Oppanna.com

ವಿಷು ವಿಶೇಷ ಸ್ಪರ್ಧೆ – 2020 : ಆಹ್ವಾನ

ಬರದೋರು :   ಗುರಿಕ್ಕಾರ°    on   13/03/2020    1 ಒಪ್ಪಂಗೊ

ಪ್ರತಿ ವರ್ಷದ ಹಾಂಗೆ ಈ ಸರ್ತಿಯೂ ವಿಷು ಸ್ಪರ್ಧೆಗಳ ಬೈಲು ನೆಡೆಶುತ್ತಾ ಇದ್ದು. ವಿಷು ವಿಶೇಷ ಸ್ಪರ್ಧೆ-2020 ಕ್ಕೆ ಪತ್ರಿಕಾ ಮಾಧ್ಯಮಕ್ಕೆ ಕಳುಸಿಕೊಟ್ಟ ಹೇಳಿಕೆ ಇಲ್ಲಿದ್ದು. ಎಲ್ಲೋರುದೇ ಭಾಗವಹಿಸಿ, ಸ್ಪರ್ಧಾ ಕಾರ್ಯಕ್ರಮವ ಚೆಂದಮಾಡಿಕೊಡೇಕು ಹೇದು ಕೇಳಿಗೊಳ್ತೆ.
~
ಗುರಿಕ್ಕಾರ°

 

ವಿಷು ವಿಶೇಷ ಸ್ಪರ್ಧೆ 2020

“ಹವ್ಯಕ”ವೆಂದರೆ ಕನ್ನಡ ನಾಡಿನ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೇಂದ್ರೀಕೃತವಾದ ಪಂಗಡ. ಹವ್ಯಕರ ಆಡುಭಾಷೆ ಮಧ್ಯಕಾಲೀನ ಹಳೆಗನ್ನಡ ಭಾಷೆಗೆ ಹತ್ತಿರವಾದ “ಹವ್ಯಕ ಭಾಷೆ”, ಪ್ರಸ್ತುತ ಅನೇಕ ಸ್ಥಳೀಯ ಆವೃತ್ತಿಗಳನ್ನು ಹೊಂದಿದೆ. ಆಧುನಿಕ ಯುಗದಲ್ಲಿ ಅಂತರ್ಜಾಲದಲ್ಲಿ ಒಪ್ಪಣ್ಣನ ನೆರೆಕರೆ  www.oppanna.com ಎಂಬ ಹವ್ಯಕ ವೆಬ್-ಸೈಟ್ ಕಳೆದ ಹನ್ನೊಂದು ವರುಷಗಳಿಂದ ತನ್ನ ಸಾಹಿತ್ಯ ಕೃಷಿಯನ್ನು ಮಾಡುತ್ತಿದೆ. ಸಾಹಿತಿ-ಚಿಂತಕ-ಬರಹಗಾರರ Oppanna.com  ಬಳಗವು ಈಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ಎಂಬ ಹೆಸರಿನಲ್ಲಿ ನೋಂದಾವಣೆಗೊಂಡು ಮಾನ್ಯತೆ ಪಡೆದ ಸಂಸ್ಥೆಯಾಗಿದೆ.

ಈಗಾಗಲೇ ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆ ಮತ್ತು ಸಾಮಾಜಿಕ- ಸಾಂಸ್ಕೃತಿಕ ಕಾರ್ಯಗಳ ಮೂಲಕ ಪ್ರತಿಷ್ಠಾನವು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಎಂಟು ವರ್ಷಗಳಿಂದ ಸೌರ ಯುಗಾದಿಗೆ ಸಂಪೂರ್ಣ ಹವ್ಯಕಭಾಷೆಯಲ್ಲೇ ಆಯೋಜನೆ ಆದ ವಿಷು ವಿಶೇಷ ಸ್ಪರ್ಧೆಯು ಹವ್ಯಕ ಸಾಹಿತ್ಯ ಲೋಕಕ್ಕೆ ಹೊಸ ಸಂಚಲನ ನೀಡಿದೆ.

ಈ ವರ್ಷ ಪ್ರತಿಷ್ಠಾನವು ಯುಗಾದಿಯ ಪರ್ವಕಾಲದಲ್ಲಿ ಹೊಸ ಸಾಹಿತಿಗಳ ಅನ್ವೇಷಣೆಗಾಗಿ “ವಿಷು ವಿಶೇಷ ಸ್ಪರ್ಧೆ – 2020” ಆಯೋಜನೆಗೊಳಿಸಿದೆ.
ಬನ್ನಿ, ಭಾಗವಹಿಸಿ, ನಿಮ್ಮ ಮಿತ್ರರಿಗೂ ತಿಳಿಸಿ.

ವಿಷು ವಿಶೇಷ ಸ್ಪರ್ಧೆ – 2020  ವಿವರಗಳು:

