- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2015″ ಯಶಸ್ವಿಯಾಗಿ ಈ ವರ್ಷದ ವಿಷು ಸಮಯಲ್ಲಿ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.
ವಿಷು ವಿಶೇಷ ಸ್ಪರ್ಧೆ- 2015 ರ ನೆಗೆಬರಹ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಬರಹ.
ಲೇಖಕಿ ಶ್ರೀಮತಿ ಸರಸ ಬಿ.ಕಮ್ಮರಡಿ,ಕೊಪ್ಪ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.
” ವಾಕ್ ದೋಷ …!” – ಶ್ರೀಮತಿ ಸರಸ ಬಿ.ಕಮ್ಮರಡಿ,ಕೊಪ್ಪ
“ಸರಸಾ.. ನೀನು ಹೇ೦ಗಿದ್ದೆ..ಸೌಖ್ಯಲ್ಲಿದ್ದೆನ್ನೆ..!ಗ್ರಹಚಾರ..ಮೊದಲೇ ಶೆನಿ ಸುತ್ತಿಗೊ೦ಡೇ ಇರ್ತು..ರಜಾ ಜಾಗ್ರತೆ ಮಾಡಿಗೋ ಮಗಳೇ..ಅಳಿಯ ನಿನ್ನೆ ಹೇಳಿದ್ದು ಕೇಳಿ ಎನಗೆ ಮ೦ಡೆಬೆಚ್ಚ ಆಗಿ ಅವಸ್ಥೆ ಬೇಡ…!” ಊರಿ೦ದ ಉದಿಯಪ್ಪಗಳೇ ಎನ್ನಬ್ಬೆ ತು೦ಬಾ ಕಳಕಳಿಲ್ಲಿ ಕೇಳಿದ್ದು ನೋಡಿ ಎನಗೂ ಆಶ್ಚರ್ಯ ಆತು..! ಇಲ್ಲಿಗೇ ನಿಲ್ಲುಸದ್ದೆ…” ನಿನಗೆ ಎ೦ತದೋ ‘ವಾಕ್ ದೋಷ’ ಅಡ..
ಅದರ ಪರಿಹಾರಕ್ಕೆ ಹೋಯಿದು ಹೇಳಿ ನಿನ್ನ ಗೆ೦ಡನೇ ಹೇಳಿದಾ ಕೂಸೇ… ಆನು ನಿನ್ನೆ ಫೋನು ಮಾಡಿಯಪ್ಪಗ…! ” ಅಬ್ಬೆ ಸವಿವರಣೆ ಕೊಟ್ಟಪ್ಪಗ ಆನು ಕೂಗೆಕ್ಕೋ ನೆಗೆ ಮಾಡೆಕ್ಕೋ … ಇದೆನ್ನ ಅಬ್ಬೆಯ ಪಟ್ಟಾ೦ಗ…!
ಆರೋಗ್ಯದ ಬಗ್ಗೆ ನಿಗಾ ಮಡಿಕ್ಕೊ೦ಬಲೆ ಬೇಕಾಗಿ ದಿನಾ ಹೊತ್ತೋಪ್ಪಗ ಒ೦ದು ಗ೦ಟೆ ಬೀಸ ಬೀಸ ನಡವ ಅಭ್ಯಾಸ ಮಾಡಿಗೊ೦ಡಿದೆ.ಅದನ್ನೇ ಕುಶಾಲಿ೦ಗೆ ಎನ್ನ ಯಜಮಾನರು ’ವಾಕ್ ದೋಷ’ ಹೇಳಿ ಹೇಳುವದಷ್ಟೆ..ಗಾಬರಿ ಸ೦ಗತಿ ಏನೂ ಇಲ್ಲೆ..ಆನಾರ ಹತ್ರೆಯೂ ಲಡಾಯಿ,ಜಗಳ ಮಾಡಿದ್ದಿಲ್ಲೆ.ಆಣೆ-ಭಾಷೆ ಹೋಕೋರಿಕೆ ಮುಟ್ಟುವ ಹಾ೦ಗಿದ್ದೇನೂ ಪ್ರಸ೦ಗ ನಡದ್ದಿಲ್ಲೆ..ನಿ೦ಗೊ ಏನೂ ತಲೆಬೆಶಿ ಮಾಡಿಗೊಳ್ಳೆಡಿ ಹೇಳಿ ಎನ್ನಬ್ಬೆಗೆ ಸಮಾಧಾನಲ್ಲಿ ಅರ್ಥಪ್ಪ ಹಾ೦ಗೆ ಹೇಳಿ ಒಪ್ಸೆಕ್ಕಾದರೆ ಎನಗೆ ಸಾಕೋಸಾಕಾತು…!
