹುಮಾನ
ಪಡದ್ದಕ್ಕೆ ಅಭಿನ೦ದನೆಗೊ.
ಒಪ್ಪ ಕೊಡ್ತಾ ಇಪ್ಪ
ಎಲ್ಲರಿಂಗೊದೊಪ್ಪ
ಕೊಡದ್ದಿಪ್ಪಲಾಗನ್ನೆ, ಲೋಕ ರೂಢಿ /
ಹವಿಗನ್ನಡದ ಭಾಷೆ
ಸಾಹಿತ್ಯ ಕೃಷಿಯಿಂದ
ಸಮೃದ್ದಿ ಮಾಡುವ ಒಂದುಗೂಡಿ/
ಹವಿಗನ್ನಡದ ಸವಿ ಉ೦ಬಲೆ ಇ೦ಥಾ ಸಾಹಿತ್ಯ ಬೇಕಿದಾ.
ಚೆ೦ಡೆ ಮದ್ದಳೆಯ ಹಿಮ್ಮೇಳಲ್ಲಿ ಬಾನ ರ೦ಗಸ್ಥಳಲ್ಲಿ ರಾಕ್ಷಸವೇಷದ ಪ್ರವೇಶದ ಉಪಮೆ,ಮಧುವಾಹಿನಿ ಮದವೂರ ದೇವರ ಪಾದ ತೊಳವ ಕಲ್ಪನೆ,ಕಡೆಯಾಣ ಸ೦ದೇಶ ಎಲ್ಲವೂ ಮನಸ್ಸಿನ ತು೦ಬುಸುತ್ತು.
ಅಭಿನ೦ದನೆಗೊ,ಬಾಲಣ್ಣ.ಮು೦ದೆಯೂ ಈ ಮಟ್ಟದ ಸಾಹಿತ್ಯರಚನೆ ನಿ೦ಗಳಿ೦ದ ಆಗಲಿ ಹೇಳ್ತ ಆಶಯ೦ಗೊ.
ಬಾಲಣ್ಣನ ಕವನ ಮಳೆಗಾಲದ ವರ್ಣನೆಲಿ, ಹಳೆಯ ನೆಂಪುಗಳ ಮರುಕಳಿಸಿಕೊಟ್ಟತ್ತು.
ಇವರ ಎಲ್ಲಾ ಕವನಂಗಳಲ್ಲಿ ಆನು ಕಂಡ ಒಂದು ವಿಶೇಷತೆ ಹೇಳಿರೆ ಅಕೇರಿಗೊಂದು ಒಳ್ಳೆ ಆಶಯ.
ಕಾಲ ಕಾಲಕು ಹೀ೦ಗೆ
ಚಿಗುರಿರಲಿ ಶುಭ ತರಳಿ
ಲೋಕದೆಲ್ಲೆಡೆ ನಿತ್ಯ ಶಾ೦ತಿ ತು೦ಬಿರಳೀ॥
ಭಾರೀ ಲಾಯಿಕಾಯಿದು. ಮಳೆಗಾಲದ ನೈಜತೆ ಇದರ ಓದಿಯಪ್ಪಗ ಕಣ್ಣಿ೦ಗೆ ಕಟ್ಟಿದಾ೦ಗಾತು. ಅಭಿನ೦ದನೆಗೊ ಬಾಲಣ್ಣಾ.
ಬಾನದಜ್ಜಿ ಕಡವದು……
ಬಾಲ್ಯದ ನೆನಪಾತು. ಮಧುರಕಾನನರಿಂಗೆ ಅಭಿನಂದನೆ..ಕವನ ಲಾಯ್ಕ ಆಯಿದು.
ಕಡೆ೦ಗೋಡ್ಳು ಕವಿಗಳ ನೆ೦ಪಪ್ಪ ಹಾ೦ಗೆ ನಮ್ಮ ಭಾಷೆಲಿ ಬರೆದ್ದಿ. ಲಾಯಕು ಕವಿತೆ ಬರದ್ದಕ್ಕೆ ಮತ್ತೆ ಬಹುಮಾನ ಪಡೆದ್ದಕ್ಕೆ ಅಭಿನ೦ದನೆ.
ಹರೇರಾಮ, ಒಳೆದಾಯಿದು ಬಾಲಣ್ಣನ ಕವನ[ಛಂದೋಬದ್ದ]
harEraama olLedaayidu baalaNNana kavana
ಹಿಂದೆ ನೋಡಿದ ಮಳೆಯ ಅಬ್ಬರ ಇಂದು ಮತ್ತೆ ಕಣ್ಣಿಂಗೆ ಕಟ್ಟಿದಾಂಗತು.ಉತ್ತಮ ಕವನ ಓದಿ ತುಂಬಾ ಖುಶಿಯಾತು , ಬಾಲಣ್ಣ-ಅಭಿನಂದನೆಗೊ.
ಓಹ್!! ಇದು ಭಾರೀ ಲಾಯಿಕಾಯಿದು.. ಒಪ್ಪ೦ಗೊ, ಒಟ್ಟಿ೦ಗೆ ಅಭಿನ೦ದನೆಗೊ.
ಆಹಾ…ಒಪ್ಪೊಪ್ಪ ಆಯ್ದನ್ನೆ. ಒಪ್ಪ.
ಲಾಯ್ಕ ಬರದ್ದೀ ಬಾಲಣ್ಣಾ… ಅಭಿನಂದನೆಗೊ…
ಆದಷ್ಟು ಬೇಗ ಮಳೆ ಬರಳಿ.ಅಭಿನಂದನೆಗೊ ಬಾಲಣ್ಣ.ರೈಸಿದ್ದು.