  1. ಪ್ರಬಂಧ:
    ವಿಷಯ : “ಸಾಂಪ್ರದಾಯಿಕ ಬದುಕಿಲಿ ಸ್ವಚ್ಛತೆಗೆ ಮಾನ್ಯತೆ”
    750 ಶಬ್ದಗಳಿಗೆ ಸೀಮಿತ
  2. ಕಥೆ :
    ವ್ಯಾಪ್ತಿ: ಕುಟುಂಬ ಹಾಗೂ ಮಾನವೀಯ ಮೌಲ್ಯಗಳು (ವಿಷಯ ಸ್ಪರ್ಧಾರ್ಥಿಗಳ ಆಯ್ಕೆ)
    1000 ಶಬ್ದಗಳಿಗೆ ಸೀಮಿತ
  3. ಕವಿತೆ:
    ವಿಷಯ:  ಜೆಂಬ್ರದ ಗೌಜಿ (ಅರ್ಥ: ಸಮಾರಂಭದ ಸಂಭ್ರಮ)
    30 ಸಾಲುಗಳಿಗೆ ಮಿತಿಗೊಳಿಸಿ.
    ಛಂದೋಬದ್ಧವಾದ ಕವಿತೆಗಳಿಗೆ ಹೆಚ್ಚಿನ ಆದ್ಯತೆ.
  4. ನಗೆಬರಹ:
    ಸದಭಿರುಚಿಯ ಲಘುಬರಹ ಈ ವಿಭಾಗಕ್ಕೆ ಬರಲಿ. (ಅಪಹಾಸ್ಯ, ಅಶ್ಲೀಲತೆಗಳು ಬೇಡ)
    500 ಶಬ್ದಗಳಿಗೆ ಮಿತಿಗೊಳಿಸಿ.

ನಿಯಮಗಳು:

  • ಎಲ್ಲಾ ಬರಹಗಳೂ ಕಡ್ಡಾಯವಾಗಿ ಹವ್ಯಕಭಾಷೆ- ಕನ್ನಡಲಿಪಿಯಲ್ಲಿ ಇರಬೇಕು.
  • ಹವ್ಯಕ ಪರಂಪರೆ, ಸಂಸ್ಕೃತಿಯ ಹಿರಿಮೆಗಳ ಬಿಂಬಿಸುವ ಬರಹಗಳಿಗೆ ಆದ್ಯತೆ.
  • ಸ್ಪರ್ಧೆಗೆ ಬರುವ ಯಾವುದೇ ಬರಹ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿರಬಾರದು.
  • ಸ್ಪರ್ಧೆಗೆ ಬಂದ ಎಲ್ಲಾ ಬರಹಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ದ್ದೇ ಆಗಿರುತ್ತದೆ.
  • ಸ್ಪರ್ಧೆಯ ವಿಚಾರದಲ್ಲಿ ಪ್ರತಿಷ್ಠಾನದ ತೀರ್ಮಾನವೇ ಅಂತಿಮ.
  • ಪ್ರತಿ ವಿಭಾಗದಲ್ಲಿಯೂ ಪ್ರಥಮ ಮತ್ತು ದ್ವಿತೀಯ ಎರಡು ಬಹುಮಾನಗಳು ಇರುತ್ತವೆ. ಸೂಕ್ತ ಸಂದರ್ಭದಲ್ಲಿ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಗುವುದು.
  • ವಿಷು ವಿಶೇಷ ಸ್ಪರ್ಧೆ – 2019 ರಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಪಡೆದವರು ಈ ಬಾರಿ ಅದೇ ವಿಭಾಗದಲ್ಲಿ ಭಾಗವಹಿಸುವಂತಿಲ್ಲ.
  • ಬಹುಮಾನ ವಿಜೇತರ ವಿವರಗಳನ್ನು ವಿಷುವಿನಂದು (14/4/2020ರಂದು)  www.oppanna.com ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.
    ಹಸ್ತಪ್ರತಿಗಳನ್ನು ಕಳುಹಿಸುವುದಾದರೆ ಕಡ್ಡಾಯವಾಗಿ A4 ಹಾಳೆಯಲ್ಲಿಯೇ ಬರೆದಿರಬೇಕು.
  • ಭಾಗವಹಿಸಲು ಕೊನೆಯ ದಿನಾಂಕ 3/04/2020
    ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಗಳನ್ನು ಕಡ್ಡಾಯವಾಗಿ ಪ್ರತ್ಯೇಕ ಹಾಳೆಯಲ್ಲಿ ಬರೆದು ನಿಮ್ಮ ಬರಹದ ಜೊತೆಗೆ ಈ ವಿಳಾಸಕ್ಕೆ ಕಳುಹಿಸಿಕೊಡಿ:

ಅಂಚೆ ವಿಳಾಸ:
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ),
C/o ಶ್ರೀಕರ ಅಸೋಸಿಯೇಟ್ಸ್
ಪ್ರಥಮ ಮಹಡಿ, ಕಲ್ಪತರು ಸಂಕೀರ್ಣ
ಗಾಂಧಿ ನಗರ, ಸುಳ್ಯ – 574239
ಮಿಂಚಂಚೆ ವಿಳಾಸ: editor@oppanna.com

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ:
9901200134, 9449806563, 8547245304, 9448271447, 9972967480, 9448472292

ಅಥವಾ ಒಪ್ಪಣ್ಣ (oppanna.com) ಅಂತರ್ಜಾಲ ಪುಟದಲ್ಲಿ ಲಭ್ಯ.

~
ಗುರಿಕ್ಕಾರ°

One thought on “ವಿಷು ವಿಶೇಷ ಸ್ಪರ್ಧೆ – 2020 : ಆಹ್ವಾನ

  1. ವಿವಿ ಸ್ಪರ್ಧೆ-೨೦೨೦ ಗೆ ತುಂಬಾ ಕತೆ ಕವನ ಲೇಖನಂಗೊ ಬರಳಿ. ಸ್ಪರ್ಧೆ ಕಾರ್ಯಕ್ರಮಂಗೊ ಯಶಸ್ವಿಯಾಗಲಿ.
    ನಾವೂ ಲೇಖನ ಬರವೊಂ. ಬೇರೆಯವರತ್ರೆಯೂ ಬರಶುವ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×