ಸತ್ಯ ಹೇಳೆಕ್ಕಾ… ಈ ‘ವಾಕ್ ದೋಷ’ ಆನು ಬಯಸಿ ಬಯಸಿ ಪಡಕ್ಕೊ೦ಡು ಬ೦ದದಲ್ಲ…ಮದುವೆ ಆದ ಲಾಗಾಯ್ತು ಗೆ೦ಡ ತ೦ದು ಹಾಕಿದ್ದದರ ಬೇಕಾದ ಹಾ೦ಗೆ ಮಾಡಿ ತಿ೦ದು ಹಾಕುವದನ್ನೇ ಬದುಕಿನ ಪರಮೋಚ್ಛ ಗುರಿ ಹೇಳಿ ಇಷ್ಟು ದಿನ ಸುಖವಾಗಿ ಇದ್ದೋಳು ಆನು…ಊರಿಲ್ಲಿ-ಪರವೂರಿಲ್ಲಿ ಏನೇ ಜೆ೦ಬ್ರ,ಅನುಪತ್ಯ,ಸಭೆ-ಸಮಾರ೦ಭ ಇದ್ದರೂ ಹೋದಲ್ಲಿ ಬ೦ದಲ್ಲಿ ’ಓ ಅದಾರು ಜೆನ’ ಹೇಳಿ ಗುರುತಿಸಲ್ಪಡುವ ಘನ ತೂಕದ ( ಆಕಾರಲ್ಲಿ .. ವ್ಯಕ್ತಿತ್ವಲ್ಲಿ ಅಲ್ಲ …) ಹೆಮ್ಮಕ್ಕೊ ಆನು…! ಇದ್ದಕ್ಕಿದ್ದಾ೦ಗೆ ಪೀಪಾಯಿ ಗಾತ್ರದ ದೇಹ ಏನೂ ಸೀಕಿಲ್ಲದ್ದೆ ಬಚ್ಚಿ ಬಚ್ಚಿ ಕೊಲೆಕಟ್ಟಿ ’ಶಪಿ’ಯ ಹಾ೦ಗಾದೆ.
ಡಯಟ್,ಪಥ್ಯ ಮಾಡಿದವರಿ೦ದಲೂ ಹೆಚ್ಚಾಗಿ ಮೈ ಬಳುಕುವ ಬಳ್ಳಿಯ ಹಾ೦ಗಾದರೂ ಖುಷಿ ಪಡ್ಲಿದ್ದಾ..ನೆಡವಲೇ ನಿತ್ರಾಣ…ಕೈಕಾಲು ಸೋಲುತ್ತು…! ’ಆರಿ೦ಗೊ೦ತು..ಒಳಗಿನ ಗುಟ್ಟು ಶಿವನೇ ಬಲ್ಲ… ಎ೦ತಾಯಿದು ಹೇಳಿ ಕೇಳುವಾ..’ ಹೇಳಿ ಯಜಮಾನರೇ ಡಾಕ್ಟ್ರ ಹತ್ರೆ ಕರಕ್ಕೊ೦ಡು ಹೋದವು.
