Oppanna.com

2021 ರ ‘ಬಾಳಿಲ ಪರಮೇಶ್ವರ ಭಟ್ಟ’ ಸ್ಮಾರಕ ಪ್ರಶಸ್ತಿಗೆ ನಾರಾಯಣ ಶಾನುಭಾಗ ಆಯ್ಕೆ

ಬರದೋರು :   ಗುರಿಕ್ಕಾರ°    on   22/08/2021    0 ಒಪ್ಪಂಗೊ

ಮಂಗಳೂರು: ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸುವ ನಮ್ಮ ಬೈಲಿನ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ವಾರ್ಷಿಕವಾಗಿ ನೀಡುವ ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಈ ವರ್ಷ (2021–22) ‌ಉತ್ತರ ಕನ್ನಡದ ಕುಮಟಾದ ಸಾಹಿತಿ ‌ಶ್ರೀ ನಾರಾಯಣ ಕೃಷ್ಣ ಶಾನುಭಾಗ ಇವಕ್ಕೆ ಕೊಟ್ಟು ಗೌರವಿಸುದು ಹೇಳಿ ನಿಶ್ಚಯಿಸಿದ್ದು.

ಹವ್ಯಕ ಭಾಷೆಲಿ ಸಾಹಿತ್ಯ ಕೃಷಿ ಮಾಡಿದೋರ ಗುರುತುಸಿ, ಸಾಹಿತಿ ದಿ। ಬಾಳಿಲ ಪರಮೇಶ್ವರ ಭಟ್ಟ ಅವರ ಹೆಸರಿಲಿ ಪ್ರತಿ ವರ್ಷ ಈ ಪ್ರಶಸ್ತಿ ಕೊಡುವದು.

ಪ್ರಶಸ್ತಿಯು ₹5000 ನಗದು, ಫಲಕ, ಸ್ಮರಣಿಕೆಯ ಒಳಗೊಂಡಿದು. ಪ್ರಶಸ್ತಿ ಪ್ರದಾನ ಸಮಾರಂಭವ ಸದ್ಯಲ್ಲೇ ಪ್ರಕಟಿಸುತ್ತು.

ಪ್ರಶಸ್ತಿ ಪುರಸ್ಕೃತರ ಪರಿಚಯ:
ಕುಮಟಾ ತಾಲ್ಲೂಕಿನ ವಾಲಗಳ್ಳಿಲಿ 1943ರ ಜುಲೈ 28ರಂದು ಜನಿಸಿದ ನಾರಾಯಣ ಕೃಷ್ಣ ಶಾನುಭಾಗರು, ಕೃಷ್ಣ ಶಾನುಭಾಗ ಮತ್ತೆ ಮಹಾದೇವಿ ಅಮ್ಮ ದಂಪತಿಯ ಮೊದಲ ಮಗ°.

ಕೃಷಿಕ ಕುಟುಂಬಂದ ಬಂದವರಾದ ಶಾನುಭಾಗರು ಪ್ರಾಥಮಿಕ ಶಿಕ್ಷಣವ ವಾಲಗಳ್ಳಿ & ಪ್ರೌಢಶಾಲಾ ಶಿಕ್ಷಣವ ಕೂಜಳ್ಳಿಲ್ಲಿ ಪಡಕ್ಕೊಂಡವು. ಕಾರವಾರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿಲಿ ಸಿವಿಲ್ ಇಂಜಿನಿಯರಿಂಗ್‌ ಡಿಪ್ಲೊಮಾ, ಬೆಳಗಾವಿ ಪಾಲಿಟೆಕ್ನಿಕ್‌ ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದವು. ಎಎಂಐಐ ಇಂಜಿನಿಯರಿಂಗ್ ಪದವಿ ಪಡದು, 1973ರಲ್ಲಿ ಕರ್ನಾಟಕ ವಿದ್ಯುತ್ ನಿಗಮಲ್ಲಿ ಇಂಜಿನಿಯರ್ ಆಗಿ ಸೇವೆ ಆರಂಭಿಸಿ – ಕಾರ್ಯಪಾಲಕ ಇಂಜಿನಿಯರ್ ಆಗಿ ಮುಂದೆ 2001ರಲ್ಲಿ ನಿವೃತ್ತಿಯಾದವು.