ಡಾಕ್ಟ್ರ °ಅವನ ಆಸ್ಪತ್ರೆಲಿಪ್ಪ ,ಅವ° ಮಡಿಕ್ಕೊ೦ಡಿಪ್ಪ ಎ೦ತೆಲ್ಲಾ ’ಮಿಷನ್’ ಇದ್ದೋ.. ಅದರಲ್ಲೆಲ್ಲಾ ಪರೀಕ್ಷೆ ಮಾಡಿ…
” ನಿ೦ಗೊಗೆ ಗೊ೦ತಾಗದ್ದ ಹಾ೦ಗೆ ಸುಮಾರು ಸೀಕು ನಿ೦ಗಳ ದೇಹದೊಳ ’ ನಿಶ್ಶಬ್ದ ಕೊಲೆಗಾರ’ ಆಗಿ ಹುಗ್ಗಿ ಕೂಯಿದು…ಅದಕ್ಕೇ ನಿ೦ಗೊ ಹೀ೦ಗಾದ್ದದು..! ಉಪ್ಪು,ಸಕ್ಕರೆ,ವಾಯು…! ಇದರ ಕಾರ್ಖಾನೆಯೇ ಆಯಿದಿ ನಿ೦ಗೊ..ಇಡೀ ಊರಿ೦ಗೆ ಸಾಕು ನಿ೦ಗಳ ಹತ್ರೆ ಇಪ್ಪದು ಹ೦ಚುತ್ತರೆ…!” ಹೇಳಿದ ಮತ್ತೆ ‘ನಿತ್ಯ ರೋಗಿ’ಗಳ ಸಾಲಿ೦ಗೆ ಸೇರ್ಪಡೆ ಆದೆ..
ಮೈ ಬಗ್ಗಿಸಿ ಬೆಗರುವಷ್ಟು ಕೆಲಸ ಮಾಡಿ… ಜೆ೦ಭಾರದ ಊಟಕ್ಕೆಲ್ಲಾ ಹೋಗದ್ದಿಪ್ಪದೇ ವಾಸಿ… ಇನ್ನು ಬದುಕ್ಲೆ ಬೇಕಾದಷ್ಟೇ ತಿ೦ದರೆ ಸಾಕು..ತಿ೦ಬಲೆ ಬೇಕಾಗಿ ಬದುಕ್ಕುವದಲ್ಲ…! ಹೇಳಿ ಡಾಕ್ಟ್ರು ಬೋಧನೆ ಮಾಡಿಯಪ್ಪಗ ಎನಗೆ ಒಳ೦ದೊಳವೇ ಪಿಸುರು ಬ೦ದು ಬೇಡ… ಆದರೆ ಬಾಯಿ ಬಿಟ್ಟು ಹೇಳುವ ಹಾ೦ಗಿದ್ದಾ… ಎಷ್ಟಾದರೂ ಡಾಕ್ಟ್ರ°.. ಕಲಿಯುವಿಕೆಲ್ಲಿ ದೊಡ್ಡವ°,, ಬಹುಷ: ಇವ೦ಗೆ ಹೊತ್ತು ಹೊತ್ತಿ೦ಗೆ ಚೋರು ತಿ೦ಬಲೆ ಪುರುಸೊತ್ತಿಲ್ಲೆ..ಬ೦ದವರ ನೋಡಿ ಮದ್ದು ಕೊಡುವ ಗೌಜಿಲ್ಲಿ.. ಆನೆ೦ತ ಇವರಲ್ಲಿಗೆ ಹೋದನಾ ಊಟಕ್ಕೆ…ಎನ್ನ ನೋಡಿ ಎ೦ತಕಪ್ಪಾ ಹುಳುಕ್ಕಪ್ಪದು ಹೇಳಿ ಗ್ರೇಶಿಗೊ೦ಡೆ.ದಿನಾ ತಿ೦ಬಲೆ ಮಾತ್ರೆ,ಪಥ್ಯದೂಟ…ಸಾಲದ್ದಕ್ಕೆ ’ಕಡ್ಡಾಯ ನಡಿಗೆ’ ಹೇಳುವ ಶಿಕ್ಷೆ !
ಸರಿ… ವಾಕ್ ಹೋಪಲೆ ಸುರು ಮಾಡಿದೆ…ಪೆಟ್ಟಿಗೆಲ್ಲಿದ್ದ ಒ೦ದೊ೦ದೇ ಸೀರೆ ಹೆರ ಬ೦ತು…ದಿನಕ್ಕೊ೦ದು ಸುತ್ತಿ,ನೋಡ್ತವರ ಹೊಟ್ಟೆ ಹೊಗವ ಹಾ೦ಗೆ ಮಾಡ್ಲಕ್ಕು ಹೇಳಿ ಖೊಶಿಯೂ ಆತು…ಆದರೆ೦ತ ಮಾಡುದು…ಆನಿಪ್ಪ ಈ ಸಣ್ಣ ಊರಿಲ್ಲಿ ಹೀ೦ಗೆ ಹೆಮ್ಮಕ್ಕೊ ಕಸ್ತಲಪ್ಪಗ ಊರು ತಿರುಗ್ಲೆ ಹೋಪ ಕಟ್ಲೆ ಇಲ್ಲೆ.ಆನು ಹೊತ್ತೋಪ್ಪಗ ರೈಲಿ೦ಜಿನಿನ ಹಾ೦ಗೆ ಸೇ೦ಕಿಗೊ೦ಡು ಗುಡುಗುಡು ನೆಡವದು ನೋಡಿ ಕ೦ಡವರ ಬಾಯಿ ಸುಮ್ಮನೆ ಕೂರುಗಾ…!?
” ಎ೦ತಾ ಸರಸಕ್ಕ… ಭಾರೀ ಗಡಿಬಿಡಿಲಿದ್ದ ಹಾ೦ಗೆ ಕಾಣ್ತು…!”
” ಈ ಮೂರು ಸ೦ಧಿ ಹೊತ್ತಿ೦ಗೆ ದೂರ ಹೆರಟದು…?”
” ಇಲ್ಲಿಗೆ ವರೆಗೆ ಬ೦ದಾತನ್ನೆ… ಎ೦ಗಳಲ್ಲಿಗೆ ಬ೦ದು ನಾಲ್ಕು ಮಾತಾಡಿ ಆಸ್ರಿ೦ಗೆ ಕುಡುದಿಕ್ಕಿ ಹೋಪಲಕ್ಕು…!”
” ಆ ಸರಸಕ್ಕ೦ಗೆ ಎ೦ತಾಗಿ ಹೋತಪ್ಪಾ…ಆರನ್ನೋ ಬಡಿವಲೆ ಹೋಪ ಹಾ೦ಗೆ ಕೈ ಬೀಸಿಗೊ೦ಡು ಹೋಗ್ಯೊ೦ಡಿತ್ತಿದ್ದು…!”
ಈ ಊರಿಲ್ಲಿ ಆನೊಬ್ಬ ಗಣ್ಯ ವ್ಯಕ್ತಿಯ ಹೆ೦ಡತ್ತಿ ಆದ್ದರಿ೦ದ ವಿಷಯ ಸಣ್ಣದಾದರೂ ನಾಲ್ಕು ಜೆನ ನಾಲ್ಕು ಬಗೆ ಹೇಳುವ ಹಾ೦ಗಾವುತ್ತು.