ಹವ್ಯಕ ಮಹಾಸಭೆಯ ಹವ್ಯಕ ಅಧ್ಯಯನ ಕೇಂದ್ರದ ಸ್ಥಾಪಕ ಪ್ರಧಾನ ನಿರ್ದೇಶಕರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಾರಾಯಣ ಕೃಷ್ಣ ಶಾನುಭಾಗರು, 22 ಪುಸ್ತಕಂಗೊ ಪ್ರಕಟಣೆಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.

‘ಅಕಳಂಕ ಚೇತನ-ಕೆಕ್ಕಾರು ನರಸಿಂಹ ಭಟ್ಟರು’, ‘ಕೀರ್ತಿಶೇಷ ಹವ್ಯಕ ಗ್ರಂಥಕಾರ ಕೃತಿಸೂಚಿ’, ‘ಶಿವಸದ್ಗುರು ಕೃತಿ ಸಂಚಯ’, ‘ಹವಿಗನ್ನಡ ಚಿಂತನ’, ‘ಹವ್ಯಕ ಗ್ರಂಥಕಾರ ಕೃತಿದರ್ಪಣ’, ‘ಹವ್ಯಕ ಮಹಿಳಾ ಸಾಹಿತ್ಯ ದರ್ಶಿನಿ’, ಹವ್ಯಕರ ಸಂಕ್ಷಿಪ್ತ ಇತಿಹಾಸ,  9 ಹವಿಗನ್ನಡ ಯಕ್ಷಗಾನ ಪ್ರಸಂಗಗಳನ್ನು ಒಳಗೊಂಡ  ‘ಹವಿಗನ್ನಡದ ನವಪ್ರಸಂಗಗಳು’ ಹೇಳುವ ಸಂಪಾದಿತ ಕೃತಿ, ‘ಗಣೇಶ ಜನನ ಮಕ್ಕಳ ನಾಟಕ’, ‘ಹವ್ಯಕ ರಚಿತ ಕಥೆ’, ‘ನಾಟಕ ಮತ್ತು ಮಕ್ಕಳ ಸಾಹಿತ್ಯ ಕೈಪಿಡಿ’, ’ಹವ್ಯಕ ಯಕ್ಷಗಾನ ಕವಿಕಾವ್ಯ ಸೂಚಿ’.. ಇವರ ಪ್ರಮುಖ ಕೃತಿಗೊ.

‘ಹವಿಗನ್ನಡ ಚಿಂತನ’ ಹೇಳುವ ಸ್ವರಚಿತ ಕೃತಿಗಳ ಕೃಷ್ಣಜ ಕಾವ್ಯನಾಮಂದ ಪ್ರಕಟಿಸಿದ್ದವು.

‘ಉತ್ತರ ಕನ್ನಡ ಜಿಲ್ಲಾ ಗ್ರಂಥಕಾರ ಕೃತಿಕೋಶ’ ಹೇಳುವ ಸಂಶೋಧನ ಕೃತಿಯನ್ನೂ ಪ್ರಕಟಿಸಿದ್ದವು. 2006ರಲ್ಲಿ ಹೊನ್ನಾವರಲ್ಲಿ ಹವಿಗನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿದ ಕೀರ್ತಿಯೂ ನಾರಾಯಣ ಕೃಷ್ಣ ಶಾನುಭಾಗರಿಂಗೆ ಇದ್ದು. ಹವ್ಯಕ ಭಾಷಾ ಅಧ್ಯಯನದಲ್ಲಿ ತೊಡಗಿಪ್ಪ ಸಾಧಕರ ಗುರುತಿಸಿ ಕೊಡಮಾಡುವ ಹವ್ಯಕಸೂರಿ ಪ್ರಶಸ್ತಿಯನ್ನು ಸ್ಥಾಪಿಸಿದ್ದಷ್ಟೇ ಅಲ್ಲದ್ದೆ, ಹಲವಾರು ಸಾಧಕರ ಗುರುತಿಸಿ ಗೌರವಿಸಿದ್ದವು.

ಶ್ರೀ ನಾರಾಯಣ ಶಾನುಭಾಗ, ಬೆಂಗಳೂರು
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×