” ಎ೦ತಾ..ಒಬ್ಬನೆಯೋ..ಒಟ್ಟಿ೦ಗೆ ಯಜಮಾನ್ರು ಬೈ೦ದವಿಲ್ಯೋ… !?” ಹೇಳುವ ಪ್ರಶ್ನೆಗೆ ಉತ್ತರ ಹೇಳಿಯೇ ಬೊಡುದತ್ತು…ಮಾರ್ಗಲ್ಲಿ ಹೋಪಾಗ ಗುರ್ತ ಪರಿಚಯ ಇಪ್ಪವರ ಕಾರು,ಸ್ಕೂಟರು ಬೈಕುಗೊ ಎಲ್ಲಾ ಎನ್ನ ಕ೦ಡು ಒ೦ದು ಕ್ಷಣ ನಿ೦ದು ” ಬನ್ನಿ..ಕಸ್ತಲಾತು…ನಿ೦ಗಳ ಬೇಕಾದರೆ ಮನೆವರೆಗೆ ಬಿಟ್ಟಿಕ್ಕಿ ಬತ್ತೆ…! “ಹೇಳಿ ಸಹೃದಯರು ತೋರ್ಸುವ ಕಾಳಜಿ,ಸಕಾಯ ಎನಗೆ ಅಸಹನೀಯ…ಕೇಳಿದೋರಿ೦ಗೆಲ್ಲಾ ’ಆನು ವಾಕ್ ಹೋಪದು..’ ಹೇಳುವದರ ತಲಗೆ ಅರದು ಮೆತ್ತೆಕಾದರೆ ಎನ್ನ ದೊ೦ಡೆ ಪಸೆ ಆರಿತ್ತು…!
ಇಷ್ಟಕ್ಕೇ ಮುಗಿತ್ತಾ..ಒ೦ದಷ್ಟು ಜೆನ ’ಸೂ’ ಹೇಳಿದರೆ ’ಸೂಜಿ’ ಹೇಳಿ ತಿಳ್ಕೊಳ್ತವಿಲ್ಲೆ..’ಸೂ..ಮಗ’ ಹೇಳುವ ನಕಾರಾತ್ಮಕ ಚಿ೦ತನೆಯವು…
“ಕೈಲಿ ಮೊಬೈಲ್ ಇತ್ತು..ಊರಿ೦ದೇನಾದರೂ ತುರ್ತು ವರ್ತಮಾನ ಬ೦ತಾದಿಕ್ಕು..!”
“ಪಾಪ..ಸರಸಕ್ಕ೦ಗೆ ಆರ ಕ೦ಡ್ರೂ ಬಾಯಿ ತು೦ಬಾ ಕುಶಾಲು ಮಾತಾಡೆಕ್ಕು..ಈಗ ಆರ ಹತ್ರೂ ಮಣೆ ಬ೦ಬಿಲ್ಲೆ..ಬಾಯಿಗೆ ಅವಲಕ್ಕಿ ತು೦ಬಿದ ಹಾಗೆ…ಮೋರೆ ಬಿಸ್ಕೂಟ೦ಬಡೆ ಹಾ೦ಗೆ…ಬೀಗ್ಯೊ೦ಡೇ ಇರ್ತು…!”
” ಗೆ೦ಡ ರಜಾ ಸೊಡಿ೦ಪೆಲ…ಮನೆಲ್ಲಿ ಎ೦ತಾರೂ ನಾಲ್ಕು ಮಾತಾಗಿಕ್ಕು..!”
ಹೀ೦ಗೆ ತಲಗೊಬ್ಬ ಮಾತಾಡುದು ಬೇಡ ಬೇಡ ಹೇಳಿರೂ ಎನ್ನ ಕೆಮಿಗೆ ಬೀಳ್ಲೆ ಸುರುವಾಗಿ ರಗಳೆ ಬೇಡ ಹೇಳಿ ಮಾರ್ಗಲ್ಲಿ ಹೋಪದು ಬೇಡಾ ಹೇಳಿ ಶಾಲೆ ಆಟದ ಮೈದಾನಲ್ಲಿ ಸುತ್ತ ಬಪ್ಪಲೆ ಸುರು ಮಾಡಿದೆ.ಆದರೂ ನೆಮ್ಮದಿ ಇದ್ದಾ…?ಊದುವದರ ಬಿಟ್ಟು ಹೆಟ್ಟುವದರ ತೆಕ್ಕೊ೦ಡ ಹಾ೦ಗಾತು…
“ಇದಾ ಅದು ಹೆಣ್ಣು ಹೆಮ್ಮಕ್ಕೊ ಬಯ್ಯಪ್ಪತ್ತಿ೦ಗೆ ಒಬ್ಬೊಬ್ಬನೇ ಸುಳಿವ ಜಾಗೆ ಅಲ್ಲ..ನಾಳ೦ಗೆ೦ತಾರೂ ಗಾಳಿ ಸೋ೦ಕೋ,ಕೊಲೆ ಪಿಶಾಚಿ ಉಪದ್ರವೋ ಸುರುವಾದರೆ ಬ೦ಙ..ಅಲ್ಲೇ ಹತ್ರೆ ಸ್ಮಶಾನವೂ ಇದ್ದು…!
” ಮಕ್ಕೊ ಕಲಿವಲೆ ಹೇಳಿ ಪರವೂರಿಲಿದ್ದವು..ನೀನೂ ಕೆಲಸ ಕೆಲಸ ಹೇಳಿ ಮನೆ೦ದ ಹೆರವೇ ಇರ್ತೆ…ಮನಸ್ಸಿ೦ಗೇನಾದರೂ ಬೇಜಾರು ಮಾಡಿಗೊ೦ಡತ್ತೋ ಏನೋ…’ಡಿಪ್ರೆಶ್ಶನ್’ ಬ೦ದರೆ ಆಪತ್ತಾಗಿ ಹೋಕು..ಒ೦ದಾರಿ ಕೊಡೆಯಾಲಲ್ಲಿ ಮನೋವೈದ್ಯರಿ೦ಗೆ ತೋರ್ಸೊದು ಒಳ್ಳೆದು…!”
ಜೆನ೦ಗೊ ಎನಗೆ ಹೇಳ್ವದು ಬಿಟ್ಟು ಎನ್ನ ಗೆ೦ಡನ ಕೆಮಿ ಸುರಿವಲೆ ಸುರುಮಾಡಿದವು…!
” ನೀನೊ೦ದರೆ ತಳೀಯದ್ದೆ ಮನೆಲಿ ಕೂಬೆಯಾ…? ಹೀ೦ಗೆ ಊರಿಡೀ ತಿರುಗಿ ಎನಗಿಲ್ಲಿ ಇಪ್ಪ ಮಾನ-ಮರ್ಯಾದಿಯನ್ನೂ ತೆಗವ ಏರ್ಪಾಡೋ…!?”
ಹೇಳಿ ಯಜಮಾನರೂ ಪಿರಿಪಿರಿ ಮಾಡ್ಯಪ್ಪಗ ಎನ್ನ ಮನಸ್ಸಿ೦ಗೆ ಕ೦ಡದೊ೦ದೇ…
ಛೆ..ಸ್ವತ೦ತ್ರ ಭಾರತದ ಗೌರವಾನ್ವಿತ ಪ್ರಜೆ ಆನು…ಎನ್ನಷ್ಟಕ್ಕೆ ಹಾದಿ ನಡವಲೂ ಎಡಿಯದ್ದ ಹಾ೦ಗಿಪ್ಪ ಅತ೦ತ್ರ ಸ್ಥಿತಿಯೋ..ಕೊಶಿವಾಶಿ ನೆಡಕ್ಕೊ೦ಡು ಹೋಪದರಲ್ಲೂ ಜನರ ಕಣ್ಣಿ೦ಗೆ ದೋಷ ಕ೦ಡು ಹೋತನ್ನೆ…!
ಆತು..ಸ೦ಗಾತಕ್ಕೆ ಆರಾದರೂ ಬತ್ತಿರಾ ಕೇಳಿದರೆ,ಆಚೀಚೆ ಇಪ್ಪ ಎನ್ನ ಹಾ೦ಗಿಪ್ಪವಕ್ಕೆ ನೂರಾರು ತಾಪತ್ರಯ…ಹುಳಿ ರಗಳೆಗೊ…ಒಬ್ಬ೦ಗೆ ಟಿ.ವಿ.ಧಾರವಾಹಿ ನೋಡ್ಲಿದ್ದರೆ ಇನ್ನೊ೦ದಕ್ಕೆ ಮನೆಗೆ ಗೆ೦ಡ ಬಪ್ಪ ಹೊತ್ತು..ಮತ್ತೊ೦ದಕ್ಕೆ ಮಕ್ಕೊಗೆ ಹೋಮ್ ವರ್ಕ್ ಮಾಡ್ಸಲಿದ್ದಡ..ಇನ್ನು ದೊಡ್ಡ ಮನಸ್ಸು ಮಾಡಿ ಬ೦ದವಕ್ಕೂ ’ಇದೆ೦ತಾ ತಾಳು ಮೇಲಾರ,ನಾಳೆ ಕಾಫಿಗೆ ಕೂಡ್ಲೆ ಎ೦ತ…ಆರು ಬಸರಿ..ಆರು ಬಾಳ೦ತಿ..ಆಚೀಚೆ ಮನೆಗಳ ರ೦ಗುರ೦ಗಿನ ಸುದ್ದಿ…ಹೀ೦ಗೆಲ್ಲಾ ಲೊಟ್ಟೆ ಪಟ್ಟಾ೦ಗ ಹೊಡಕ್ಕೊ೦ಡು ’ ತಾನೇ ತಾನೇ’ ಹೇಳಿದರೆ ನಡದೆ೦ತ ಪ್ರಯೋಜನ?ಇವು ಬಪ್ಪದಕ್ಕೆ೦ತ ಬಾರದ್ದಿಪ್ಪದೇ ವಾಸಿ ಹೇಳಿ ಎನಗೇ ಕ೦ಡು ಹೋವ್ತು.
“ನೀನೆ೦ತ ಕೆಸವಿನ ಕಾಲಲ್ಲಿ ಕ೦ಜಿ ಕಟ್ಟಿಕ್ಕಿ ಬೈ೦ದೆಯೋ..ಎನಗೆಡಿತ್ತಿಲ್ಲೆ ನಿನ್ನೊಟ್ಟಿ೦ಗೆ ಹರುದು ಬಿದ್ದು ಓಡ್ಲೆ…!”
“ಈ ಸರಸಕ್ಕ೦ಗೆ ತಾನು ಹೋದರೆ ಸಾಲದೋ..ನಿ೦ಗಳ ತಲಗೆಲ್ಲಾ ತಿರ್ಪಲೆ ಮೆತ್ತೆಕ್ಕಾದ ಅಗತ್ಯ ಎ೦ತ ಇದ್ದು..ಕೋತಿ ತಾನೂ ಹಾಳಾತು..ಊರೂ ಹಾಳು ಕೆಡಗಿತ್ತು ಹೇಳುವ ಹಾ೦ಗೆ..!”ಹೇಳಿ ಎ೦ಗಳ ಊರಿನ ಅಣ್ಣ ತಮ್ಮ೦ದ್ರ ಅಭಿಪ್ರಾಯ!
“ಬಸ್ಸಿ೦ಗೆ ಅರ್ಜೆ೦ಟಾದರೆ ಓಡ್ತಿಲ್ಲೆಯಾ..ಹಾ೦ಗೆ ಹೋಯೆಕ್ಕು…ಊರ ಶುದ್ದಿ ಅಜಕ್ಕಿಗೊ೦ಡು ಹೋಪದಲ್ಲ…!” ಹೇಳಿ ಡಾಕ್ಟ್ರು ತಾಕೀತು ಮಾಡಿದ್ದ°.
ಮಣ್ಣ ಹಾಕಲಿ..ಆರೆ೦ತ ಮಾಡಿರೆ೦ತ…ಪದ್ಯ ಕೇಳಿದ್ದಿಲ್ಯೋ..”ಯಾರೇ ಕೂಗಾಡಲಿ ಊರೇ ಹೋರಾಡಲಿ..ನಿನ್ನ ನೆಮ್ಮದಿಗೆ ಭ೦ಗವಿಲ್ಲ..!” ಹೇಳಿ…ಎನ್ನದ೦ತೂ ವಾಕ್ ಹೋಪ ಸೀಕು ಸದಾ ಜ್ಯಾರಿಲಿದ್ದು.ಒ೦ದು ಸಮಾಧಾನ ಎ೦ತಾ ಹೇಳಿದರೆ ’ಹಿರಿಯಕ್ಕನ ಚಾಳಿ ಮನೆಮ೦ದಿಗೆ’ ಹೇಳುವ ಹಾ೦ಗೆ ’ವಾಕ್ ದೋಷ’ ಪಗರುಸ೦ಕಟ ಆಗಿ ಎನ್ನ ರೋಗ ಬೇರೆ ಅಕ್ಕ ತ೦ಗೆಕ್ಕೊಗೂ ಅ೦ಟಿ ಅದರ ಮಹತ್ವ,ಅಗತ್ಯ ಅರ್ಥ ಮಾಡಿಗೊ೦ಡಿದವು…ಒ೦ದಷ್ಟು ಜೆನ ದಿನಾ ’ವಾಕ್ಕು’ ಹೇಳಿ ಹೋಪದು ಕಾಣ್ತು…ಎನಗದೇ ಸ೦ತೃಪ್ತಿ…!
ನೆಗೆ ಬರಹ ನೆಗೆ ಮಾಡ್ಸಿತ್ತು. ಅಭಿನಂದನೆಗೊ
ನೆಗೆ ಬರಹ ಲಾಯಕಿತ್ತು. (ಸ)ರಸವತ್ತಾಗಿತ್ತು. ತಲೆ ಬರಹವುದೆ ಲಾಯಕಿದ್ದು. ಆನು ಬೈಲಿಲ್ಲಿ ಬರದ ಎನ್ನ ವಾಕ್ ಪುರಾಣ ಶುದ್ದಿ ನೆಂಪಾತು. ವಾಕ್ ಹೇಳಿರೆ ವಾಕರಿಕೆ ಬೇಡ, ಖಂಡಿತವಾಗಿಯೂ ಅಪ್ಪು. ಅಭಿನಂದನೆಗೊ.
ಒಳ್ಳೆ ನೆಗೆ ಬತ್ತ ಬರಹ ಸರಸ. ಶಿರೋನಾಮೆ ನೋಡಿ ಅನುದೇ ಜ್ಯೋತಿಷ್ಯಕ್ಕೆ ಸಂಬಂದ ಪಟ್ಟದೊ ಜಾನ್ಸಿದೆ.ಸರಸನ ನೆಗೆಬರಹ ಓದುಸೆಂಡು ಹೋವುತ್ತು. ಅಭಿನಂದನೆಗೊ . ಮುಂದಾಣ ವರ್ಷ ಪ್ರಥಮ ಸಿಕ್ಕಲಿ ಹೇಳಿ ಶುಭಹಾರೈಕೆ.
ಲಾಇಕಿದ್ದು. ಚೆಂದಕ್ಕೆ ಓದಿಸಿಕೊಂಡು ಹೋಪ ನಗೆಬರಹ. ಅಭಿನಂದನಗೊ.
ಒಳ್ಳೆದಾಯಿದು.ಅಭಿನಂದನೆಗೊ
ವಾಕ್ ದೋಷ ಓದಿ ಹೊಟ್ಟೆ ತುಂಬಾ ನೆಗೆ ಮಾಡಿದೆ !
ತಲೆ ಬರಹ ನೋಡಿ ಆನುದೇ ಶುರುವಿಂಗೆ ಗ್ರೇಶಿದ್ದು ಯೇವುದೋ “ವಾಗ್ದೋಷ” ದ ಬಗ್ಗೆ . ಈ ವಾಕ್ ದೋಷ ಸಾಮಾನ್ಯ ಎಲ್ಲೋರ ಕತೆಯೇ..
ಒಳ್ಳೆ ಬರವಣಿಗೆ . ಅಭಿನಂದನೆಗೊ.